ಪುತ್ತೂರು

ಪೆಟ್ರೋಲ್ ಬಂಕ್ ಉದ್ಯೋಗಿ ಹರೀಶ್ ನಾಯ್ಕ ನಿಧನ

ಪುತ್ತೂರು: ಪೆಟ್ರೋಲ್ ಬಂಕ್‍ ಉದ್ಯೋಗಿ ಹರೀಶ್ ನಾಯ್ಕ (67) ಹೃದಯಾಘಾತದಿಂದ ಶನಿವಾರ ನಿಧನರಾದರು. ಏಳ್ಳುಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೆ.ವಿ.ಶೆಣೈ ಪೆಟ್ರೋಲ್ ಬಂಕ್ ನಲ್ಲಿ 40 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಹರೀಶ್ ನಾಯ್ಕ ಅವರು ಜು.27ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ,  ಪುತ್ರ, ಪುತ್ರಿ ಹಾಗೂ ಸಹೋದರರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಪೆಟ್ರೋಲ್ ಬಂಕ್ ಉದ್ಯೋಗಿ ಹರೀಶ್ ನಾಯ್ಕ ನಿಧನ Read More »

ಪ್ರತಿಷ್ಠಿತ ವಸ್ತ್ರ ಮಳಿಗೆ ‘ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್’ ನಲ್ಲಿ ಆಷಾಢ ಸೇಲ್ಸ್ | ಗ್ರಾಹಕ ವರ್ಗದಿಂದ ಭರಪೂರ ಪ್ರತಿಕ್ರಿಯೆ | ರಿಯಾಯಿತಿ ದರದಲ್ಲಿ ಸೀರೆ, ರೆಡಿಮೇಡ್ ಬಟ್ಟೆಗಳ ಮಾರಾಟ

ಪುತ್ತೂರು: ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಿಲ್ಕ್ಡ್ & ರೆಡಿಮೇಡ್‍ ನಲ್ಲಿ ಜು.26 ರಿಂದ ಆರಂಭಗೊಂಡ ಈ ಬಾರಿಯ ಆಷಾಢ ಮಾರಾಟಕ್ಕೆ ಗ್ರಾಹಕ ವರ್ಗದಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳಿಗೆಯಲ್ಲಿ ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರೀದಿಸಿದ ಸೀರೆ, ರೆಡಿಮೇಡ್ ಬಟ್ಟೆಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು.  ಆರಂಭದ ದಿನವೇ ಗ್ರಾಹಕರಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನವು

ಪ್ರತಿಷ್ಠಿತ ವಸ್ತ್ರ ಮಳಿಗೆ ‘ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್’ ನಲ್ಲಿ ಆಷಾಢ ಸೇಲ್ಸ್ | ಗ್ರಾಹಕ ವರ್ಗದಿಂದ ಭರಪೂರ ಪ್ರತಿಕ್ರಿಯೆ | ರಿಯಾಯಿತಿ ದರದಲ್ಲಿ ಸೀರೆ, ರೆಡಿಮೇಡ್ ಬಟ್ಟೆಗಳ ಮಾರಾಟ Read More »

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಸಂಚಾಲಕರಾಗಿ ಪುತ್ತೂರು ಉಮೇಶ್ ನಾಯಕ್, ಕಾರ್ಯದರ್ಶಿಯಾಗಿ ಜಗದೀಶ್ ನಿರ್ಪಾಜೆ, ಕೋಶಾಧಿಕಾರಿಯಾಗಿ ಹರೀಶ್ ಕುಮಾರ್ ದೋಳ್ಪಾಡಿ ಆಯ್ಕೆಯಾಗಿದ್ದಾರೆ. ಉಪಧ್ಯಾಕ್ಷರುಗಳಾಗಿ ವಿರೂಪಾಕ್ಷ ಭಟ್ ಮಚ್ಚಿಮಲೆ,

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಗಿಲ್ ದಿವಸ್

ಪುತ್ತೂರು: ಕೊರೆಯುವ ಚಳಿಯಲ್ಲಿ ಪರ್ವತದ ಮೇಲ್ಭಾಗದಿಂದ ಸುರಿಯುವ ಗುಂಡಿನ ದಾಳಿಯ ಮಧ್ಯೆ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟವನ್ನು ಮಾಡಿ ಹುತಾತ್ಮರಾಗಿರುವ ಹಾಗೂ ಅದರಲ್ಲಿ ಪಾಲ್ಗೊಂಡಿರುವ ಸೇನಾಪಡೆಗಳ ಎಲ್ಲಾ ಅಧಿಕಾರಿಗಳೂ ನಿತ್ಯ ಸ್ಮರಣೀಯರು ಎಂದು ಭಾರತೀಯ ಸೇನಾಪಡೆಯ ವಿಶ್ರಾಂತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎಸ್.ಟಿ.ರಮಾಕಾಂತನ್ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಯೋಧ ನಮನ ಸಲ್ಲಿಸಿ ಮಾತಾಡಿದರು. ವಿಶ್ವದಲ್ಲಿಯೇ ಶ್ರೇಷ್ಟ ಸೇನಾ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಗಿಲ್ ದಿವಸ್ Read More »

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ | ಆರೋಪಿ ಬಂಧನ

ಪುತ್ತೂರು: ಗಲಾಟೆಯೊಂದರ ವಿಷಯವಾಗಿ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬನ್ನೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜನ್ ಬಂಧಿತ ಆರೋಪಿ. ಶುಕ್ರವಾರ ರಾತ್ರಿ ವೇಳೆ ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಬಂದ ಸೂಚನೆಯಂತೆ ಪೊಲೀಸರು ಘಟನಾ ಸ್ಥಳವಾದ ಬನ್ನೂರು ಗ್ರಾಮದ ಕುಂಜೂರು ಎಂಬಲ್ಲಿಗೆ ತೆರಳಿದ್ದು, ಈ ಸಂದರ್ಭ ಆರೋಪಿ ತೇಜಸ್ ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು, ತೇಜನ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ | ಆರೋಪಿ ಬಂಧನ Read More »

ಸಂತ ಫಿಲೋಮಿನಾ ಕಾಲೇಜಿನಿಂದ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ, ಪೌಷ್ಠಿಕಾಂಶ ದಿನ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಇದರ ಎನ್.ಸಿ.ಸಿ. ಘಟಕ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ , 5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ,  ಸಂತ ಫಿಲೋಮಿನಾ  ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ ಎನ್.ಸಿ.ಸಿ. ಘಟಕ 91/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 41A/5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, 44/6 ಕರ್ನಾಟಕ ವಾಯುದಳ ಮತ್ತು ಕುಡಿಪಾಡಿ ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಜಂಟಿ ಆಶ್ರಯದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ,

ಸಂತ ಫಿಲೋಮಿನಾ ಕಾಲೇಜಿನಿಂದ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ, ಪೌಷ್ಠಿಕಾಂಶ ದಿನ Read More »

ನಿರಾಶ್ರಿತ ಗೋವುಗಳಿಗೆ ತಾತ್ಕಾಲಿಕ ನೆಲೆ ಕಲ್ಪಿಸಿದ ವಿಹಿಂಪ, ಬಿಜೆಪಿ ನಾಯಕರು

ಪುತ್ತೂರು: ಬನ್ನೂರು ಕರ್ಮಲದಲ್ಲಿ ನಿರಾಶ್ರಿತ ಗೋವುಗಳಿರುವುದನ್ನು ಗಮನಿಸಿದ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ತಾತ್ಕಾಲಿಕ ನೆಲೆ ಕಲ್ಪಿಸಿದ್ದಾರೆ. ಕಳೆದೆರಡು ದಿನಗಳಿಂದಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ್ದು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮತ್ತು ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಅವುಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋ ಶಾಲೆಯ ಬಳಿ ಬಿಡುವ ಕುರಿತು ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರಲ್ಲಿ ಅನುಮತಿ ಪಡೆದು

ನಿರಾಶ್ರಿತ ಗೋವುಗಳಿಗೆ ತಾತ್ಕಾಲಿಕ ನೆಲೆ ಕಲ್ಪಿಸಿದ ವಿಹಿಂಪ, ಬಿಜೆಪಿ ನಾಯಕರು Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ರಾಷ್ಟ್ರೀಯ ಇಂಟರ್ ಕ್ಲಬ್ ಓಪನ್ ಮೆನ್ ಅಥ್ಲೆಟಿಕ್ ವಿಭಾಗದ ಜೀವರಕ್ಷಕ ವಿಶ್ವ ಚಾಂಪಿಯನ್ ಗೆ ಭಾರತ ತಂಡದಿಂದ ಆಯ್ಕೆ | ಎವಿಜಿ ಆಂಗ್ಲ ಮಾಧ್ಯಮ ಸ್ಕೂಲ್ ನಿಂದ ಸನ್ಮಾನ, ಸಹಾಯಧನ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾಕ್ರಿ ಕುಟುಂಬದ ಸದಸ್ಯರಾಗಿರುವ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ಗೌಡ  ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಇಂಟರ್ ಕ್ಲಬ್ ಓಪನ್ ಮೆನ್ ಅಥ್ಲೆಟಿಕ್ ವಿಭಾಗದ ಜೀವರಕ್ಷಕ ವಿಶ್ವ ಚಾಂಪಿಯನ್ ಗೆ ಭಾರತದ ಈಜು ತಂಡದ ಸದಸ್ಯರಾಗಿ ಆಯ್ಕೆಯಾಗಿದ್ದು, ಅವರನ್ನು ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಸ್ಕೂಲ್ ಬನ್ನೂರು ಪುತ್ತೂರು, ಎವಿಜಿ ಟ್ರಸ್ಟ್ ನ ಪದಾಧಿಕಾರಿಗಳು ಜಂಟಿಯಾಗಿ ಸನ್ಮಾನಿಸಿ ಧನ ಸಹಾಯ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ನಮ್ಮ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ರಾಷ್ಟ್ರೀಯ ಇಂಟರ್ ಕ್ಲಬ್ ಓಪನ್ ಮೆನ್ ಅಥ್ಲೆಟಿಕ್ ವಿಭಾಗದ ಜೀವರಕ್ಷಕ ವಿಶ್ವ ಚಾಂಪಿಯನ್ ಗೆ ಭಾರತ ತಂಡದಿಂದ ಆಯ್ಕೆ | ಎವಿಜಿ ಆಂಗ್ಲ ಮಾಧ್ಯಮ ಸ್ಕೂಲ್ ನಿಂದ ಸನ್ಮಾನ, ಸಹಾಯಧನ Read More »

ಆವರಣ ಇಲ್ಲದ ಬಾವಿಗೆ ಬಿದ್ದು ವೃದ್ಧೆ ಮೃತ್ಯು

ಉಪ್ಪಿನಂಗಡಿ: ಆವರಣ ಇಲ್ಲದ ಬಾವಿಗೆ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಡೆದಿದೆ. ನೂಜಿ ನಿವಾಸಿ ಹೊನ್ನಮ್ಮ (65) ಮೃತಪಟ್ಟವರು. ಹೊನ್ನಮ್ಮ ಶುಕ್ರವಾರ ಸಂಜೆ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದಾಗ ಮನೆಯ ಆವರಣ ಗೋಡೆಯಿಲ್ಲದ ಬಾವಿಯ ಬಳಿ ಇವರ ಕೊಡೆ ಪತ್ತೆಯಾಗಿತ್ತು. ಬಾವಿಯಲ್ಲಿ ನೋಡಿದಾಗ ಮೃತದೇಹ ಬಾವಿಯಲ್ಲಿ ತೇಲುತ್ತಿತ್ತು. ಯಾರೂ ಇಲ್ಲದ ಸಂದರ್ಭ ಇವರು ಬಾವಿಗೆ ಇಣುಕಿ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ರಾತ್ರಿ ಇವರ ಮೃತದೇಹವನ್ನು ಅಡೆಕ್ಕಲ್ ಸಂತು ಹಾಗೂ

ಆವರಣ ಇಲ್ಲದ ಬಾವಿಗೆ ಬಿದ್ದು ವೃದ್ಧೆ ಮೃತ್ಯು Read More »

ವಿವೇಕಾನಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ನೆನಪು ಕಾರ್ಯಕ್ರಮ | ಕಾರ್ಗಿಲ್ ಬದುಕನ್ನು ನೆನೆದು ಭಾವುಕರಾದ ಲೆ.ಕರ್ನಲ್ ಅಶೋಕ್ ಕಿಣಿ

ಪುತ್ತೂರು: ಕಾರ್ಗಿಲ್ ಯುದ್ದ ಭಾರತ ಎಂದೆಂದಿಗೂ ಮರೆಯಲಾಗದ  ಯುದ್ದ.  ಸೈನಿಕರು  ದೇಶಭಕ್ತಿ ಮತ್ತು ದೇಶ ಸೇವೆ ಮಾಡಬೇಕು ಎಂಬ ಮನಸ್ಸು ಬಂದಾಗ ಅವರು  ಯಾವುದೇ ಕಾರ್ಯಕ್ಕೂ ಸಿದ್ಧರಿರುತ್ತಾರೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅದೇ ವೀರ ಸೈನಿಕರು ತಮ್ಮ ಪ್ರಾಣವನ್ನು ರಾಷ್ಟ್ರಕ್ಕಾಗಿ ಮುಡಿಪಿಡಲು ತಾವಾಗಿಯೇ ಮುಂದೆ ಬಂದಿದ್ದಾರೆ. ಕಾರ್ಗಿಲ್ ಯುದ್ದದಲ್ಲಿ 527 ಸೈನಿಕರು ತಮ್ಮ ನಾಳೆಯನ್ನು ನಮಗಾಗಿ ಸಮರ್ಪಿಸಿದ್ದಾರೆ. ನಾವೆಲ್ಲರೂ ದೇಶಕ್ಕಾಗಿ ಚಿಂತನೆ ಮಾಡುವುದರೊಂದಿಗೆ  ದೇಶ ಸೇವೆಗೆ ಅವಕಾಶ ಸಿಕ್ಕರೆ, ಯಾವುದೇ ಕಾರಣಕ್ಕೂ ಅದನ್ನು ಬಿಡಬಾರದು ಎಂದು ಲೆಫ್ಟಿನೆಟ್

ವಿವೇಕಾನಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ನೆನಪು ಕಾರ್ಯಕ್ರಮ | ಕಾರ್ಗಿಲ್ ಬದುಕನ್ನು ನೆನೆದು ಭಾವುಕರಾದ ಲೆ.ಕರ್ನಲ್ ಅಶೋಕ್ ಕಿಣಿ Read More »

error: Content is protected !!
Scroll to Top