ಪುತ್ತೂರು

ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ

ಪುತ್ತೂರು: ಕಾಡಾನೆಯೊಂದು ಮಳಿ ಪ್ರದೇಶದಲ್ಲಿ ಕಾಣಿಡಿಕೊಂಡಿದ್ದು, ಆನೆಗುಂಡಿಯಿಂದ ಬಂದು ಪೆರ್ನಾಜೆ ಮೂಲಕ ಸರ್ಜಿಮೂಲೆ ಕಾಡಿಗೆ ಲಗ್ಗೆ ಇಟ್ಟಿದೆ. ರಾತ್ರಿ ಹೊತ್ತು ಈಚಲು ಮರವೊಂದನ್ನು ಧ್ವಂಸಗೊಳಿಸಿದೆ. ಪರಿಣಾಮ ಸುತ್ತಮುತ್ತಲ ಜನ ಭಯಭೀತರಾಗಿದ್ದಾರೆ. ಈಚಲು ಮರವನ್ನು ಧ್ವಂಸಗೊಳಿಸುವ ಸಂದರ್ಭ ಪಕ್ಕದಲ್ಲಿದ್ದ ವಿದ್ಯುತ್‍ ತಂತಿಗೆ ತಾಗಿ ಬೆಂಕಿ ಕಾಣಿಸಿಕೊಂಡಾಗ ಭಯಭೀತಗೊಂಡು ಕಾಲ್ಕಿತ್ತಿದೆ. ಮಳಿ ಎಂಬ ಪರಿಸರದಲ್ಲಿ ಪೂವಪ್ಪ ಗೌಡ ಹಾಗೂ ಶ್ವೇತ ಕುಮಾರ್ ಎಂಬವರಿಗೆ ಸೇರಿದ ಅಡಕೆ ತೋಟವಿದ್ದು, ರಾತ್ರಿ ವೇಳೆ ನೀರು ಕುಡಿಯಲು ಕಾಡಾನೆ ೀ ಪ್ರದೇಶಕ್ಕೆ ಬರುತ್ತಿರುವುದಾಗಿ ಸ್ಥಳೀಯ […]

ಮಳಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ : ಈಚಲು ಮರ ಧ್ವಂಸ Read More »

ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ | ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ

ಪುತ್ತೂರು: ಉಪಚುನಾವಣೆ ಹಿನ್ನಲೆಯಲ್ಲಿ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಅ.10 ರಂದು ನಡೆಯಲಿರುವ ಕಾರಂತರ 123 ನೇ ಜನ್ಮ ದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂಡೂಡಲಾಗಿದೆ. ಈಗಾಗಲೇ ವಿಧಾನ ಪರಿಷತ್ ಉಪಚುನಾವಣೆ ಘೋಷಣೆಯಾಗಿದ್ದು, ಈ ಕುರಿತು ನೀತಿ ಸಂಹಿತೆ ಸೆ.19 ರಿಂದ ಅ.28 ರ ತನಕ ಜಾರಿಯಲ್ಲಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಚುನಾವನೆ ನೀತಿ ಸಂಹಿತೆ ಮುಗಿದ ಬಳಿಕ ಸಭೆ ನಡೆಸಿ ನಿಗದಿಪಡಿಸಲಾಗುವುದು. ಕಾರಂತರ ಜನ್ಮದಿನೋತ್ಸವ ನಡೆಸುವ ಕುರಿತು ಸೆ.18 ರಂದು ಪೂರ್ವಭಾವಿ ಸಭೆ ನಡೆಸಿ

ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ | ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ Read More »

ಅಶೋಕ್ ರೈ ಬ್ರಿಗೇಡ್‌ನಿಂದ ವಿವಾಹ ಸಮಾರಂಭಕ್ಕೆ ಆಹಾರ ಸಾಮಗ್ರಿಗಳ ಕೊಡುಗೆ

ಪುತ್ತೂರು: ಅಶೋಕ್ ರೈ ಬ್ರಿಗೇಡ್‍ ನಿಂದ ಅಶೋಕ್ ರೈ ಮಹಿಳಾ ಬ್ರಿಗೇಡ್ ಸದಸ್ಯೆ ರಂಜಿತಾರವರ ಸಹೋದರಿ ರಕ್ಷಿತಾ ಅವರ ವಿವಾಹಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ  ಅಶೋಕ್ ರೈ ಬ್ರಿಗೇಡ್ ಪ್ರಮುಖರಾದ ಶಶಿಧರ್ ನಾಯ್ಕ್  ಕೃಷ್ಣನಗರ, ಪ್ರಕಾಶ್ ರೈ ಕೊಯಿಲ, ದೇವರಾಜ್ ಸಿಂಹವನ, ಗುರುಪ್ರಸಾದ್  ನಾಯ್ಕ್ ಪಡುಮಲೆ, ಅನಿಲ್ ಕಲ್ಲರ್ಪೆ, ಅಕ್ಷಯ್ ಗೌಡ ಕಾಂಚನ , ಕೀರ್ತನ್ ಆಚಾರ್ಯ ಹಂಟ್ಯಾರ್ , ರವಿ  ಪೋಳ್ಯ, ಆನಂದ ಸಿಂಹವನ ಉಪಸ್ಥಿತರಿದ್ದರು. ಈ ಕಾರ್ಯಕ್ಕೆ  ಅಮರ್ ರೈ ತಿಂಗಳಾಡಿ,

ಅಶೋಕ್ ರೈ ಬ್ರಿಗೇಡ್‌ನಿಂದ ವಿವಾಹ ಸಮಾರಂಭಕ್ಕೆ ಆಹಾರ ಸಾಮಗ್ರಿಗಳ ಕೊಡುಗೆ Read More »

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ

ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 186ರ ಸಭೆ ಕುಂಬ್ರ ಬಾಲಕೃಷ್ಣ ರೈ ಮನೆಯಲ್ಲಿ ನಡೆಯಿತು. 186 ಬೂತ್ ಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಇದ್ಯಪ್ಪೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೂತ್ ನ ಮತಗಟ್ಟೆ ಏಜೆಂಟಾಗಿ ಸೀತಾರಾಮ ಗೌಡ ಇದ್ಯಪ್ಪೆ ಬಿಎಲ್ಎ—2 ಆಗಿ ಮಹೇಶ್ ಗೌಡ ಇದ್ಯಪ್ಪೆ, ಪ್ರೀತಾ

ಕೆದಂಬಾಡಿ ಶಕ್ತಿ ಕೇಂದ್ರದ ಬೂತ್ 186 ರ ನೂತನ ಅಧ್ಯಕ್ಷರಾಗಿ ನೇಮಿರಾಜ್‍ ರೈ, ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಆಯ್ಕೆ Read More »

ಬಿಗ್‍ ಬಾಸ್ ಸೀಸನ್-11 ಕ್ಕೆ ಪುತ್ತೂರಿನ ಯೂಟ್ಯೂಬರ್ ಧನರಾಜ್ ಆಚಾರ್ ಪ್ರವೇಶ !

ಪುತ್ತೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಪುತ್ತೂರಿನ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಇವರು 1ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಸಿಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಧನರಾಜ್ ಅವರು ತಮ್ಮ ಕಾಮಿಡಿ ವಿಡಿಯೋಗಳಿಂದ ಜನರ ಮನಗೆದ್ದಿದ್ದಾರೆ. ಕಾಮಿಡಿ ಜತೆಗೆ ಸಂದೇಶ ನೀಡುವುದು ಅವರ ರೀಲ್ಸ್ ನ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ನಡೆಸಿಕೊಡಲಿದ್ದಾರೆ.

ಬಿಗ್‍ ಬಾಸ್ ಸೀಸನ್-11 ಕ್ಕೆ ಪುತ್ತೂರಿನ ಯೂಟ್ಯೂಬರ್ ಧನರಾಜ್ ಆಚಾರ್ ಪ್ರವೇಶ ! Read More »

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ

ಪುತ್ತೂರು: 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮಹಮ್ಮದ್ ಇಕ್ಬಾಲ್‍ (53) ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ತೆಲಂಗಾಣ ರಾಜ್ಯದ ಹೈದರಾಬಾದ್‍ ನಲ್ಲಿ ಶನಿವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗೋದಾವರಿ ಜಿಲ್ಲಾ ನಿವಾಸಿ ಮಹಮ್ಮದ್ ಇಕ್ಬಾಲ್‍ ನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 15/2008 ಕಲಂ 416, 420, 511 ಜೊತೆಗೆ 34 Ipc  ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆರೋಪಿ ಬಂಧನಕ್ಕಾಗಿ ಪುತ್ತೂರು ಗ್ರಾಮಾಂತರ ಪೊಲೀಸ್

ತಲೆಮರೆಸಿಕೊಂಡಿದ್ದ ಆರೋಪಿ ತೆಲಂಗಾಣದಲ್ಲಿ ಬಂಧನ Read More »

ಖೋ ಖೋ ಪಂದ್ಯಾಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಪುತ್ತೂರು: ಜಿಲ್ಲಾ ಉಪನಿರ್ದೇಶಕರ ಕಛೇರಿ, ಮಂಗಳೂರು ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನಯನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡವನ್ನು ತರುಣ್, ದೀಪಕ್, ಪ್ರಜ್ವಲ್, ಮೇಘರಾಜ್, ಭವಿತ್, ವಿನೀತ್, ಲಿಖಿತ್, ಕೀರ್ತನ್, ದೇಶ್ಚಿತ್, ಭಾಸ್ವತ್‌ ಪ್ರತಿನಿಧಿಸಿದ್ದರು. ತಂಡವನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಅಭಿನಂದಿಸಿದೆ.

ಖೋ ಖೋ ಪಂದ್ಯಾಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ Read More »

ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ನಿಧನ

ಪುತ್ತೂರು: ನಿವೃತ್ತ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ (80) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.  ಕಳೆದ ಎರಡು ವಾರಗಳಿಂದ ತೀವೃ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಅವರಿಗೆ 1993 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2015 ರಲ್ಲಿ ಎನ್‍.ಎಸ್‍.ಕಿಲ್ಲೆ ಪ್ರಶಸ್ತಿ ಲಭಿಸಿದೆ. 2018 ರಲ್ಲಿ ಪುತ್ತೂರಿನಲ್ಲಿ ನಡೆದ ಕರ್ನಾಟಕ ಏಕೀಕರಣ

ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ನುಳಿಯಾಲು ರಘುನಾಥ ರೈ ನಿಧನ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವಿನ್ ಮತ್ತು ವಿಜೇತ್ ಭಾರತೀಯ ಸೇನೆಗೆ ಆಯ್ಕೆ | ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದ ಗ್ರಾಮೀಣ ಪ್ರತಿಭೆಗಳು

ಪುತ್ತೂರು: ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಬೇಕೆನ್ನುವ ಆಶಯದಲ್ಲಿರುವ ಗ್ರಾಮೀಣ ಪ್ರದೇಶದ ಯುವ ಜನತೆಗೆ ಆಶಾಕಿರಣವಾಗಿರುವ ಪುತ್ತೂರಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿ ಸುಳ್ಯ ಹಾಗೂ ಕಾರ್ಕಳದಲ್ಲಿ ಶಾಖೆಯನ್ನು ಹೊಂದಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಅವಿನ್ ಎಂ. ಮತ್ತು ವಿಜೇತ್ ಎಂ. 2024ನೇ ಸಾಲಿನ ಅಗ್ನಿಪಥ್ ನೇಮಕಾತಿಯ ಲಿಖಿತ ಪರೀಕ್ಷೆ, ದೈಹಿಕ ಸದೃಢತಾ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಸೇನೆಗೆ ಆಯ್ಕೆಯಾಗಿರುತ್ತಾರೆ. ಸತತ ವೈಪಲ್ಯವನ್ನು ಮೆಟ್ಟಿ ನಿಂತ ಸಾಧಕರು : ಅಗ್ನಿಪಥ್ ನೇಮಕಾತಿಯು ಪ್ರಾರಂಭವಾದಾಗಿನಿಂದ

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವಿನ್ ಮತ್ತು ವಿಜೇತ್ ಭಾರತೀಯ ಸೇನೆಗೆ ಆಯ್ಕೆ | ಅಕಾಡೆಮಿಯ ಹಿರಿಮೆಯನ್ನು ಹೆಚ್ಚಿಸಿದ ಗ್ರಾಮೀಣ ಪ್ರತಿಭೆಗಳು Read More »

ಬಿಜೆಪಿ ಪುತ್ತೂರು ನಗರಮಂಡಲ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಆಯ್ಕೆ

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ , ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಮಂಡಲ ಉಪಾಧ್ಯಕ್ಷ

ಬಿಜೆಪಿ ಪುತ್ತೂರು ನಗರಮಂಡಲ ಮಹಿಳಾ ಮೋರ್ಚಾಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸ್ವರ್ಣಲತಾ ಹೆಗ್ಡೆ ಆಯ್ಕೆ Read More »

error: Content is protected !!
Scroll to Top