ರಜೌರಿಯಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ | ಮತ್ತೋರ್ವ ಯೋಧ ಬಲಿ | ಹುತಾತ್ಮ ಸೈನಿಕರ ಸಂಖ್ಯೆ 4ಕ್ಕೆ ಏರಿಕೆ
ಪೂಂಚ್ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೋರ್ವ ಯೋಧ ಹುತಾತ್ಮರಾಗಿದ್ದು, ಇದರೊಂದಿಗೆ ಹುತಾತ್ಮ ಯೋಧರ ಸಂಖ್ಯೆ ನಾಲ್ಕಕ್ಕೆ ಏರಿದೆ. ಗುರುವಾರ ಮಧ್ಯಾಹ್ನ 3.45ಕ್ಕೆ ರಜೌರಿಯ ಪೂಂಚ್ ನವ್ವಿ ಥಾನಮಂಡಿಯಲ್ಲಿ ಹೋಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದರು. ಭಯೋತ್ಪಾದಕರ ಏಕಾಏಕಿ ದಾಳಿಗೆ ಯೋಧರು ತಕ್ಷಣವೇ ಪ್ರತ್ಯುತ್ತರ ನೀಡಿದರು. ಕೂಡಲೇ ಸ್ಥಳದಲ್ಲಿ ಎನ್‌ಕೌಂಟರ್ ಆರಂಭವಾಗಿತ್ತು. ಈ ವೇಳೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಪ್ರಾಣ ಕಳೆದುಕೊಂಡು, […]









