ಪುತ್ತೂರು

ರಿಕ್ಷಾ ಪಲ್ಟಿ : ಚಾಲಕ ಮೃತ್ಯು

ಪುತ್ತೂರು: ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬೊಳ್ಳಾರ್ ನಿವಾಸಿ ಸೂರ್ಯ ಮೃತಪಟ್ಟ ಆಟೋ ಚಾಲಕ. ಇಂದು ಮುಂಜಾನೆ ಬೈಪಾಸ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದು ಆಟೋ ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ವುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರಿಕ್ಷಾ ಪಲ್ಟಿ : ಚಾಲಕ ಮೃತ್ಯು Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮರಶ್ಮಿ” | ಯುವಜನಾಂಗ ಮೌಲ್ಯಭರಿತರಾದಾಗ ಭಾರತ ವಿಶ್ವಗುರು : ಡಾ.ಹೆಚ್ ಮಾಧವ ಭಟ್

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕೋತ್ಸವ “ಸಂಭ್ರಮರಶ್ಮಿ” ಶೀಂಟೂರು ನಾರಾಯಣ ರೈ ತೆರೆದ ಸಭಾಂಗಣದಲ್ಲಿ ಜರಗಿತು. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಹೆಚ್ ಮಾಧವ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೇಟೆ ಪಟ್ಟಣದಲ್ಲಿರುವ ಸಿಗುವಂತ ಉನ್ನತ ಮಟ್ಟದ ಶಿಕ್ಷಣ ಈ ಹಳ್ಳಿಯ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲು ಕಾರಣಕರ್ತರಾದ ಶೀಂಟೂರು ನಾರಾಯಣ ರೈಯವರನ್ನು ಇಂದು ನಾವು ಸ್ಮರಿಸಬೇಕು. ಅವರ ಕನಸ್ಸನ್ನು ನನಸಾಗಿಸಿ ಶಿಕ್ಷಣ ಸಂಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿದವರು ಸವಣೂರು ಸೀತಾರಾಮ ರೈಯವರು. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಅತ್ಯಂತ

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ “ಸಂಭ್ರಮರಶ್ಮಿ” | ಯುವಜನಾಂಗ ಮೌಲ್ಯಭರಿತರಾದಾಗ ಭಾರತ ವಿಶ್ವಗುರು : ಡಾ.ಹೆಚ್ ಮಾಧವ ಭಟ್ Read More »

ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ : ವಸಂತ ವೀರಮಂಗಲ | ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಕಾರ್ಯಕ್ರಮ

ಪುತ್ತೂರು: ಅವಕಾಶಗಳನ್ನು ಧನಾತ್ಮಕವಾಗಿ ಸ್ವೀಕರಿಸಿದವರು ಜೀವನದಲ್ಲಿ ಸಾಧಕರಾಗುತ್ತಾರೆ ಮತ್ತು ಜೀವನೋತ್ಸಾಹದಿಂದ ಇರುತ್ತಾರೆ ಎಂದು ಜೇಸಿ ತರಬೇತುದಾರ ವಸಂತ ವೀರಮಂಗಲ ಹೇಳಿದರು. ಅವರು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಜೊತೆ ವ್ಯಕ್ತಿತ್ವ ವಿಕಸನ ಕುರಿತಾಗಿ ಮಾತನಾಡಿದರು. ಅನೇಕ ಉದಾಹರಣೆಗಳು ನಮ್ಮನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಿದೆ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡ ಸಾಧಕರು ನಮ್ಮ ಸ್ಥಳೀಯವಾಗಿಯೇ ಇದ್ದಾರೆ. ಹಾಗಾಗಿ ನಮ್ಮಲ್ಲಿ ಇಚ್ಛಾಶಕ್ತಿ ಕೊರತೆಯಾಗಬಾರದು ಎಂದು ಹೇಳಿದರು.

ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ : ವಸಂತ ವೀರಮಂಗಲ | ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಕಾರ್ಯಕ್ರಮ Read More »

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಪುತ್ತೂರು: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ, ಇದು ಕಟ್ಟುಕಥೆಯಲ್ಲ ಅಲ್ಲದೆ ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ ಸಿ.ಟಿ.ರವಿ ಹೇಳಿಕೆ‌ ಸಹಿಸಲು ಅಸಾಧ್ಯವಾದುದು ಅವರ ಹೇಳಿಕೆಗೆ ಅಗತ್ಯ ಕಾನೂನು ಕ್ರಮ ಆಗಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸಭಾಪತಿಗಳೂ ಈ ವಿಚಾರವನ್ನು‌ ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ,

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ Read More »

ರಾಜ್ಯ ಸರಕಾರ ರೈತರ ಸವಲತ್ತುಗಳ ಹಕ್ಕನ್ನು ಕಸಿಯುತ್ತಿದೆ – ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಆರೋಪ

ಪುತ್ತೂರು : ರೈತರ ಮತ ಪಡೆದ ಈಗಿನ ರಾಜ್ಯ ಸರಕಾರ ರೈತರ ಸವಲತ್ತಿನ ಹಕ್ಕುಗಳನ್ನು ಕಸಿಯುತ್ತಿದೆ. ಈ ಕೀರ್ತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಹೇಳಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೃಷಿಗೆ ಅಲ್ಪಸ್ವಲ್ಪ ಸಹಾಯವಾಗುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯ ಸರಕಾರದಿಂದ ಬರುತ್ತಿದ್ದ ರೂ.4ಸಾವಿರವನ್ನು ನಿಲ್ಲಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ ರೂ.1.50 ಕಡಿಮೆ ಮಾಡಲಾಗಿದೆ. ಅಕ್ರಮ ಸಕ್ರಮ

ರಾಜ್ಯ ಸರಕಾರ ರೈತರ ಸವಲತ್ತುಗಳ ಹಕ್ಕನ್ನು ಕಸಿಯುತ್ತಿದೆ – ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಆರೋಪ Read More »

ಚಿನ್ನಾಭರಣ ಕಳ್ಳತನ ಪ್ರಕರಣ l ಮೂವರು ಕಳ್ಳಿಯರ ಬಂಧನ

ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಡಿ.19ರಂದು ಅಪರಿಚಿತರು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 120/2024 ಕಲಂ: 303(2) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿತ್ತು, ಪ್ರಕರಣ ಪ್ರಕಾರ ತನಿಖೆ ನಡೆಸಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತೆಯರಾದ ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ  ಯಶೋದರವರನ್ನು ದಸ್ತಗಿರಿ ಮಾಡಿ, ಅವರಿಂದ ಕಳವಾದ ರೂ 25,000/- ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತೊಂದು ಪ್ರಕರಣವಾದ

ಚಿನ್ನಾಭರಣ ಕಳ್ಳತನ ಪ್ರಕರಣ l ಮೂವರು ಕಳ್ಳಿಯರ ಬಂಧನ Read More »

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಡಿ.20ರಂದು ನಡೆದಿದೆ. ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಕಿಶೋರ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಕಿಶೋರ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಿಶೋರ್ ಅವರ ಪತ್ನಿ ಚಂದ್ರಾವತಿ ಮತ್ತು ಪುತ್ರಿ ಬೆಳಿಗ್ಗೆ ಗಂಟೆ 10-30ಕ್ಕೆ ಪುತ್ತೂರಿಗೆ ಆಸ್ಪತ್ರೆಗೆ ಹೋಗಿದ್ದು ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ ಘಟನೆ ನಡೆದಿತ್ತು. ಕಿಶೋರ್ ಅವರ

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ : ರೋಟರಿ ಕ್ಲಬ್ ಗೆ ಆಮಂತ್ರಣ ವಿತರಣೆ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಡಿ.28 ಮತ್ತು 29 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಜರಗುವ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧರ್ಮಸಂಗಮ ಕಾರ್ಯಕ್ರಮದ ಆಮಂತ್ರಣವನ್ನು ರೋಟರಿ ಕ್ಲಬ್‍ ಗೆ ವಿತರಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈಯವರು ರೋಟರಿ ಕ್ಲಬ್ ಪುತ್ತೂರು ಪೂರ್ವದ ಕುಟುಂಬ ಸಮ್ಮಿಲನದಲ್ಲಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರು ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಡಾ.ರವಿಪ್ರಕಾಶ್ ಅವರಿಗೆ ಆಮಂತ್ರಣ

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ : ರೋಟರಿ ಕ್ಲಬ್ ಗೆ ಆಮಂತ್ರಣ ವಿತರಣೆ Read More »

ಡಿ. 21 (ನಾಳೆ) : ವಿಟ್ಲ ಅಕ್ಷಯ ಕ್ರೆಡಿಟ್‍ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ

ವಿಟ್ಲ : ವಿಟ್ಲ ಅಕ್ಷಯ ಕ್ರೆಡಿಟ್‍ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಡಿ.21ರಂದು  ಬೆಳಗ್ಗೆ 10:15ಕ್ಕೆ  ಮಂಗಳೂರು ‘ರಾಧಾಶ್ರೀ’ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ.  ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ, ವಿಟ್ಲ ಅರಮನೆಯ   ಬಂಗಾರ ಅರಸರು, ಸಂಘದ ಕಛೇರಿಯ ಉದ್ಘಾಟನೆ ಮಾಡಲಿದ್ದಾರೆ. ಬೆಳ್ತಂಗಡಿ ಅರಿಕೋಡಿ ಶ್ರೀ ಚಾಮುಂಡಿ ದೇವಸ್ಥಾನದ ಧರ್ಮದರ್ಶಿ ಹರೀಶ್‍ ಅರಿಕೋಡಿ ದೀಪ ಪ್ರಜ್ವಲಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ

ಡಿ. 21 (ನಾಳೆ) : ವಿಟ್ಲ ಅಕ್ಷಯ ಕ್ರೆಡಿಟ್‍ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ Read More »

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ : 6ನೇ ಆರೋಪಿಯನ್ನು ಬಂಧಿಸಿದ ಎನ್‍ ಐಎ ಅಧಿಕಾರಿಗಳು

ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 6ನೇ ಆರೋಪಿ ಮೊಹಮ್ಮದ್ ಷರೀಫ್ (55) ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ವಿದೇಶದಿಂದ ವಾಪಸ್ ಬರುವಾಗ ದೆಹಲಿ ಏರ್‌ಫೋರ್ಟ್‌ಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು 5 ಲಕ್ಷ ರೂ. ರಿವಾರ್ಡ್ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡನಾಗಿದ್ದ, ಎರಡು ಬಾರಿ ಎನ್‌ ಐಎ ಅಧಿಕಾರಿಗಳು ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ : 6ನೇ ಆರೋಪಿಯನ್ನು ಬಂಧಿಸಿದ ಎನ್‍ ಐಎ ಅಧಿಕಾರಿಗಳು Read More »

error: Content is protected !!
Scroll to Top