ಪುತ್ತೂರು

ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

ಪುತ್ತೂರು: ಬೈಪಾಸ್ ರಸ್ತೆಯಲ್ಲಿನ ರವಿಂದ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷಶ್ರೀ ಜಿತಕಾಮನಂದಜಿ ಉದ್ಘಾಟಿಸಿ ಮಾತನಾಡಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃಶಾಸ್ತ್ರದ ಹಾಗೂ ಆತ್ಯಾತ್ಮಿಕ ಹಿನ್ನೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಮಗುವಿಗೆ ಕೇವಲ ಉತ್ತಮ ಆಹಾರಕ್ರಮ […]

ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ Read More »

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ

ವಿಮಾ ಪ್ರಕ್ರಿಯೆ ರದ್ದುಪಡಿಸುವ ನೆಪದಲ್ಲಿ ವಂಚನೆ ಪುತ್ತೂರು: ಪುತ್ತೂರಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ 2.37 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ. ಪುತ್ತೂರಿನ ನಿವಾಸಿ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ

ಪುತ್ತೂರು ನಿವಾಸಿಗೆ 2.37 ಲ.ರೂ. ವಂಚಿಸಿದವ ಸೆರೆ Read More »

ಫೆ. 14 – 22: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಫೆ. 14 ರಿಂದ ಫೆ. 22 ರ ವರೆಗೆ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’ವನ್ನು ಆಯೋಜನೆ ಮಾಡಲಾಗಿದೆ. ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಚಿನ್ನಾಭರಣಗಳ ಜೊತೆಗೆ ಬದಲಾವಣೆ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಗ್ರಾಹಕರು ನೀಡುವ ಹಳೆಯ ಚಿನ್ನಾಭರಣಗಳನ್ನು ತಕ್ಷಣವೇ ಪರಿಶೀಲನೆ ಮಾಡಿ ಈಗಿರುವ ಮಾರುಕಟ್ಟೆ ದರದ ಅನ್ವಯ ಯಾವುದೇ ಕಡಿತ ಇಲ್ಲದೆ ಈ ವಿನಿಮಯ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಜೊತೆಗೆ ಪ್ರತೀ ಗ್ರಾಂ‌ಗೆ ರೂ.

ಫೆ. 14 – 22: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’ Read More »

ಶಾಸಕ ಅಶೋಕ್ ಕುಮಾರ್ ರೈ ಕೇಪು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಪುತ್ತೂರು: ಕೇಪು ಉಳ್ಳಾಲ್ತಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರೇ‌ ಮುಂದೆ ನಿಂತು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಪು ಜಾತ್ರೆಯಲ್ಲಿ ಪ್ರತಿವರ್ಷವೂ ಮೂರು ದಿನಗಳ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ. ಆದರೆ ಈ ಬಾರಿ ಕೋಳಿ ಅಂಕ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ಅದನ್ನು ತಡೆದಿದ್ದರು. ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಬಂದು, ಅಲ್ಲೇ ನಿಂತು ಕೋಳಿ

ಶಾಸಕ ಅಶೋಕ್ ಕುಮಾರ್ ರೈ ಕೇಪು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್ Read More »

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ

ಪುತ್ತೂರು: ಯಕ್ಷಗಾನ ಕಲಾವಿದ, ಸಂಘಟಕ ಪಿ.ಹರಿಶ್ಚಂದ್ರ ಆಚಾರ್ಯ ಇಳಂತಿಲ ಮತ್ತು ಅರ್ಥಧಾರಿ, -ಪ್ರಸಂಗಕರ್ತ ಗಣೇಶ ಆಚಾರ್ಯ ಕುಂಜೂರು ಇವರ ಸಂಸ್ಮರಣೆ ಕಾರ್ಯಕ್ರಮವು 50ನೇ ವರ್ಷಾಚರಣೆಯಲ್ಲಿರುವ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಹಯೋಗದಲ್ಲಿ ಇಚ್ಚೂರು ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಪ್ರಧಾನ ಅರ್ಚಕ ಸುರೇಶ್ ಪುತ್ತೂರಾಯ ವಹಿಸಿದ್ದರು. ಅತಿಥಿಯಾಗಿ ಅರ್ಥಧಾರಿ ಜಬ್ಬಾರ್ ಸಮೋ , ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಕವಿ ಪ್ರದೀಪ ಹೆಬ್ಬಾರ್ ಚಾರ, ಉಪ್ಪಿನಂಗಡಿ ಕಾಳಿಕಾಂಬಾ

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ Read More »

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾವು: ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನ ಕಾವು ವಾರ್ಷಿಕ ಜಾತ್ರೋತ್ಸವವು ಫೆ. 27ರಿಂದ ಮಾ. 3ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ವಠಾರದಲ್ಲಿ ದೀಪ ಪ್ರಜ್ವಲನೆಯೊಂದಿಗೆ ನೆರವೇರಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯೆ ಶ್ರೀಮತಿ ನವೀನಾ ಬಿ.ಡಿ., ಹಿರಿಯರಾದ ಪ್ರಕಾಶ್ ಉಂಗ್ರುಳಿತ್ತಾಯ ಹಾಗೂ ಶೇಷಪ್ಪ ಗೌಡ, ಕಾವು ಸಿ.ಎ. ಬ್ಯಾಂಕ್ ನಿರ್ದೇಶಕ ಲೋಹಿತ್ ಅಂಚಿನಡ್ಕ, ಪುತ್ತಿಲ ಪರಿವಾರ ಕಾವು ಘಟಕದ ಕಾರ್ಯದರ್ಶಿ

ಕಾವು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ

ಪುತ್ತೂರು: ಸಮಾಜ ಸೇವಕಿ, ಧಾರ್ಮಿಕ ಮುಂದಾಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನರಿಮೊಗರಿನ ಮುಂಡೂರು ಗ್ರಾಮದ ಕೆರೆಮನೆ ನಿವಾಸಿ ನಳಿನಿ ಲೋಕಪ್ಪ ಗೌಡ(74) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಮುಂಡೂರು ಮೃತ್ಯುಂಜಯೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಅವರ ಪತ್ನಿ. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ Read More »

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು

ಕಬಕ: ಕೊಡಿಪ್ಪಾಡಿ ಹಾಗೂ ಕುಳ ಗ್ರಾಮದಲ್ಲಿರುವ ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ , ಇದರ ಸದಸ್ಯರಿಂದ ಕಬಕ-ಕುಂಡಡ್ಕ ಸಂಪರ್ಕ ರಸ್ತೆಯ ಗುಂಡಿ ಹಾಗೂ ಬದಿಗಳಿಗೆ ಮಣ್ಣು ಹಾಕುವ ಮೂಲಕ ಊರಿನ ವಾಹನ ಸವಾರರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸಹಾಯಕವಾಗುವಂತೆ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ ಇದರ ಅಧ್ಯಕ್ಷ ಮಿಥುನ್ ಓಜಾಲ, ಉಪಾಧ್ಯಕ್ಷ ಕಿರಣ್ ಓಜಾಲ, ಮಾಜಿ ಅಧ್ಯಕ್ಷ ಮುರಳೀಧರ ಕೊರ್ಜೆ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು Read More »

ತಲೆಗೆ ಗಾಯವಾಗಿ ವೃದ್ಧ ಸಾವು : ಸಾವಿನ ಬಗ್ಗೆ ಅನುಮಾನ

ಮನೆಯಲ್ಲೇ ಬಿದ್ದಿತ್ತು 73ರ ಹರೆಯದ ವ್ಯಕ್ತಿಯ ಶವ ಕಡಬ: ವೃದ್ಧರೊಬ್ಬರು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ನೆಲ್ಯಾಡಿಯಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಶವ ಪತ್ತೆಯಾಗಿದೆ. ಮೃತರನ್ನು ಕಡಬ ನೆಲ್ಯಾಡಿ ಗ್ರಾಮದ ನಿವಾಸಿ ಕೆ.ಸಿ. ವರ್ಗೀಸ್ (73) ಎಂದು ಗುರುತಿಸಲಾಗಿದೆ. ಕೆ.ವಿ.ಥಾಮಸ್ ಸಲ್ಲಿಸಿದ ದೂರಿನ ಪ್ರಕಾರ, ಭಾನುವಾರ ಮಧ್ಯಾಹ್ನ ಚಿಕಿತ್ಸೆಗಾಗಿ ತನ್ನ ತಾಯಿಯನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿ 8 ಗಂಟೆಗೆ ಅವರನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋದ ನಂತರ, ರಾತ್ರಿ 11 ಗಂಟೆಗೆ ಮನೆಗೆ

ತಲೆಗೆ ಗಾಯವಾಗಿ ವೃದ್ಧ ಸಾವು : ಸಾವಿನ ಬಗ್ಗೆ ಅನುಮಾನ Read More »

ಫೆ.11: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದಿಂದ ಮಂಗಳೂರಿನಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ, ಬೆಳೆಸಿ’ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ ಬೃಹತ್ ಸಂಗಮವಾಗಿ ರಾಜ್ಯ ಸಮಾವೇಶ-2026 ಮತ್ತು ಅಭಿಯಾನದ ಅಂಗವಾಗಿ 12 ವರ್ಷದೊಳಗೆ 75 ಶಾಲೆಗಳಿಗೆ ನೀಡಿದ ಜಾರುಬಂಡಿ ಸಹಿತ ವಿವಿಧ ಕ್ರೀಡಾಚಟುವಟಿಗಳಿಗೆ ನೀಡಿದ ಪ್ರೋತ್ಸಾಹದ 75ರ ಸಂಭ್ರಮ ಫೆ. 11ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುಭರವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪುತ್ತೂರು ತಾಲೂಕು ಅಧ್ಯಕ್ಷೆ ನಿವೃತ್ತ ಶಿಕ್ಷಕಿ ವೇದಾವತಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ

ಫೆ.11: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದಿಂದ ಮಂಗಳೂರಿನಲ್ಲಿ ರಾಜ್ಯ ಸಮಾವೇಶ Read More »

error: Content is protected !!
Scroll to Top