ಪುತ್ತೂರು

ಜಿಲ್ಲಾಮಟ್ಟದ ಸ್ಪರ್ಧೆ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

ಪುತ್ತೂರು: ಮಂಗಳೂರು ಶಾರದಾ ವಿದ್ಯಾಲಯದ ವತಿಯಿಂದ ನಡೆದ ’ಶಾರದಾ ಮಹೋತ್ಸವ’ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ ಲಭಿಸಿದೆ. ಶಾಲಾ ವಿದ್ಯಾರ್ಥಿ ಅದ್ವಿತ್.ಜಿ ಬಾಲವರ್ಗದ ಚಿತ್ರಕಲಾ ಸ್ಪರ್ಧೆಯಲ್ಲಿ – ದ್ವಿತೀಯ ಸ್ಥಾನ ಮತ್ತು ಶ್ರೀರಕ್ಷಾ ಕಿಶೋರವರ್ಗದ ಗೀತಕಂಠಪಾಠ ಸ್ಪರ್ಧೆಯಲ್ಲಿ –  ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಜಿಲ್ಲಾಮಟ್ಟದ ಸ್ಪರ್ಧೆ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ Read More »

ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್ ನಿಧನ

ಪುತ್ತೂರು : ಪುರುಷರ ಕಟ್ಟೆ ಮನೆ ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್  ನಿನ್ನೆ ಮುಂಜಾನೆ ನಿಧನರಾಗಿದ್ದಾರೆ.  ಕೃಷ್ಣಪ್ಪ ನಾಯ್ಕ್   ಅವರು ಸುಮಾರು 34 ವರ್ಷಗಳ ಕಾಲ  ರೈಲ್ವೇ ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಇಬ್ಬರು ಗಂಡು ಮಕ್ಕಳನ್ನು  ಅಗಲಿದ್ದಾರೆ.

ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್ ನಿಧನ Read More »

ಪೊಲೀಸರಿಂದ ಹಲ್ಲೆ : ಆಸ್ಪತ್ರೆಗೆ ದಾಖಲಾದ ಯುವಕ

ಈಶ್ವಮಂಗಲ  : ಪಂಚೋಡಿಯಲ್ಲಿ ಜು.28ರಂದು ರಾತ್ರಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈಶ್ವರಮಂಗಲ ಪಂಚೋಡಿ ನಿವಾಸಿ, ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು. ಜು.28 ರಂದು ರಾತ್ರಿ ಭ್ರಮೀಷ್ ಮನೆಯಲ್ಲಿ ಮಲಗಿದ್ದು, ಈ ವೇಳೆ ಬಾಗಿಲು ಬಡಿದ ಶಬ್ದ ಆಯಿತು. ಬಾಗಿಲು ತೆರೆದಾಗ ಲೈಟ್ ಹಾಕಿ ಮನೆಯಲ್ಲಿ ಯಾರು ಇಲ್ಲವಾ ಎಂದು ಕೇಳಿದರು. ಯಾರು ಇಲ್ಲ ಎಂದು ಹೇಳಿದಾಗ ನನ್ನ

ಪೊಲೀಸರಿಂದ ಹಲ್ಲೆ : ಆಸ್ಪತ್ರೆಗೆ ದಾಖಲಾದ ಯುವಕ Read More »

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರುನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ 14ನೇ ವರುಷದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ,ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ,  ಪುತ್ತೂರು ಮೊಸರು

14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸವಣೂರು : ಸವಣೂರಿನ ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್‌ನ ಬೆಳ್ಳಿಹಬ್ಬ ಸಂಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಕ್ಕಳು ಮತ್ತು ಸಾರ್ವಜನಿಕರು ನಮ್ಮ ಸೇನೆಯ ಬಗ್ಗೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ತಿಳಿದುಕೊಂಡು ಅದಕ್ಕೆ ಬೇಕಾದ ಮಾದರಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ನಿವೃತ್ತ ಸೇನಾಧಿಕಾರಿ

ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ Read More »

ಇಂದಿನಿಂದ (ಜು.29) ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ಜಿ.ಎಲ್.ಆಚಾರ್ಯ’ ಜ್ಯುವೆಲ್ಲರ್ಸ್ ನಲ್ಲಿ ಆಷಾಢ ಸೇಲ್ | ಚಿನ್ನ, ಬೆಳ್ಳಿಯ ಆಭರಣ ಖರೀದಿಗೆ ಆಕರ್ಷಕ ಕೊಡುಗೆ

ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ನಲ್ಲಿ ಜು 29 ರಿಂದ ಆಟಿ ಸೇಲ್ ಪ್ರಯುಕ್ತ ತಮ್ಮ ನೆಚ್ಚಿನ ಗ್ರಾಹಕರಿಗೆ ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ. 200ರ ವರೆಗೆ ಕಡಿತ ಹಾಗೂ ಪ್ರತಿ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ರೂ. 5000 ವರೆಗೆ ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿಗೆ 2000ರೂ ರಿಯಾಯಿತಿ

ಇಂದಿನಿಂದ (ಜು.29) ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ಜಿ.ಎಲ್.ಆಚಾರ್ಯ’ ಜ್ಯುವೆಲ್ಲರ್ಸ್ ನಲ್ಲಿ ಆಷಾಢ ಸೇಲ್ | ಚಿನ್ನ, ಬೆಳ್ಳಿಯ ಆಭರಣ ಖರೀದಿಗೆ ಆಕರ್ಷಕ ಕೊಡುಗೆ Read More »

ಕೆರೆಗೆ ಸ್ನಾನಕ್ಕೆ ಇಳಿದ ವ್ಯಕ್ತಿ ನಾಪತ್ತೆ !

ಪುತ್ತೂರು : ವ್ಯಕ್ತಿಯೊಬ್ಬರು ಕೆರೆಗೆ ಸ್ನಾನಕ್ಕೆಂದು ಇಳಿದು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ಬುಳೇರಿಕಟ್ಟೆ ಬೀಡು ಸಮೀಪ ನಡೆದಿದೆ. ಅಗರ್ತಬೈಲು ಜಗನ್ ಮೋಹನ ರೈ (64) ಸೋಮವಾರ ಸ್ನಾನಕ್ಕೆಂದು ಕೆರೆಗೆ ಇಳಿದು ನಾಪತ್ತೆಯಾಗಿದ್ದಾರೆ. ಕೆರೆಯ ಸಮೀಪ ಬಟ್ಟೆ ಬರ ಪತ್ತೆಯಾಗಿದ್ದು, ಅಗ್ನಿಶಾಮಕ ದಳದವರು ಹಾಗೂ ಈಜುಪಟುಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೆರೆ ನಿರ್ಮಾಣ ಮಾಡಲಾಗಿದ್ದು, ಕೆಸರಿನಿಂದ ಕೂಡಿದೆ. ಇದರಲ್ಲಿ ಮೇಲೆ ಬರಲಾಗದೆ ಸಿಲುಕಿರುವು ಸಾಧ್ಯತೆ ಎನ್ನಲಾಗಿದೆ.

ಕೆರೆಗೆ ಸ್ನಾನಕ್ಕೆ ಇಳಿದ ವ್ಯಕ್ತಿ ನಾಪತ್ತೆ ! Read More »

ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಗೌಡರ ಆಟಿ ಗೌಜಿ | ನಿವೃತ್ತ ಗೌಡ ಸರಕಾರಿ ನೌಕರರಿಗೆ ಗೌರವಾರ್ಪಣೆ, ಎಸ್‍ ಎಸ್‍ ಎಲ್‍ ಸಿ, ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಆಟೋಟ ಸ್ಪರ್ಧೆ

ಹಿರೇಬಂಡಾಡಿ: ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಹಿರೇಬಂಡಾಡಿ ಒಕ್ಕಲಿಗ ಗೌಡ ಸೇವಾ ಸಮಿತಿ, ಹಿರೇಬಂಡಾಡಿ ಒಕ್ಕಲಿಗ ಮಹಿಳಾ ಘಟಕ, ಹಿರೇಬಂಡಾಡಿ ಒಕ್ಕಲಿಗ ಯುವ ಘಟಕ, ಹಿರೇಬಂಡಾಡಿ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಗೌಡರ ಆಟಿ ಗೌಜಿ ಕಾರ್ಯಕ್ರಮ ಇಂದು ಹಿರೇಬಂಡಾಡಿ ಮುರದಮೇಲು ಶಿವನಗರ ಶ್ರೀ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಿತು. ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಅಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ

ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಗೌಡರ ಆಟಿ ಗೌಜಿ | ನಿವೃತ್ತ ಗೌಡ ಸರಕಾರಿ ನೌಕರರಿಗೆ ಗೌರವಾರ್ಪಣೆ, ಎಸ್‍ ಎಸ್‍ ಎಲ್‍ ಸಿ, ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಆಟೋಟ ಸ್ಪರ್ಧೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಪ್ರಯಾಣಿಕರು ಪಾರು

ಪುತ್ತೂರು: ಕಾರೊಂದು ಪಲ್ಟಿಯಾದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಪೇಟೆಯಲ್ಲಿ ಇಂದು ನಡೆದಿದೆ. ಕಾರು ಪಲ್ಟಿಯಾಗಿ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಬ್ಬಿಣದ ತಡೆ ಬೇಲಿಗೆ ಕ್ರೇಟಾ ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದು ಓರ್ವ ಮಹಿಳೆಯ ಮುಖಕ್ಕೆ ಅಲ್ಪ ಗಾಯವಾಗಿರುವುದು ಬಿಟ್ಟರೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಸ್ತೆ ಬದಿಯ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಪ್ರಯಾಣಿಕರು ಪಾರು Read More »

ದಾಮೋದರ ಪಾಟಾಳಿ ಯವರಿಗೆ ‘ ಕರ್ನಾಟಕ ಸೇವಾ ರತ್ನ ಪ್ರಶಸ್ತಿ-2024’

ಪುತ್ತೂರು: ಬೆಂಗಳೂರಿನ ಸಮಾಜಸೇವಾ ಸಂಸ್ಥೆ  ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ 5ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ರಾಜ್ಯದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ ಸಾಧಕರಿಗೆ ಸಮಾಜ ಸೇವಾ  ಕ್ಷೇತ್ರದ ಸೇವೆಯನ್ನು ಪರಿಗಣಿಸಿ ನೀಡುವ ಕರ್ನಾಟಕ ಸೇವಾ ರತ್ನ -2024 ಪ್ರಶಸ್ತಿಯನ್ನು  ದಾಮೋದರ ಪಾಟಾಳಿಯವರಿಗೆ ನೀಡಿದೆ. ಇಂದು  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ದಾಮೋದರ ಪಾಟಾಳಿಯವರು ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ಪೂರ್ವ ರಾಷ್ಟ್ರೀಯ ಸಂಯೋಜಕರಾಗಿದ್ದು, ಜೇಸಿ ವಲಯ

ದಾಮೋದರ ಪಾಟಾಳಿ ಯವರಿಗೆ ‘ ಕರ್ನಾಟಕ ಸೇವಾ ರತ್ನ ಪ್ರಶಸ್ತಿ-2024’ Read More »

error: Content is protected !!
Scroll to Top