ಪುತ್ತೂರು

ದೀಕ್ಷಿತ್ ಮರಿಕೆ ನಿಧನ

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ನಿವಾಸಿ ದಿ. ಗೋಪಾಲ ಗೌಡ ಅವರ ಪುತ್ರ, ಬಿಜೆಪಿ ಸಕ್ರೀಯ ಕಾರ್ಯಕರ್ತ, ಆರ್ಯಾಪು ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ದೀಕ್ಷಿತ್ ಮರಿಕೆ (28) ಬುಧವಾರ ರಾತ್ರಿ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳಿಂದ ಅಸೌಖ್ಯದಿಂದ ಇದ್ದು, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದರು. ಮೃತರು ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಅರುಣ್ […]

ದೀಕ್ಷಿತ್ ಮರಿಕೆ ನಿಧನ Read More »

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-23ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ವಿವೇಕಾನಂದ ಪದವಿ ಕಾಲೇಜಿಗೆ ಮೂರು ರ್‍ಯಾಂಕ್‌ಗಳು ಲಭ್ಯವಾಗಿವೆ. ಬಿಎಸ್ಸಿ ಪರೀಕ್ಷೆಯಲ್ಲಿ ಪಿಎಂಸಿ ವಿಭಾಗದಲ್ಲಿ ಶರಧಿ ಎಸ್.ಕೆ 4200 ರಲ್ಲಿ 4087  ಅಂಕ ಪಡೆದು ಐದನೇಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇವರು ವಿಟ್ಲದ ಕೇಶವಯ್ಯ ಎಸ್ ಹಾಗೂ ಶಶಿಕಲಾ ದಂಪತಿ ಪುತ್ರಿ. ಕಲಾ ವಿಭಾಗದ ಎಚ್‌ ಇಪಿ ವಿಭಾಗದಲ್ಲಿ ಸೃಜನಿ ಎಸ್.ಆರ್.  3748 ಅಂಕ ಪಡೆದು ಐದನೇಯ ರ್‍ಯಾಂಕ ಪಡೆದಿದ್ದಾರೆ. ಅವರು ಕಡಬದ ರಾಮಚಂದ್ರ ಹಾಗೂ ಭವಾನಿ ದಂಪತಿ

ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ್‍ಯಾಂಕ್ Read More »

ಜೂ.13 : ವಿಟ್ಲದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಆಡಳಿತ ಮಂಡಳಿ, ವಿಟ್ಲ ನಾಗರಿಕರ ಪೂರ್ವಭಾವಿ ಸಭೆ

ವಿಟ್ಲ : ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪಾಯರ್ ಮಾಲ್‍ ನಲ್ಲಿ ಜೂ.13 ರಂದು ಉದ್ಘಾಟನೆಗೊಳ್ಳಲಿದ್ದು, ಈ ಕುರಿತು ಆಡಳಿತ ಮಂಡಳಿ ಹಾಗೂ ವಿಟ್ಲ ನಾಗರಿಕರ ಪೂರ್ವಭಾವಿ ಸಭೆ ವಿಟ್ಲದಲ್ಲಿ ಇಂದು ನಡೆಯಿತು. ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾಹಿತಿ ನೀಡಿದರು. ವಿಟ್ಲ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಸಂಪೂರ್ಣ

ಜೂ.13 : ವಿಟ್ಲದಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ | ಆಡಳಿತ ಮಂಡಳಿ, ವಿಟ್ಲ ನಾಗರಿಕರ ಪೂರ್ವಭಾವಿ ಸಭೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್- 24 ಕ್ಕೆ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್‌ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್-24 ಸ್ಪರ್ಧೆಗಳಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಅನುಭವಗಳು ಜೀವನದಲ್ಲಿ ಹೆಚ್ಚಿನ ಪಾಠ ಕಲಿಸುತ್ತವೆ. ನಮ್ಮನ್ನು ಕೆಣಕುವವರು, ಟೀಕಿಸುವವರು ಸಮಾಜದಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಟೀಕೆ ಟಿಪ್ಪಣಿಗಳನ್ನು ನಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದಕ್ಕೆ ಮಾತ್ರವೇ ಬಳಸಿಕೊಳ್ಳಬೇಕು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್- 24 ಕ್ಕೆ ಚಾಲನೆ Read More »

ಬಪ್ಪಳಿಗೆ ಅಂಬಿಕಾ ಕಾಲೇಜಿಗೆ ವಿಶ್ವವಿದ್ಯಾನಿಲಯ ಮಟ್ಟದ ಎರಡು ರ್ಯಾಂಕ್

ಪುತ್ತೂರು: ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರ್ಯಾಂಕ್ ಗೆ ಭಾಜನರಾಗಿದ್ದಾರೆ. ಬಿ.ಎಸ್ಸಿ ವಿಭಾಗದಲ್ಲಿ ಪೆರ್ಲದ ಪಡ್ರೆ ನಿವಾಸಿಗಳಾದ ಬಾಲಚಂದ್ರ ಬಿ.ವಿ ಹಾಗೂ ಪ್ರಿಯಾ ವಿ ದಂಪತಿ ಪುತ್ರಿ ವರೇಣ್ಯಾ ಒಟ್ಟು 4200  ಅಂಕಗಳಲ್ಲಿ 4093 ಅಂಕ ಗಳಿಸಿ 97.45 ಶೇ. ದೊಂದಿಗೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ಪುತ್ತೂರಿನ ವಾಲ್ತಾಜೆ ನಿವಾಸಿ ಸತ್ಯನಾರಾಯಣ ಭಟ್ ಹಾಗೂ ವಿನಯಾ ದಂಪತಿ ಪುತ್ರಿ ನಯನಾ ಒಟ್ಟು 3814 ಅಂಕ ಗಳಿಸಿ 90.81 ಶೇ.

ಬಪ್ಪಳಿಗೆ ಅಂಬಿಕಾ ಕಾಲೇಜಿಗೆ ವಿಶ್ವವಿದ್ಯಾನಿಲಯ ಮಟ್ಟದ ಎರಡು ರ್ಯಾಂಕ್ Read More »

ನಾಳೆ (ಮೇ 31): ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಐಇಇಇ ಮಂಗಳೂರು ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನವದೆಹಲಿ ಐಎಸ್‌ಟಿಇ, ವಿವೇಕಾನಂದ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್, ಇನ್ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ಹಾಗೂ ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗದ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ ಮೇ 31 ನಾಳೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ. ಇದೊಂದು ಐಇಇಇ ಮಂಗಳೂರು ಉಪ ವಿಭಾಗದ ಪ್ರಮುಖ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ನವ-ನವೀನ ಯೋಜನೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಅಲ್ಲದೆ

ನಾಳೆ (ಮೇ 31): ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯಮಟ್ಟದ ಐ2 ಕನೆಕ್ಟ್-2024 ಪ್ರಾಜೆಕ್ಟ್‌ಗಳ ಪ್ರದರ್ಶನ Read More »

ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಲಲಿತಾ ಆರ್. ರೈಯವರಿಗೆ ಎಸ್‍ಸಿಐ ವತಿಯಿಂದ ಗೌರವಾರ್ಪಣೆ

ಪುತ್ತೂರು: ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಲಲಿತಾ ಆರ್ ರೈ ಅವರಿಗೆ ಎಸ್‍ಸಿಐ ಪುತ್ತೂರು ಲಿಜನ್ ವತಿಯಿಂದ ಗೌರವಾರ್ಪಣೆ ನಡೆಯಿತು. ಸಾಹಿತ್ಯ ಪ್ರಿಯೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್(ಎಸ್.ಸಿ.ಐ.)  ಅವರ ತೊಂಬತ್ತಾರರ ಇಳಿ ಹರೆಯದ ಹೊತ್ತಲ್ಲಿ ಲಲಿತಾ ಆರ್. ರೈ ಅವರನ್ನು ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ತಮ್ಮ SCI ಪುತ್ತೂರು ತಂಡದೊಂದಿಗೆ ಶಾಲು, ಹಣ್ಣು ಹಂಪಲು ಹಾಗೂ ಪುಸ್ತಕವನ್ನು ನೀಡಿ ಸ್ವಗೃಹದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಲಲಿತಾ ಆರ್ ರೈ ಯವರ ಕಿರಿಯ ಪುತ್ರಿ

ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಲಲಿತಾ ಆರ್. ರೈಯವರಿಗೆ ಎಸ್‍ಸಿಐ ವತಿಯಿಂದ ಗೌರವಾರ್ಪಣೆ Read More »

ಕಾಂಕ್ರೀಟ್ ಭಾರ ತಾಳಲಾರದೆ ಸೇತುವೆ ಕುಸಿತ !

ನೆಲ್ಯಾಡಿ: ಕಾಂಕ್ರೀಟ್ ಭಾರ ತಾಳಲಾರದೆ ಸೇತುವೆ ಕಾಮಗಾರಿ ವೇಳೆ ಕುಸಿದು ಬಿದ್ದ ಘಟನೆ ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಈ ಭಾಗದ ಕಾಮಗಾರಿಯನ್ನು  ಔತ್ತಡೆ ಕನ್‍ ಸ್ಟ್ರಕ್ಷನ್ ಕಂಪನಿಯವರು ಮಾಡುತ್ತಿದ್ದು  ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ತೋಡಿಗೆ ಅಡ್ಡವಾಗಿ ನಿರ್ಮಾಣಗೊಂಡಿದ್ದ ಹಳೆಯ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಲ್ಲಿ ತೋಡಿಗೆ ಎರಡು ಪಿಲ್ಲರ್ ಹಾಕಿ ಅಂದಾಜು 25

ಕಾಂಕ್ರೀಟ್ ಭಾರ ತಾಳಲಾರದೆ ಸೇತುವೆ ಕುಸಿತ ! Read More »

ರೈತರ ಕುಮ್ಕಿ ಹಕ್ಕಿಗೆ ಸಂಚಕಾರ | ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರಕಾರದ ಹುನ್ನಾರವೇ ? | ಏನಿದು ‘ಲ್ಯಾಂಡ್ ಬೀಟ್ ‘ ಆ್ಯಪ್ ನ ಮರ್ಮ  ?

ಪುತ್ತೂರು: ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಜಮೀನುಗಳು ಸಹಿತ ರೈತರ ಬೆಳೆ ವಿಮೆ ಕಾಲಕಾಲಕ್ಕೆ ರೈತರ ಖಾತೆಗೆ ಜಮೆ ಆಗಲು ಹಾಗೂ ಅನಧಿಕೃತ ಜಮೀನುಗಳ ಸರ್ವೆ ಮಾಡಿ  ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ ಗೆ ಕಳುಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ಮೂರು ಆ್ಯಪ್ ಗಳನ್ನು  ರಾಜ್ಯ ಸರಕಾರ ಹೊರ ತಂದಿದೆ. ಆಧಾರ್ ಸೀಡ್, ಲ್ಯಾಂಡ್ ಬೀಟ್ ಹಾಗೂ ಬಗೈರ್ ಹುಕುಂ ಆ್ಯಪ್ ಈ ಮೂರು ಆ್ಯಪ್ ಗಳು ಈಗಾಗಲೇ ಸಿದ್ಧಗೊಂಡಿದೆ. ಇಲ್ಲಿ ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ

ರೈತರ ಕುಮ್ಕಿ ಹಕ್ಕಿಗೆ ಸಂಚಕಾರ | ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರಕಾರದ ಹುನ್ನಾರವೇ ? | ಏನಿದು ‘ಲ್ಯಾಂಡ್ ಬೀಟ್ ‘ ಆ್ಯಪ್ ನ ಮರ್ಮ  ? Read More »

ವಿದ್ಯಾಧ್ವನಿ – ಶಿಕ್ಷಕರ ಕಲಿಕಾ ಕಾರ್ಯಾಗಾರ

ಪುತ್ತೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ವಾರಂಭ ಯೋಜನೆಯಾದ ‘ವಿದ್ಯಾಧ್ವನಿ’ ಶಿಕ್ಷಕರ ಕಲಿಕಾ ಕಾರ್ಯಾಗಾರವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಯಿತು. ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಾದ ನಾವು ಮಕ್ಕಳಲ್ಲಿರುವ ವೈಯಕ್ತಿಕ ವಿಭಿನ್ನತೆಗೆ ಅನುಗುಣವಾಗಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶೈಕ್ಷಣಿಕ ಯೋಜನೆಯನ್ನು ರೂಪಿಸಬೇಕಾದ ಅಗತ್ಯತೆಯನ್ನು ತಿಳಿಸಿದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಹೆಗ್ಡೆ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ದೈಹಿಕ ಮಾನಸಿಕ,

ವಿದ್ಯಾಧ್ವನಿ – ಶಿಕ್ಷಕರ ಕಲಿಕಾ ಕಾರ್ಯಾಗಾರ Read More »

error: Content is protected !!
Scroll to Top