ಪುತ್ತೂರು

ಧ್ವಜಾವರೋಹಣದೊಂದಿಗೆ ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವ ಸಂಪನ್ನ | ಭಕ್ತ ಸಮೂಹವನ್ನೇ ಪುಳಕಿತಗೊಳಿಸುವ ವೈಭವದ ಜಾತ್ರೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ ಧ್ಜಜಾವರೋಹಣದೊಂದಿಗೆ ಇಂದು ಸಂಪನ್ನಗೊಂಡಿತು. ಏ.10 ರಿಂದ ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರೋತ್ಸವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಏ.10 ರಿಂದ ಪ್ರತಿನಿತ್ಯ ಶ್ರೀ ದೇವರ ಬಲಿ ಉತ್ಸವ ನಡೆದು ಶ್ರೀ ದೇವಸ್ಥಾನದ ವಠಾರದಲ್ಲಿರುವ ಕಟ್ಟೆಯಲ್ಲಿ ಪೂಜೆಗೊಂಡ ಬಳಿಕ ಪ್ರತಿನಿತ್ಯ ನಿಗದಿಯಾದ ಪ್ರದೇಶಗಳಿಗೆ ಸವಾರಿ ಮಾಡಿ ವಿವಿಧ ಕಟ್ಟೆಗಳಲ್ಲಿ ಪೂಜೆಗೊಂಡು ಭಕ್ತಾದಿಗಳನ್ನು ಪುನೀತರಾಗಿಸುವುದು ವಿಶೇಷತೆಯಾಗಿದ್ದು, ಈ ಮೂಲಕ ಮನೆ ಬಾಗಿಲಿಗೆ ಬರುವ ದೇವರು ಎಂದೇ ಖ್ಯಾತಿ […]

ಧ್ವಜಾವರೋಹಣದೊಂದಿಗೆ ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವ ಸಂಪನ್ನ | ಭಕ್ತ ಸಮೂಹವನ್ನೇ ಪುಳಕಿತಗೊಳಿಸುವ ವೈಭವದ ಜಾತ್ರೋತ್ಸವ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ), ಗಣಕ ವಿಜ್ಞಾನ  ಹಾಗೂ ಎಂಕಾಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಮಂಗಳೂರಿನ ಗ್ಲೋಟಚ್‌ ಟೆಕ್ನಾಲಜೀಸ್‌ ಸಂಸ್ಥೆಯ   ಅಪ್ಲಿಕೇಶನ್‌ ಡೆವಲಪ್‌ಮೆಂಟ್‌ ವಿಭಾಗದ ನಿರ್ದೇಶಕ ದೀಪಕ್‌ ಕೃಷ್ಣಮೂರ್ತಿ ಡಿಸ್ರಪ್ಟಿವ್‌ ಇನ್ನೊವೇಶನ್‌: ಟ್ರಾನ್ಸ್ಫಾರ್ಮಿಂಗ್‌ ಇಂಡಸ್ಟ್ರೀಸ್‌ ಥ್ರೂ ಕ್ರಿಯೇಟಿವ್‌ ಐಡಿಯೇಶನ್‌ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, 90 ರ ದಶಕದದಲ್ಲಿ ಕ್ಲೇಟನ್ ಕ್ರಿಸ್ಟೇನ್‌ಸೆನ್‌ನಿಂದ ಮೊದಲ ಬಾರಿಗೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ Read More »

ಮುಕ್ವೆ ಶಾಲಾ ವಠಾರದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಹೊರವಲಯದ ಮುಕ್ವೆ ಶಾಲಾ ವಠಾರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಮುಕ್ವೆ ಶಾಲಾ ಬಳಿ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಶಾಲಾ ವಠಾರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಯಕ್ಷಗಾನ ವೀಕ್ಷಿಸಲು ಬಂದಿದ್ದವರಿಗೆ ಈ ಮಾಹಿತಿ ಇಂದು ಮುಂಜಾನೆ ಗೊತ್ತಾಗಿದೆ. ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಮುಕ್ವೆ ಶಾಲಾ ವಠಾರದಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಲೋಕಸಭೆ ಚುನಾವಣೆ | ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಹ ಅಧ್ಯಕ್ಷರಾಗಿ ಶಕುಂತಳಾ ಟಿ. ಶೆಟ್ಟಿ, ಸಂಯೋಜಕರಾಗಿ ಎನ್‍.ಚಂದ್ರಹಾಸ ಶೆಟ್ಟಿ

ಪುತ್ತೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯದ ಸಹ ಅಧ್ಯಕ್ಷರಾಗಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹಾಗೂ ಸಂಯೋಜಕರಾಗಿ ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಈ ಆದೇಶ ಹೊರಡಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ನೂತನ ಪದಾಧಿಕಾರಿಗಳಿಗೆ  ಜವಾಬ್ದಾರಿಯನ್ನು ನೀಡಲಾಗಿದೆ. ನೂತನ 10 ಜನ ಸಹ-ಅಧ್ಯಕ್ಷರುಗಳು,

ಲೋಕಸಭೆ ಚುನಾವಣೆ | ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಹ ಅಧ್ಯಕ್ಷರಾಗಿ ಶಕುಂತಳಾ ಟಿ. ಶೆಟ್ಟಿ, ಸಂಯೋಜಕರಾಗಿ ಎನ್‍.ಚಂದ್ರಹಾಸ ಶೆಟ್ಟಿ Read More »

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಸಂಪನ್ನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ವೀರಮಂಗಲ ಕುಮಾರಧಾರ ಹೊಳೆಯಲ್ಲಿ ಅತ್ಯಂತ ವೈಭವದಿಂದ ಇಂದು ಮುಂಜಾನೆ ನಡೆಯಿತು. ಗುರುವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವದೊಂದಿಗೆ ಮಾತುಕತೆ ನಡೆದು ನಂತರ ಹೊರಟ ಶ್ರೀ ದೇವರು ನೂರಾರು ಕಟ್ಟೆಗಳಲ್ಲಿ ಪೂಜೆಗೊಂಡು ದೂರದ ವೀರಮಂಗಲವನ್ನು ಇಂದು ಮುಂಜಾನೆ ತಲುಪಿದರು. ಅಲ್ಲಿ ಇಂದು ಮುಂಜಾನೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅವಭೃತ ಸ್ನಾನ ಮುಗಿಸಿ ಕಟ್ಟೆಪೂಜೆ ಗೊಂಡು ಪುನಃ ಹಿಂತಿರುಗಿದರು.

ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಸಂಪನ್ನ Read More »

ಜಾತ್ರಾ ಗದ್ದೆಯಲ್ಲಿ ನಕಲಿ ಮಂಗಳಮುಖಿಯಿಂದ ಚಿನ್ನದ ಸರ ಕಳವು | ಮಂಗಳಮುಖಿಯನ್ನು ಠಾಣೆಯಲ್ಲಿರಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಡುಗಡೆ | ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಸಂದರ್ಭ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡುತ್ತಿದ್ದ ನಕಲಿ ಮಂಗಳಮುಖಿಯೊಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವ ತಿಳಿದು ಬಂದಿದೆ. ಬ್ರಹ್ಮರಥೋತ್ಸವ ಸಂದರ್ಭ ಗದ್ದೆಯಲ್ಲಿ ನಕಲಿ ಮಂಗಳಮುಖಿಯೋರ್ವಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಲ್ಲದೆ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಇದು ಗಮನಕ್ಕೆ ಬಮದಾಗ ಸಾರ್ವಜನಿಕರ ಸಹಕಾರದೊಂದಿಗೆ ಹಿಡಿದು

ಜಾತ್ರಾ ಗದ್ದೆಯಲ್ಲಿ ನಕಲಿ ಮಂಗಳಮುಖಿಯಿಂದ ಚಿನ್ನದ ಸರ ಕಳವು | ಮಂಗಳಮುಖಿಯನ್ನು ಠಾಣೆಯಲ್ಲಿರಿಸಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಬಿಡುಗಡೆ | ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು Read More »

ಹವ್ಯಾಸಿ ಪತ್ರಕರ್ತರಾಗಿಯೂ ಬದುಕು ಕಟ್ಟಿಕೊಳ್ಳಬಹುದು | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಟಿ.ಎನ್.

ಪುತ್ತೂರು: ಫ್ರಿಲಾನ್ಸ್ ಪತ್ರಿಕೋದ್ಯಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯ ಕ್ಷೇತ್ರ. ಸ್ವತಂತ್ರ ಪತ್ರಕರ್ತರಾಗಿ ದುಡಿಯಲು ಆಯ್ಕೆಗಳು ಹಲವಾರು ಇರುತ್ತದೆ. ಇಲ್ಲಿ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಬೇರೆ ಬೇರೆ ಕೆಲಸಗಳನ್ನು ಮಾಡಿ ಆದಾಯವನ್ನು ಗಳಿಸಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ನಿರ್ದಿಷ್ಟ ಆದಾಯಕ್ಕೆ ಅವಲಂಬಿತರಾಗಿರುವುದು ಕಷ್ಟ ಎಂದು ಮಂಗಳೂರಿನ ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್. ಹೇಳಿದರು. ಅವರು ವಿವೇಕಾನಂದ  ಕಲಾ,ವಿಜ್ಞಾನ  ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ

ಹವ್ಯಾಸಿ ಪತ್ರಕರ್ತರಾಗಿಯೂ ಬದುಕು ಕಟ್ಟಿಕೊಳ್ಳಬಹುದು | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಟಿ.ಎನ್. Read More »

ಲಕ್ಷಾಂತರ ಭಕ್ತಾದಿಗಳ ಜಯಘೋಷದೊಂದಿಗೆ ನಡೆಯಿತು ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮ ರಥೋತ್ಸವ | ಆಕಾಶದೆತ್ತರದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು ಪ್ರದರ್ಶನ

ಪುತ್ತೂರು: ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮ ರಥೋತ್ಸವ ಬುಧವಾರ ರಾತ್ರಿ ವೈಭವದಿಂದ ನಡೆಯಿತು. ನೂರಾರು ಭಕ್ತರ ಕೈಗಳು ಬ್ರಹ್ಮ ರಥೋತ್ಸವವನ್ನು ಜಯಘೋಷಗಳೊಂದಿಗೆ ರಥಬೀದಿಯಲ್ಲಿ ಎಳೆಯುವ ಮೂಲಕ ಸಾಗಿದರು. ಈ ಪುಣ್ಯ ಕ್ಷಣವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಮೊದಲಿಗೆ ಒಳಾಂಗಣದಲ್ಲಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಹೊರಾಂಗಣದಲ್ಲಿ ಬಲಿ ಉತ್ಸವ ನಡೆಯಿತು. ನಂತರ ಶ್ರೀ ದೇವರು ರಥಾರೂಢರಾದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಬೆಡಿ ಎಂಬ ಹೆಸರುವಾಸಿಯಾದ ಸುಡುಮದ್ದು ಪ್ರದರ್ಶನ ಆಕಾಶದೆತ್ತರಕ್ಕೆ

ಲಕ್ಷಾಂತರ ಭಕ್ತಾದಿಗಳ ಜಯಘೋಷದೊಂದಿಗೆ ನಡೆಯಿತು ಪುತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮ ರಥೋತ್ಸವ | ಆಕಾಶದೆತ್ತರದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ ಸುಡುಮದ್ದು ಪ್ರದರ್ಶನ Read More »

ಟೈಮ್ & ಟೈಡ್ ವತಿಯಿಂದ ಏ.18 ರಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಕಾರ್ಯಕ್ರಮ ಮುಂದೂಡಿಕೆ | ಮುಂದಿನ ದಿನಾಂಕ ಶೀಘ್ರದಲ್ಲಿ ಪ್ರಕಟಿಸಲಾಗುವುದು

ಪುತ್ತೂರು: ಟೈಮ್ & ಟೈಡ್ ಸಂಸ್ಥೆಯಿಂದ ಏ.18 ಗುರುವಾರದಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಬೃಹತ್ ಮನೋರಂಜನಾ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಏ.18 ಗುರುವಾರ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮೇ ತಿಂಗಳಿನಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲಾಗುವುದು. ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು. ಈ ಹಿನ್ನಲೆಯಲ್ಲಿ ಪುತ್ತೂರಿನ ನಾಗರೀಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು, ಅಲ್ಲದೆ ಎಂ.ಎನ್‍.ಸಿ.ಬ್ರಾಂಡ್‍ ಗಳು ಟೈಮ್‍ & ಟೈಡ್ ಸಂಸ್ಥೆಗೆ ಸಾಥ್ ನೀಡಿ ಪ್ರೋತ್ಸಾಹಿಸಬೇಕೆಂದು ಟೈಮ್ & ಟೈಡ್‍ ನ

ಟೈಮ್ & ಟೈಡ್ ವತಿಯಿಂದ ಏ.18 ರಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಕಾರ್ಯಕ್ರಮ ಮುಂದೂಡಿಕೆ | ಮುಂದಿನ ದಿನಾಂಕ ಶೀಘ್ರದಲ್ಲಿ ಪ್ರಕಟಿಸಲಾಗುವುದು Read More »

ಬಲ್ನಾಡಿನಿಂದ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಈ ವೈಭವದ ಕ್ಷಣಗಳನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವೈಭವದಿಂದ ನಡೆಯುತ್ತಿದ್ದು, ಮಂಗಳವಾರ ತಡರಾತ್ರಿ ದೂರದ ಬಲ್ನಾಡಿನಿಂದ ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಕಿರುವಾಳು ಶ್ರೀ ದೇವಸ್ಥಾನಕ್ಕೆ ಆಗಮಿಸಿತು. ಬಲ್ನಾಡಿನ ಶ್ರೀ ದೈವಸ್ಥಾನದಿಂದ ಸೂಟೆಗಳೊಂದಿಗೆ ಭಂಡಾರ ಸಹಿತ ಶ್ರೀ ದಂಡನಾಯಕ-ಉಳ್ಳಾಲ್ತಿ ವಗೈರೆ ದೈವಗಳು ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಎದುರುಗೊಂಡು ಬಲಿ ಉತ್ಸವ ನಡೆಯಿತು. ಅಲ್ಲಿ ದೈವ-ದೇವರುಗಳ ನುಡಿಗಟ್ಟು ಮುಗಿದು ಬಳಿಕ ಶ್ರೀ ದೈವಗಳು ಒಳಾಂಗಣ ಪ್ರವೇಶಿಸಿದವು.

ಬಲ್ನಾಡಿನಿಂದ ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ | ಈ ವೈಭವದ ಕ್ಷಣಗಳನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು Read More »

error: Content is protected !!
Scroll to Top