ಪುತ್ತೂರು

ಬಿಜೆಪಿ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಚಾಲನೆ | ಬೂತ್ 49 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರುರವರಿಂದ ಮತ ಯಾಚನೆ

ಉಪ್ಪಿನಂಗಡಿ: ಬಿಜೆಪಿ ವತಿಯಿಂದ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಗಿದೆ. ಹಿರೇಬಂಡಾಡಿ ಬೂತ್ ಸಂಖ್ಯೆ 49 ರಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಮನೆ ಮನೆ ಭೇಟಿ ನೀಡಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾದ ಜನಾರ್ದನ ಅನಂತಿಮಾರ್, ವಿಶ್ವನಾಥ ಕೆಮ್ಮಟೆ, ನಿತಿನ್ ತಾರಿತ್ತಡಿ, ಲಕ್ಷ್ಮೀಶ ನಿಡ್ಡೆಂಕಿ, ಸುರೇಶ್ ಹಳೆಮನೆ, ಡೀಕಯ್ಯ ಪನ್ನೊಟ್ಟು, ಭರತ್ ಜಾಲು ಉಪಸ್ಥಿತರಿದ್ದರು.

ಬಿಜೆಪಿ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಚಾಲನೆ | ಬೂತ್ 49 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರುರವರಿಂದ ಮತ ಯಾಚನೆ Read More »

ಏ.21-28 : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ | ಇಂದು ಸಾಗಿ ಬಂತು ವೈಭವದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಅವ್ರಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯು ಏ.21 ರಿಂದ 28 ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ರಹ್ಮಶ್ರೀ ಕಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವದಲ್ಲಿ ಏ.21 ರಂದು ಬೆಳಿಗ್ಗೆ

ಏ.21-28 : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ | ಇಂದು ಸಾಗಿ ಬಂತು ವೈಭವದ ಹೊರೆಕಾಣಿಕೆ Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್‍ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್ | ಏ.20 ರಿಂದ ಮೇ 9 ರ ವರೆಗೆ ಲಭ್ಯ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆಫರ್ ಏ.20 ರಿಂದ ಮೇ 09 ರ ವರೆಗೆ ಲಭ್ಯವಿದೆ. ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿಯೂ ಲಭ್ಯವಿದೆ. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ ಏಕೆಂದರೆ ಇದು ಕುಟುಂಬಕ್ಕೆ ಸಮೃದ್ಧಿ

ಜಿ.ಎಲ್. ಆಚಾರ್ಯ ಜ್ಯುವೆಲ್ಲ‌ರ್ಸ್‍ ನಲ್ಲಿ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಆಫರ್ | ಏ.20 ರಿಂದ ಮೇ 9 ರ ವರೆಗೆ ಲಭ್ಯ Read More »

ಏ.23 : ಅಣ್ಣಾಮಲೈಯಿಂದ ಸುಳ್ಯ, ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೋಡ್ ಶೋ | ನಾಳೆ ಮನೆ ಮನೆ ಭೇಟಿ ಮಹಾ ಅಭಿಯಾನ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ 221 ಬೂತ್‍ಗಳಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದ ಮಹಾ ಅಭಿಯಾನ ಏ.21 ಭಾನುವಾರ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಪೂರ್ವ ತಯಾರಿ ನಡೆಸಲಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆಯಿಂದ ಸಂಜೆ ತನಕ ಮನೆ ಮನೆ ಭೇಟಿ ನಡೆಯಲಿದ್ದು, ಕೇಂದ್ರ ಸರಕಾರದ ಯೋಜನೆ ಹಾಗೂ ಪ್ರಣಾಳಿಕೆ ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಪ್ರತಾಪಸಿಂಹ ನಾಯಕ್

ಏ.23 : ಅಣ್ಣಾಮಲೈಯಿಂದ ಸುಳ್ಯ, ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೋಡ್ ಶೋ | ನಾಳೆ ಮನೆ ಮನೆ ಭೇಟಿ ಮಹಾ ಅಭಿಯಾನ Read More »

ರೋಟರಿ ಯುವ ನೇತೃತ್ವದಲ್ಲಿ ನಿರ್ಗತಿಕ ವ್ಯಕ್ತಿಯ ರಕ್ಷಣೆ : ಪುನರ್ವಸತಿ ಕೇಂದ್ರಕ್ಕೆ ರವಾನೆ

ಪುತ್ತೂರು:  ಅನೇಕ ಸಮಯಗಳಿಂದ ಸಂಪ್ಯ ಬಸ್ಸು ನಿಲ್ದಾಣದ ದಲ್ಲಿ ಅನಾರೋಗ್ಯ ಪೀಡಿತ ಸ್ಥಿತಿಯಲ್ಲಿ ಕಂಡುಬಂದ ತಿಮ್ಮಪ್ಪ ಎಂಬವರನ್ನು ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಸಹಕಾರದೊಂದಿಗೆ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಇಂದು ಸೇರಿಸಲಾಯಿತು. ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗ ಸೋಮಯ್ಯ ಎಂ. ವೈ ಹಾಗೂ ಎಸ್. ಐ ಜಂಬೂರಾಜ್ ಮಹಾಜನ್ ಅವರ ಸೂಚನೆಯ ಮೇರೆಗೆ ನಿರ್ಗತಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.  ಈಗಾಗಲೇ ಪುತ್ತೂರಿನ

ರೋಟರಿ ಯುವ ನೇತೃತ್ವದಲ್ಲಿ ನಿರ್ಗತಿಕ ವ್ಯಕ್ತಿಯ ರಕ್ಷಣೆ : ಪುನರ್ವಸತಿ ಕೇಂದ್ರಕ್ಕೆ ರವಾನೆ Read More »

ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕೌಡಿಚ್ಚಾರಿನ ವಿನೋದ್ ಅಕಾಯಿ |  ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ

ಪುತ್ತೂರು : ಪುತ್ತೂರು  ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಸಮೀಪದ ಅಕಾಯಿಯ ವಿನೋದ್ ಎಂಬವರು ಮೆದುಳಿನ ರಕ್ತಸ್ರಾವ ತೊಂದರೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ಖರ್ಚಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಅವರ ಕುಟುಂಬವು ಆರ್ಥಿಕ ಬಡ ಕುಟುಂಬವಾಗಿದ್ದು, ತಾಯಿ, ಚಿಕ್ಕಮ್ಮ, ಪತ್ನಿ ಹಾಗೂ ಒಂದು ವರುಷದ ಮಗುವಿನೊಂದಿಗೆ ಇರುವ ಇವರು ಕುಟುಂಬದ ಆಧಾರಸ್ತಂಭವಾಗಿದ್ದಾರೆ. ಇವರ ಈ ಅನಾರೋಗ್ಯದಿ೦ದ ಕುಟುಂಬಕ್ಕೆ ದಿಕ್ಕುತೋಚದಂತಾಗಿದ್ದಾರೆ.

ಅನಾರೋಗ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕೌಡಿಚ್ಚಾರಿನ ವಿನೋದ್ ಅಕಾಯಿ |  ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ Read More »

ಟ್ಯಾಂಕರ್-ಕಂಟೈನರ್ ಡಿಕ್ಕಿ : ಕಂಟೈನರ್ ಚಾಲಕ ಗಂಭೀರ

ಉಪ್ಪಿನಂಗಡಿ: ಟ್ಯಾಂಕರ್ ಮತ್ತು ಕಂಟೆನರ್ ಮದ್ಯೆ ನಡೆದ ಭೀಕರ ಅಪಘಾತಕ್ಕೆ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿಯೇ ಕಾರಣ ಎಂದು ತಿಳಿದು ಬಂದಿದ್ದು, ಕಂಟೇನ‌ರ್ ಚಾಲಕ ಗಂಭೀರ ಗಾಯಗೊಂಡಿದ್ದು, ಅಪಘಾತ ಸಂಭವಿಸಿ ಒಂದು ಗಂಟೆಗಳು ಕಳೆದರೂ ಚಾಲಕನನ್ನು ಹೊರ ತೆಗೆಯಲು ಹರ ಸಾಹಸ ಪಡಲಾಯಿತು. ಸ್ಥಳೀಯ ಯುವಕರ ಶತ ಪ್ರಯತ್ನಗಳಿಂದ ಚಾಲಕನನ್ನು ಹೊರ ತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ

ಟ್ಯಾಂಕರ್-ಕಂಟೈನರ್ ಡಿಕ್ಕಿ : ಕಂಟೈನರ್ ಚಾಲಕ ಗಂಭೀರ Read More »

ಏ.25 : ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ” ಸಮಾರೋಪ, ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ | ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯ ಉಪಸ್ಥಿತಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ”ದ ಸಮಾರೋಪ ಸಮಾರಂಭ ಹಾಗೂ ಸಾರ್ವಜನಿಕ ಗುರುವಂದನಾ ಏ.25 ರಂದು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯುವ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಮಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಲಿದ್ದಾರೆ

ಏ.25 : ಅಂಬಿಕಾ ವಿದ್ಯಾಲಯದ “ದಶಾಂಬಿಕೋತ್ಸವ” ಸಮಾರೋಪ, ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ | ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯ ಉಪಸ್ಥಿತಿ Read More »

ನೇಹಾ ಬರ್ಬರ ಹತ್ಯೆ ಮೂಲಕ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

ಪುತ್ತೂರು: ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಅವರನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಘಟನೆಯ ನೈತಿಕ ಹೊಣೆ ಹೊತ್ತುರಾಜ್ಯ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮತಾಂಧನಾದ ಫಯಾಝ್ ಎಂಬ ವ್ಯಕ್ತಿ ಪ್ರೀತಿಯ

ನೇಹಾ ಬರ್ಬರ ಹತ್ಯೆ ಮೂಲಕ ಜಿಹಾದಿ ಮಾನಸಿಕತೆ ಮತ್ತೊಮ್ಮೆ ತಲೆ ಎತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ Read More »

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ

ಪುತ್ತೂರು : ಪುತ್ತೂರಿನಿಂದ ದರ್ಬೆ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ , ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ನಡೆದಿದೆ. ಕೆಮ್ಮಾಯಿಯ ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್ ಸೇರಿದಂತೆ ಸಾಮೆತ್ತಡ್ಕದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ವ್ಯಕ್ತಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದಾರೆ. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗಿದ್ದು, ಕಾರು ಚಾಲಕ ಜಖಂಗೊಂಡ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ Read More »

error: Content is protected !!
Scroll to Top