ಪುತ್ತೂರು

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ

ವಿಟ್ಲ: ಕನ್ಯಾನ ಗ್ರಾಮದ ದೇಲಂತಬೆಟ್ಟು ಹಿ. ಪ್ರಾ. ಶಾಲೆಯ ಅಮೃತ ಮಹೋತ್ಸವ ‘ಅಮೃತ ಸಿಂಚನ’ ಕಾರ್ಯಕ್ರಮ ಜ.13ರಂದು ನಡೆಯಲಿದೆ.1948 ಜೂ.1ರಂದು ಆರಂಭವಾದ ಈ ಶಾಲೆಗೆ 75 ವರ್ಷ ತುಂಬಿದ್ದು, ಹಳೆ ವಿದ್ಯಾರ್ಥಿಗಳು, ಅಮೃತ ಮಹೋತ್ಸವ ಸಮಿತಿ ಮತ್ತು ಶಾಲಾಭಿವೃದ್ಧಿ ಸಮಿತಿ ಜತೆಗೂಡಿ ಅಮೃತ ಮಹೋತ್ಸವವವನ್ನು ಆಚರಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಡಿ. ಶ್ರೀನಿವಾಸ್ ತಿಳಿಸಿದ್ದಾರೆ.ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಿ. ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಬಯಲು ನೃತ್ಯ, ಪ್ರತಿಭಾ ಪುರಸ್ಕಾರ, ಪುಟಾಣಿಗಳ ಹಬ್ಬ […]

ಜ.13ರಂದು ಕನ್ಯಾನ ದೇಲಂತಬೆಟ್ಟು ಶಾಲೆಯ ಅಮೃತ ಮಹೋತ್ಸವ Read More »

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ತೇಜಸ್ವಿನಿ ಅವರು ಭಾರತೀಯ ಲೆಕ್ಕ ಪರಿಶೋಧನಾ ಮಂಡಳಿಯು (ಐಸಿಎಐ) ನವೆಂಬರ್ 2023 ರಲ್ಲಿ ನಡೆಸಿದ ಸಿ.ಎ. ಇಂಟರ್ ಗ್ರೂಪ್ ಪರೀಕ್ಷೆಯ ಗ್ರೂಪ್ – 2 ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಅವರು ಅಂಬಿಕಾ ಸಂಸ್ಥೆಯಲ್ಲಿ ಸಿಎ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದರು. ತೇಜಸ್ವಿನಿ ಅವರು ಬಂಟ್ವಾಳದ ನಾರಾಯಣ ಮೂಲ್ಯ ಹಾಗೂ ಹೇಮಾವತಿ ದಂಪತಿ ಪುತ್ರಿ.

ಸಿ.ಎ ಗ್ರೂಪ್-2 ಪರೀಕ್ಷೆ ತೇರ್ಗಡೆಯಾದ ತೇಜಸ್ವಿನಿ Read More »

ಬುಳೇರಿಕಟ್ಟೆ -ಸಾಜ- ಕುದ್ದುಪದವು ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ

ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ ಕುದ್ದುಪದವು ಲೋಕೋಪಯೋಗಿ ರಸ್ತೆಗೆ ಗುದ್ದಲಿ ಪೂಜೆ ನಡೆಯಿತು. 1.80 ಕೋಟಿ ರೂ ವೆಚ್ಚದಲ್ಲಿ ಡಾಮರೀಕರಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದು, ಶಾಸಕ ಅಶೋಕ್ ಕುಮಾರ್ ರೈ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್‍.ಮಹಮ್ಮದ್, ಬಲ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಬೂತ್ ಅಧ್ಯಕ್ಷ ನವೀನ್ ಕರ್ಕೆರ, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬುಳೇರಿಕಟ್ಟೆ  ಪ್ರಕಾಶ್ ಚಂದ್ರ ಆಳ್ವ, ವಿಟ್ಲ

ಬುಳೇರಿಕಟ್ಟೆ -ಸಾಜ- ಕುದ್ದುಪದವು ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ Read More »

ಜ.13 : ವಿದ್ಯುತ್ ನಿಲುಗಡೆಯಾಗಲಿದೆ | ಎಲ್ಲೆಲ್ಲಿ : ಇಲ್ಲಿದೆ ವಿವರ

ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ವಿದ್ಯುತ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಜ.13 ರಂದು ವಿದ್ಯುತ್ ನಿಲುಗಡೆ ಆಗಲಿದೆ. 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ವಾಟರ್ ಸಪ್ಲೈ ಮತ್ತು ಉಪ್ಪಿನಂಗಡಿ ಎಕ್ಸ್ ಪ್ರೆಸ್ ಫೀಡರ್ ನಲ್ಲಿ ಜ.13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‍ ನಿಂದ ವಿದ್ಯುತ್‍ ಸರಬರಾಜಾಗುವ ನೆಕ್ಕಿಲಾಡಿ, ಉಪ್ಪಿನಂಗಡಿ ಗ್ರಾಮದ ವಿದ್ಯುತ್

ಜ.13 : ವಿದ್ಯುತ್ ನಿಲುಗಡೆಯಾಗಲಿದೆ | ಎಲ್ಲೆಲ್ಲಿ : ಇಲ್ಲಿದೆ ವಿವರ Read More »

ಬೆಂಕಿಗೆ ಆಹುತಿಯಾದ ಮನೆ !

ಪುತ್ತೂರು: ತಾಲೂಕಿನ ಸರ್ವೆ ಗ್ರಾಮದ ಸೊರಕೆ ಎಂಬಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣ ಭಸ್ಮವಾಗಿದೆ. ಜ.9 ರಂದು ಈ ಘಟನೆ ನಡೆದಿದ್ದು, ಸೊರಕೆ ಪೆರಂಟೋಲು ನಿವಾಸಿ ಕುಂಡ ಎಂಬವರ ಟರ್ಪಾಲು ಹೊದಿಕೆಯ ಮನೆ ಬೆಂಕಿಯಿಂದ ಸಂಪೂರ್ಣ ಭಸ್ಮವಾಗಿದೆ ಎನ್ನಲಾಗಿದೆ. ಮನೆಯಲ್ಲಿ ಕುಂಡ ಹಾಗೂ ಅವರ ಪುತ್ರ, ಸೊಸೆ ವಾಸಿಸುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು, ಬಟ್ಟೆ, ಪಾತ್ರೆ, ಮನೆಯ ದಾಖಲೆ ಪತ್ರ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 1.5 ಲಕ್ಷ ರೂ.

ಬೆಂಕಿಗೆ ಆಹುತಿಯಾದ ಮನೆ ! Read More »

ಜ.16: ಕಾರ್ಪಾಡಿ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ: ಪೂರ್ವಭಾವಿ ಸಭೆ

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಉತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು. ದೇವಸ್ಥಾನದ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ಷಾವಧಿ ಜಾತ್ರೋತ್ಸವದ ದಿನದಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸುವುದೆಂದು ತೀರ್ಮಾನಿಸಲಾಯಿತು. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರತೀ ವರ್ಷ ಕಿರುಷಷ್ಠಿಗೆ ಜಾತ್ರೋತ್ಸವ ನಡೆಯುವ ಪದ್ದತಿ. ಈ ವರ್ಷ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವ ಕಲಶ, ಗಣಹೋಮ ನಡೆಸಿ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಮಾಡುವ ಬಗ್ಗೆ

ಜ.16: ಕಾರ್ಪಾಡಿ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವ: ಪೂರ್ವಭಾವಿ ಸಭೆ Read More »

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂಬರುವ ಯೋಜನೆಗಳ ಕುರಿತ ಸಲಹಾ ಸಮಿತಿಯ ಪೂರ್ವಭಾವಿ ಸಭೆ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥೆಯ ಮುಂದಿನ ಮಹತ್ವಪೂರ್ಣ ಯೋಜನೆಗಳ ಸಹಿತ “ಕಲ್ಪ ವಿಕಾಸ ” ಮಹತ್ವಾಕಾಂಕ್ಷಿ ಯೋಜನೆಯ ರೂಪು-ರೇಷೆಗಳ ಬಗ್ಗೆ, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು  ಚರ್ಚಿಸಿ, ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಾವಯವ ತೆಂಗು ಕೃಷಿಗೆ ಉತ್ತೇಜನವನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡಲು ಹಾಗೂ ತೆಂಗು ಸಂಸ್ಥೆಯ ಪತ್ರಿಕೆ

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ಕಲ್ಪ ವಿಕಾಸ’ ಯೋಜನೆಯ ರೂಪುರೇಷೆಗಳ ಕುರಿತು ಚರ್ಚೆ | ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ಲಾರಿಗೆ ಢಿಕ್ಕಿ ಹೊಡೆದ ಬಸ್: ವಿದ್ಯಾರ್ಥಿಗಳಿಬ್ಬರಿಗೆ ಗಾಯ!

ಪುತ್ತೂರು: ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ, ವಿದ್ಯಾರ್ಥಿಗಳಿಬ್ಬರು ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಇಲ್ಲಿಯ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪವನ್ ಕುಮಾರ್ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿ ಗಣೇಶ್ ಬಸ್ಸಿನಿಂದ ಬಿದ್ದು ಗಾಯಗೊಂಡವರು. ವಿದ್ಯಾರ್ಥಿಗಳು ಬಸ್ಸಿನ ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುತ್ತಿದ್ದರು. ಬಸ್ ಲಾರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಎಸೆಯಲ್ಪಟ್ಟಿದ್ದರು. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಲಾರಿಗೆ ಢಿಕ್ಕಿ ಹೊಡೆದ ಬಸ್: ವಿದ್ಯಾರ್ಥಿಗಳಿಬ್ಬರಿಗೆ ಗಾಯ! Read More »

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ!

ಪುತ್ತೂರು: ಒಬ್ಬಂಟಿಯಾಗಿ ವಾಸವಾಗಿದ್ದ ಕಾರ್ಮಿಕನೋರ್ವ ಪೆರಿಗೇರಿಯ ಅಂಗಡಿ ಹೊರಭಾಗದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಎಷ್ಟು ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದಿ. ಅಪ್ಪಯ್ಯ ನಾಯ್ಕ ಅವರ ಪುತ್ರ, ಕಾರ್ಮಿಕ ಜಾನು ನಾಯ್ಕ (45) ಆತ್ಮಹತ್ಯೆ ಮಾಡಿಕೊಂಡವರು. ಪೆರಿಗೇರಿಯ ತನ್ನ ಮನೆ ಸಮೀಪದ ದುರ್ಗಾ ಸ್ಟೋರ್ ಎಂಬ ಅಂಗಡಿ ಮುಂಭಾಗವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ! Read More »

error: Content is protected !!
Scroll to Top