ಪುತ್ತೂರು

ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ | ವಿವಿಧ ರಾಷ್ಟ್ರನಾಯಕರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಭವ್ಯ ಭಾರತಕ್ಕಾಗಿ ಬದುಕು ಸಮರ್ಪಿಸಿದ ರಾಷ್ಟ್ರ ಕಂಡ ಹಿರಿಯ ಮುತ್ಸದಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧಿ ಹಾಗೂ ಭಾರತವನ್ನು ಪರಮ ವೈಭವದೆಡಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ರಾಷ್ಟ್ರ ಕಾರ್ಯವನ್ನು ಮಾಡುತ್ತಿರುವ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಚಾರಣೆಗಳ ಪ್ರಯುಕ್ತ ಸೇವಾ ಪಾಕ್ಷಿಕದ ಅಂಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಾಗೂ ದೇವಸ್ಥಾನದ ದೇವರ ಕೆರೆ ಕಟ್ಟೆಯ […]

ಪುತ್ತೂರು ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ | ವಿವಿಧ ರಾಷ್ಟ್ರನಾಯಕರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮ Read More »

ನರಿಮೊಗರು ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ 15 ವರ್ಷದಿಂದ ಬಗೆಹರಿಯದ ಸಮಸ್ಯೆ | ಮೇಘ ಇಂಡಸ್ಟ್ರೀಸ್ ಮಾಲಕರಿಂದ ಶಾಶ್ವತ ಪರಿಹಾರದ ಭರವಸೆ

ಪುತ್ತೂರು: ನರಿಮೊಗರು ಹಿತರಕ್ಷಣಾ ವೇದಿಕೆ ವತಿಯಿಂದ ಆ.20 ರಂದು ನಡೆದ ಗ್ರಾಮ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಾಯದಂತೆ ಸೆ.29 ರಂದು ಸಭೆ ನಡೆಸಿ ಕಲುಷಿತಗೊಂಡ ಕಾಲುವೆಯನ್ನು ಸ್ವಚ್ಛಗೊಳಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಚರ್ಚಿಸಲಾಯಿತು. ಬಿಂದು ಸಂಸ್ಥೆಯ ಮಾಲಕರು, ತಜ್ಞರು, ಗ್ರಾಮ ಪಂಚಾಯತ್, ಸಂತ್ರಸ್ತರು ಮತ್ತು ಊರ ಪ್ರಮುಖರು ಸೇರಿ 15 ವರ್ಷದಿಂದ ನರಕ ಸದೃಶ ಜೀವನ ನಡೆಸುತ್ತಿದ್ದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆದು ಚರ್ಚಿಸಲಾಯಿತು. ಮುಂದಿನ ಮೂರು

ನರಿಮೊಗರು ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ 15 ವರ್ಷದಿಂದ ಬಗೆಹರಿಯದ ಸಮಸ್ಯೆ | ಮೇಘ ಇಂಡಸ್ಟ್ರೀಸ್ ಮಾಲಕರಿಂದ ಶಾಶ್ವತ ಪರಿಹಾರದ ಭರವಸೆ Read More »

ಬೀಡಿ ಕಾರ್ಮಿಕರಿಗೆ ಬೋನಸ್ ಪ್ರತಿ ಒಂದು ಸಾವಿರ ಬೀಡಿಗೆ 41.46 ರೂ. : ಪಿ.ಕೆ. ಸತೀಶನ್

ಪುತ್ತೂರು: ಬೀಡಿ ಕಾರ್ಮಿಕರಿಗೆ ಎಲ್ಲಾ ಕಡೆ ಈಗ ಬೋನಸ್ ವಿತರಣೆ ಆಗುತ್ತಿದ್ದು 2024 ರಲ್ಲಿ ಪ್ರತಿ ಒಂದು ಸಾವಿರ ಬೀಡಿಗೆ 41,46 ರೂ. ಅಂದರೆ ಒಂದು ಲಕ್ಷ ಬೀಡಿಗೆ 4,145  ಬೋನಸ್ ಬಿಡುಗಡೆಯಾಗಿದೆ. ಅದನ್ನು ಬೀಡಿ ಕಾರ್ಮಿಕರು ಪಡಕೊಳ್ಳಬೇಕೆಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಪಿ.ಕೆ. ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್‌, ಖಜಾಂಜಿ ಈಶ್ವರಿ ಹೇಳಿದ್ದಾರೆ. ಪ್ರತಿ ಒಂದು ಸಾವಿರ ಬೀಡಿಗೆ ರಜಾ ಸಂಬಳ 12.62 ಹಬ್ಬದ ರಜಾ ಸಂಬಳ, 7.82 ಮತ್ತು ಬೋನಸ್ 21.02

ಬೀಡಿ ಕಾರ್ಮಿಕರಿಗೆ ಬೋನಸ್ ಪ್ರತಿ ಒಂದು ಸಾವಿರ ಬೀಡಿಗೆ 41.46 ರೂ. : ಪಿ.ಕೆ. ಸತೀಶನ್ Read More »

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ (ಸ್ವಾಯತ್ತ) ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ ಘಟಕ ಮತ್ತು 5 ಕರ್ನಾಟಕ ನೌಕಾದಳ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಚ್ಛಹಿ ಸೇವಾ ಆಂದೋಲನದ ಅಂಗವಾಗಿ ಫಾದರ್ ಪತ್ರವೋ ವೃತ್ತದ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಎನ್.ಸಿ.ಸಿ. ಘಟಕದ ಸದಸ್ಯರು ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧಗೊಳಿಸಿ, ಗಿಡ ಗಂಟಿಗಳು, ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಕಾಲೇಜಿನ ಭೂದಳ ಎನ್.ಸಿ.ಸಿ. ಅಧಿಕಾರಿ ಕ್ಯಾ.

ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ. ಘಟಕಗಳಿಂದ ಸ್ವಚ್ಛತಾ ಚಟುವಟಿಕೆ Read More »

9/11 ಹತ್ತು ದಿನದಲ್ಲಿ 72 ಕಡತ ವಿಲೇವಾರಿ : ಅಭಿಲಾಷ್‍

ಪುತ್ತೂರು: ಕಳೆದ ಹತ್ತು ದಿನಗಳಲ್ಲಿ ಪುಡಾದಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ 9/11 ಖಾತೆಯ 72 ಕಡತಗಳು ವಿಲೇವಾರಿಯಾಗಿದೆ ಎಂದು ಪುಡಾ ಕಾರ್ಯದರ್ಶಿ ಅಭಿಲಾಷ್‌ ಮಾಹಿತಿ ನೀಡಿದ್ದಾರೆ. 9/11 ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಕಂದಾಯ ಅಧಿಕಾರಿಗಳ ಸಭೆ ಕರೆದಿದ್ದ ಶಾಸಕ ಅಶೋಕ್ ರೈ ಅವರು ಪುತ್ತೂರು ತಾಲೂಕು, ಸುಳ್ಯ,ಬೆಳ್ತಂಗಡಿ ಹಾಗೂ ಕಡಬ ತಾಲೂಕು ಕೇಂದ್ರಗಳ ಕಡತ ವಿಲೆವಾರಿ ಮಾಡುವ ಚರ್ಚೆ ನಡೆಸಿ, ನಾಲ್ಕು ತಾಲೂಕು ಕೇಂದ್ರಗಳಲ್ಲಿ ವಾರದಲ್ಲಿ

9/11 ಹತ್ತು ದಿನದಲ್ಲಿ 72 ಕಡತ ವಿಲೇವಾರಿ : ಅಭಿಲಾಷ್‍ Read More »

ಪ್ರತಿಭಾ ಕಾರಂಜಿ : ನಮ್ಮ ಶಾಲೆ ಸಾಮೆತ್ತಡ್ಕ ದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ “ನಮ್ಮ ಶಾಲೆ ಸಾಮೆತ್ತಡ್ಕ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಶಝ್ಮ ಫಾತಿಮಾ ಕಿರಿಯರ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ದೇಶ ಭಕ್ತಿ ಗೀತೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 2ನೇ ತರಗತಿಯ ಪರೀಕ್ಷಿತ್ ಎಸ್‍.ಎನ್‍. ಕಿರಿಯರ ವಿಭಾಗದ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು

ಪ್ರತಿಭಾ ಕಾರಂಜಿ : ನಮ್ಮ ಶಾಲೆ ಸಾಮೆತ್ತಡ್ಕ ದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ Read More »

ಕರ್ನಾಟಕ ಸುವರ್ಣ ಸಂಭ್ರಮ ಜ್ಯೋತಿ ರಥಯಾತ್ರೆ ನಾಳೆ ಪುತ್ತೂರಿಗೆ

ಪುತ್ತೂರು: ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಜ್ಯೋತಿ ರಥಯಾತ್ರೆ’ ನಾಳೆ (ಅ.1) ಪುತ್ತೂರಿಗೆ ಆಗಮಿಸಲಿದೆ. ಪುತ್ತೂರು ತಾಲೂಕು ಆಡಳಿತ ಹಾಗೂ  ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈ ಭವ್ಯ ರಥವನ್ನು ಕನಕಮಜುಲುವಿನಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಸ್ವಾಗತಿಸಲಿದ್ದು ಬಳಿಕ 10:30 ಕ್ಕೆ ಸರಿಯಾಗಿ ಪುತ್ತೂರು ಆಡಳಿತ ಸೌಧದ ಬಳಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ. ಕನ್ನಡ ಪ್ರೇಮಿಗಳಾದ ತಾವೆಲ್ಲರೂ 

ಕರ್ನಾಟಕ ಸುವರ್ಣ ಸಂಭ್ರಮ ಜ್ಯೋತಿ ರಥಯಾತ್ರೆ ನಾಳೆ ಪುತ್ತೂರಿಗೆ Read More »

ಶಾಂತಿಗೋಡು ವಿಕ್ರಂ ಯುವಕ ಮಂಡಲದ ನೂತನ ಆಡಳಿತ ಸಮಿತಿ ರಚನೆ

ಪುತ್ತೂರು: ಶಾಂತಿಗೋಡು ವಿಕ್ರಂ ಯುವಕ ಮಂಡಲದ ನೂತನ  ಆಡಳಿತ ಸಮಿತಿ  ರಚನೆ ಶಾಂತಿಗೋಡು ವಠಾರದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವರುಣ್ ಓಲಾಡಿ, ಉಪಾಧ್ಯಕ್ಷರಾಗಿ ಪ್ರದೀಪ್ ಕೈಂದಾಡಿ, ಕಾರ್ಯದರ್ಶಿ ದಿವಿತ್ ಪಜಿರೋಡಿ, ಕ್ರೀಡಾ ಕಾರ್ಯದರ್ಶಿಯಾಗಿ ಯುವರಾಜ್  ಪಜಿರೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಕೈಂದಾಡಿ, ಪ್ರವೀಣ್ ಬೊಳ್ಳೆಕ್ಕು, ಜೊತೆ ಕಾರ್ಯದರ್ಶಿ ನಿಖಿತ್ ಓಲಾಡಿ, ಖಜಾಂಜಿ ಶಶಿ ಓಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಮನೀಶ್ ಪಾನಂಬು, ಸ್ವಚ್ಛತಾ ಪ್ರಮುಖರಾಗಿ ವಿನೋದ್ ಕರ್ಪುತಮೂಳೆ, ಗೌರವ ಸಲಹೆಗರರಾಗಿ ಶಿವಪ್ರಸಾದ್ ಕೈಂದಾಡಿ, ನಾಗೇಶ್ ಸರಕಾರೆ, ವಸಂತ್ ಕೈಂದಾಡಿ

ಶಾಂತಿಗೋಡು ವಿಕ್ರಂ ಯುವಕ ಮಂಡಲದ ನೂತನ ಆಡಳಿತ ಸಮಿತಿ ರಚನೆ Read More »

ಅ.3-12 : ಪುತ್ತೂರು ಶ್ರೀ ಮಹಾಲಿಂಗೇಶ್ವರ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ‘ಪುತ್ತೂರು ಶಾರದೋತ್ಸವ’ | ವೈಭವದ ಶೋಭಾಯಾತ್ರೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ‘ಪುತ್ತೂರು ಶಾರದೋತ್ಸವ’ ಅ.3 ರಿಂದ 12 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 9 ದಶಕಗಳ ಹಿಂದೆ ಆರಂಭಗೊಂಡ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿತ್ತು. 9 ದಶಕಗಳ

ಅ.3-12 : ಪುತ್ತೂರು ಶ್ರೀ ಮಹಾಲಿಂಗೇಶ್ವರ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ‘ಪುತ್ತೂರು ಶಾರದೋತ್ಸವ’ | ವೈಭವದ ಶೋಭಾಯಾತ್ರೆ Read More »

ಸಂತ ಫಿಲೋಮಿನಾ ಕಾಲೇಜಿನ ಎನ್‍ ಎಸ್‍ ಎಸ್‍ ಘಟಕದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಸಂತ ಫಿಲೋ ಮಿನಾ ಕಾಲೇಜಿ(ಸ್ವಾಯತ್ತ)ನ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ ಕ್ರಮ ಆಯೋಜಿಸಲಾಯಿತು. ‘ಸ್ವಚ್ಛತಾ ಹಿ ಸೇವಾ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಬಸ್ ನಿಲ್ದಾಣದಿಂದ ದರ್ಬೆ ವೃತ್ತದವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ., ಪುಷ್ಪಾ ಎನ್. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿಎನ್ ಎಸ್ ಎಸ್ ಕಾರ್ಯದರ್ಶಿ, ಘಟಕ ನಾಯಕ, ನಾಯಕಿಯರು ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು.

ಸಂತ ಫಿಲೋಮಿನಾ ಕಾಲೇಜಿನ ಎನ್‍ ಎಸ್‍ ಎಸ್‍ ಘಟಕದಿಂದ ಸ್ವಚ್ಛತಾ ಕಾರ್ಯ Read More »

error: Content is protected !!
Scroll to Top