ಪುತ್ತೂರು

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಸರಕಾರಿ ಶಾಲೆಗಳು ಎಲ್ಲವನ್ನೂ ಕಲಿಸುತ್ತದೆ, ಗುಣಮಟ್ಟದ ಶಿಕ್ಷಣವೂ ಇದೆ ಜೊತೆಗೆ ಏನೇ ಸಂಕಷ್ಟ ಬಂದರೂ ಬದುಕುವ ಧೈರ್ಯವನ್ನು ಸರಕಾರಿ‌ ಶಾಲಾ ಶಿಕ್ಷಣ ನೀಡುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಸರಕಾರಿ ‌ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಕೊರತೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ನೀಗಿಸುವ […]

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ Read More »

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ

ಪುತ್ತೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬಲ್ನಾಡು ನಿವಾಸಿ ಕೇಸರಿ ಕೊಪ್ಪಳ (38) ಮೃತಪಟ್ಟವರು. ಕೇಸರಿ ಕೊಪ್ಪಳ ಅವರು ಮನೆಯ ದಾಖಲೆ ಪತ್ರ ಇಟ್ಟು ಲೇವಾದೇವಿಯವರಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದರು. ಸಾಲ ಕೊಟ್ಟವರು ಕಿರುಕುಳ ನೀಡಿದ್ದಾರೆ ಹಲವರ ಬಳಿ ಹೇಳಿಕೊಂಡಿದ್ದರು. ಬಳಿಕ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತಿ, ಇಬ್ಬರು ಗಂಡು

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ

ಪುತ್ತೂರು: ನಗರದ ಪರ್ಲಡ್ಕದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ ಹಾಗೂ ದೈವಗಳ ನೇಮೋತ್ಸವ ಶನಿವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಪಂಚಾಮೃತ ಅಭಿಷೇಕ, ಶ್ರೀ ದೈವಗಳ ಕಲಶ ತಂಬಿಲ ಸೇವೆ, ಸಾಮೂಹಿಕ ಆಶ್ಲೇಷಬಲಿ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಪಾಂಗಳಾಯಿ ಶ್ರೀ ಅರಸು

ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ Read More »

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು

ಪುತ್ತೂರು: ಚೂರಿಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಪ್ರೊಜೆಕ್ಟರ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಪುತ್ತೂರು ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಚೂರಿಪದವು, ನಿಡ್ಪಳ್ಳಿ, ಆನಾಜೆ ಪರಿಸರದಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ಒದಗಿಸಿದ್ದು, ಈ ನಿಟ್ಟಿನಲ್ಲಿ ಊರವರಿಂದ ಪ್ರೀತಿಯ ಅಭಿನಂದನೆಯನ್ನು ಪಡೆದಿದ್ದೇನೆ ಎಂದರು.

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು Read More »

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಐಕ್ಯಂ ಜಿಲ್ಲಾ ಸಮ್ಮೇಳನ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ನೇತೃತ್ವದಲ್ಲಿ ಐಕ್ಯಂ ಜಿಲ್ಲಾ ಸಮ್ಮೇಳನ ಶನಿವಾರ ಇಲ್ಲಿನ ಕೋಟೆಚಾ ಹಾಲಿನಲ್ಲಿ ಉದ್ಘಾಟನೆಗೊಂಡಿತು. ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ರೋಟರಿ ಗವರ್ನರ್ ಎಚ್.ಆರ್. ಗವರ್ನರ್ ಎಚ್.ಆರ್. ಕೇಶವ್ ಉದ್ಘಾಟಿಸಿ, ಶುಭಹಾರೈಸಿದರು. ಎ.ಆರ್.ಪಿ.ಐ.ಸಿ. ಝೋನ್ 7ರ ಪಿಡಿಜಿ ಅಭಿನಂದನ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಡಿ.ಆರ್.ಸಿ.ಸಿ. ಮಹಮ್ಮದ್ ಅಸ್ಲಾಂ, ರೋಟರಿ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಐಕ್ಯಂ ಜಿಲ್ಲಾ ಸಮ್ಮೇಳನ Read More »

ಶತಾಯುಷಿ ಪಮಣ ಗೌಡ ನಿಧನ

ಕೊಕ್ಕಡ:: ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಶತಾಯುಷಿ ಪಮಣ ಗೌಡ (101) ಜ.6 ರಂದು ನಿಧನರಾದರು. 1923ನೇ ಇಸವಿಯಲ್ಲಿ ಜನಿಸಿದ ಪಮಣ ಗೌಡರು ಸಿಪಿಐಎಂ ತಾಲೂಕು ಸಮಿತಿ ಮುಖಂಡರಾಗಿದ್ದರು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶತಾಯುಷಿ ಪಮಣ ಗೌಡ ನಿಧನ Read More »

ಹಿಂದೂಗಳ ಭಾವನೆ ಜೊತೆ ಆಟವಾಡುವ ರಾಮ ವಿರೋಧಿಗಳನ್ನು ತಕ್ಷಣ ಬಂಧಿಸಿ : ಅರುಣ್ ಕುಮಾರ್ ಪುತ್ತಿಲ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಕಿಡಿಗೇಡಿಗಳು ಹರಿದಿದ್ದು, ಅವರನ್ನು ತಕ್ಷಣ ಬಂಧಿಸಬೇಕು ಎಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ. ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ, ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ, ಬೃಹತ್‌ ಬ್ಯಾನ‌ರ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ. ಹಿಂದೂಗಳ ಭಾವನೆ ಜೊತೆ ಆಟವಾಡುವ ಇಂತಹ

ಹಿಂದೂಗಳ ಭಾವನೆ ಜೊತೆ ಆಟವಾಡುವ ರಾಮ ವಿರೋಧಿಗಳನ್ನು ತಕ್ಷಣ ಬಂಧಿಸಿ : ಅರುಣ್ ಕುಮಾರ್ ಪುತ್ತಿಲ Read More »

ಚಿಲ್ಲರೆ ನೆಪ | ಹಿರಿಯ ನಾಗರಿಕರನ್ನು ದಾರಿಮಧ್ಯೆ ಇಳಿಸಿದ ಬಸ್ ನಿರ್ವಾಹಕ

ಕಡಬ: ಚಿಲ್ಲರೆ ನೆಪ ನೀಡಿ ಸರಕಾರಿ ಬಸ್ ನಿರ್ವಾಹರೊಬ್ಬರು ಹಿರಿಯ ನಾಗರಿಕರೊಬ್ಬರನ್ನು ದಾರಿಮಧ್ಯೆ ಬಸ್ಸಿನಿಂದ ಇಳಿಸಿದ ಘಟನೆ ಕಡಬ ತಾಲೂಕಿನ ಕಲ್ಲುಗುಡ್ಡೆ ಎಂಬಲ್ಲಿ ಶನಿವಾರ ನಡೆದಿದ್ದು, ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಬಾಬು ಗೌಡ (75) ಕಲ್ಲುಗುಡ್ಡೆಯಲ್ಲಿ ಸರಕಾರಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಗೆ ದುಡ್ಡು ಕೇಳುವಾಗ 200ರೂ ನೀಡಿದ್ದಾರೆ. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಹಿರಿಯ ನಾಗರಿಕರಾದ ಬಾಬು ಗೌಡ ಅವರನ್ನು ಕಲ್ಲುಗುಡ್ಡೆ

ಚಿಲ್ಲರೆ ನೆಪ | ಹಿರಿಯ ನಾಗರಿಕರನ್ನು ದಾರಿಮಧ್ಯೆ ಇಳಿಸಿದ ಬಸ್ ನಿರ್ವಾಹಕ Read More »

ಪ್ರತೀ ವಲಯಕ್ಕೆ ಹೆಚ್ಚುವರಿಯಾಗಿ  20 ಲಕ್ಷ ರೂ. ಅನುದಾನ | ಬ್ಲಾಕ್‍ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಕೇಂದ್ರಕ್ಕೆ ತಲಾ 20 ಲಕ್ಷ ರೂ. ಅನುದಾನ ಹೆಚ್ಚುವರಿಯಾಗಿ ನೀಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಪುತ್ತೂರು ಬ್ಲಾಕ್‍ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತೀ ವಲಯಾಧ್ಯಕ್ಷರುಗಳ ಮೂಲಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಗ್ರಾಮದಲ್ಲಿ ಅಗತ್ಯವಾಗಿ ಆಗಬೇಕಾದ ಕಾಮಗಾರಿಯನ್ನು ಮಾಡಲು ಈ ಅನುದಾನವನ್ನು ಬಳಕೆ ಮಾಡಲಾಗುತ್ತದೆ. ಪ್ರತೀ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ವಿತರಣೆ ಮಾಡಲಾಗುತ್ತದೆ. ಕಾರ್ಯಕರ್ತರು ಯಾವುದೇ ಸಮಸ್ಯೆ

ಪ್ರತೀ ವಲಯಕ್ಕೆ ಹೆಚ್ಚುವರಿಯಾಗಿ  20 ಲಕ್ಷ ರೂ. ಅನುದಾನ | ಬ್ಲಾಕ್‍ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ Read More »

ಮಹಿಳೆ ನಾಪತ್ತೆ : ದೂರು ದಾಖಲು

ವಿಟ್ಲ: ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಸಮೀಪದ ಪಳಿಕೆ ಜನತಾ ಕಾಲೋನಿ ನಿವಾಸಿ ಲಕ್ಷ್ಮೀ (60) ನಾಪತ್ತೆಯಾದವರು. ಮಾನಸಿಕ ಅಸ್ವಸ್ಥರಾಗಿದ್ದ ಲಕ್ಷ್ಮೀ ಅವರು ವಿಟ್ಲ ಪೇಟೆಯಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗಿದ್ದು, ಡಿ.16 ರಂದು ಹೋದವರು ಬಳಿಕ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಮಹಿಳೆ ಕುರಿತು ತಿಳಿದು ಬಂದಲ್ಲಿ ವಿಟ್ಲ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಮಹಿಳೆ ನಾಪತ್ತೆ : ದೂರು ದಾಖಲು Read More »

error: Content is protected !!
Scroll to Top