ದೇಶ

ಸುಳ್ಯ ವಿಧಾನಸಭಾ ಕ್ಷೇತ್ರ : ನಂದಕುಮಾರ್ ಮತ್ತು ಕೃಷ್ಣಪ್ಪ ಬಣಗಳ ಸಭೆ ಕರೆದ ಡಿ.ಕೆ.ಶಿ

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಎ. 14 ರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಸುಳ್ಯದಲ್ಲಿ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಇದರಿಂದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಅಲ್ಲದೇ ನಂದಕುಮಾರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸಿದ್ಧತೆ ಕೂಡ ನಡೆಸಿದ್ದಾರೆ.‌ ಕಾಂಗ್ರೆಸ್ ಬಿಫಾರಂ ನೀಡಬೇಕು ಇಲ್ಲದಿದ್ದರೆ ಪಕ್ಷೇತರರಾಗಿ‌ ಸ್ಪರ್ಧೆ […]

ಸುಳ್ಯ ವಿಧಾನಸಭಾ ಕ್ಷೇತ್ರ : ನಂದಕುಮಾರ್ ಮತ್ತು ಕೃಷ್ಣಪ್ಪ ಬಣಗಳ ಸಭೆ ಕರೆದ ಡಿ.ಕೆ.ಶಿ Read More »

ಪೊಲೀಸ್‌ ಠಾಣೆಯ ಮೇಲೇರಿ ಮಹಿಳೆ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು : ಮಹಿಳೆಯೋರ್ವರು ಪೊಲೀಸ್‌ ಠಾಣೆಯ ಮಹಡಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎ. 14 ರಂದು ಮೂಡಿಗೆರೆಯಲ್ಲಿ ಬೆಳಗ್ಗೆ ಸಂಭವಿಸಿದೆ. ಶಿಲ್ಪ ಎಂಬುವವರೇ ಆತ್ಮಹತ್ಯೆ ಯತ್ನಿಸಿದ ಮಹಿಳೆ. ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವುಯಾಗಿದ್ದಾರೆ. ಮಹಿಳೆಗೆ ಪ್ರಕರಣವೊಂದರಲ್ಲಿ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿತ್ತು. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಶಿಲ್ಪ‌ ಮತ್ತು ಆಕೆಯ ಅಕ್ಕನ ನಡುವೆ ಗಲಾಟೆ ‌ಹಾಗೂ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೊಲೀಸ್ ‌ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ

ಪೊಲೀಸ್‌ ಠಾಣೆಯ ಮೇಲೇರಿ ಮಹಿಳೆ ಆತ್ಮಹತ್ಯೆಗೆ ಯತ್ನ Read More »

ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋದ ಬಿಸಿ ನೀರ ಚಿಲುಮೆ

ಉಪ್ಪಿನಂಗಡಿ : ಕರಾವಳಿ ಜಲ್ಲೆಗಳಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ರಣಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ. ನದಿ ಕೆರೆಗಳು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಈ ಬಾರಿಯ ಬಿಸಿಲಿನ ಬೇಗೆಗೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಅಂಶವೇ ಇಲ್ಲದಂತೆ ಒಣಗಿ ಹೋಗಿದೆ. ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದ ಇಲ್ಲಿನ ಬಿಸಿ ನೀರ ಚಿಲುಮೆಯು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು, ಇಲ್ಲಿ ಸ್ನಾನ

ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋದ ಬಿಸಿ ನೀರ ಚಿಲುಮೆ Read More »

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ

ಕಚೇರಿಗೆ ಕರೆ ಮಾಡಿ 100 ಕೋ. ರೂ. ಕೇಳಿದ್ದ ಆರೋಪಿ ದೆಹಲಿ : ಕೇಂದ್ರ ರಸ್ತೆ, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ವ್ಯಕ್ತಿ ದಾವೂದ್ ಇಬ್ರಾಹಿಂ ಗ್ಯಾಂಗ್, ಲಷ್ಕರ್-ಎ-ತೊಯ್ಬಾ, ಪಿಎಫ್ಐ ಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕರೆ ಮಾಡಿದ ವ್ಯಕ್ತಿ ಜಯೇಶ್ ಪೂಜಾರಿ ಅಲಿಯಾಸ್ ಕಂಥಾ, ಅಲಿಯಾಸ್ ಸಲೀಮ್ ಶಾಹಿರ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಕೊಲೆಯ ಪ್ರಕರಣದ ಅಪರಾಧಿಯಾಗಿದ್ದಾನೆ. ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ Read More »

ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟ : 18 ಸಾವಿರ ದನಗಳು ಸಾವು

ಸ್ಫೋಟದ ಬಳಿಕ ಹತ್ತಿಕೊಂಡ ಬೆಂಕಿ ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಫಾರ್ಮ್‌ ಒಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 18 ಸಾವಿರಕ್ಕೂ ಅಧಿಕ ದನಗಳು ಮೃತಪಟ್ಟಿವೆ.ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟದ ಬಳಿಕ ಬೆಂಕಿಹತ್ತಿಕೊಂಡು ಸಾವಿರಾರು ದನಗಳು ಜೀವಂತ ಸುಟ್ಟು ಕರಕಲಾಗಿವೆ. ಇದು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಫಾರ್ಮ್‌ ಆಗಿದ್ದು, ಸ್ಫೋಟದ ಕಾರಣ ತಿಳಿದುಬಂದಿಲ್ಲ. ಟೆಕ್ಸಾಸ್‌ ನಗರ ಶೆರಿಫ್‌ ಕಚೇರಿ ಆಕಾಶದೆತ್ತರ ಚಾಚಿದ ಅಗ್ನಿಜ್ವಾಲೆಯ ಚಿತ್ರವನ್ನು ಹಂಚಿಕೊಂಡು 18 ಸಾವಿರಕ್ಕೂ ಅಧಿಕ ದನಗಳು ಸತ್ತಿವೆ

ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟ : 18 ಸಾವಿರ ದನಗಳು ಸಾವು Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ

ಯುವಕನ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲು ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಜತೆ ಲೈಂಗಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭ ಧರಿಸುವಂತೆ ಮಾಡಿದ್ದ ನಾರಾವಿಯ ಮಂಜುನಗರದ ಸಂದೇಶ್‌ (23) ಎಂಬ ಯುವಕನನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಲಾಗಿದೆ.ದ್ವಿತೀಯ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿ ಬುಟ್ಟಿಗೆ ಹಾಕಿಕೊಂಡಿದ್ದ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೋಗಿ ಮದುವೆಯಾಗುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಪೋಷಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ Read More »

ಜೈಲಿನಲ್ಲಿದ್ದುಕೊಂಡೆ ದಿಲ್ಲಿ ಲೆಫ್ಟಿನೆಂಟ್ ಗರ್ವನರ್‌ಗೆ ಪತ್ರ ಬರೆದ ವಂಚಕ ಸುಕೇಶ್‌

ಆಪ್‌ ನಾಯಕರ ಜತೆಗಿನ ವಾಟ್ಸಾಪ್‌ ಚಾಟ್‌ ಬಹಿರಂಗ ಹೊಸದಿಲ್ಲಿ : ವಂಚಕ ಸುಕೇಶ್ ಚಂದ್ರಶೇಖರ್ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ ತಾನು ವ್ಯವಹಾರಗಳಿಗೆ ಸಂಬಂಧಿಸಿ ಮಾಡಿರುವ ವಾಟ್ಸಾಪ್ ಚಾಟ್‌ಗಳನ್ನು ಬಿಡುಗಡೆ ಮಾಡಿ ಸಂಚಲನವುಂಟು ಮಾಡಿದ್ದಾನೆ. ಅವರೊಂದಿಗೆ ತಾನು ನಡೆಸಿರುವ ಸಂಭಾಷಣೆ ಆಮ್ ಆದ್ಮಿ ಪಾರ್ಟಿಯ ಮುಖಂಡ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮದ್ಯ ನೀತಿ ಹಗರಣದಲ್ಲಿ ಆರೋಪಿಯಾಗಿರುವ

ಜೈಲಿನಲ್ಲಿದ್ದುಕೊಂಡೆ ದಿಲ್ಲಿ ಲೆಫ್ಟಿನೆಂಟ್ ಗರ್ವನರ್‌ಗೆ ಪತ್ರ ಬರೆದ ವಂಚಕ ಸುಕೇಶ್‌ Read More »

ತಪ್ಪಿದ ಟಿಕೆಟ್‌ – ಆರ್ ಶಂಕರ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮಗೆ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಣೆಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಶಂಕರ್ ಬದಲಿಗೆ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಆರ್ ಶಂಕರ್ ತಮ್ಮ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಆರ್

ತಪ್ಪಿದ ಟಿಕೆಟ್‌ – ಆರ್ ಶಂಕರ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ Read More »

ರೇಶನ್ ಮಾಫಿಯಾ : ಗೋಣಿ ಚೀಲ ಬದಲಿಸಿ ಅಕ್ರಮ ಪಡಿತರ ಅಕ್ಕಿ ಸಾಗಾಟ

ವಿಟ್ಲ : ಗೋಣಿ ಚೀಲ ಬದಲಿಸಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು‌ ಜೀತೋ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಕ್ಕುಡ ಸಮೀಪ ವಿಟ್ಲ ಪೋಲಿಸರು ಬಂಧಿಸಿದ್ದು, ವಾಹನ ಸಹಿತ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತನಾಗಿರುವ ವಾಹನದ ಚಾಲಕ ಕುದ್ದುಪದವು ಸುರುಳಿಮೂಲೆ ನಿವಾಸಿ ಅಲಿ ಎಂಬಾತನ ವಿಚಾರಣೆ ವೇಳೆ ಪಡಿತರ ಅಕ್ಕಿಯ ಮಾಫಿಯಾ ದಂಧೆ ಬಯಲಾಗಿದೆ.ಆರೋಪಿಯನ್ನು ವಿಚಾರಣೆ ನಡೆಸಿ ಆ ಬಳಿಕ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಅಡ್ಯನಡ್ಕ ಸಮೀಪದ ಮರಕ್ಕಿಣಿ ನಿವಾಸಿ JSW

ರೇಶನ್ ಮಾಫಿಯಾ : ಗೋಣಿ ಚೀಲ ಬದಲಿಸಿ ಅಕ್ರಮ ಪಡಿತರ ಅಕ್ಕಿ ಸಾಗಾಟ Read More »

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಪುಣ್ಯಕ್ಷೇತ್ರಗಳಿಗೆ ಭೇಟಿ

ಮಂಗಳೂರು : ವಿಧಾನಸಭೆ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡದ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಕುಟುಂಬಸಮೇತರಾಗಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಅವರು, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ದೇವಾಲಯದಲ್ಲಿ ವಿಷೇಶ ಪೂಜೆ‌ ಸಲ್ಲಿಸಿದ ಬಳಿಕ ಧರ್ಮಸ್ಥಳದಿಂದ‌ ಕುಕ್ಕೆ‌ ಸುಬ್ರಹ್ಮಣ್ಯಕ್ಕೂ ಭೇಟಿ‌ ನೀಡಲಿದ್ದಾರೆ. ಇಂದು ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಗುರುವಾರ ಮುಂಜಾನೆ‌ ಕೊಲ್ಲೂರಿಗೂ ತೆರಳಲಿರುವ ಅವರು ನಂತರ ಕಟೀಲು ದೇಗುಲ ಮತ್ತು ಉಳ್ಳಾಲದ ಪುರಾಣ ಪ್ರಸಿದ್ದ ಸೋಮನಾಥ ದೇಗುಲಕ್ಕೆ

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಪುಣ್ಯಕ್ಷೇತ್ರಗಳಿಗೆ ಭೇಟಿ Read More »

error: Content is protected !!
Scroll to Top