ಪುತ್ತೂರು

ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ

ಉಪ್ಪಿನಂಗಡಿ: ಕೆಲವೇ ಕ್ಷಣಗಳೊಳಗೆ ಪೆರ್ನೆಯ ಒಂದೇ ಪ್ರದೇಶದಲ್ಲಿ ಎರಡು ಅಪಘಾತಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಜ.8 ಸೋಮವಾರ ಸಂಜೆ ಪೆರ್ನೆ ಜಂಕ್ಷನ್‍ನಿಂದ ಕೆಲವೇ ಅಂತರ ದೂರದಲ್ಲಿ ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್‍ನಲ್ಲಿ ಯಾರೂ ಇಲ್ಲದ್ದರಿಂದ ಅಪಾಯವೇನೂ ಸಂಭವಿಸಿಲ್ಲ. ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಹಾಗೂ ಗ್ಯಾರೇಜ್‍ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ ಮೇಲಿನ ಘಟನೆ ನಡೆದ […]

ಗ್ಯಾರೇಜಿಗೆ ನುಗ್ಗಿದ ಲಾರಿ: ಪಲ್ಟಿಯಾದ ಟೆಂಪೋ ರಿಕ್ಷಾ Read More »

ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ: ಪುತ್ತಿಲ

ಕಾವು: ಇಲ್ಲಿನ ಪುತ್ತಿಲ ಪರಿವಾರದ ವತಿಯಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವರಿಗೆ ಸೋಮವಾರ ಪೂಜೆ ನೆರವೇರಿಸಲಾಯಿತು. ನೇತೃತ್ವ ವಹಿಸಿದ್ದ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಗೌರವ ಸ್ವೀಕರಿಸಿ ಮಾತನಾಡಿ, ನಾವು ಒಗ್ಗಟ್ಟಿನಿಂದ ನಡೆಸುವ ಧಾರ್ಮಿಕ ಕಾರ್ಯಕ್ರಮಗಳು  ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬುತ್ತವೆ. ನಿರಂತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹಿಂದುಗಳಲ್ಲಿ ಜಾಗೃತಿಯೂ ಮೂಡುತ್ತದೆ. ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದರು. ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರದ ಕೇಂದ್ರ ಕಚೇರಿ ಅಧ್ಯಕ್ಷರು, ಪದಾಧಿಕಾರಿಗಳು, ಕಾವು ಘಟಕದ ಪದಾಧಿಕಾರಿಗಳು, ಸದಸ್ಯರು ಮೊದಲಾದವರು

ಧಾರ್ಮಿಕ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ: ಪುತ್ತಿಲ Read More »

ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ

ಪುತ್ತೂರು: ಮೆಸ್ಕಾಂ ಪುತ್ತೂರು ನಗರ ವ್ಯಾಪ್ತಿ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆ ಜ. 11ಕ್ಕೆ ಮುಂದೂಡಲಾಗಿದೆ. ಜ. 11ರಂದು ಬೆಳಿಗ್ಗೆ 11ರಿಂದ 12ರವರೆಗೆ ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಸಭೆ ನಡೆಯಲಿದೆ. ಜ. 9ಕ್ಕೆ ಜನಸಂಪರ್ಕ ಸಭೆ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ Read More »

ಜ.14ರಂದು ಪುತ್ತೂರಿನ ತೆಂಕಿಲದಲ್ಲಿ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾ ವೈಭವ” | 3 ಗಂಟೆ, 3 ವೇದಿಕೆ, 300 ವಿದ್ಯಾರ್ಥಿಗಳು `ಶ್ರೀರಾಮ ಕಥಾ ವೈಭವ’ದ ವಿಶೇಷತೆ

ಪುತ್ತೂರು: ರಾಮನ ಚರಿತ್ರೆಯನ್ನು‌ ಯುವಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಜ.14 ರಂದು ಪುತ್ತೂರಿನ ತೆಂಕಿಲದ ವಿವೇಕ ನಗರದಲ್ಲಿ ವೈಭವದ ಆಯೋಧ್ಯೆಯ ಸಮಗ್ರ ಕಥನವನ್ನು ಪ್ರಸ್ತುತಪಡಿಸುವ ‘ಶ್ರೀರಾಮ ಕಥಾ ವೈಭವ’ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14 ರಂದು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ

ಜ.14ರಂದು ಪುತ್ತೂರಿನ ತೆಂಕಿಲದಲ್ಲಿ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾ ವೈಭವ” | 3 ಗಂಟೆ, 3 ವೇದಿಕೆ, 300 ವಿದ್ಯಾರ್ಥಿಗಳು `ಶ್ರೀರಾಮ ಕಥಾ ವೈಭವ’ದ ವಿಶೇಷತೆ Read More »

ರಾಷ್ಟ್ರಮಟ್ಟದ ಕನ್ವರ್ಜ್ ತ್ರೋಬಾಲ್ ಪಂದ್ಯ: ಧನ್ವಿ ಜೆ. ರೈ ತಂಡ ಚಾಂಪಿಯನ್

ಪುತ್ತೂರು: ಪಾಟ್ನದಲ್ಲಿ ನಡೆದ ಕನ್ವರ್ಜ್ 2023ರ ತ್ರೋಬಾಲ್ ಪಂದ್ಯದಲ್ಲಿ ಪುತ್ತೂರಿನ ಧನ್ವಿ ಜೆ. ರೈ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (nift), ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಸ್ಟ್ಯಾಟುಟರಿ ಇನ್ಸ್ಟಿಟ್ಯೂಟ್ ಗವರ್ನ್ ಬೈ ದ ನಿಫ್ಟ್  ಆಕ್ಟ್  2006, ಮಿನಿಸ್ಟ್ರಿ ಆಫ್ ಟೆಕ್ಸ್ ಟೈಲ್ಸ್  ಗವರ್ಮೆಂಟ್ ಆಫ್ ಇಂಡಿಯಾ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಬೆಂಗಳೂರು ತಂಡ ಪಾಲ್ಗೊಂಡಿದ್ದು, ತಂಡದಲ್ಲಿ ಪುತ್ತೂರಿನ ಧನ್ವಿ ಜೆ. ರೈ ಆಟವಾಡಿದ್ದರು. ಧನ್ವಿ

ರಾಷ್ಟ್ರಮಟ್ಟದ ಕನ್ವರ್ಜ್ ತ್ರೋಬಾಲ್ ಪಂದ್ಯ: ಧನ್ವಿ ಜೆ. ರೈ ತಂಡ ಚಾಂಪಿಯನ್ Read More »

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು !

ಪುತ್ತೂರು: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಕೊಡಿಪ್ಪಾಡಿಯಲ್ಲಿ ನಡೆದಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಾಘವ ಮೃತಪಟ್ಟವರು. ಕೊಡಿಪ್ಪಾಡಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭ ರಾಘವ ಅವರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು ! Read More »

ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು!!

ಪುತ್ತೂರು: ಶ್ವಾಸಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಆಕ್ಸಿಜನ್ ಯಂತ್ರ ನೀಡಿದರು. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆರ್ಥಿಕವಾಗಿ ತೀರ ಬಡತನದಲ್ಲಿರುವ ಅವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ.

ಅನಾರೋಗ್ಯ ಪೀಡಿತ ಮಹಿಳೆಗೆ ಆಕ್ಸಿಜನ್ ಯಂತ್ರ ನೀಡಿದ ಶಾಸಕರು!! Read More »

ನಗರಸಭೆಯ ಬೋರ್ ವೆಲ್ ಗಳಿಗೆ ಮಳೆಕೊಯ್ಲಿನ ಭಾಗ್ಯ! | ಪುತ್ತೂರು ನಗರಸಭೆಯಲ್ಲಿವೆ 177 ಬೋರ್ ವೆಲ್

ಗಣೇಶ್ ಎನ್. ಕಲ್ಲರ್ಪೆ ಪುತ್ತೂರು: ಕಡುಬೇಸಿಗೆಯಲ್ಲಿ ಸಂಜೀವಿನಿಯಾಗಿ ನೆರವಿಗೆ ಬರುತ್ತಿದ್ದ ಬೋರ್ ವೆಲ್ ಗಳು ಇನ್ನು ಮುಂದೆ ಮಳೆಕೊಯ್ಲಿನ ಭಾಗವಾಗಿ ಕಾಣಿಸಿಕೊಳ್ಳಲಿದೆ. ಪುತ್ತೂರು ನಗರಸಭೆ ಆಡಳಿತ ಇಂತಹ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಪ್ರತಿ ಬೇಸಿಗೆಯ ಸಂದರ್ಭ ಡ್ಯಾಂ ಬತ್ತಿ ಹೋಗುವುದು ಕಳೆದ ಕೆಲ ವರ್ಷಗಳಿಂದ ಸಾಮಾನ್ಯ. ಇಂತಹ ಸಂದರ್ಭ ಬೋರ್ ವೆಲ್ ಗಳ ಮೊರೆ ಹೋಗಲಾಗುತ್ತಿತ್ತು. ಹೀಗೆ ಕೊರೆಯಿಸಲಾದ ಬೋರ್ ವೆಲ್ ಗಳ ಸಂಖ್ಯೆಯೇ 177. ಇನ್ನು ಮುಂದೆ ಈ ಬೋರ್ ವೆಲ್ ಗಳ ಅಗತ್ಯವಿಲ್ಲ. ಹಾಗೆಂದು

ನಗರಸಭೆಯ ಬೋರ್ ವೆಲ್ ಗಳಿಗೆ ಮಳೆಕೊಯ್ಲಿನ ಭಾಗ್ಯ! | ಪುತ್ತೂರು ನಗರಸಭೆಯಲ್ಲಿವೆ 177 ಬೋರ್ ವೆಲ್ Read More »

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು | ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಅರ್ಹ ಎಲ್ಲಾ ಕೃಷಿಕರಿಗೂ ಸವಲತ್ತುಗಳು ಸಿಗಬೇಕು. ಆ ಸವಲತ್ತನ್ನು ಅವರಿಗೆ ತಲುಪಿಸುವ ಕೆಲಸ ಆಗಬೇಕು. ಯಾವುದೇ ಇಲಾಖೆಯಿಂದ ಸವಲತ್ತಿಗಾಗಿ ಲಂಚ ಕೇಳಿದ್ರೆ ನನಗೆ ತಿಳಿಸಿ. ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ತಾಲೂಕು ಕೃಷಿಕ ಸಮಾಜ ಹಾಗೂ ಪುತ್ತೂರು ಕೃಷಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ ಕೃಷಿ ಮಾಹಿತಿ, ಸಂವಾದ, ಸನ್ಮಾನ ಹಾಗೂ ಸವಲತ್ತು

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು | ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಜ.13 : ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ | 11 ಸ್ಥಾನಕ್ಕೆ ಚುನಾವಣೆ, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ

ಸವಣೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಜ.13 ರಂದು ನಡೆಯಲಿದೆ. 12 ಸ್ಥಾನಗಳ ಪೈಕಿ ಈಗಾಗಲೇ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಪ್ರಕಾಶ್ ರೈ ಸಾರಕರೆ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸ್ಥಾನಗಳಿಗೆ 23 ಸ್ಪರ್ಧಿಗಳು ಕಣದಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ

ಜ.13 : ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ | 11 ಸ್ಥಾನಕ್ಕೆ ಚುನಾವಣೆ, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ Read More »

error: Content is protected !!
Scroll to Top