ಪುತ್ತೂರು

ಸ್ಮೋಕ್ ಹೌಸ್, ಹಟ್ಟಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ನಷ್ಟ

ನೆಲ್ಯಾಡಿ: ಆಕಸ್ಮಿಕ ಬೆಂಗಿ ತಗಲಿದ ಪರಿಣಾಮ ಸ್ಮೋಕ್ ಹೌಸ್ ಹಾಗೂ ಹಟ್ಟಿ ಸುಟ್ಟು ಭಸ್ಮವಾಗಿರುವ ಘಟನೆ ಇಚ್ಲಂಪಾಡಿ ನಿಡ್ಯಡ್ಕ ಎಂಬಲ್ಲಿ ನಡೆದಿದೆ. ನಿಡ್ಯಡ್ಕ ನಿವಾಸಿ, ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ನಿರ್ದೇಶಕ ಜಾರ್ಜ್‍ ಕುಟ್ಟಿ ಉಪದೇಶಿ ಅವರಿಗೆ ಸೇರಿದ ಸ್ಮೋಕ್ ಹೌಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದೆ. ಪರಿಣಾಮ ಪಕ್ಕದ ಹಟ್ಟಿಗೂ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಈ ಸಂದರ್ಭದಲ್ಲಿ ಹಟ್ಟಿಯಲ್ಲಿದ್ದ ಜಾನುವಾರುಗಳನ್ನು ರಕ್ಷಿಸಲಾಗಿದೆ. ಘಟನೆಯಿಂದ ಸುಮಾರು 3 ಲಕ್ಷ […]

ಸ್ಮೋಕ್ ಹೌಸ್, ಹಟ್ಟಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ನಷ್ಟ Read More »

ಶ್ರೀ ಸೀತಾ ರಾಘವ ಪದವಿಪೂರ್ವ, ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಉತ್ಸವ-2023

ಪೆರ್ನಾಜೆ: ಪೆಟ್ಟು ತಿಂದ ಕಲ್ಲು ಹೇಗೆ ಸುಂದರ ವಿಗ್ರಹವಾಗುತ್ತದೋ ಹಾಗೆ ವಿದ್ಯಾರ್ಥಿಗಳನ್ನು ಎಳವೆಯಲ್ಲೇ ತಿದ್ದಿ ತೀಡಿ ರೂಪ ನೀಡುವ ಶಿಕ್ಷಕರು ಆದರ್ಶ ಗುರು ಎಂದು ಹಿರಿಯ ವಿದ್ಯಾರ್ಥಿ ಕುಮಾರ್ ಪೆರ್ನಾಜೆ ಹೇಳಿದರು. ಅವರು ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಹಾಗೂ ಪ್ರೌಢಶಾಲಾ ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಾಳಿ ನಮಗೆಷ್ಟು ಮುಖ್ಯವೋ ಗಾಳಿಮಾತು ಅಷ್ಟೇ ಅಪಾಯಕಾರಿ. ನಂಬಿಕೆ ಅನ್ನೋದು ಬೆಲೆಕಟ್ಟಲಾಗದ ಅಮೂಲ್ಯ ರತ್ನ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟಗುರಿ, ಒಳ್ಳೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು

ಶ್ರೀ ಸೀತಾ ರಾಘವ ಪದವಿಪೂರ್ವ, ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಉತ್ಸವ-2023 Read More »

ಕೊಳ್ತಿಗೆ ಶಾಲಾ ವಾರ್ಷಿಕೋತ್ಸವ, ಹಳೆ ವಿದ್ಯಾರ್ಥಿ ಸಂಘದ ರಜತ ಸಂಭ್ರಮಕ್ಕೆ ಚಾಲನೆ

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕೊಳ್ತಿಗೆ ಹಿರಿಯ ಪ್ರಾಥಮಿಕ ಶಾಲೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ರಜತ ಸಂಭ್ರಮ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕೊಳ್ತಿಗೆ ಶಾಲಾ ವಾರ್ಷಿಕೋತ್ಸವ ಹಾಗೂ ಹಳೆ ವಿದ್ಯಾರ್ಥಿ ಸಂಘದ ರಜತ ಸಂಭ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಮ್‍ ಸುಂದರ

ಕೊಳ್ತಿಗೆ ಶಾಲಾ ವಾರ್ಷಿಕೋತ್ಸವ, ಹಳೆ ವಿದ್ಯಾರ್ಥಿ ಸಂಘದ ರಜತ ಸಂಭ್ರಮಕ್ಕೆ ಚಾಲನೆ Read More »

ಬೈಕ್‍-ಬಸ್ ಅಪಘಾತ : ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕ್‍ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟ‌ರ್ ಸವಾರ ಮೃತಪಟ್ಟ ಘಟನೆ ಕಬಕ ಕೂವೆಹಿತ್ತಿಲು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಬಿ.ಸಿ.ರೋಡ್ ಕೈಕಂಬ ನಿವಾಸಿ ಆಶಿಕ್ ಮೃತಪಟ್ಟ ಬೈಕ್‍ ಸವಾರ ಎಂದು ಗುರುತಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬೈಕ್‍-ಬಸ್ ಅಪಘಾತ : ಬೈಕ್ ಸವಾರ ಮೃತ್ಯು Read More »

ಕೆಮ್ಮಾಯಿ ರಾಧಾ ವಾಸುದೇವ ಶೆಣೈ ನಿಧನ

ಪುತ್ತೂರು: ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರ ತಾಯಿ ಕೆಮ್ಮಾಯಿ ನಿವಾಸಿ ರಾಧಾ ವಾಸುದೇವ ಶೆಣೈ (91) ಶನಿವಾರ ಧನರಾದರು. ಮೃತರು ಪುತ್ರರಾದ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಭಾಮಿ ಪ್ರಕಾಶ್ ಶೆಣೈ ಮತ್ತು ಪುತ್ರಿಯರಾದ ಶೈಲಾ ನಾಯಕ್, ಶೋಭಾ ನಾಯಕ್, ಭಾರತಿ ನಾಯಕ್ ಅವರನ್ನು ಅಗಲಿದ್ದಾರೆ. ಡಿ.ವಿ.ಸದಾನಂದ ಗೌಡ ಅವರು ತಮ್ಮ ಆರಂಭದ ರಾಜಕೀಯ ಚಟುವಟಿಕೆಗಳ ಸಂದರ್ಭದಲ್ಲಿ ಪುತ್ತೂರು ಕೆಮ್ಮಾಯಿ ಭಾಮಿ ಅಶೋಕ್ ಶೆಣೈ ಅವರ ಮನೆಯಲ್ಲೇ ತಂಗಿದ್ದರು. ಈ

ಕೆಮ್ಮಾಯಿ ರಾಧಾ ವಾಸುದೇವ ಶೆಣೈ ನಿಧನ Read More »

ಅಪರಾಧ ಮಾಸಾಚರಣೆ  | ವಿವಿಧ ಸಂಘಟನೆಗಳ ಸಹಕಾರದಲ್ಲಿ ಜಾಗೃತಿ ಜಾಥಾ

ಪುತ್ತೂರು: ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಮಾಡುತ್ತಿರುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪೊಲೀಸ್ ಮತ್ತು ರೋಟರಿ ಕ್ಲಬ್ ಸಮೂಹ ಸಂಸ್ಥೆ, ಜೆಸಿಐ, ಲಯನ್ಸ್ ಕ್ಲಬ್‌ಗಳ ಸಹಯೋಗದೊಂದಿಗೆ ಪುತ್ತೂರು ನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ಮಾಸಾಚರಣೆ ಅಂಗವಾಗಿ ಶನಿವಾರ ಪುತ್ತೂರಿನಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬೊಳುವಾರಿನಿಂದ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತನಕ ಜಾಗೃತಿ ಜಾಥಾ ನಡೆಯಿತು.ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಅಪರಾಧ ತಡೆ

ಅಪರಾಧ ಮಾಸಾಚರಣೆ  | ವಿವಿಧ ಸಂಘಟನೆಗಳ ಸಹಕಾರದಲ್ಲಿ ಜಾಗೃತಿ ಜಾಥಾ Read More »

ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್….!

ಪುತ್ತೂರು: ಪುತ್ತೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಗಡಿಪಾರು ನೋಟೀಸ್‌ ಮತ್ತೆ ಮುಂದುವರಿದಿದೆ. ಇದೀಗ ಇನ್ನೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್ ಜಾರಿ ಮಾಡಲಾಗಿದೆ. ನೆಟ್ಟಿಣಿಗೆ ಮುಡ್ನೂರು ನಿವಾಸಿ ಪ್ರವೀಶ್‌ ಕುಮಾರ್‌ ನಾಯರ್‌ ವಿರುದ್ದ ಪುತ್ತೂರು ಸಹಾಯಕ ಆಯುಕ್ತರು ಗಡಿಪಾರು ಏಕೆ ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪ್ರಸ್ತುತ ಅಯ್ಯಪ್ಪ ಮಾಲಾಧಾರಿಯಾಗಿರುವ ಪ್ರವೀಶ್‌ ಕುಮಾರ್‌ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತನಾಗಿದ್ದು ಎರಡು ಪ್ರಕರಣದಲ್ಲಿ  ಆರೋಪಿಯಾಗಿದ್ದಾನೆ. ಡಿ.20 ರಂದು ಪುತ್ತೂರು ಸಹಾಯಕ ಆಯುಕ್ತರ

ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೋಟೀಸ್….! Read More »

ಬೈಕ್‍-ರಿಕ್ಷಾ ಡಿಕ್ಕಿ : ಈಜು ತಜ್ಞರೊಬ್ಬರಿಗೆ ಗಂಭೀರ ಗಾಯ

ಬೆಳ್ತಂಗಡಿ: ರಿಕ್ಷಾ-ಬೈಕ್‍ ಡಿಕ್ಕಿ ಹೊಡೆದ ಪರಿಣಾಮ ಬಂದಾರಿನ ಈಜು ತಜ್ಞ ಮುಹಮ್ಮದ್ ಓಟೆಚ್ಚಾರು ಬಟ್ಲಡ್ಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಮುಹಮ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬೈಕ್‍-ರಿಕ್ಷಾ ಡಿಕ್ಕಿ : ಈಜು ತಜ್ಞರೊಬ್ಬರಿಗೆ ಗಂಭೀರ ಗಾಯ Read More »

ಕಾರು-ಸ್ಕೂಟರ್ ಡಿಕ್ಕಿ | ವಿದ್ಯಾರ್ಥಿ ಮೃತ್ಯು

ಕಡಬ: ಕಾರು ಮತ್ತು ಸ್ಕೂಟ‌ರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಕಡಬ ತಾಲೂಕಿನ ಕಳಾರದಲ್ಲಿ ನಡೆದಿದೆ. ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಎಂಬವರ ಪುತ್ರ ಸರಸ್ವತಿ ಶಾಲಾ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ. ಮೃತ ಬಾಲಕನ ತಂದೆ ಹಾಗೂ ತಂಗಿ ಗಂಭೀರ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ತಮ್ಮ ನಿವಾಸದಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದ್ದು, ಸರಸ್ವತಿ ಶಾಲೆಯಲ್ಲಿ ನಡೆದಿದ್ದ ಕ್ರೀಡೋತ್ಸವ

ಕಾರು-ಸ್ಕೂಟರ್ ಡಿಕ್ಕಿ | ವಿದ್ಯಾರ್ಥಿ ಮೃತ್ಯು Read More »

ವಾಹನ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡು ಚಾಲಕ ಮೃತ್ಯು !

ಸುಳ್ಯ: ಪಿಕಪ್ ವಾಹನ ಚಾಲನೆ ಸಂದರ್ಭ ಚಾಲಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ಸುಳ್ಯ ಪೈಚಾರಿನಲ್ಲಿ ನಡೆದಿದೆ. ಗದಗ ತಾಲೂಕು ಹೊಸೂರು ಗ್ರಾಮದ ಹುಸೇನಸಾಬ ಹೆಬಸುರ (45) ಮೃತಪಟ್ಟವರು. ಬೆಳ್ತಂಗಡಿಯಲ್ಲಿ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಮಡಿಕೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಅಳವಡಿಸಲಾಗಿದ್ದ ಶಾಮಿಯಾನವನ್ನು ತರಲೆಂದು ಮಡಿಕೇರಿಗೆ ಗುರುವಾರ ರಾತ್ರಿ ಹೊರಟ್ಟಿದ್ದರು. ವಾಹನ ಸುಳ್ಯದ ಪೈಚಾರು ಸಮೀಪ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಬಳಿಯಲ್ಲಿ ಕುಳಿತಿದ್ದ ವ್ಯಕ್ತಿಗೆ

ವಾಹನ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡು ಚಾಲಕ ಮೃತ್ಯು ! Read More »

error: Content is protected !!
Scroll to Top