ಪುತ್ತೂರು

ಏಷ್ಯಾ ಬುಕ್ ಆಫ್ ರೆಕಾರ್ಡ್’ಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹೆಸರು

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ರಾಶಿ ಕೆ.ಸಿ.  ಅವರ ಹೆಸರು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‍ ನಲ್ಲಿ ದಾಖಲಾಗಿದೆ. ರಾಷ್ಟ್ರಗೀತೆಯನ್ನು 1 ಗಂಟೆ 40 ನಿಮಿಷ, 26 ಸೆಕೆಂಡ್ ನಲ್ಲಿ ಗರಿಷ್ಠ 116 ಬಾರಿ ನಿರಂತರವಾಗಿ ಹಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ರಾಶಿ ಈ ಹಿಂದೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ರೆಕಾರ್ಡ್ಸ್ ಯುನಿವರ್ಸಿಟಿ ಸಾಧನೆಯನ್ನು ಮಾಡಿರುತ್ತಾರೆ. ಸಂಗೀತ, ನೃತ್ಯ, ಭಾಷಣ, ಏಕಪಾತ್ರಾಭಿನಯ, ನಾಟಕ, ಯೋಗ, ಕಲಿಕೆಯಲ್ಲಿಯೂ ಪ್ರತಿಭಾನ್ವಿತ […]

ಏಷ್ಯಾ ಬುಕ್ ಆಫ್ ರೆಕಾರ್ಡ್’ಗೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹೆಸರು Read More »

ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಯಿಂದ ತ್ಯಾಜ್ಯ ತೆರವು ಮಾಡಿಸಿದ ಕೃತ್ಯ: ಠಾಣೆಗೆ ದೂರು! | ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: 7ನೇ ತರಗತಿ ವಿದ್ಯಾರ್ಥಿಯಿಂದ ವ್ಯಕ್ತಿಯೋರ್ವರು ತ್ಯಾಜ್ಯ ತೆರವು ಮಾಡಿಸಿರುವ ಘಟನೆ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುವ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಯ ತಂದೆ ಬಿಳಿಯೂರು ಗ್ರಾಮದ ನಡುಮನೆ ನಿವಾಸಿ ವಾಸಪ್ಪ ನಾಯ್ಕ ಎಂಬವರು ದೂರು ನೀಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕನಿಗೆ ಮಾನಸಿಕ ಹಿಂಸೆ ನೀಡಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಯಿಂದ ತ್ಯಾಜ್ಯ ತೆರವು ಮಾಡಿಸಿದ ಕೃತ್ಯ: ಠಾಣೆಗೆ ದೂರು! | ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ | ಪುತ್ತೂರಿನ ಶಮಂತ್ ಆಳ್ವ ನೇತೃತ್ವದ ವಿದ್ಯಾರ್ಥಿ ತಂಡ ವಿಜಯ

ಪುತ್ತೂರು: ಲಂಡನ್ ನ ಕಿಂಗ್ಸ್ಟನ್ ವಿಶ್ವವಿದ್ಯಾಲಯದ ಪುತ್ತೂರಿನ ಶಮಂತ್ ಆಳ್ವ ನೇತೃತ್ವದ ವಿದ್ಯಾರ್ಥಿ ತಂಡ  ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ ನ ಪ್ರದರ್ಶನದಲ್ಲಿ ವಿಜಯ ಸಾಧಿಸಿದೆ. ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ ಜಾಗತಿಕ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಾಗಿದ್ದು, ವಿಶ್ವದಾದ್ಯಂತ ವಿಶ್ವವಿದ್ಯಾನಿಲಯಗಳ ನೂರಾರು ತಂಡಗಳು ಭಾಗವಹಿಸಿದ್ದವು. ಕಿಂಗ್ಸ್ಟನ್ ವಿಶ್ವವಿದ್ಯಾನಿಲಯದ ಶಮಂತ್ ಆಳ್ವ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಶಮಂತ್ ಆಳ್ವ ಪ್ರಸ್ತುತ ಮುಕ್ವೆ ನಿವಾಸಿ ರವಿರಾಜ್ ಆಳ್ವ ಮತ್ತು ರೂಪರೇಖಾ ಆರ್ . ಆಳ್ವ ದಂಪತಿ ಪುತ್ರ. ಸಂತ

ಬ್ಯುಸಿನೆಸ್ ಸ್ಟ್ರಾಟಜಿ ಗೇಮ್ | ಪುತ್ತೂರಿನ ಶಮಂತ್ ಆಳ್ವ ನೇತೃತ್ವದ ವಿದ್ಯಾರ್ಥಿ ತಂಡ ವಿಜಯ Read More »

ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಿತು ಸಾಮೂಹಿಕ ಸೀಮಂತ | 40 ಮಂದಿ ಗರ್ಭಿಣಿಯರು ಭಾಗಿ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಘಟಕ ಹಾಗೂ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 40 ಮಂದಿ ಗರ್ಭಿಣಿಯರಿಗೆ ಸೀಮಂತ ನಡೆಯಿತು. ಪುತ್ತೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಜಗದೀಶ್‍, ಡಾ.ಸ್ಮಿತಾರಾಣಿ, ಡಾ.ಅರ್ಚನಾ ಮಾಹಿತಿ ನೀಡಿದರು. ಐಸಿಟಿಸಿ

ಮಾತೃವಂದನಾ ಕಾರ್ಯಕ್ರಮದ ಅಂಗವಾಗಿ ನಡೆಯಿತು ಸಾಮೂಹಿಕ ಸೀಮಂತ | 40 ಮಂದಿ ಗರ್ಭಿಣಿಯರು ಭಾಗಿ Read More »

ಜ.20: ಸೂರ್ಯಗಾಯತ್ರಿ ಸಂಗೀತ ಕಾರ್ಯಕ್ರಮ | ಪ್ರಥಮ ಬಾರಿಗೆ ಪುತ್ತೂರಿನಲ್ಲಿ

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ, ಖ್ಯಾತ ಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜ. 20 ರಂದು ನಡೆಯಲಿದೆ. ಸಂಸ್ಥೆಯ ದಶಾಂಬಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ಸಂಜೆ 5.30ರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶಂಕರ ಸಭಾಭವನದಲ್ಲಿ ಜರುಗಲಿದೆ. ಖ್ಯಾತ ಗಾಯಕಿಯಾಗಿರುವ ಸೂರ್ಯಗಾಯತ್ರಿ ಪುತ್ತೂರಿಗೆ ಪ್ರಥಮ ಬಾರಿಗೆ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಜ.20: ಸೂರ್ಯಗಾಯತ್ರಿ ಸಂಗೀತ ಕಾರ್ಯಕ್ರಮ | ಪ್ರಥಮ ಬಾರಿಗೆ ಪುತ್ತೂರಿನಲ್ಲಿ Read More »

ಅಂದ್ರಟ್ಟ ಸೇತುವೆಗೆ ಎರಡನೇ ಬಾರಿಗೆ ಶಿಲಾನ್ಯಾಸ ನೆರವೇರಿಸಿರುವುದು ಎಷ್ಟು ಸರಿ: ಶಾಸಕರಿಗೆ ಶಕ್ತಿ ಕೇಂದ್ರ ಅಧ್ಯಕ್ಷರ ಪ್ರಶ್ನೆ | ಶಿಷ್ಟಾಚಾರ ಉಲ್ಲಂಘನೆಯ ಹಿಂದಿನ ಕಾರಣ ತಿಳಿಸಲು ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

ಪುತ್ತೂರು:  ಚಿಕ್ಕಮುಡ್ನೂರು, ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಅಂದ್ರಟ್ಟದ ಸಂಪರ್ಕ ಸೇತುವೆಗೆ 2023ರ ಮಾರ್ಚ್ 19ರಂದು ಆಗಿನ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಅದೂ ಶಿಷ್ಟಾಚಾರವನ್ನು ಉಲ್ಲಂಘಿಸಿ. ಆದ್ದರಿಂದ ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್ ಆಗ್ರಹಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ

ಅಂದ್ರಟ್ಟ ಸೇತುವೆಗೆ ಎರಡನೇ ಬಾರಿಗೆ ಶಿಲಾನ್ಯಾಸ ನೆರವೇರಿಸಿರುವುದು ಎಷ್ಟು ಸರಿ: ಶಾಸಕರಿಗೆ ಶಕ್ತಿ ಕೇಂದ್ರ ಅಧ್ಯಕ್ಷರ ಪ್ರಶ್ನೆ | ಶಿಷ್ಟಾಚಾರ ಉಲ್ಲಂಘನೆಯ ಹಿಂದಿನ ಕಾರಣ ತಿಳಿಸಲು ಪತ್ರಿಕಾಗೋಷ್ಠಿಯಲ್ಲಿ ಆಗ್ರಹ Read More »

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ!

ವಿಟ್ಲ : ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ನರಿಂಗಾನ ಗ್ರಾಮದ ಕೆದಂಬಾಡಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ. ಬಂಟ್ವಾಳ ನರಿಂಗಾನ ನಿವಾಸಿ, ಸಿದ್ದೀಕ್ ಕೆ.ಎಂ. ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯಾವುದೇ ದಾಖಲೆ ಪತ್ರ ಇಲ್ಲದಿದ್ದುದರಿಂದ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಜ.8 ರಂದು ರಾತ್ರಿ ವಿಟ್ಲ ಠಾಣಾ ಎ.ಎಸ್.ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಅಶೋಕ್ ರವರು ಬಂಟ್ವಾಳ ತಾಲೂಕು

ಅಕ್ರಮ ಮರಳು ಸಾಗಾಟ: ಆರೋಪಿ ಬಂಧನ! Read More »

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ

ಪುತ್ತೂರು: ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಎಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣರಾಗಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು ಪುತ್ತೂರಿನ ಸಿಎ ರಾಮಭಟ್ ಹಾಗೂ ಸಿಎ ಅರವಿಂದ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಿಎ ತರಬೇತಿ ಪಡೆದಿದ್ದರು. ಕೃತಿಕಾ ಎ.ಎಸ್‍. ಬಿಎಸ್‍ಎನ್‍ಎಲ್ ನಿವೃತ್ತ ಉಪಮಂಡಲ ಅಧಿಕಾರಿ ಎ.ಸೀತಾರಾಮ ಗೌಡ ಹಾಗೂ ಚಂದ್ರಾವತಿ ದಂಪತಿ ಪುತ್ರಿ.

ಸಿಎ ಅಂತಿಮ ಪರೀಕ್ಷೆಯಲ್ಲಿ ಕೃತಿಕಾ ಎ.ಎಸ್‍. ಉತ್ತೀರ್ಣ Read More »

ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ! | ಅಂಗಡಿ, ದ್ವಿಚಕ್ರ ವಾಹನಕ್ಕೆ ಹಾನಿ!

ವಿಟ್ಲ: ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಂಬಳಬೆಟ್ಟು ದರ್ಗಾದ ಬಳಿ ನಡೆದಿದೆ. ಸುಳ್ಯ ಮೂಲದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಓಮ್ನಿ ಕಾರು ನಿಯಂತ್ರಣ ತಪ್ಪಿ ತರಕಾರಿ ಅಂಗಡಿಗೆ ನುಗ್ಗಿದೆ ಎನ್ನಲಾಗಿದೆ. ಅಂಗಡಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯುಂಟಾಗಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ! | ಅಂಗಡಿ, ದ್ವಿಚಕ್ರ ವಾಹನಕ್ಕೆ ಹಾನಿ! Read More »

ಗ್ರಾಮಾಂತರ ಸೇರಿದಂತೆ ಹಲವೆಡೆ ಮಳೆ!

ಪುತ್ತೂರು: ಪುತ್ತೂರಿನ ಗ್ರಾಮಾಂತರ ಭಾಗದಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದ್ದು, ನಗರ ಪ್ರದೇಶದಲ್ಲಿ ಸಣ್ಣಗೆ ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ಮಳೆಯಾಗಿದೆ. ಎರಡು ದಿನಗಳ ಬಳಿಕ ಪುತ್ತೂರು ಪರಿಸರದಲ್ಲಿ ಮತ್ತೆ ಮಳೆಯಾಗಿದ್ದು, ಪರಿಸರಕ್ಕೆ ತಂಪೆರೆದಿದೆ.

ಗ್ರಾಮಾಂತರ ಸೇರಿದಂತೆ ಹಲವೆಡೆ ಮಳೆ! Read More »

error: Content is protected !!
Scroll to Top