ದೇಶ

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಸಂಭವಿಸಿದ ಭೀಕರ ದುರಂತ ಲಖನೌ : ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 10 ನವಜಾತ ಶಿಶುಗಳು ಸಜೀವ ದಹನವಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ನಂತರ ಬೆಂಕಿಯ ಕೆನ್ನಾಲಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಹರಡಿದೆ. ಬೆಂಕಿ ಹೊತ್ತಿಕೊಂಡಾಗ ಕಂಗೆಟ್ಟ ಮಕ್ಕಳ ಪೋಷಕರು ಜೋರಾಗಿ ಕಿರುಚಾಡತೊಡಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಆಘಾತಗೊಂಡಿದ್ದು, […]

ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 10 ನವಜಾತ ಶಿಶುಗಳು ಜೀವಂತ ದಹನ Read More »

ಸಿದ್ದಿಕಿ ಸಾವನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆ ಎದುರೇ ಕಾದು ಕುಳಿತಿದ್ದ ಹಂತಕ

ಕೊಲೆ ಮಾಡಿ ಬಟ್ಟೆ ಬದಲಾಯಿಸಿ ಮರಳಿ ಅಲ್ಲಿಗೆ ಬಂದಿದ್ದ ಶೂಟರ್‌ ಮುಂಬಯಿ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್‌ ಗೌತಮ್‌ ಎಂಬಾತನನ್ನು ಮುಂಬಯಿ ಪೊಲೀಸರು ಇತ್ತೀಚೆಗೆ ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಈತನ ವಿಚಾರಣೆಯಿಂದ ಕೊಲೆಯ ಸಂಚಿನ ರಹಸ್ಯಗಳು ಬಯಲಾಗುತ್ತಿವೆ. ಸಿದ್ದಿಕಿಗೆ ಗುಂಡಿಕ್ಕಿದ ಬಳಿಕ ಈತ ಅವರು ಸತ್ತಿರುವುದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಆಸ್ಪತ್ರೆ ಎದುರು ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾದು ಕುಳಿತಿದ್ದನಂತೆ.ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಮಾಡಿದ ಈ ಹತ್ಯೆ

ಸಿದ್ದಿಕಿ ಸಾವನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆ ಎದುರೇ ಕಾದು ಕುಳಿತಿದ್ದ ಹಂತಕ Read More »

ಟಿಪ್ಪುವಿನ ಖಡ್ಗ 3.4 ಕೋ.ರೂ.ಗೆ ಏಲಂ

ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದ ಖಡ್ಗ ಹೊಸದಿಲ್ಲಿ: ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಈ ಖಡ್ಗ ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು.ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಟಿಪ್ಪು 1799ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್‌ ಸೇನೆಯ ಕ್ಯಾಪ್ಟನ್‌ ಜೇಮ್ಸ್‌ ಆಂಡ್ರ್ಯೂ ಡಿಕ್‌ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದ.ಈ ಖಡ್ಗದ ಮೂಲವನ್ನು ಸೆರಿಂಗಪಟ್ಟಂ ಕದನದಲ್ಲಿ ಗುರುತಿಸಬಹುದು. ‘ಸ್ಟೀಲ್ ತಲ್ವಾರ್’ ಮೈಸೂರಿನ ವಿಶಿಷ್ಟ ಲಕ್ಷಣವಾದ

ಟಿಪ್ಪುವಿನ ಖಡ್ಗ 3.4 ಕೋ.ರೂ.ಗೆ ಏಲಂ Read More »

ನಾಳೆ ತೆರೆಯಲಿದೆ ಶಬರಿಮಲೆ ಸನ್ನಿಧಾನದ ಬಾಗಿಲು | ಶನಿವಾರದಿಂದ ಮಂಡಲ ಯಾತ್ರೆ ಶುರು

ಶಬರಿಮಲೆ : ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ನ.15ರಂದು ತೆರೆಯಲಾಗುವುದು. ನ.16ರಿಂದ ಭಕ್ತರಿಗೆ ಅಯ್ಯಪ್ಪನ ದರ್ಶನ ಲಭ್ಯವಾಗಲಿದೆ. ಈ ಋತುವಿನ ಯಾತ್ರೆಗಾಗಿ ಅನೇಕ ಬದಲಾವಣೆಗಳೊಂದಿಗೆ ಕೇರಳ ಸರಕಾರ ಸರ್ವ ಸಿದ್ಧತೆಗಳನ್ನು ನಡೆಸಿದೆ.ನಾಳೆ ಸಂಜೆ 4 ಗಂಟೆಗೆ ಮುಖ್ಯಮೇಲ್‌ಶಾಂತಿ ಪಿ.ಎನ್‌.ಮಹೇಶ್‌ ನಂಬೂದಿರಿಯವರು ಶಬರಿಮಲೆ ಗರ್ಭಗೃಹದ ಬಾಗಿಲು ತೆರೆದು ಪೂಜೆ ನೆರವೇರಿಸುವುದರೊಂದಿಗೆ ಈ ವರ್ಷದ ಯಾತ್ರೆ ವಿದ್ಯುಕ್ತವಾಗಿ ಆರಂಭವಾಗಲಿದ್ದು ನಂತರ 62 ದಿನ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಲಿದ್ದಾರೆ.ಶನಿವಾರ ನಸುಕಿನ

ನಾಳೆ ತೆರೆಯಲಿದೆ ಶಬರಿಮಲೆ ಸನ್ನಿಧಾನದ ಬಾಗಿಲು | ಶನಿವಾರದಿಂದ ಮಂಡಲ ಯಾತ್ರೆ ಶುರು Read More »

ಶಬರಿಮಲೆ ಯಾತ್ರೆಗೆ ದೇವಸ್ವಂ ಬೋರ್ಡ್‌ ಮಾರ್ಗಸೂಚಿ ಬಿಡುಗಡೆ

ಇರುಮಡಿ ಕಟ್ಟಿನಲ್ಲಿ ಈ ವಸ್ತುಗಳು ಇರಲೇಬಾರದು ಎಂದು ಸೂಚನೆ ಶಬರಿಮಲೆ : ಮಂಡಲ ಮತ್ತು ಮಕರ ವಿಳಕ್ಕು ಯಾತ್ರೆಗೈಯ್ಯುವ ಅಯ್ಯಪ್ಪ ಭಕ್ತರ ಇರುಮುಡಿಯಲ್ಲಿ ಏನೇನು ಇರಬೇಕು ಮತ್ತು ಇರಬಾರದು ಎಂಬುದರ ಕುರಿತು ಕೇರಳದ ದೇವಸ್ವಂ ಬೋರ್ಡ್‌ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದೆ. ಶಬರಿಮಲೆಯ ಮುಖ್ಯ ಅರ್ಚಕ ಕಂಡರಾರು ರಾಜೀವಾರು ನೀಡಿದ ಸೂಚನೆ ಪ್ರಕಾರ ಈ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ದೇವಸ್ವಂ ಬೋರ್ಡ್‌ ಹೇಳಿಕೊಂಡಿದೆ.ಶಬರಿಮಲೆ ಯಾತ್ರೆಗೈಯ್ಯುವವರು ಇಡುಮುಡಿ ಹೊತ್ತುಕೊಂಡು ಸಾಗಬೇಕಾಗುತ್ತದೆ. ಇರುಮುಡಿಯನ್ನು ಮುಂದಿನ ಕಟ್ಟು ಮತ್ತು ಹಿಂದಿನ ಕಟ್ಟು ಎಂದು ಎರಡು

ಶಬರಿಮಲೆ ಯಾತ್ರೆಗೆ ದೇವಸ್ವಂ ಬೋರ್ಡ್‌ ಮಾರ್ಗಸೂಚಿ ಬಿಡುಗಡೆ Read More »

ಅಲ್‌ ಖೈದಾ ನಂಟಿನ ಶಂಕೆ : ಬಾಂಗ್ಲಾದೇಶ ಪ್ರಜೆಗಳಿಗೆ ಎನ್‌ಐಎ ಶೋಧ

ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳಲ್ಲಿ ಎನ್‌ಐಎ ದಾಳಿ ಬೆಂಗಳೂರು : ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಅಲ್‌ ಖೈದಾ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಭಾರತವನ್ನು ಅಸ್ಥಿರಗೊಳಿಸಲು ಅಲ್​ ಖೈದಾ ಉಗ್ರ ಸಂಘಟನೆಯ ಸಂಚು ಮಾಡಿರುವ ಕುರಿತು ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ.

ಅಲ್‌ ಖೈದಾ ನಂಟಿನ ಶಂಕೆ : ಬಾಂಗ್ಲಾದೇಶ ಪ್ರಜೆಗಳಿಗೆ ಎನ್‌ಐಎ ಶೋಧ Read More »

ಭದ್ರತಾ ಪಡೆ ಗುಂಡಿಗೆ 11 ಉಗ್ರರು ಬಲಿ

ಹೊಸದಿಲ್ಲಿ : ಮಣಿಪುರದ ಜಿರಿಬಾಮ್‌ ಎಂಬಲ್ಲಿ ಭದ್ರತಾ ಪಡೆಗಳು 11 ಕುಕಿ ಉಗ್ರರನ್ನು ಹತ್ಯೆ ಮಾಡಿದೆ. ಭದ್ರತಾ ಪಡೆ ಶಿಬಿರದ ಮೇಲೆ ನಿನ್ನೆ ರಾತ್ರಿ ಕುಕಿ ಉಗ್ರರು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ನಡೆದ ಭೀಕರ ಗುಂಡಿನ ಕಾಳದಲ್ಲಿ 11 ಕುಕಿ ಉಗ್ರರು ಹತ್ಯೆಯಾಗಿ ಓರ್ವ ಸಿಆರ್‌ಪಿಎಫ್‌ ಜವಾನ ಗಂಭೀರವಾಗಿ ಗಾಯಗೊಂಡಿದ್ದಾರೆ.ಭದ್ರತಾ ಪಡೆ ಶಿಬಿರಕ್ಕೆ ಸಮೀಪವಿದ್ದ ಜಾಕರ್‌ಧುರ್‌ ಎಂಬಲ್ಲಿ ಕುಕಿ ಉಗ್ರರು ಜನವಸತಿಯಿಲ್ಲದ ಮೈತೇಯಿ ಸಮುದಾಯದವರ ನಾಲ್ಕು ಮನೆಗಳನ್ನು ಸುಟ್ಟು ಹಾಕಿದ್ದಾರೆ. ಭಾನುವಾರದಿಂದೀಚೆಗೆ ಮಣಿಪುರದಲ್ಲಿ ಮತ್ತೆ ಹಿಂಸಾಚಾರ

ಭದ್ರತಾ ಪಡೆ ಗುಂಡಿಗೆ 11 ಉಗ್ರರು ಬಲಿ Read More »

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್‌ ಖನ್ನ ಪ್ರಮಾಣ

ಭಾರತದ 51ನೇ ಮುಖ್ಯ ನ್ಯಾಯಮೂರ್ತಿ ಹೊಸದಿಲ್ಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಖನ್ನಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಅವರು ಮೇ 13, 2025 ರವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾಯಮೂರ್ತಿ ಖನ್ನಾ ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸುವುದು, ಆರ್ಟಿಕಲ್ 370 ರದ್ದತಿಯನ್ನು ಎತ್ತಿಹಿಡಿಯುವುದು ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವಾರು ಮಹತ್ವದ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್‌ ಖನ್ನ ಪ್ರಮಾಣ Read More »

28 ಬಂಡಾಯ ಅಭ್ಯರ್ಥಿಗಳು ಅಮಾನತು : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಶಾಕ್‌

ಚುನಾವಣೆ ಹೊಸ್ತಿಲಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‌ ಮುಂಬಯಿ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 7 ಬಂಡಾಯ ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಭಾನುವಾರ ರಾತ್ರಿ ಅಮಾನತುಗೊಳಿಸಿದೆ. ಈ ಮೂಲಕ ಚುನಾವಣೆ ಘೋಷಣೆಯಾದ ಬಳಿಕ ಅಮಾನತುಗೊಂಡ ನಾಯಕರ ಸಂಖ್ಯೆ 28ಕ್ಕೇರಿದೆ.ಅಮಾನತುಗೊಂಡಿರುವ ನಾಯಕರಲ್ಲಿ ಶಾಮಕಾಂತ್ ಸನೇರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಾಡೆ ಮತ್ತು ಚಂದ್ರಪಾಲ್

28 ಬಂಡಾಯ ಅಭ್ಯರ್ಥಿಗಳು ಅಮಾನತು : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಶಾಕ್‌ Read More »

ವೋಟು ಬೇಕಾ ಆರ್‌ಎಸ್‌ಎಸ್‌ ನಿಷೇಧಿಸಿ, 1000 ಕೋ. ರೂ. ಕೊಡಿ!

ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಷರತ್ತು ಹಾಕಿದ ಉಲೇಮಾ ಬೋರ್ಡ್‌ ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಕಣ ಕಾವೇರಿದ್ದು ವಿವಿಧ ಸಮುದಾಯಗಳ ಬೆಂಬಲ ಗಳಿಸಲು ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್-ಶಿವಸೇನೆ ಉದ್ಧವ್ ಠಾಕ್ರೆ ಬಣ, ಸಮಾಜವಾದಿ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ (ಎಂವಿಎ) ಬೆಂಬಲ ಸೂಚಿಸಲು ಆಲ್‌ ಇಂಡಿಯಾ ಉಲೇಮಾ ಬೋರ್ಡ್‌ ಆರ್‌ಎಸ್‌ಎಸ್ ನಿಷೇಧ, 1000 ಕೋ. ರೂ. ಅನುದಾನ ಸೇರಿದಂತೆ 17 ಷರತ್ತುಗಳನ್ನು ಮುಂದಿಟ್ಟು ಪತ್ರ ಬರೆದಿರುವುದು ಇಡೀ ದೇಶದಲ್ಲಿ

ವೋಟು ಬೇಕಾ ಆರ್‌ಎಸ್‌ಎಸ್‌ ನಿಷೇಧಿಸಿ, 1000 ಕೋ. ರೂ. ಕೊಡಿ! Read More »

error: Content is protected !!
Scroll to Top