“ದೆಹಲಿಗೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ”: ಮನೋರಂಜನ್ ತಂದೆ | ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬ ಮನೋರಂಜನ್
ತಾನು ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದ. ಏನು ಕೆಲಸ ಮಾಡುತ್ತಿದ್ದೇನೆ, ಯಾಕಾಗಿ ಹೋಗುತ್ತಿದ್ದೇನೆ ಎಂದೆಲ್ಲಾ ಹೇಳುತ್ತಿರಲಿಲ್ಲ ಎಂದು ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳಲ್ಲೊಬ್ಬನಾದ ಮೈಸೂರು ಮೂಲದ ಮನೋರಂಜನ್ ತಂದೆ ದೇವರಾಜೇಗೌಡ ತಿಳಿಸಿದ್ದಾರೆ. ರೈತರಾಗಿರುವ ದೇವರಾಜೇಗೌಡ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ, ಮನೋರಂಜನ್ ಮನೆಗೆ, ಸಮಾಜಕ್ಕೆ ಮನೋರಂಜನ್ ಒಳ್ಳೆಯ ಹುಡುಗ. ಕೆಟ್ಟ ಹುಡುಗನಾಗಿದ್ರೆ ಮನೆ ಬಾಗಿಲಿಗೆ ಸೇರಿಸುತ್ತಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತೇನೆ ಎಂದೇ ಹೇಳುತ್ತಿದ್ದ. ಯಾಕೆ ಹೀಗೆ ಮಾಡಿದ ಎಂದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತನಗೆ […]









