ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಅದ್ದು ಪಡೀಲ್ ಎಂಬವರದ್ದೆನ್ನಲಾದ ವೀಡಿಯೋ ವೈರಲ್ | ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಅದ್ದು ಪಡೀಲ್
ಪುತ್ತೂರು : ರಾಜಕೀಯ ಪಕ್ಷವೊಂದರಲ್ಲಿ ಸಕ್ರಿಯರಾಗಿದ್ದ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಮಸೀದಿಯೊಳಗಡೆ ವೀಡಿಯೋ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ಕಾಲ್‌ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮತ್ತು ನಗ್ನ ವೀಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್ ನಲ್ಲಿ ಮತ್ತು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಎನ್ನಲಾಗುತ್ತಿದೆ. […]










