ಪುತ್ತೂರು

ಅಲ್ಪ ಸಂಖ್ಯಾತರು ರಸ್ತೆಯಲ್ಲಿ ನಮಾಜ್ ಮಾಡುವುದಾದರೆ ನಮಗೂ ರಸ್ತೆಯಲ್ಲಿ ಭಜನೆ ಮಾಡಲು ಬರುತ್ತದೆ | ಸರಕಾರಕ್ಕೆ ಎಚ್ಚರಿಕೆ ನೀಡಿದ ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಅಲ್ಪ ಸಂಖ್ಯಾತ ಸಮಾಜದವರು ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕ ಅಶಾಂತಿ ಸೃಷ್ಠಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮಗೂ ಕಾನೂನು ಇದೆ.ನಾವೂ ರಸ್ತೆಯಲ್ಲಿ ಭಜನೆ ಮಾಡುವ ಮೂಲಕ ಉತ್ತರ ಕೊಡಲು ಸಿದ್ಧರಿದ್ದೇವೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನ ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಅಶಾಂತಿ ಸೃಷ್ಠಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ವಯಂಪ್ರೇರಿತ ಕೇಸು ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿರುವುದನ್ನು ಖಂಡಿಸಿ […]

ಅಲ್ಪ ಸಂಖ್ಯಾತರು ರಸ್ತೆಯಲ್ಲಿ ನಮಾಜ್ ಮಾಡುವುದಾದರೆ ನಮಗೂ ರಸ್ತೆಯಲ್ಲಿ ಭಜನೆ ಮಾಡಲು ಬರುತ್ತದೆ | ಸರಕಾರಕ್ಕೆ ಎಚ್ಚರಿಕೆ ನೀಡಿದ ಮುರಳೀಕೃಷ್ಣ ಹಸಂತಡ್ಕ Read More »

ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ

ಪುತ್ತೂರು: ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ ಕಾರ್ಯ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದಲ್ಲಿ ಶುಕ್ರವಾರ ನಡೆಯಿತು. ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್‍.ಎಲ್‍.ಭೋಜೇಗೌಡ ಪರ ಮತ ಪ್ರಚಾರ ಕಾರ್ಯ ನಡೆಯಿತು. ಪ್ರಚಾರ ಕಾರ್ಯದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ Read More »

ಸಮಾಜ ಸೇವಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಸಮಾಜ ಸೇವಕ ವಿಶ್ವನಾಥ ಗೌಡ ಬಲತ್ತನೆ (45) ಅವರು ಇಂದು ನಿಧನರಾಗಿದ್ದಾರೆ. ಕುಂತೂರು ನಿವಾಸಿಯಾಗಿರುವ ವಿಶ್ವನಾಥ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಮರಣ ಹೊಂದಿರುತ್ತಾರೆ. ಅವರು ಸಮಾಜ ಸೇವಕ, ಸಮಾಜದ ಜನತೆಯ ಒಡನಾಡಿ, ನೇರೋಳ್‍ ಪಲ್ಕೆ ಶ್ರೀ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಿ, ಕುಂತೂರು ಘಟಕ ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಕೃಷಿರಾಗಿದ್ದರು. ಮೃತರು ಪತ್ನಿ, ಎರಡು ಮಕ್ಕಳನ್ನು ಅಗಲಿದ್ದಾರೆ.

ಸಮಾಜ ಸೇವಕ ವಿಶ್ವನಾಥ ಗೌಡ ನಿಧನ Read More »

ಎಸ್‍ ಎಸ್‍ ಎಲ್‍ ಸಿಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಅಭಿನಂದನೆ

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600ಕ್ಕಿಂತ ಅಧಿಕ ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಅಂಗವಾಗಿ ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಸತೀಶ್ ಪೂಜಾರಿ ಪರಕಮೆ ಹಾಗೂ ರೂಪಲತಾ ಸತೀಶ್ ದಂಪತಿಯ ಪುತ್ರ ಮೋಕ್ಷಿತ್ ಪಿ.

ಎಸ್‍ ಎಸ್‍ ಎಲ್‍ ಸಿಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಅಭಿನಂದನೆ Read More »

ಸಂತ ಫಿಲೋಮಿನಾ ಕಾಲೇಜಿಗೆ ಪದವಿ ವಿಭಾಗದಲ್ಲಿ 5 ರ್ಯಾಂಕ್‍ ಗಳು

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿಗೆ 2023-25ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ 5 ರ್ಯಾಂಕ್‍ ಗಳು    ಲಭಿಸಿದೆ. ಬಿ.ಕಾಂ ಪದವಿ ವಿಭಾಗದಲ್ಲಿ ರಿತೇಶ್‌ ರೈ ಎಂ. 96.21% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇವರು ಸರ್ವೆ ಮೇಗಿನಗುತ್ತು ನಿವಾಸಿ ಸೀತಾರಾಮ ರೈ ಹಾಗೂ ಸರಸ್ವತಿ ದಂಪತಿ  ಪುತ್ರ.  ಬಿ.ಎಸ್.ಸಿ. ವಿಭಾಗದಲ್ಲಿ ಸುಧನ್ವ ಶ್ಯಾಮ್ ಶೇಕಡ 97.6% ಅಂಕಗಳೊಂದಿಗೆ ದ್ವಿತೀಯ ರ್ಯಾಂಕ್ ಗಳಿಸಿದ್ದು, ಬಲ್ನಾಡಿನ ಸುಬ್ರಹ್ಮಣ್ಯ ಕುಮಾರ್‌ ಹಾಗೂ ಸುಶೀಲಾ ದೇವಿ ದಂಪತಿ ಪುತ್ರ.  ಬಿ.ಸಿ.ಎ.

ಸಂತ ಫಿಲೋಮಿನಾ ಕಾಲೇಜಿಗೆ ಪದವಿ ವಿಭಾಗದಲ್ಲಿ 5 ರ್ಯಾಂಕ್‍ ಗಳು Read More »

ಜೂ.3 : ಬನ್ನೂರು ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ “ಆರಂಭ-2024”

ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ‘ಆರಂಭ – 2024’ ಜೂ.3 ಸೋಮವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಶಾಲಾ ಆರಂಭದ ಅಂಗವಾಗಿ ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಸರಸ್ವತಿ ಪುಜೆ, 9.30 ರಿಂದ ತರಗತಿ ವಿದ್ಯಾರ್ಥಿಗಳ ಪ್ರವೇಶೋತ್ಸವ ನಡೆಯಲಿದೆ. 10 ಕ್ಕೆ ಸತ್ಯನಾರಾಯಣ ಪೂಜೆ, 11.30 ಕ್ಕೆ ಶೈಕ್ಷಣಿಕ ಚಿಂತನೆ, ಮಧ್ಯಾಹ್ನ 12.30 ರಿಂದ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜೂ.3 : ಬನ್ನೂರು ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ “ಆರಂಭ-2024” Read More »

ನೈಋತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ | ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನು | ಈ ಕುರಿತು ಏನಂದ್ರು ರಘುಪತಿ ಭಟ್ ?

ಪುತ್ತೂರು: ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಒಂದು ಇಲೆಕ್ಟ್ರಾಲ್ ಪೊಲಿಟಿಕಲ್ ಬೇಕು ಎಂಬ ನಿಟ್ಟಿನಲ್ಲಿ ನಾನು ಸ್ಪರ್ಧೆಗೆ ನಿಂತಿದ್ದೇನೆ ಹೊರತು ಪಕ್ಷದಿಂದ ನನಗೆ ಸೀಟು ಸಿಕ್ಕಿಲ್ಲ, ನನಗೆ ಮೋಸ ಆಗಿದೆ ಎಂಬ ನಿಟ್ಟಿನಲ್ಲಿ ಚುನಾವಣೆಗೆ ನಿಂತಿಲ್ಲ ಎಂದು ಉಡುಪಿ ಮಾಜಿ ಶಾಸಕ, ನೈಋತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿ ರಘುಪತಿ ಭಟ್‍ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಉಡುಪಿಯಲ್ಲಿ ಮೂರು ಬಾರಿ ಶಾಸಕನಾಗಿ ಜಿಲ್ಲೆಯಲ್ಲಿ ಜನಪರ, ಸಾಮಾಜಿಕ, ಅಭಿವೃದ್ಧಿ ಕಾರ್ಯ ಎಲ್ಲರಿಗೂ ತಿಳಿದಿದು,

ನೈಋತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ | ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನು | ಈ ಕುರಿತು ಏನಂದ್ರು ರಘುಪತಿ ಭಟ್ ? Read More »

ರಸ್ತೆಯಲ್ಲಿ ನಮಾಜ್‍ ಪ್ರಕರಣ | ಹೇಳಿಕೆ ನೀಡಿದ ಹಿಂದೂ ಪ್ರಮುಖರ ಮೇಲಿನ ಕೇಸ್ ಹಿಂಪಡೆಯುವಂತೆ ಆಗ್ರಹ

ಪುತ್ತೂರು: ಮಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿರುವ ವಿಹಿಂಪ ನ ಪ್ರಮುಖರಾದ ಶರಣ್ ಪಂಪ್‍ ವೆಲ್‍ ಹಾಗೂ ಪ್ರದೀಪ್ ಸರಿಪಲ್ಲ ಅವರ ಮೇಲೆ ಎಫ್‍ ಐಆರ್ ದಾಖಲಿಸಿರುವುದು ಖಂಡನೀಯ ಎಂದು ವಿಹಿಂಪ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದರು. ರಾಜ್ಯ ಸರಕಾರ ಅಲ್ಪಸಂಖ್ಯಾತರ ತುಷ್ಠೀಕರಣದ ಪರಾಕಾಷ್ಟೇಯನ್ನು ತಲುಪಿದ್ದು, ಮುಂದೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ ಹಿಂದೂ ನಾಯಕರ ಮೇಲೆ

ರಸ್ತೆಯಲ್ಲಿ ನಮಾಜ್‍ ಪ್ರಕರಣ | ಹೇಳಿಕೆ ನೀಡಿದ ಹಿಂದೂ ಪ್ರಮುಖರ ಮೇಲಿನ ಕೇಸ್ ಹಿಂಪಡೆಯುವಂತೆ ಆಗ್ರಹ Read More »

ರಘುಪತಿ ಭಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಪುತ್ತೂರು: ವಿಧಾನಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಜಾರಾಂ ಭಟ್, ಪ್ರಮುಖರಾದ ನವೀನ್ ಕುಲಾಲ್, ಶಿವ ಭಟ್ ಉಪಸ್ಥಿತರಿದ್ದರು. ಇಂದು ಪುತ್ತೂರಿನಾದ್ಯಂತ ಶಾಲಾ ಕಾಲೇಜು, ಪದವೀಧರರನ್ನು ಭೇಟಿಯಾಗಿ ಮತಯಾಚನೆ ನಡೆಸಲಿದ್ದಾರೆ.

ರಘುಪತಿ ಭಟ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್‌ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ 2020-23ನೇ ಬ್ಯಾಚ್‌ ನ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಧನ್ವ ಶ್ಯಾಮ್‌ ಉಡುಪಿಯ ಎಂ.ಜಿ.ಎಂ. ಕಾಲೇಜು ಸ್ಥಾಪಸಿದ ಪ್ರತಿಷ್ಠಿತ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಗಳಲ್ಲಿ ಗಣಿತ ವಿಷಯದಲ್ಲಿ ಶೇ.99.66 ಗಳಿಸಿದ್ದಕ್ಕಾಗಿ ಚಿನ್ನದ ಪದಕ ನೀಡಲಾಗಿದೆ. ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವದಂದು ಸುಧನ್ವ ಶ್ಯಾಮ್‌ ರವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಸುಧನ್ವ ಶ್ಯಾಮ್ ರವರ

ಸಂತ ಫಿಲೋಮಿನಾ ಕಾಲೇಜಿನ ಸುಧನ್ವ ಶ್ಯಾಮ್‌ಗೆ ಪ್ರೊ| ಕೆ ಎ ಕೃಷ್ಣಮೂರ್ತಿ ಚಿನ್ನದ ಪದಕ Read More »

error: Content is protected !!
Scroll to Top