ಪುತ್ತೂರು

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕನಾಗಿದ್ದ ಕಾಮುಕ ಎಲಿಯಾಸ್ ಪಿಂಟೋ‌ನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಎಲಿಯಾಸ್ ಪಿಂಟೋ(55) ತಾನು ಕಾರ್ಯ ನಿರ್ವಹಿಸುತ್ತಿದ್ದ ಕಾಲೇಜಿನ ಪ್ರಥಮ ಪಿಯುಸಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ತನ್ನ ಲೈಂಗಿಕ ಕಾಮನೆಗೆ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಸಂತ್ರಸ್ತ ಹುಡುಗಿ ಕ್ರೀಡಾ ಅಭ್ಯಾಸಕ್ಕೆ ಬಂದು ಒಂದು ಸುತ್ತು ಓಡಿ ಆ ಬಳಿಕ ವರಾಂಡದಲ್ಲಿ ನಿಂತಿದ್ದಳು. ಈ ವೇಳೆ ಆರೋಪಿ ಪಿಂಟೋ ಕಾರಣ ಕೇಳಿದ್ದು, […]

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದ ಸಂತ ಫಿಲೋಮಿನಾ ಕಾಲೇಜಿನ ದೈ. ಶಿ. ನಿರ್ದೇಶಕ ಎಲಿಯಾಸ್ ಪಿಂಟೋ‌ಗೆ ಜೈಲು ಶಿಕ್ಷೆ Read More »

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು

ಕಾಳುಮೆಣಸು ಕೊಯ್ಯಲು ಮರ ಏರಿದಾಗ ಸಂಭವಿಸಿದ ದುರ್ಘಟನೆ ಪುತ್ತೂರು : ನಿವೃತ್ತ ಶಿಕ್ಷಕರೊಬ್ಬರು ತೆಂಗಿನಮರದಿಂದ ಬಿದ್ದು ಮೃತಪಟ್ಟಿರುವ ದುರ್ಘಟನೆ ಬೆಟ್ಟಂಪಾಡಿಯಲ್ಲಿ ಸೋಮವಾರ ಸಂಭವಿಸಿದೆ. ಬೆಟ್ಟಂಪಾಡಿ ಗ್ರಾಮದ ಗುಮ್ಮಟಿಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತಪಟ್ಟಿರುವ ವ್ಯಕ್ತಿ. ಗುಮ್ಮಟಿಗದ್ದೆಯಲ್ಲಿ ಸೋಮವಾರ ಕಾಳುಮೆಣಸು ಕೀಳಲೆಂದು ತೆಂಗಿನಮರ ಏರಿದ್ದ ನಾರಾಯಣ ನಾಯ್ಕ ಬಿದ್ದು ಮೃತಪಟ್ಟಿದ್ದಾರೆ. ಅಲ್ಯುಮಿನಿಯಂ ಏಣಿ ಇಟ್ಟು ಅವರು ಕಾಳುಮೆಣಸು ಕೊಯ್ಯುತ್ತಿದ್ದರು. ಈ ವೇಳೆ ಏಣಿ ಜಾರಿ ಏಣಿ ಸಮೇತ ಬಿದ್ದ ನಾರಾಯಣ ನಾಯ್ಕ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು Read More »

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಸಾಲೆತ್ತೂರು ವಲಯ ಕುಲಾಲ್ ಎಂಬಲ್ಲಿ ವಾಸವಿರುವ ಲೀಲಾವತಿ ತಿಮಪ್ಪ ದಂಪತಿಗಳಿಗೆ ಕಳೆದ 6 ವರ್ಷದಿಂದ ಶ್ರೀ ಕ್ಷೇತ್ರದಿಂದ ಮಾಶಾಸನ ದೊರೆಯುತ್ತಿದ್ದು ಇವರಿಗೆ ವಾಸಕ್ಕೆ ಯೋಗ್ಯವಾದ ಮನೆ ಇಲ್ಲದ ಕಾರಣ ಕ್ಷೇತ್ರದಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ಈ ಮನೆಯ ಗುದ್ದಲಿ ಪೂಜೆಯನ್ನು ವಲಯದ ಭಜನಾ ಪರಿಷತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ ರಾಜಾರಾಮ್ ಹೆಗ್ಡೆ ಕುದ್ರಿಯ

ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ Read More »

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ನಡೆಸಿದ 2025 – 2026ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಹಾಜರಾದ ಸವಣೂರು ವಿದ್ಯಾರಶ್ಮಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 23ನೇ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ. 9ನೇ ತರಗತಿಯ ಆಯಿಷತ್ ಜಸ್ನ – 461, ದ್ಯಾನ್ – 446, ಫಾತಿಮತ್ ಶೈಮ – 460, ಹೃತೇಶ್ ಬಿ. ಎಸ್. – 480, ಲಿಬಾ ಫಾತಿಮ – 443, ಹೈಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ

ವಿದ್ಯಾರಶ್ಮಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ Read More »

ಕಡಬ: ಬಾರ್‌ನಲ್ಲಿ ಹಲ್ಲೆ; ದೂರು ದಾಖಲು

ಕಡಬ : ಕಡಬ ಗ್ರಾಮದ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಹಲ್ಲೆ, ಜಾತಿ ನಿಂದನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ್ (28) ಜನವರಿ 16ರಂದು ರಾತ್ರಿ ಕಡಬ ಗ್ರಾಮದ ಕಲಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಹತ್ತಿರ ನಿಂತಿದ್ದಾಗ ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿ ಜಾತಿನಿಂದನೆ ಮಾಡಿ, ಕೈಯಿಂದ

ಕಡಬ: ಬಾರ್‌ನಲ್ಲಿ ಹಲ್ಲೆ; ದೂರು ದಾಖಲು Read More »

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

ಬಲೂನ್‌ ವಿದ್ಯುತ್‌ ತಂತಿಗೆ ತಗುಲಿದಾಗ ಸಂಭವಿಸಿದ ಅವಘಡ ಪುತ್ತೂರು : ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ಭಾನುವಾರ ನಡೆದಿದೆ. ದೈವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವಾಲಯದ ಆವರಣದಲ್ಲಿರುವ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್‌ ಮಾಡಲಾಗಿತ್ತು. ಆ ಸಮಯದಲ್ಲಿ, ಹತ್ತಿರದ ಜಾತ್ರೆಯಿಂದ

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ Read More »

ಸುಮಂತ್ ಮೃತದೇಹ ‌ಸಿಕ್ಕ ಕೆರೆಯಲ್ಲಿ ನೀಲಿ ಬಣ್ಣದ ಟಾರ್ಚ್ ‌ಲೈಟ್ ಪತ್ತೆ

ಬೆಳ್ತಂಗಡಿ: ಧನು ಪೂಜೆಗೆಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಭೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಸುಮಂತ್ ಅಸಹಜವಾಗಿ ಮೃತಪಟ್ಟ ಬಾಲಕನಾಗಿದ್ದು, ಆತನ ತಲೆಯಲ್ಲಿ ಕತ್ತಿ ಅಥವಾ ಇನ್ಯಾವುದೋ ವಸ್ತುವಿನಿಂದ ಹೊಡೆದ ಮೂರು ಗಾಯಗಳಿರುವುದು ಮತ್ತು ಅರೆಪ್ರಜ್ಞಾವಸ್ಥೆಯಲ್ಲಿ ನೀರಿಗೆ ಬಿದ್ದು ಶ್ವಾಸಕೋಶದಲ್ಲಿ ‌ನೀರು ತುಂಬಿದ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಸದ್ಯ ಪೊಲೀಸರು ಆತನ ಮೃತ ದೇಹ ಸಿಕ್ಕ ಕೆರೆಯ ನೀರನ್ನು ಖಾಲಿ

ಸುಮಂತ್ ಮೃತದೇಹ ‌ಸಿಕ್ಕ ಕೆರೆಯಲ್ಲಿ ನೀಲಿ ಬಣ್ಣದ ಟಾರ್ಚ್ ‌ಲೈಟ್ ಪತ್ತೆ Read More »

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ರಿಕ್ಷಾ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್ಯಾಪು ಗ್ರಾಮದ ಪಿಲಿಗುಂಡದಲ್ಲಿ ನಡೆದಿದೆ. ಮೃತರನ್ನು ಗೋಪಾಲ ನಾಯ್ಕ (55) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮಲಗಿದ್ದ ಇವರು ಬೆಳಗ್ಗೆ ಮನೆ ಮಂದಿ ನೋಡುವ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವರು ಪುತ್ತೂರು ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಬಾಡಿಗೆ ಮಾಡುತ್ತಿದ್ದರು. ಪುತ್ತೂರು ಸಹಕಾರಿ ಸಂಘದಲ್ಲಿ ರಿಕ್ಷಾದ ಸಾಲದ ಕಂತು, ರಿಕ್ಷಾದ ವಿಮೆ ಪಾವತಿ ಸಹ ಬಾಕಿ ಇತ್ತು. ಈ ಹಿನ್ನೆಲೆ

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಹೆರಿಗೆ ಸಮಯ ಮಗು ಮೃತ್ಯು: ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ದೂರು

ಪುತ್ತೂರು: ಹೆರಿಗೆ ಸಮಯದಲ್ಲಿ ಶಿಶು ಮೃತಪಟ್ಚ ಘಟನೆಯೊಂದು ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದ್ದು, ಈ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮಗುವಿನ ತಂದೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರುದಾರರ ಸಂದೇಹದ ಮೇರೆಗೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ದೇರಳಕಟ್ಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಳ್ಳಾರೆಯ ಮಿಲನ್ ಎಂಬವರ ಪತ್ನಿ ಚೈತ್ರ ಅವರು ಮೊದಲನೇ ಬಾರಿ ಗರ್ಭಿಣಿಯಾಗಿದ್ದು ಸಿಟಿ ಆಸ್ಪತ್ರೆಯ ಡಾ. ಶೃತಿ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ. 15 ರಂದು ಚೈತ್ರ ಅವರಿಗೆ ಹೆರಿಗೆ

ಹೆರಿಗೆ ಸಮಯ ಮಗು ಮೃತ್ಯು: ಸಂದೇಹ ವ್ಯಕ್ತಪಡಿಸಿ ಪೊಲೀಸರಿಗೆ ದೂರು Read More »

ಧಾರ್ಮಿಕ, ವೈಜ್ಞಾನಿಕ ಮತ್ತು ಪಾರಂಪರಿಕವಾಗಿ‘ಮಕರ ಸಂಕ್ರಾಂತಿ’ಯ ವಿಶೇಷತೆ

ಪ್ರತಿಯೊಂದು ಜೀವಿಗಳಿಗೂ ಮರುಜನುಮವೆಂಬುವಂತೆ ಹೊಸದಿನವನ್ನು ಪರಿಚಯಿಸಲು ಬೆಳಗು ನೀಡಿ ಎಚ್ಚರಿಸುವ ದಿನಪನು ಪ್ರಕೃತಿದತ್ತವಾಗಿ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವಂತಹ ಸಂದರ್ಭವನ್ನು “ಮಕರ ಸಂಕ್ರಾಂತಿ”ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ಹೇಳುವುದಾದರೆ ಮಕರ ಸಂಕ್ರಾಂತಿಯಂದು ಮುಂಜಾನೆ ತನು, ಮನ, ಮನೆಗಳನ್ನು ಶುಚಿಗೊಳಿಸಿ, ಮನೆ ದೇವರಿಗೆ ಪೂಜೆ ಸಲ್ಲಿಸಿ, ಭೂತ ಚಾವಡಿಯಲ್ಲಿ ದೀಪ ಹಚ್ಚಿ ನಮಸ್ಕರಿಸಿ, ಹಿರಿಯರ ಆಶೀರ್ವಾದ ಪಡೆದು, ದೇವಸ್ಥಾನಕ್ಕೆ ಪೂಜೆಗೆ ಹೋಗಿ ಬರುವುದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಪದ್ಧತಿ. ಅದೇ ರೀತಿ ರಾಗಿ, ಗೋಧಿ, ಜೋಳ

ಧಾರ್ಮಿಕ, ವೈಜ್ಞಾನಿಕ ಮತ್ತು ಪಾರಂಪರಿಕವಾಗಿ‘ಮಕರ ಸಂಕ್ರಾಂತಿ’ಯ ವಿಶೇಷತೆ Read More »

error: Content is protected !!
Scroll to Top