ಪುತ್ತೂರು

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಬಕ-ಪುತ್ತೂರು ರೈಲು ಹಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ರೈಲು ಹಳಿಯಲ್ಲಿ ಮೃತದೇಹ ಕಂಡಿದ್ದು, ವ್ಯಕ್ತಿಯ ಪರಿಚಯ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು Read More »

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ ನಡೆಯಿತು. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇನ್ನೊವೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ಕುರಿತಾಗಿ 23 ವರ್ಷಗಳ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಹಾಗೂ ಮಿಷಿನ್ ಲರ್ನಿಂಗ್ ನಲ್ಲಿಅನುಭವ ಹೊಂದಿರುವ ಅಲೋಕ್ ಚಕ್ರವರ್ತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ

ಅಕ್ಷಯ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯೂರಿಟಿ ಕುರಿತು ಮಾಹಿತಿ ಕಾರ್ಯಾಗಾರ Read More »

ಸಾಗಾಟ ಮಾಡಲು ಸರಕಾರಿ ಜಮೀನಿಂದ ಶ್ರೀಗಂಧ ಕಡಿದು ದಾಸ್ತಾನು | ಆರೋಪಿ ಬಂಧನ

ಪುತ್ತೂರು: ಸರಕಾರಿ ಜಮೀನಿನಿಂದ ಶ್ರೀಗಂಧ ಕಡಿದು ಸಾಗಾಟ ಮಾಡಲು ದಾಸ್ತಾನಿರಿಸಿದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಸಂಚಾರಿ ದಳದವರು ಶ್ರೀಗಂಧ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಕೊಳ್ಳಿಗೆ ಗ್ರಾಮದ ಕಣಿಯಾರು ಸಿ.ಆರ್. ಕಾಲೋನಿಯ ವೇಲು ಎಂಬವರ ಪುತ್ರ ಕಮಲ್ ಯಾನೆ ಕಮಲ್ ವಾಸನ್ (46 ವ) ಬಂಧಿತ ಆರೋಪಿ 1,43,000 ರೂಪಾಯಿ ಮೌಲ್ಯದ 22 ಕೆ.ಜಿ. ಶ್ರೀಗಂಧದ ಕೊರಡುಗಳನ್ನು ಅಕ್ರಮವಾಗಿ ಕೊಳ್ತಿಗೆ ಗ್ರಾಮದ ಕಣಿಯಾರು ಸರಕಾರಿ ಜಮೀನಿನಿಂದ ಕಡಿದು ಸಾಗಾಟಕ್ಕೆ ತನ್ನ ವಶದಲ್ಲಿಟ್ಟುಕೊಂಡಿದ್ದ. ಕೊಳ್ತಿಗೆ ಗ್ರಾಮದ

ಸಾಗಾಟ ಮಾಡಲು ಸರಕಾರಿ ಜಮೀನಿಂದ ಶ್ರೀಗಂಧ ಕಡಿದು ದಾಸ್ತಾನು | ಆರೋಪಿ ಬಂಧನ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ 41 ವಿದ್ಯಾರ್ಥಿನಿಯರು ಪೇ ಪಾಲ್‌ ಬಹುರಾಷ್ಟ್ರೀಯ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.  2023-24 ನೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕಾಲೇಜಿನಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗಾಗಿ ಹನಿವೆಲ್‌ ಕಂಪನಿಯಿಂದ ಪ್ರಾಯೋಜಿಸಲ್ಪಟ್ಟ ಕಸ್ಟಮರ್‌ ರಿಲೇಶನ್‌ಶಿಪ್‌ ಮ್ಯಾನೇಜ್‌ಮೆಂಟ್‌ ಸರ್ಟಿಫಿಕೇಟ್‌ ಕೋರ್ಸನ್ನು ಆಯೋಜಿಸಲಾಗಿತ್ತು. ಸರ್ಟಿಫಿಕೇಟ್‌ ಕೋರ್ಸ್‌ನ ಕೊನೆಯಲ್ಲಿ ಕಂಪನಿಯ ವತಿಯಿಂದ ನಾಲ್ಕು ಹಂತಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಭಾಗವಹಿಸಿದ 118 ವಿದ್ಯಾರ್ಥಿಗಳೂ ಈ ನಾಲ್ಕು ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಅವರಿಗೆ ಕಂಪನಿಯ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಪೇ ಪಾಲ್‌ ಕಂಪನಿಯ ಸಂದರ್ಶನಕ್ಕೆ ಆಯ್ಕೆ Read More »

ವರುಣ ಕೃಪೆಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರುಣನ ಕೃಪೆ ಹಾಗೂ ಲೋಕಕಲ್ಯಾಣಾರ್ಥವಾಗಿ ಸೀಯಾಳಾಭಿಷೇಕ ಸೋಮವಾರ ಬೆಳಿಗ್ಗೆ ನಡೆಯಿತು. ಸೀಯಾಳಾಭಿಷೇಕದ ಮೊದಲು ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ದಿನೇಶ್ ಪಿ.ವಿ., ಅಮರನಾಥ ಗೌಡ ಬಪ್ಪಳಿಗೆ, ಮಹಾಲಿಂಗೇಶ್ವರ ಭಜನಾ ಮಂಡಳಿ ಸಂಚಾಲಕ ಗೋಪಾಲಕೃಷ್ಣ, ಜೊಹರಾ

ವರುಣ ಕೃಪೆಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ Read More »

ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ – ಸಂವಾದ ಕಾರ್ಯಕ್ರಮ

ಪುತ್ತೂರು: ಶಿಕ್ಷಣವು ಯಶಸ್ವಿ ಸಮಾಜದ ಅಡಿಪಾಯವಾಗಿದೆ. ಸದೃಢ ರಾಷ್ಟ್ರ ನಿರ್ಮಾಣದ ಮೂಲವಾಗಿದೆ. ಆಧುನಿಕ ದಿನಮಾನದಲ್ಲಿ ಇರುವ ನಾವು ಸಮಾಜದಲ್ಲಿ ಸುಸ್ಥಿರ ಬದಲಾವಣೆಯತ್ತ ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಾಹಪೂರ ಹೇಳಿದರು. ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುತ್ತೂರಿನ ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ ಎಂಬ ವಿಚಾರವಾಗಿ ಅಧ್ಯಾಪಕರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಶಿಕ್ಷಣ,

ಭವಿಷ್ಯದ ಭಾರತಕ್ಕಾಗಿ ಶಿಕ್ಷಕರ ಸಕ್ರಿಯತೆ – ಸಂವಾದ ಕಾರ್ಯಕ್ರಮ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ | ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವಕ್ಕೆ ಶನಿವಾರ ಸಂಜೆ ಹೊರೆ ಕಾಣಿಕೆ ಸಮರ್ಪಣೆ ಮೂಲಕ ಚಾಲನೆ ನೀಡಲಾಯಿತು. ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಶ್ರೀ ದೇವಸ್ಥಾನದಕ್ಕೆ ತೆರಳಿತು. ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ | ಭಕ್ತರಿಂದ ಸಮರ್ಪಣೆಯಾದ ಹೊರೆಕಾಣಿಕೆ Read More »

ಏ.23-24 : ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನಾ ಮಹೋತ್ಸವ

ಪುತ್ತೂರು: 1964 ಪುತ್ತೂರಿನ ಕೆಮ್ಮಿಂಜೆಯಲ್ಲಿ ನಿರ್ಮಿಸಲಾದ ಶ್ರೀ ರಾಮ ಭಜನಾ ಮಂದಿರವನ್ನು ನವೀಕರಿಸಲಾಗಿದ್ದು, ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಗಳು ಏ.23 ಹಾಗೂ 24 ರಂದು ನಡೆಯಲಿದೆ ಎಂದು ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕೆಮ್ಮಿಂಜೆ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 23 ರಂದು ಸಂಜೆ 7 ಗಂಟೆಯಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ,ಸ್ಥಳ ಶುದ್ಧಿö, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ನವಕ ಕಲಶ

ಏ.23-24 : ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನಾ ಮಹೋತ್ಸವ Read More »

“ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ | ವಿವಿಧ ಮತಗಟ್ಟೆಗಳಲ್ಲಿ ಧ್ವಜಾರೋಹಣ

ಪುತ್ತೂರು: ಮತದಾರರಿಗೆ ಮತಗಟ್ಟೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ʼನಮ್ಮ ನಡೆ ಮತಗಟ್ಟೆ ಕಡೆʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕೆಂಬ ಆಶಯ ಹೊಂದಿದೆ. 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 221 ಮತಗಟ್ಟೆಗಳಲ್ಲಿಯೂ ಈ ಕಾರ್ಯಕ್ರಮ ನಡೆದಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಹೇಳಿದರು. ಅವರು ಇಂದು ಆಡಳಿತ ಸೌಧದ ಮುಂದೆ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುತ್ತೂರು

“ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ | ವಿವಿಧ ಮತಗಟ್ಟೆಗಳಲ್ಲಿ ಧ್ವಜಾರೋಹಣ Read More »

ಏ.24 : ಕಲ್ಲಾರೆಯಲ್ಲಿ “ಶಿವಕೃಪಾ” ಸಭಾಭವನದ ಲೋಕಾರ್ಪಣೆ

ಪುತ್ತೂರು: ಸಮಾಜಕ್ಕೆ ಹಲವಾರು ಕೊಡುಗೆಯನ್ನು ನೀಡುತ್ತಾ ಬಂದಿರುವ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನೂತನವಾಗಿ ಕಲ್ಲಾರೆಯಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.24 ರಂದು ಸಂಜೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್‍.ಕೆ.ಜಗನ್ನಿವಾಸ ರಾವ್ ತಿಳಿಸಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಜೆ 6.30 ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಲೋಕಾರ್ಪಣೆ ನಡೆಯಲಿದೆ ಎಂದು ಹೇಳಿದರು. ಸಂಘ ದತ್ತಿ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿಕೊಂಡು ಅರ್ಹ

ಏ.24 : ಕಲ್ಲಾರೆಯಲ್ಲಿ “ಶಿವಕೃಪಾ” ಸಭಾಭವನದ ಲೋಕಾರ್ಪಣೆ Read More »

error: Content is protected !!
Scroll to Top