ದೇಶ

ಬಾವಿಯೊಳಗೆ ಉಸಿರುಕಟ್ಟಿ 8 ಮಂದಿ ಸಾವು

ಸ್ವಚ್ಛಗೊಳಿಸಲು ಇಳಿದವರು ವಿಷಾನಿಲ ಸೇವಿಸಿ ಮೃತ್ಯು ಹೊಸದಿಲ್ಲಿ: ಬಾವಿಯೊಳಗೆ ಉಸಿರುಕಟ್ಟಿ 8 ಮಂದಿ ಸಾವಿಗೀಡಾದ ದಾರುಣ ಘಟನೆ ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಸಂಭವಿಸಿದೆ. ಛಾಯ್‌ಗಾಂವ್‌ ಮಖಾನ ಎಂಬಲ್ಲಿ ಊರಿನ ಉತ್ಸವದ ವಿಗ್ರಹ ವಿಸರ್ಜನೆಗೆ ಮುಂಚಿತವಾಗಿ ಬಾವಿಯ ನೀರನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದಾಗ ಬಾವಿಯಲ್ಲಿದ್ದವರು ವಿಷಾನಿಲದಿಂದಾಗಿ ಉಸಿರುಕಟ್ಟಿ ಸಾವಿಗೀಡಾಗಿದ್ದಾರೆ. ಮೊದಲು ಓರ್ವ ಕಾರ್ಮಿಕ ಬಾವಿಗಿಳಿದಿದ್ದು, ಅತ ಉಸಿರುಕಟ್ಟಿ ಒದ್ದಾಡುವುದನ್ನು ನೋಡಿ ಉಳಿದವರು ಅವನನ್ನು ರಕ್ಷಿಸಲು ಇಳಿದಿದ್ದರು. ಆದರೆ ಎಲ್ಲರೂ ಉಸಿರುಕಟ್ಟಿ ಮೇಲೆ ಬರಲಾಗದೆ ಸಾವಿಗೀಡಾಗಿದ್ದಾರೆ. ಈ ಬಾವಿ […]

ಬಾವಿಯೊಳಗೆ ಉಸಿರುಕಟ್ಟಿ 8 ಮಂದಿ ಸಾವು Read More »

ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಮನೋಜ್‌ ಕುಮಾರ್‌ ನಿಧನ

ರಾಷ್ಟ್ರಪ್ರೇಮದ ಚಿತ್ರಗಳಿಂದ ಪ್ರಸಿದ್ಧರಾಗಿದ್ದ ಮನೋಜ್‌ ಕುಮಾರ್‌ ಮುಂಬಯಿ: ಬಾಲಿವುಡ್‌ನ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಇಂದು ನಸುಕಿನ ವೇಳೆ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಾ ಇದ್ದರು. ಅವರು ರಾಷ್ಟ್ರಪ್ರೇಮದ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾರತ್ ಕುಮಾರ್’ ಎಂಬ ಹೆಸರು ಇತ್ತು.ಮನೋಜ್ ಕುಮಾರ್ ಅವರನ್ನು ಕೆಲ ವಾರಗಳ ಹಿಂದೆ ಮುಂಬಯಿಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ

ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಮನೋಜ್‌ ಕುಮಾರ್‌ ನಿಧನ Read More »

ರಾಜ್ಯಸಭೆಯಲ್ಲೂ ಪಾಸ್‌ ಆದ ವಕ್ಫ್‌ ಮಸೂದೆ

ಪರವಾಗಿ 138, ವಿರುದ್ಧ 95 ಮತಗಳು ನವದೆಹಲಿ: ರಾಜ್ಯಸಭೆಯಲ್ಲಿಯೂ ವಕ್ಫ್ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆಯುವಲ್ಲಿ ಎನ್​ಡಿಎ ಸರ್ಕಾರ ಯಶಸ್ವಿಯಾಗಿದೆ. ಗುರುವಾರ ತಡರಾತ್ರಿ ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮತಕ್ಕೆ ಹಾಕಲಾಯಿತು. ಮಸೂದೆಯ ಪರವಾಗಿ 138 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.ಇನ್ನು ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ಅವರು ಅಂಇಕತ ಹಾಕಿದ ಕೂಡಲೇ ಕಾನೂನಿನ ರೂಪ ಪಡೆಯುತ್ತದೆ. ರಾಜ್ಯಸಭೆಗೂ ಮುನ್ನ,ಸರ್ಕಾರ ಬುಧವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿತ್ತು. ಅಲ್ಲಿ ಸುಮಾರು 12 ಗಂಟೆಗಳ ಚರ್ಚೆಯ ನಂತರ

ರಾಜ್ಯಸಭೆಯಲ್ಲೂ ಪಾಸ್‌ ಆದ ವಕ್ಫ್‌ ಮಸೂದೆ Read More »

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ

ಮಿತ್ರಪಕ್ಷಗಳ ಹಂಗಿನಲ್ಲಿದ್ದರೂ ದೇಶಕ್ಕೆ ಒಳಿತಾಗುವ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದೆ ಮಿತ್ರಪಕ್ಷಗಳ ನೆರವಿನಿಂದ ಸರಕಾರ ರಚಿಸುವ ಅನಿವಾರ್ಯತೆಯಲ್ಲಿ ಸಿಲುಕಿದಾಗ ಈ ಅವಧಿಯಲ್ಲಿ ಬಿಜೆಪಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಎಲ್ಲ ವಿಚಾರಗಳಿಗೂ ಮಿತ್ರಪಕ್ಷಗಳ ಮನವೊಲಿಸಿ ಅಂಗಲಾಚಬೇಕಾಗಬಹುದು ಎಂಬ ಅಭಿಪ್ರಾಯವೊಂದು ಕೇಳಿಬಂದಿತ್ತು. ಆದರೆ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಯಶಸ್ವಿಯಾಗಿ ಅಂಗೀಕಾರಗೊಂಡಿರುವುದು ಈ ಅಭಿಪ್ರಾಯವನ್ನು ಸುಳ್ಳಾಗಿಸಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇಶಕ್ಕೆ ಒಳಿತಾಗುವ ದಿಟ್ಟ ನಿರ್ಧಾರ

ಸಂಪಾದಕೀಯ – ವಕ್ಫ್‌ ಮಸೂದೆ ಅಂಗೀಕಾರ ಮೋದಿಯ ದಿಟ್ಟ ನಿರ್ಧಾರಕ್ಕೆ ಸಂದ ಜಯ Read More »

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ

ಮಧ್ಯರಾತ್ರಿವರೆಗೂ ನಡೆದ ಬಿರುಸಿನ ಚರ್ಚೆ; ರಾತ್ರಿ 1.15ಕ್ಕೆ ಮತದಾನ ನವದೆಹಲಿ: ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲ ತಿದ್ದುಪಡಿಗಳನ್ನು ಧ್ವನಿಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15ಕ್ಕೆ ಮತದಾನ

ಲೋಕಸಭೆಯಲ್ಲಿ ಪಾಸ್‌ ಆದ ವಕ್ಫ್‌ ಮಸೂದೆ : ಇಂದು ರಾಜ್ಯಸಭೆಯಲ್ಲಿ ಮಂಡನೆ Read More »

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ

ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದ ಪಾಕ್‌ ಸೈನಿಕರು ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗಡಿ ದಾಟಿ ಬರಲು ಯತ್ನಿಸಿದ ಐವರು ಪಾಕಿಸ್ಥಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆಯವರು ಗುಂಡಿಕ್ಕಿ ಸಾಯಿಸಿದ್ದಾರೆ. ಪೂಂಛ್‌ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಷನ್‌ನಲ್ಲಿ ಪಾಕ್‌ ಕಡೆಯಿಂದ ಕದನ ವಿರಾಮ ಉಲ್ಲಂಘಿಸಿ ಗಡಿದಾಟಲು ಯತ್ನಿಸಲಾಗಿತ್ತು. ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 4-5 ಮಂದಿ ಸತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ನಿನ್ನೆ ಬೆಳಗ್ಗಿನಿಂದ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿತ್ತು. ಅತ್ತ ಕಡೆಯಿಂದ ಪಾಕ್‌ ಸೈನಿಕರು ಗುಂಡು

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ Read More »

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ?

ಜೆ.ಪಿ.ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆ ಈ ತಿಂಗಳಲ್ಲೇ ನಡೆಯಲಿದೆ ಎನ್ನಲಾಗಿದೆ. ಏ.4ಕ್ಕೆ ಸಂಸತ್‌ ಅಧಿವೇಶನ ಮುಗಿಯಲಿದ್ದು, ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಲಿದೆ. ಬಹುತೇಕ ಏಪ್ರಿಲ್‌ ಮೂರನೇ ವಾರದಲ್ಲಿ ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಿದ ಬಳಿಕ ರಾಷ್ಟ್ರೀಯ

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ? Read More »

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ಪಕ್ಷಗಳಿಂದ ವಿಪ್‌ ಜಾರಿ-ಭಾರಿ ಕೋಲಾಹಲದ ನಿರೀಕ್ಷೆ ನವದೆಹಲಿ: ಈಗಾಗಲೇ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಮಹತ್ವದ ವಕ್ಫ್‌ ಮಸೂದೆಯನ್ನು ಕೇಂದ್ರ ಸರಕಾರ ಇಂದು ವಿಪಕ್ಷಗಳು ಮತ್ತು ಮುಸ್ಲಿಮರ ವಿರೋಧದ ನಡುವೆ ಲೋಕಸಭೆಯಲ್ಲಿ ಮಂಡಿಸಲಿದೆ. ಮಧ್ಯಾಹ್ನ 12.15ಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್‌ ತಿದ್ದುಪಡಿ ಮಸೂದೆ ಮಂಡಿಸಲಿದ್ದಾರೆ. ಮುಸ್ಲಿಮರು ವಕ್ಫ್‌ ಮಸೂದೆ ತಿದ್ದುಪಡಿಯನ್ನು ವಿರೋಧಿಸುತ್ತಿದ್ದು, ದೇಶದ ಹಲವೆಡೆ ಪ್ರತಿಭಟನೆಯೂ ನಡೆದಿದೆ. ವಕ್ಫ್ ಮಸೂದೆ ಮೇಲಿನ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲು ಇಡಲಾಗಿದೆ. ಈ ಮಸೂದೆಯನ್ನು ಎನ್‌ಡಿಎ

ಇಂದು ಲೋಕಸಭೆಯಲ್ಲಿ ಮಹತ್ವದ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ Read More »

ಗೂಡ್ಸ್‌ ರೈಲುಗಳ ಡಿಕ್ಕಿ : ಮೂವರು ಸಾವು

ಗುದ್ದಿದ ಬೆನ್ನಿಗೆ ಬೆಂಕಿ ಹತ್ತಿಕೊಂಡು ಇಂಜಿನ್‌ ಸುಟ್ಟು ಕರಕಲು ರಾಂಚಿ: ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಎರಡು ಗೂಡ್ಸ್‌ ರೈಲುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ರೈಲುಗಳ ಇಂಜಿನ್‌ಗೆ ಬೆಂಕಿಹತ್ತಿಕೊಂಡು ಹೊತ್ತಿ ಉರಿದು ಇಬ್ಬರು ಲೋಕೊಪೈಲಟ್‌ ಸೇರಿದಂತೆ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಅಪಘಾತದ ಬಿರುಸಿಗೆ ರೈಲುಗಳ ಇಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರ ಸಾವಾಗಿದೆ. ಅವಘಡದಲ್ಲಿ ಮೂವರು ಸಿಐಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಫರಕ್ಕಾದಿಂದ ಲಾಲ್ಮಾಟಿಯಾಗೆ ಹೋಗುತ್ತಿದ್ದ ಗೂಡ್ಸ್ ರೈಲು ಬರ್ಹೆತ್‌ನಲ್ಲಿ ನಿಂತಿದ್ದ ಇನ್ನೊಂದು

ಗೂಡ್ಸ್‌ ರೈಲುಗಳ ಡಿಕ್ಕಿ : ಮೂವರು ಸಾವು Read More »

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು

ಪಟಾಕಿಯ ಕಿಡಿ ತಗಲಿ ಸ್ಫೋಟಿಸಿದ ಸಿಲಿಂಡರ್‌ ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ದೋಲಾಹಾತ್‌ ಎಂಬಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಯಿಂದ ಸಿಡಿದ ಕಿಡಿ ಸಿಲಿಂಡರ್​ಗೆ ತಗಲಿ ಬೆಂಕಿಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು, ಈ

ಗ್ಯಾಸ್‌ ಸಿಲಿಂಡರ್‌ ಸ್ಫೋಟ : 7 ಮಂದಿ ಸಾವು Read More »

error: Content is protected !!
Scroll to Top