ದೇಶ

4ನೇ ಟೆಸ್ಟ್‌ : ಸೋಲಿನ ದವಡೆಯಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ

ಇಂಗ್ಲೆಂಡ್‌ ಗೆಲುವಿನಾಸೆಗೆ ತಣ್ಣೀರೆರಚಿದ ಗಿಲ್‌, ಜಡೇಜಾ, ಸುಂದರ್‌ ಶತಕ ಮ್ಯಾಂಚೆಸ್ಟರ್‌: ಇಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಪಂದ್ಯವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಡ್ರಾ ಮಾಡಿಕೊಳ್ಳಲು ಭಾರತ ಯಶಸ್ವಿಯಾಗಿದೆ. ನಾಯಕ ಶುಭಮನ್‌ ಗಿಲ್‌, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ಅವರ ಅಜೇಯ ಶತಕದ ನೆರವಿನಿಂದ 4ನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 311 ರನ್‌ ಮುನ್ನಡೆ ಪಡೆದ ಕಾರಣ ಭಾರತದ ಬ್ಯಾಟರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಆಟವಾಡಿ […]

4ನೇ ಟೆಸ್ಟ್‌ : ಸೋಲಿನ ದವಡೆಯಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ Read More »

ಆಗಸ್ಟ್‌ 1ರಿಂದ ಯುಪಿಐ ಪಾವತಿ ವ್ಯವಸ್ಥೆಗೆ ಹೊಸ ನಿಯಮ

ಎಲ್ಲ ಆನ್‌ಲೈನ್‌ ಪೇಮೆಂಟ್‌ ವ್ಯವಸ್ಥೆಗೆ ಅನ್ವಯ ನವದೆಹಲಿ : ಜಗತ್ತಿನ ನಂಬರ್‌ 1 ಪಾವತಿ ವ್ಯವಸ್ಥೆಯಾಗಿರುವ ಯುಪಿಐಯಲ್ಲಿ ಆಗಸ್ಟ್‌ 1, 2025ರಿಂದ ಹಲವು ಬದಲಾವಣೆಗಳಾಗಲಿವೆ. ಯುಪಿಐಯಲ್ಲಿ ಹೊಸ ನಿಯಮಗಳು ಜಾರಿ ಆಗಲಿವೆ. ಯುಪಿಐ ಪಾವತಿ ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಸುಧಾರಣೆ ದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈ ಬದಲಾವಣೆಗಳನ್ನು ಮಾಡುತ್ತಿದೆ. ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಎಲ್ಲ ರೀತಿಯ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗೆ ಇದು ಅನ್ವಯವಾಗಲಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್

ಆಗಸ್ಟ್‌ 1ರಿಂದ ಯುಪಿಐ ಪಾವತಿ ವ್ಯವಸ್ಥೆಗೆ ಹೊಸ ನಿಯಮ Read More »

ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ನಂಟಿಲ್ಲ: ಅಧ್ಯಯನ

ನವದೆಹಲಿ: ಕೊರೋನಾ ಅವಧಿಯಲ್ಲಿ ಪ್ರಪಂಚದ 25 ಲಕ್ಷಕ್ಕೂ ಅಧಿಕ ಜನರ ಜೀವವನ್ನು ಕೊರೋನಾ ‌ಲಸಿಕೆ ಕಾಪಾಡಿದೆ ಎಂದು ವರದಿಯೊಂದು ತಿಳಿಸಿದೆ. ಇಟಲಿ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸಿದ ಈ ಅಧ್ಯಯನದಲ್ಲಿ ಪ್ರತಿ 5,400 ಡೋಸ್‌ಗಳಿಗೆ ಒಂದು ಸಾವನ್ನು ತಪ್ಪಿಸಲಾಗಿದೆ. ಕೊರೋನಾ ಲಸಿಕೆಗಳ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಹಿರಿಯರ ಸಾವಿನ ಪ್ರಮಾಣವನ್ನು ತಪ್ಪಿಸಲಾಗಿದೆ ಎಂದು ಈ ವರದಿ ಹೇಳಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜರ್ನಲ್ ಒಂದರಲ್ಲಿ ಈ ವರದಿ ಪ್ರಕಟವಾಗಿದೆ. ಇನ್ನು ಕೊರೋನಾ ಲಸಿಕೆಯ ಕಾರಣಕ್ಕೆ ಹೃದಯಾಘಾತವಾಗುತ್ತಿಲ್ಲ

ಹೃದಯಾಘಾತಕ್ಕೂ ಕೊರೋನಾ ಲಸಿಕೆಗೂ ನಂಟಿಲ್ಲ: ಅಧ್ಯಯನ Read More »

ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಆರೋಪ ಮಾಡಿದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಚುನಾವಣಾ ಆಯೋಗ

ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮಾಡಿದ್ದ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಚುನಾವಣಾ ಆಯೋಗದ ಫ್ಯಾಕ್ಟ್ ಚೆಕ್ಕಿಂಗ್ ವಿಭಾಗ, ರಾಹುಲ್ ಗಾಂಧಿ ಆರೋಪ ತಳ್ಳಿ ಹಾಕಿರುವ ಚು. ಆಯೋಗ, ಅವರ ಹೇಳಿಕೆಗಳು ನಿರ್ಧಾರ ಮತ್ತು ಜನರನ್ನು ದಾರಿ ತಪ್ಪಿಸುವಂತಹವು ಎಂದು ಹೇಳಿದೆ. ಜನ ಪ್ರತಿನಿಧಿಗಳ ಕಾಯ್ದೆಯಡಿ ಈ ಬಗ್ಗೆ ದೂರು ನೀಡದ ರಾಹುಲ್ ಗಾಂಧಿ ಆಧಾರವಿಲ್ಲದೆ ಈ ರೀತಿ ಆರೋಪಗಳನ್ನು ಮಾಡುತ್ತಿರುವುದು

ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಆರೋಪ ಮಾಡಿದ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಚುನಾವಣಾ ಆಯೋಗ Read More »

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ

ಶಾಲೆ, ಕಾಲೇಜು, ವಿವಿ, ಖಾಸಗಿ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ಅನ್ವಯ ನವದೆಹಲಿ: ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡದ ಕಾರಣಕ್ಕೆ ಸಾವಿಗಿ ಶರಣಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಇದನ್ನು ತಡೆಯುವ ನಿಟ್ಟಿನಲ್ಲಿ ಕಾಲೇಜುಗಳಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಸುರಕ್ಷತೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಹೊರಡಿಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಆತಂಕಕಾರಿ ಏರಿಕೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ವಿಕ್ರಮ್

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ Read More »

ಮುಸ್ಲಿಂ ಮುಖಂಡರ ಜೊತೆ RSS ಮುಖ್ಯಸ್ಥ ಮೋಹನ್ ಭಾಗವತ್ ಸಭೆ

ನವದೆಹಲಿ: ಕೋಮು ಸಾಮರಸ್ಯ ಸ್ಥಾಪನೆಯ ಉದ್ದೇಶದಿಂದ ಮುಸ್ಲಿಂ ಮುಖಂಡರುಗಳ ಜೊತೆಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಭೆ ನಡೆಸಿದ್ದಾರೆ. ದೀರ್ಘಕಾಲದಿಂದ ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ಅಪನಂಬಿಕೆ ಮನೆ ಮಾಡಿದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಸ್ಲಿಂ ಧರ್ಮ ಗುರುಗಳ ಜೊತೆಗೆ ಸಭೆ ನಡೆಸಲಾಗಿದೆ. ಸುಮಾರು ಅರವತ್ತಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಮೂರು ಗಂಟೆಗಳ ಕಾಲ ಈ ಸಭೆ ನಡೆದಿದೆ. ಇದನ್ನು ಸಕಾರಾತ್ಮಕ ಸಭೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಕರೆದಿದ್ದು, ದೇಶದ

ಮುಸ್ಲಿಂ ಮುಖಂಡರ ಜೊತೆ RSS ಮುಖ್ಯಸ್ಥ ಮೋಹನ್ ಭಾಗವತ್ ಸಭೆ Read More »

ಇಂದಿರಾ ಗಾಂಧಿ ದಾಖಲೆ ಮುರಿದ ಪ್ರಧಾನಿ ಮೋದಿ: ಯಾವ ವಿಷಯದಲ್ಲಿ ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಅವರು ಪ್ರಧಾನಿ ಸ್ಥಾನವನ್ನು ಅಲಂಕರಿಸಿ 4078 ದಿನಗಳನ್ನು ಪೂರ್ಣಗೊಳಿಸಿ ದೀರ್ಘಾವಧಿ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿ ದಾಖಲೆ ಬರೆದಿದ್ದಾರೆ. ಇಂದಿರಾ ಗಾಂಧಿ ಅವರು 4077 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಈ ವರೆಗೆ ಜವಹರಲಾಲ್ ನೆಹರು (16 ವರ್ಷ 286 ದಿನಗಳು) ಅವರ ನಂತರ ಎರಡನೇ ಸ್ಥಾನದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಆದರೆ ಈ ಹಿರಿಮೆ ಈಗ ಪ್ರಧಾನಿ ಮೋದಿ ಅವರಿಗೆ

ಇಂದಿರಾ ಗಾಂಧಿ ದಾಖಲೆ ಮುರಿದ ಪ್ರಧಾನಿ ಮೋದಿ: ಯಾವ ವಿಷಯದಲ್ಲಿ ಗೊತ್ತಾ? Read More »

ಶಾಲೆಯ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳು ಸಾವು

ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿರುವಾಗಲೇ ಕುಸಿದು ಬಿದ್ದ ಛಾವಣಿ ಜೈಪುರ: ಪ್ರಾಥಮಿಕ ಶಾಲಾ ಕಟ್ಟದ ಮೇಲ್ಛಾವಣಿ ಕುಸಿದು ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದ ಝಲಾವರ್‌ನಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಝಲಾವರ್‌ನಲ್ಲಿರುವ ಪಿಪ್ಲೋಡಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 60ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯರು ಸಹ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ. ಮೃತಪಟ್ಟ ಮಕ್ಕಳ ಶವಗಳನ್ನ ಹೊರತೆಗೆಯಲಾಗಿದೆ. ಗಾಯಗೊಂಡವರನ್ನ

ಶಾಲೆಯ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳು ಸಾವು Read More »

ರಾಷ್ಟ್ರಪತಿ ಮುರ್ಮು ಅವರಿಂದ ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ

ನವದೆಹಲಿ: ರಾಣಿ ಚೆನ್ನಭೈರಾದೇವಿ ‌ಸ್ಮರಣಾರ್ಥ ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಮುರ್ಮು, ರಾಣಿ ಚೆನ್ನಭೈರಾದೇವಿ ಅವರ ಧೈರ್ಯ, ಸ್ಥೈರ್ಯ, ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಇದೊಂದು ಅವಿಸ್ಮರಣೀಯ ಸಂದರ್ಭ ಎಂದು ತಿಳಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿದ್ದರು.

ರಾಷ್ಟ್ರಪತಿ ಮುರ್ಮು ಅವರಿಂದ ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ Read More »

ಅಡಿಕೆ ಹಾಳೆ ತಟ್ಟೆಯಲ್ಲೂ ಇದೆಯಂತೆ ಕ್ಯಾನ್ಸರ್‌ಕಾರಕ ಅಂಶ!

ಅಮೆರಿಕ ವರದಿಯಿಂದ ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟ ಸಾವಿರಾರು ಜನರಿಗೆ ಉದ್ಯೋಗ, ಆರ್ಥಿಕ ಬಲ ಕೊಟ್ಟಿರುವ ಉದ್ಯಮಕ್ಕೆ ಹೊಡೆತ ಶಿವಮೊಗ್ಗ : ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಅಡಿಕೆ ಹಾಳೆಯ ತಟ್ಟೆಗಳಿಗೂ ಈಗ ಕಂಟಕ ಎದುರಾಗಿದೆ. ಅಮೆರಿಕದ ಸಂಶೋಧನಾ ವರದಿಯೊಂದು ಹಾಳೆ ತಟ್ಟೆಯಲ್ಲೂ ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಇದೆ ಎಂದು ಹೇಳಿರುವುದು ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟು ತಂದೊಡ್ಡಿದೆ. ಅಡಿಕೆ ಹಾಳೆಯ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಕ್ಯಾನ್ಸರ್‌ಗೆ ಕಾರಣವಾಗುವಂತಹ ಅಂಶ ಪತ್ತೆಯಾಗಿದೆ ಎಂದಿದೆ ಅಮೆರಿಕದ ಸಂಶೋಧನಾ ವರದಿ. ಈ

ಅಡಿಕೆ ಹಾಳೆ ತಟ್ಟೆಯಲ್ಲೂ ಇದೆಯಂತೆ ಕ್ಯಾನ್ಸರ್‌ಕಾರಕ ಅಂಶ! Read More »

error: Content is protected !!
Scroll to Top