ದೇಶ

23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್

ಮಂಗಳೂರು : 23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೃಷ್ಣಾಪುರ, ಕಾಟಿಪಳ್ಳ ಗ್ರಾಮದ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ (ನಾಥು)(29) ಬಂಧಿತ ಆರೋಪಿ.ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇದೆ.ಇನ್ನು ಮಂಗಳೂರು ಪೊಲೀಸು ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್‌ ಕುಮಾರ್‌ರವರ ನಿರ್ದೇಶನದಂತೆ ಮಾರ್ಚ್ 22 […]

23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್ Read More »

ಮೋದಿ ಉಪನಾಮ ಟೀಕೆಗೆ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು

ದೆಹಲಿ : ಮೋದಿ ಹೆಸರು ಇರುವವರೆಲ್ಲ ವಂಚಕರು ಎಂದು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ದೋಷಿ ಎಂದು ಗುಜರಾತ್‌ನ ನ್ಯಾಯಾಲಯ ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.ರಾಹುಲ್ ಗಾಂಧಿ ಮಾಡಿರುವ ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಗುಜರಾತಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸೂರತ್ ನ್ಯಾಯಾಲಯ ಇಂದು ಈ ಪ್ರಕರಣದ ತೀರ್ಪು ನೀಡಿದೆ. ಎಲ್ಲ ಕಳ್ಳರ ಉಪನಾಮ ಮೋದಿ ಎಂದಿರುವುದು ಹೇಗೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಮತ್ತು, ಮಾಜಿ

ಮೋದಿ ಉಪನಾಮ ಟೀಕೆಗೆ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು Read More »

ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ

ಬೆಂಗಳೂರು: ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ನ್ನು ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್

ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ Read More »

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ (72 ವರ್ಷ) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.ಬಿಎ, ಬಿ.ಎಲ್ ಪದವೀಧರರಾದ ಅಂಜನ ಮೂರ್ತಿ 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. 1989-1994 ಮತ್ತು 1999, ಫೆ.23 2004 ರಿಂದ 2007 ಠಂಪಿಂಗ್ ಮೂರು ಬಾರಿ ಆಯ್ಕೆ ಸಮೀಪದ ಪ್ರತಿಸ್ಪರ್ಧಿಗಿಂತ 37000 ಮತಗಳ ಬಹುಮತ ಸಾಧಿಸಿದ್ದರು.

ಕಾಂಗ್ರೆಸ್‌ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ Read More »

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ

ಸ್ವಾಮೀಜಿ ಮೂಲತಃ ಹೆಬ್ರಿ ಸಮೀಪದ ವರಂಗದವರು ಹಾಸನ: ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ ಆಗಿದ್ದಾರೆ. 1970, ಏಪ್ರಿಲ್‌ 19ರಂದು ಪಟ್ಟಾಭೀಷಿಕ್ತರಾದ ಸ್ವಾಮೀಜಿ ಸುಮಾರು 50 ವರ್ಷಗಳಿಂದ ಮಠವನ್ನು ಮುನ್ನಡೆಸಿದ್ದಾರೆ. ನಾಲ್ಕು ಮಹಾ ಮಸ್ತಕಾಭಿಷೇಕ ಪೂರೈಸಿದ ಕೀರ್ತಿ ಸ್ವಾಮೀಜಿಗಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಸ್ವಾಮೀಜಿ ಕೊಡುಗೆ ಅಗಣಿತ. ಸಮಾಜಮುಖಿ ಕಾರ್ಯಗಳಿಂದ ಶ್ರವಣಬೆಳಗೊಳ ಸುತ್ತಮುತ್ತಲಿನ ಎಲ್ಲ ಧರ್ಮದವರ ಬದುಕು ಸುಧಾರಿಸಲು ಬಹಳಷ್ಟು ಕೆಲಸ ಮಾಡಿದ್ದ ಸ್ವಾಮೀಜಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು.

ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ Read More »

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಮಂಗಳೂರು : ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೆ ಆಗಮಿಸಲಿದೆ. ರೈಲು ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ರೈಲ್ವೆಯ ಪಾಲಕ್ಕಾಡ್ ವಿಭಾಗ ಮತ್ತು ದಕ್ಷಿಣ ರೈಲ್ವೆ ವಿಭಾಗ ಜಂಟಿಯಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ವಹಣೆಗಾಗಿ ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮೂಲಕ ಕರ್ನಾಟಕದ ಕರಾವಳಿಗೆ ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ

ಮಂಗಳೂರಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು Read More »

ಕಲಬುರುಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ರೂ. ವಶ

ಕಲಬುರಗಿ : ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಹಣ ಮತ್ತು ಉಡುಗೊರೆ ಹಂಚುವ ಭರಾಟೆ ಶುರುವಾಗಿದೆ. ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 1.90 ಕೋಟಿ ರೂ.ಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಚೆಕ್ ಪೋಸ್ಟ್‌ಗಳಲ್ಲಿ ಬುಧವಾರ ಯಾವುದೇ ದಾಖಲೆ ಇಲ್ಲದ ಅಂದಾಜು 1.90 ಕೋಟಿ ರೂ. ಸಾಗಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.‌ ಗುರುಕರ್ ತಿಳಿಸಿದ್ದಾರೆ. ಇದರಲ್ಲಿ ಕಮಲಾಪುರ ತಾಲ್ಲೂಕಿನ ಕಿಣ್ಣಿಸಡಕ್ ಚೆಕ್‌ಪೋಸ್ಟ್ ಬಳಿ 1.40 ಕೋಟಿ ರೂ ಹಾಗೂ

ಕಲಬುರುಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ರೂ. ವಶ Read More »

ಇಂದಿನಿಂದ ರಮ್ಜಾನ್‌ ಉಪವಾಸ ಪ್ರಾರಂಭ

ಕೇರಳದ ಕಲ್ಲಿಕೋಟೆಯ ಕಾಪಾಡ್‌ನಲ್ಲಿ ಚಂದ್ರ ದರ್ಶನ ಮಂಗಳೂರು : ಗುರುವಾರದಿಂದ ಮುಸ್ಲಿಮರ ರಮ್ಜಾನ್‌ ಉಪವಾಸ ಪ್ರಾರಂಭವಾಗುತ್ತದೆ. ರಮ್ಜಾನ್‌ ಉಪವಾಸದ ಪ್ರಥಮ ಚಂದ್ರ ದರ್ಶನ ಬುಧವಾರ ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿರುವುದರಿಂದ ಗುರುವಾರದಿಂದ ರಮ್ಜಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್

ಇಂದಿನಿಂದ ರಮ್ಜಾನ್‌ ಉಪವಾಸ ಪ್ರಾರಂಭ Read More »

ಪಿಎಫ್‌ಐ ನಿಷೇಧ : ಕೇಂದ್ರದ ಕ್ರಮ ಸರಿ ಎಂದ ನ್ಯಾಯಾಧಿಕರಣ

ಯುಎಪಿಎ ಕಾಯಿದೆಯಡಿ 5 ವರ್ಷ ನಿಷೇಧಕ್ಕೆ ಸಮರ್ಥನೆ ಹೊಸದಿಲ್ಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಯುಎಪಿಎ ನ್ಯಾಯಾಧಿಕರಣ ಎತ್ತಿ ಹಿಡಿದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಿಎಫ್‍ಐ ಮೇಲೆ ವಿಧಿಸಿದ ನಿಷೇಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯಲ್ಲಿ ನ್ಯಾಯಾಧಿಕರಣ ರಚಿಸಲಾಗಿತ್ತು.ಪಿಎಫ್‍ಐ ಮೇಲೆ ನಿಷೇಧ ಹೇರಿದ ಕ್ರಮದ ಬಗ್ಗೆ ದೇಶದ ವಿವಿಧೆಡೆ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಕೇಂದ್ರದ ಆದೇಶವನ್ನು ಎತ್ತಿ ಹಿಡಿದೆ.ಕಳೆದ ವರ್ಷ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್

ಪಿಎಫ್‌ಐ ನಿಷೇಧ : ಕೇಂದ್ರದ ಕ್ರಮ ಸರಿ ಎಂದ ನ್ಯಾಯಾಧಿಕರಣ Read More »

ಯುಗದ ಆದಿ – ನೂತನ ವರ್ಷದ ಬುನಾದಿ

ಶೋಭಾಕೃತ್ ನಾಮ ಸಂವತ್ಸರದ ಶುಭಾಗಮನ ನಮ್ಮೆಲ್ಲ ಓದುಗ ಪ್ರಭುಗಳಿಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ಹಿಂದೂಗಳು ತಮ್ಮ ವರ್ಷದ ಮೊದಲ ದಿನವಾಗಿ ಆಚರಣೆ ಮಾಡುವ ದಿನ ಇದು. ಅಂತೆಯೇ ಇಂದು ಒಂದು ಸಂವತ್ಸರ ಕಳೆದು ಹೋಗಿ ಶೋಭಾಕೃತ್ ಸಂವತ್ಸರ ಹೊಸ್ತಿಲು ದಾಟಿ ಬಂದಿದೆ. ಪ್ರಕೃತಿಯ ದೃಷ್ಟಿಯಿಂದಲೂ ಯುಗಾದಿಯೆ ವರ್ಷದ ಆರಂಭ ಬ್ರಿಟಿಷ್ ಕ್ಯಾಲೆಂಡರ್ ಪ್ರಕಾರ ನಾವು ಜನವರಿ 1ರಂದು ಆಚರಿಸುವ ಹೊಸ ವರ್ಷ ಪ್ರಕೃತಿಗೆ ಪೂರಕವಿಲ್ಲ. ಆಗ ತೀವ್ರವಾದ ಶಿಶಿರದ ದಟ್ಟ ಪ್ರಭಾವದಿಂದ ಎಲೆಗಳೆಲ್ಲ ಉದುರಿಹೋಗಿ ಗಿಡ

ಯುಗದ ಆದಿ – ನೂತನ ವರ್ಷದ ಬುನಾದಿ Read More »

error: Content is protected !!
Scroll to Top