ದೇಶ

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ

ನವದೆಹಲಿ: ಸಂಸತ್ ಭವನದಲ್ಲಿ ಆರೋಗ್ಯಕರ ಆಹಾರ ವಿತರಿಸುವ ನಿಟ್ಟಿನಲ್ಲಿ ರಾಗಿ ಇಡ್ಲಿ, ಗ್ರಿಲ್ ಫಿಶ್ ಜೊತೆಗೆ ತರಕಾರಿ, ಜೋಳದ ಉಪ್ಪಿಟ್ಟು ಮೊದಲಾದ ಆಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸಂಸದರು ಮತ್ತು ಅಧಿಕಾರಿಗಳಿಗೆ ಆಹಾರ ನೀಡಲಾಗುವ ಸಂಸತ್ತಿನ ಕ್ಯಾಂಟೀನಿನ ಊಟದ ಮೆನು ಪರಿಷ್ಕರಿಸಲಾಗಿದ್ದು, ರುಚಿಯಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ರಾಜಿಯಾಗದಂತೆ ಎಚ್ಚರ ವಹಿಸಲಾಗಿದೆ. ಪರಿಷ್ಕೃತ ಮೆನು‌ವಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಊಟ, ನಾರುಯುಕ್ತ ‌ಸಲಾಡ್, ಪ್ರೊಟೀನ್ ಉಳ್ಳ ಸೂಪ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಆಹಾರ ಒಳಗೊಂಡ ಕ್ಯಾಲರಿ […]

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ Read More »

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ

ಬ್ಲಡ್ ಮನಿ, ಕ್ಷಮಾದಾನ ‌ನಿರಾಕರಿಸಿದ ತಲಾಲ್ ಮೆಹದಿ ಕುಟುಂಬ ಸನಾ: ಯೆಮನ್ ನಾಗರಿಕ ತಲಾಲ್ ಮೆಹದಿ ಹತ್ಯೆಗೆ ಸಂಬಂಧಿಸಿದ ಹಾಗೆ ಆರೋಪಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತವಾಗಿದೆ. ಮೃತ ತಲಾಲ್ ಕುಟುಂಬಸ್ಥರು ಬ್ಲಡ್ ಮನಿ ನಿರಾಕರಿಸಿದ್ದು, ಆರೋಪಿ ನಿಮಿಷಾಗೆ ಶರಿಯಾ ಕಾನೂನಿನ ಅನ್ವಯ ಕಿಸಾಸ್ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ. ತಲಾಲ್ ಮೆಹದಿಯನ್ನು ಹತ್ಯೆ ಮಾಡಿದ ನಿಮಿಷಾಳಿಂದ ಕ್ಷಮೆ ಅಥವಾ ಪರಿಹಾರವನ್ನು ಸ್ವೀಕರಿಸುವ ಮಾತೇ ಇಲ್ಲ ಎಂದು ಮೃತನ ಕುಟುಂಬಸ್ಥರು ತೀರ್ಮಾನ ತಿಳಿಸಿದ್ದಾರೆ.

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ Read More »

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ

ಮತ್ಸ್ಯ ಸಂಪತ್ತು ಉಳಿಸುವ ಸಲುವಾಗಿ ಹೊಸ ನಿಯಮ ಮಂಗಳೂರು: ಕಡಲಲ್ಲಿ ಮತ್ಸ್ಯ ಸಂಪತ್ತು ಬರಿದಾಗುತ್ತಿದೆ ಎನ್ನುವುದು ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿರುವ ಆತಂಕ. ಹೀಗಾಗಿ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿಯದಿದ್ದರೆ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿದೆ ಎಂಬುದು ಲೆಕ್ಕಚಾರ. ಈ ಕಾರಣಕ್ಕೆ ಮಳೆಗಾಲದಲ್ಲಿ ಎರಡು ತಿಂಗಳು ಮೀನಿಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ನಿಷೇಧ ಜಾರಿಗೆ ಬರುವುದರಿಂದ ನಿಷೇಧದ ನೈಜ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಇಡೀ

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ Read More »

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ

ಕಾಂಬೋಡಿಯಾದ ಸೈಬರ್‌ ವಂಚಕರ ಹೊಸ ತಂತ್ರ ಬೆಂಗಳೂರು: ಮುಂಬಯಿಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್‌ ಅಧಿಕಾರಿ ಕನ್ನಡಿಗ ದಯಾ ನಾಯಕ್ಹೆಸರು ಹೇಳಿ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಭೂ ವಿಜ್ಞಾನಿಗೆ ಸೈಬರ್​ ವಂಚಕರು ಲಕ್ಷಾಂತರ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಹಾಗೂ ಇವರ ಪತ್ನಿ ಸುಜಾತ ಅವರಿಗೆ ದಯಾ ನಾಯಕ್ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿದ್ದಾರೆ. ಮುಂಬೈಯ ಕೆನರಾ ಬ್ಯಾಂಕ್​ನಲ್ಲಿ

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ Read More »

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍

ಮುಂಬಯಿ: ವಿಶ್ವದ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ,ಎಲೆಕ್ಟಿಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮುಂಬಯಿಯ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿ ತನ್ನ ಮೊದಲ ಎಕ್ಷೀರಿಯನ್ಸ್ ಸೆಂಟರ್ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ವಿಶ್ವದ ಅತ್ಯಂತ ಸ್ಮಾರ್ಟ್ ಕಾರು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಮುಂಬಯಿಗೆ ಬರುತ್ತಿರುವುದು ಸಂತೋಷದ ವಿಷಯ. ಟೆಸ್ಲಾ ತನ್ನ ಎಕ್ಸಿರಿಯನ್ಸ್ ಸೆಂಟರ್ ಮೂಲಕ ಮಹಾರಾಷ್ಟ್ರದಿಂದ ಭಾರತಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದೆ ಎಂದು ಫಡ್ನವೀಸ್ ಘೋಷಿಸಿದರು. ಮುಂಬಯಿಯಲ್ಲಿ ಈಗ ಟೆಸ್ಲಾ ಕಾರುಗಳ

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍ Read More »

ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವೇ ತಯಾರಿಸುವಂತಾಗಬೇಕು: ಜನರಲ್ ಅನಿಲ್ ಚೌಹಾಣ್

ನವದೆಹಲಿ: ನಾವು ಇಂದು ಗೆಲುವು ಪಡೆಯಬೇಕಾದರೆ ‌ನಿನ್ನೆಯ ಶಸ್ತ್ರಾಸ್ತ್ರಗಳಿಂದ ಸಾಧ್ಯವಿಲ್ಲ. ಬದಲಾಗಿ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ನುಡಿದಿದ್ದಾರೆ. ಸ್ವದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ಸಾಧನಗಳು (UAV) ಮತ್ತು ಅವುಗಳನ್ನು ಎದುರಿಸುವ C-UAVಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಆಪರೇಷನ್ ಸಿಂಧೂರ್ ಕುರಿತಾಗಿಯೂ ಮಾತನಾಡಿದ ಅವರು, ಪಾಕಿಸ್ತಾನದ ಸಿಡಿತಲೆ ಹೊತ್ತ ಡ್ರೋನ್‌ಗಳ ದಾಳಿಯಲ್ಲಿ ಭಾರತೀಯ ಸೇನೆ ಅಥವಾ ನಾಗರಿಕರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಭವಿಷ್ಯದಲ್ಲಿ

ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವೇ ತಯಾರಿಸುವಂತಾಗಬೇಕು: ಜನರಲ್ ಅನಿಲ್ ಚೌಹಾಣ್ Read More »

ಭೂಮಿಗೆ ಮರಳಿದ ಶುಭಾಂಶು ಶುಕ್ಲಾ : ಪ್ರಧಾನಿ ಮೋದಿ ಹರ್ಷ

ನವದೆಹಲಿ: ಬಾಹ್ಯಾಶಕ್ಕೆ ಕಳೆದ ಜು. 25 ರಂದು ತೆರಳಿದ್ದ ‌ಭಾರತದ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ನಾಲ್ವರ ‌ತಂಡ ಇಂದು ಅಪರಾಹ್ನ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್‌ಡೌನ್ ಆಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಐತಿಹಾಸಿಕ ಬಾಹ್ಯಾಕಾಶ ಯಾನದಿಂದ ಭೂಮಿಗೆ ಮರಳುತ್ತಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಸ್ವಾಗತಿಸಲು ನಾನು ಇಡೀ ದೇಶದೊಂದಿಗೆ ಸೇರುತ್ತೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ

ಭೂಮಿಗೆ ಮರಳಿದ ಶುಭಾಂಶು ಶುಕ್ಲಾ : ಪ್ರಧಾನಿ ಮೋದಿ ಹರ್ಷ Read More »

ಅಪರಿಚಿತ ವಾಹನ ಢಿಕ್ಕಿ ಹೊಡೆದು ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ನಿಧನ

ಜಲಂಧರ್: ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ಜಲಂಧರ್‌ನ ತಮ್ಮ ಮನೆಯ ಸಮೀಪ ಸೋಮವಾರ ಸಂಜೆ ವಾಕಿಂಗ್ ಮಾಡುತ್ತಿದ್ದ ವೇಳೆ ಅಪರಿಚಿತ ಕಾರೊಂದು ಫೌಜಾ ಸಿಂಗ್ ಅವರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದಿಂತ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿದೆ. ಸಿಂಗ್ ಅವರು 2000 ನೇ ಇಸವಿಯಲ್ಲಿ ಮ್ಯಾರಥಾನ್ ಪಯಣವನ್ನು ಆರಂಭಿಸಿದ್ದರು. ಅಂತಿಮವಾಗಿ ಎಂಟು ರೇಸ್‌ಗಳಲ್ಲಿ ಅವರು ಭಾಗವಹಿಸಿದ್ದರು. ಟೊರೆಂಟೋ ಮ್ಯಾರಥಾನ್‌ನಲ್ಲಿ 2011 ರಲ್ಲಿ ಭಾಗವಹಿಸಿದ

ಅಪರಿಚಿತ ವಾಹನ ಢಿಕ್ಕಿ ಹೊಡೆದು ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ನಿಧನ Read More »

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ : ನಿತಿನ್ ಗಡ್ಕರಿ

ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆಯ ಆಹ್ವಾನದ ವಿಚಾರದಲ್ಲಿ ‌ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎನ್ನುವ ಸಿಎಂ ‌ಸಿದ್ದರಾಮಯ್ಯ ಅವರ ಆರೋಪಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಡ್ಕರಿ, ಕಾರ್ಯಕ್ರಮದಲ್ಲಿ ಯಾವ ಶಿಷ್ಟಾಚಾರವೂ ಉಲ್ಲಂಘನೆ ಆಗಿಲ್ಲ. ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದೇ ಅಧಿಕೃತ ಆಹ್ವಾನ ನೀಡಲಾಗಿದೆ. ಜುಲೈ 12 ರಂದು ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆಯಲಾಗಿದ್ದು, ಯಾವುದೇ ಪೂರ್ವಯೋಜಿತ ಕಾರ್ಯಕ್ರಮ ಇದ್ದರೂ ಸೇತುವೆ ಉದ್ಘಾಟನೆಗೆ ‌ವರ್ಚುವಲ್ ರೂಪದಲ್ಲಾದರೂ ಭಾಗಿಯಾಗಿ ಎಂದು

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ : ನಿತಿನ್ ಗಡ್ಕರಿ Read More »

ಮದ್ಯದ ದರದಲ್ಲಿ ಭಾರಿ ಇಳಿಕೆ!

ಬಾಟಲಿಗೆ 10ರಿಂದ 100 ರೂ. ತನಕ ಕಡಿತ ಮಾಡಿದ ಸರ್ಕಾರ ಅಮರಾವತಿ: ಸರ್ಕಾರ ಮದ್ಯದ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಬಾಟಲಿಗೆ 10ರಿಂದ 100 ರೂ. ತನಕ ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಸುದ್ದಿ ನೋಡಿ ಕರ್ನಾಟಕದ ಮದ್ಯಪ್ರಿಯರು ಖುಷಿಯಿಂದ ಕುಪ್ಪಳಿಸುವ ಅಗತ್ಯವಿಲ್ಲ. ದರ ಇಳಿಕೆಯಾಗಿರುವುದು ಪಕ್ಕದ ಆಂಧ್ರ ಪ್ರದೇಶದಲ್ಲಿ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳು ಕಂದಾಯ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತಿದ್ದರೆ ಆಂಧ್ರದ ಚಂದ್ರಬಾಬು ನಾಯ್ಡು ಸರ್ಕಾರ ಮಾತ್ರ ಮದ್ಯದ ದರ

ಮದ್ಯದ ದರದಲ್ಲಿ ಭಾರಿ ಇಳಿಕೆ! Read More »

error: Content is protected !!
Scroll to Top