ದೇಶ

ಟ್ರಂಪ್ ಸತ್ತ ಆರ್ಥಿಕತೆ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ ಭಾರತ

ನವದೆಹಲಿ: ಯಾವುದೇ ವ್ಯಾಪಾರ ಒಪ್ಪಂದದ ಸಂದರ್ಭದಲ್ಲಿ ದೇಶದ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್ ಹೇಳಿದ್ದಾರೆ. ಭಾರತದ ಸತ್ತ ಆರ್ಥಿಕತೆ ಎಂದ ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕಳೆದ ದಶಕದಲ್ಲಿ ಭಾರತ ದುರ್ಬಲ ಆರ್ಥಿಕತೆಯಿಂದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಬೆಳೆಯುತ್ತಿದೆ ಎಂದಿದ್ದಾರೆ. ವಿಶ್ವದ ಆರ್ಥಿಕತೆಗಳಲ್ಲಿ ಭಾರತ ಬೆಳಗುತ್ತಿದೆ ಎಂದು ಜಾಗತಿಕ ಸಂಸ್ಥೆಗಳು, ಆರ್ಥಿಕ ತಜ್ಞರು ಹೇಳುತ್ತಿದ್ದಾರೆ ಎಂದು ಗೋಯಲ್ ನುಡಿದಿದ್ದಾರೆ.

ಟ್ರಂಪ್ ಸತ್ತ ಆರ್ಥಿಕತೆ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ ಭಾರತ Read More »

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್‌ ದೋಷಮುಕ್ತಿ

17 ವರ್ಷದ ಬಳಿಕ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ ಮುಂಬೈ: ನಾಸಿಕ್‌ ಸಮೀಪ ಮಾಲೇಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.ಪ್ರಕರಣ ಸಂಭವಿಸಿದ 17 ವರ್ಷಗಳ ಬಳಿಕ ತೀರ್ಪು ನೀಡುವ ಸಂದರ್ಭದಲ್ಲಿ ಎನ್‍ಐಎ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಅಭಿಪ್ರಾಯಪಟ್ಟು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್ ಮೇ

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್‌ ದೋಷಮುಕ್ತಿ Read More »

ಕಾಫಿರ್​ಗಳ ಮೇಲೆ ದಾಳಿ, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ : ಭಯಾನಕವಾಗಿದೆ ಲೇಡಿ ಟೆರರಿಸ್ಟ್‌ ಚಟುವಟಿಕೆ

ಆನ್‌ಲೈನ್‌ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದ ಶಮಾ ಪರ್ವೀನ್‌ ಅನ್ಸಾರಿ ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಸೆರೆಯಾಗಿರುವ ಲೇಡಿ ಟೆರರಿಸ್ಟ್‌ ಶಮಾ ಪರ್ವೀನ್ ಅನ್ಸಾರಿ ಅಲ್‌ಖೈದಾ ಸಂಘಟನೆಯ ಸಿದ್ಧಾಂತ ಪ್ರಚಾರಕಳಾಗಿದ್ದಳು. ಕಾಫಿರರನ್ನು ಕೊಲ್ಲುವುದು, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ ಎಬ್ಬಿಸುವುದು, ಕೋಮು ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡುವುದು ಮುಂತಾದ ಕೆಲಸಗಳನ್ನು ಮಾಡಲು ಆಕೆಯನ್ನು ನೇಮಿಸಿಕೊಳ್ಳಲಾಗಿತ್ತು ಎಂಬ ಭಯಾನಕ ವಿಚಾರ ಹೊರಬಿದ್ದಿದೆ. ಅಲ್ ಖೈದಾ ಉಗ್ರ ಸಂಘಟನೆ ಪರ ಬೆಂಗಳೂರಿನಿಂದ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಮಾ ಪರ್ವೀನ್

ಕಾಫಿರ್​ಗಳ ಮೇಲೆ ದಾಳಿ, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ : ಭಯಾನಕವಾಗಿದೆ ಲೇಡಿ ಟೆರರಿಸ್ಟ್‌ ಚಟುವಟಿಕೆ Read More »

ಜಗತ್ತಿನ ಅತಿ ದುಬಾರಿ ಉಪಗ್ರಹ ನಿಸಾರ್‌ ಇಂದು ಉಡಾವಣೆ

ಭಾರತ-ಅಮೆರಿಕ ಸಹಭಾಗಿತ್ವದಲ್ಲಿ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಸೆಟಲೈಟ್‌ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಾಸಾ – ಇಸ್ರೊ ಸಿಂಥೆಟಿಕ್ ಅಪರ್ಚರ್ ರೇಡಾರ್ ನಿಸಾರ್ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5.40ಕ್ಕೆ ಇಸ್ರೋದ GSLV-F16 ರಾಕೆಟ್‌ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ. ಈ ಉಪಗ್ರಹವು ಶ್ರೀಹರಿಕೋಟದಿಂದ ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ

ಜಗತ್ತಿನ ಅತಿ ದುಬಾರಿ ಉಪಗ್ರಹ ನಿಸಾರ್‌ ಇಂದು ಉಡಾವಣೆ Read More »

ಇನ್ನಿಬ್ಬರು ಉಗ್ರರನ್ನು ಸಾಯಿಸಿದ ಭದ್ರತಾ ಪಡೆ

ಗಡಿ ನುಸುಳಲು ಯತ್ನಿಸಿದ ಪಾಕ್‌ ಉಗ್ರರು ಗುಂಡಿಗೆ ಬಲಿ ಶ್ರೀನಗರ: ಪಹಲ್ಗಾಮ್‌ ದಾಳಿಯ ಪಾತಕಿ ಹಾಶಿಮ್‌ ಮೂಸಾ ಸಹಿತ ಮೂವರು ಉಗ್ರರನ್ನು ಸಾಯಿಸಿದ ಬೆನ್ನಲ್ಲೇ ಮತ್ತಿಬ್ಬರು ಉಗ್ರರನ್ನು ಭದ್ರತಾ ಪಡೆ ಬೇಟೆಯಾಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಹತ್ಯೆಯಾದ ಇಬ್ಬರು ಉಗ್ರರು ಕಾಶ್ಮೀರದ ಪೂಂಛ್‌ ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ್ದರು. ಭಾರಿ ಮಳೆ ನಡುವೆಯೂ ಮೂವರು ಪಿಒಕೆ

ಇನ್ನಿಬ್ಬರು ಉಗ್ರರನ್ನು ಸಾಯಿಸಿದ ಭದ್ರತಾ ಪಡೆ Read More »

ಕೋಲಾರದ ಮಹಿಳೆಯಲ್ಲಿ ಜಗತ್ತಿನಲ್ಲಿ ಯಾರಲ್ಲೂ ಇಲ್ಲದ ವಿಶೇಷ ರಕ್ತದ ಗುಂಪು ಪತ್ತೆ

ಕ್ರಿಬ್‌ ರಕ್ತದ ಗುಂಪು ಹೊಂದಿರುವ ಜಗತ್ತಿನ ಮೊದಲ ವ್ಯಕ್ತಿ ಬೆಂಗಳೂರು : ಕೋಲಾರ ಜಿಲ್ಲೆಯ ಮಹಿಳೆಯೊಬ್ಬರು ಜಗತ್ತಿನಲ್ಲಿ ಈವರೆಗೆ ಯಾರಲ್ಲೂ ಪತ್ತೆಯಾಗದ ರಕ್ತದ ಗುಂಪು ಹೊಂದಿರುವುದು ಬೆಳಕಿಗೆ ಬಂದಿದೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಮಹಿಳೆಯ ರಕ್ತದ ಗುಂಪು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ವಿಶೇಷವೆಂದರೆ, ಲಭ್ಯವಿರುವ ಯಾವುದೇ O+

ಕೋಲಾರದ ಮಹಿಳೆಯಲ್ಲಿ ಜಗತ್ತಿನಲ್ಲಿ ಯಾರಲ್ಲೂ ಇಲ್ಲದ ವಿಶೇಷ ರಕ್ತದ ಗುಂಪು ಪತ್ತೆ Read More »

ಬಸ್‌ಗೆ ಲಾರಿ ಡಿಕ್ಕಿ : 18 ಕನ್ವರ್‌ ಯಾತ್ರಿಗಳ ದಾರುಣ ಸಾವು

ಕನ್ವರ್‌ ಯಾತ್ರಿಗಳ ಪಾಲಿಗೆ ಕರಾಳ ದಿನವಾದ ಮಂಗಳವಾರ ಜಾರ್ಖಂಡ್‌: ಕನ್ವರ್‌ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ಸಿಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ 18 ಮಂದಿ ಮೃತಪಟ್ಟಿರುವ ಭೀಕರ ಅಪಘಾತ ಇಂದು ಮುಂಜಾನೆ ಜಾರ್ಖಂಡ್‌ನ ದಿಯೋಘಡ್‌ ಎಂಬಲ್ಲಿ ಸಂಭವಿಸಿದೆ. ದಿಯೋಘಡ್‌ನ ಮೋಹನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಜಮುನಿಯ ಅರಣ್ಯ ಪ್ರದೇಶ ಭಾಗದಲ್ಲಿ ಕನ್ವರ್‌ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿಬಸ್‌ಗೆ ಮುಂಜಾನೆ 4.30ರ ವೇಳೆಗೆ ಗ್ಯಾಸ್‌ ಸಿಲಿಂಡರ್‌ಗಳಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು,

ಬಸ್‌ಗೆ ಲಾರಿ ಡಿಕ್ಕಿ : 18 ಕನ್ವರ್‌ ಯಾತ್ರಿಗಳ ದಾರುಣ ಸಾವು Read More »

ನಿಮಿಷಾ ಪ್ರಿಯಾ ಮರಣ ದಂಡನೆ ಶಾಶ್ವತವಾಗಿ ರದ್ದು

ಕೊನೆಗೂ ಸಾವಿನ ದವಡೆಯಿಂದ ಪಾರಾದ ಕೇರಳದ ನರ್ಸ್‌ ತಿರುವನಂತಪುರ: ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಕೊಲೆ ಪ್ರಕರಣವೊಂದರಲ್ಲಿ ವಿಧಿಸಿದ್ದ ಮರಣ ದಂಡನೆಯನ್ನು ಯೆಮೆನ್‌ ಸರ್ಕಾರ ಸಂಪೂರ್ಣವಾಗಿ ರದ್ದುಪಡಿಸಿದೆ. ಯೆಮೆನ್‌ ಅಧಿಕಾರಿಗಳು ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಎಂದು ಗ್ರ್ಯಾಂಡ್‌ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್‌ ಮುಸ್ಲಿಯಾರ್‌ ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಯೆಮೆನ್‌ನ ವ್ಯವಹಾರ ಪಾಲುದಾರನನ್ನು ನಿದ್ದೆಯ ಓವರ್‌ಡೋಸ್‌ ಇಂಜೆಕ್ಷನ್‌ ಚುಚ್ಚಿ ಕೊಲೆ ಮಾಡಿದ ಅಪರಾಧಕ್ಕೆ ನಿಮಿಷಾ ಪ್ರಿಯಾಗೆ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಪಾಲುದಾರನನ್ನು ಕೊಂದು ಶವವನ್ನು

ನಿಮಿಷಾ ಪ್ರಿಯಾ ಮರಣ ದಂಡನೆ ಶಾಶ್ವತವಾಗಿ ರದ್ದು Read More »

ಇಂದು ಮಧ್ಯಾಹ್ನ 12 ಗಂಟೆಗೆ ಸಂಸತ್ತಿನಲ್ಲಿ ಆಪರೇಷನ್‌ ಸಿಂದೂರ ಚರ್ಚೆ

ಸುದೀರ್ಘ 16 ತಾಸುಗಳ ಚರ್ಚೆಗೆ ಸರ್ಕಾರ-ವಿಪಕ್ಷ ರೆಡಿ ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಮತ್ತು ಆಪರೇಷನ್ ಸಿಂದೂರ ಕುರಿತು ಸೋಮವಾರ ಲೋಕಸಭೆಯಲ್ಲಿ ಮೂರು ದಿನಗಳ ಚರ್ಚೆ ಆರಂಭವಾಗಲಿದ್ದು, ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳು ಪರಸ್ಪರ ವಾಗ್ದಾಳಿಗೆ ಸಿದ್ಧತೆ ಮಾಡಿಕೊಂಡಿವೆ. ಕಾಂಗ್ರೆಸ್ ನಿನ್ನೆ ತನ್ನ ಸಂಸದರಿಗೆ ಲೋಕಸಭೆಯಲ್ಲಿ ಇಂದಿನಿಂದ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಚರ್ಚೆ ಶುರು ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಪರೇಷನ್‌ ಸಿಂದೂರ ಕುರಿತು ಲೋಕಸಭೆಯಲ್ಲಿ

ಇಂದು ಮಧ್ಯಾಹ್ನ 12 ಗಂಟೆಗೆ ಸಂಸತ್ತಿನಲ್ಲಿ ಆಪರೇಷನ್‌ ಸಿಂದೂರ ಚರ್ಚೆ Read More »

ದೇವಾಲಯದಲ್ಲಿ ಕಾಲ್ತುಳಿತ: ಇಬ್ಬರು ಭಕ್ತರ ಸಾವು, 29 ಮಂದಿಗೆ ಗಾಯ

ವಿದ್ಯುತ್‌ ತಂತಿ ಕಡಿದು ಚಪ್ಪರದ ಶೀಟಿನ ಮೇಲೆ ಬಿದ್ದಾಗ ನೂಕುನುಗ್ಗಲು ಲಖನೌ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ದೇವಾಲಯವೊಂದರಲ್ಲಿ ಇಂದು ನಸುಕಿನ ಹೊತ್ತು ಕಾಲ್ತುಳಿತ ಸಂಭವಿಸಿ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. ಪವಿತ್ರ ಶ್ರಾವಣ ಮಾಸದ ಹಿನ್ನೆಲೆ ಸೋಮವಾರ ಬಾರಾಬಂಕಿಯಲ್ಲಿರುವ ಪ್ರಾಚೀನ ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಕೆಲ ಕೋತಿಗಳು ಓವರ್‌ಹೆಡ್ ವಿದ್ಯುತ್ ತಂತಿಗಳ ಮೇಲೆ ಹಾರಿವೆ. ಇದರಿಂದ ವಿದ್ಯುತ್‌ ತಂತಿ ತುಂಡಾಗಿ ತಗಡಿನ ಶೆಡ್‌ ಮೇಲೆ

ದೇವಾಲಯದಲ್ಲಿ ಕಾಲ್ತುಳಿತ: ಇಬ್ಬರು ಭಕ್ತರ ಸಾವು, 29 ಮಂದಿಗೆ ಗಾಯ Read More »

error: Content is protected !!
Scroll to Top