ದೇಶ

ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎಫ್‌.೭ ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಿಎಫ್‌.೭ ಸೋಂಕಿನ ನಾಲ್ಕು ಪ್ರಕರಣಗಳು ಗುಜರಾತ್‌ ಹಾಗೂ ಒಡಿಶಾದಲ್ಲಿ ತಲಾ ಎರಡೆರಡು ಪ್ರಕರಣಗಳು ದೃಢಪಟ್ಟಿವೆ. ಕೋವಿಡ್‌ ಕಣ್ಗಾವಲು ಹೆಚ್ಚಳಕ್ಕೆ ಸೂಚನೆ ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕಣ್ಗಾವಲು ಹೆಚ್ಚಿಸಲು ಹಾಗೂ ಲಸಿಕೀಕರಣಕ್ಕೆ ಒತ್ತು ನೀಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ […]

ಕೋವಿಡ್‌ ಆತಂಕ: ಅಧಿಕಾರಿಗಳೊಂದಿಗೆ ಇಂದು ಪ್ರಧಾನಿ ಮೋದಿ ಸಭೆ Read More »

ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ – ಬಿಸಿಎಎಸ್‌ ಶಿಫಾರಸು

ನವದೆಹಲಿ: ಪ್ರಯಾಣಿಕರು ವಿಮಾನ ನಿಲ್ದಾಣಗಳ ಸ್ಕ್ಯಾನರ್‌ಗಳಲ್ಲಿ (ಶೋಧಕ) ಭದ್ರತಾ ತಪಾಸಣೆಗೆ ಒಳಗಾಗುವ ಮುನ್ನ, ತಮ್ಮ ಚೀಲದಲ್ಲಿರುವ ಮೊಬೈಲ್‌, ಚಾರ್ಜರ್‌ನಂತಹ ವಿದ್ಯುನ್ಮಾನ ಉಪಕರಣಗಳನ್ನು ತೆಗೆದಿರಿಸುವ ಪ್ರಮೇಯ ಇನ್ನು ಮುಂದೆ ಇರುವುದಿಲ್ಲ. ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಗೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ 3ಡಿ ಸ್ಕ್ಯಾನರ್‌ಗಳನ್ನು ಅಳವಡಿಸುವಂತೆ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಶಿಫಾರಸು ಮಾಡಿದೆ. ಕೈಚೀಲದಲ್ಲಿರುವ (ಹ್ಯಾಂಡ್ ಬ್ಯಾಗೇಜ್) ವಸ್ತುಗಳನ್ನು ಎರಡು ಆಯಾಮಗಳಲ್ಲಿ ಮಾತ್ರ ನೋಡಬಹುದಾದ ಸ್ಕ್ಯಾನರ್‌ಗಳನ್ನು ವಿಮಾನ ನಿಲ್ದಾಣಗಳಲ್ಲಿ ಈಗ ಬಳಸಲಾಗುತ್ತಿದೆ. ಆದರೆ ಕಂಪ್ಯೂಟರ್ ಟೊಮೊಗ್ರಫಿ

ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ – ಬಿಸಿಎಎಸ್‌ ಶಿಫಾರಸು Read More »

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ.

ವಾಷಿಂಗ್ಟನ್: ಚೀನಾವಷ್ಟೇ ಅಲ್ಲ, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಜಪಾನ್‌ನಲ್ಲೂ ಕೋವಿಡ್-೧೯ ಸೋಂಕಿನ ಪ್ರಕರಣ ಏಕಾಏಕಿ ಉಲ್ಬಣಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೋವಿಡ್ ವಿರುದ್ಧದ ಲಸಿಕೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ. ೨೦೨೦ರಲ್ಲಿ ಕೋವಿಡ್ ಸೋಂಕು ಆರಂಭಗೊಂಡಂದಿನಿಂದ ಇದುವರೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೧೦೦ ದಶಲಕ್ಷದ ಗಡಿ ದಾಟಿದೆ. ಅಮೆರಿಕದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ೧೦ ಲಕ್ಷ ದಾಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿವಿ ಹೇಳಿದೆ. ಕೋವಿಡ್ ಸೋಂಕಿನಿಂದಾಗಿ ವಿಶ್ವದಲ್ಲಿ ಪ್ರತೀ

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ. Read More »

ಸಾಂಸ್ಕೃತಿಕ ಜಾಂಬೂರಿಗೆ ಕ್ಷಣಗಣನೆ; ಕ್ಯಾಂಪಸ್‍ನಲ್ಲಿ ಕಳೆ ಕಟ್ಟಿದ ಸ್ಕೌಟ್ಸ್-ಗೈಡ್ಸ್

ಪುತ್ತೂರು: ಭಾರತ್ ಸ್ಕೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಾಂಬೂರಿಯ ತಯಾರಿ ಕೊನೆ ಹಂತದಲ್ಲಿದ್ದು, ದೇಶದ ವಿವಿಧ ಭಾಗಗಳ ಸ್ಕೌಟ್ಸ್, ಗೈಡ್ಸ್, ರೋರ‍್ಸ್ ಹಾಗೂ ರೇಂರ‍್ಸ್ ಪ್ರತಿನಿಧಿಗಳ ತಂಡ ಮೂಡುಬಿದಿರೆಯನ್ನು ತಲುಪಿವೆ.ಮೂಡುಬಿದರೆಯ ಸ್ವರಾಜ್ಯ ಮೈದಾನದಲ್ಲಿ ಬೃಹತ್ ನೋಂದಾವಣೆಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್‍ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳ ಅಗತ್ಯ ವಸ್ತುಗಳ ಕಿಟ್: ಅಂತಾರಾಷ್ಟ್ರೀಯ ಸಾಂಸ್ಕೃತಿಕ

ಸಾಂಸ್ಕೃತಿಕ ಜಾಂಬೂರಿಗೆ ಕ್ಷಣಗಣನೆ; ಕ್ಯಾಂಪಸ್‍ನಲ್ಲಿ ಕಳೆ ಕಟ್ಟಿದ ಸ್ಕೌಟ್ಸ್-ಗೈಡ್ಸ್ Read More »

ಕೊರೊನಾ ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಚೀನಾದಲ್ಲಿ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಪತ್ರ ಹೊಸದಿಲ್ಲಿ : ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಅಮೆರಿಕ ಸಹಿತ ಕೆಲವು ದೇಶಗಳಲ್ಲಿ ಮತ್ತೆ ಕೋವಿಡ್-19 ಹಠಾತ್ ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳ ಬಗ್ಗೆ ನಿಗಾ ವಹಿಸಲು ಪಾಸಿಟಿವ್ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ಗೆ ಸಜ್ಜಾಗುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.ದೇಶದಲ್ಲಿ

ಕೊರೊನಾ ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ Read More »

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ 1760 ಹುದ್ದೆಗಳು

ಹೊಸದಿಲ್ಲಿ : ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಟೆಕ್ನಿಷಿಯನ್ ಅಪ್ರೆಂಟಿಸ್, ಟ್ರೇಡ್ ಅಪ್ರೆಂಟಿಸ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಸೇರಿ 1760 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಕಾರ್ಪೊರೇಟ್ ವೆಬ್‌ಸೈಟ್ ಮೂಲಕ ಡಿಸೆಂಬರ್ 14, 2022 ರಿಂದ ಜನವರಿ 3, 2023ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಯು 12ನೇ ತರಗತಿ, ಐಟಿಐ, ಡಿಪ್ಲೋಮಾ, ಪದವಿ (ಸಂಬಂಧಿತ ವಿಭಾಗ) ಹೊಂದಿರಬೇಕು.ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 24 ವರ್ಷ. ವಯಸ್ಸಿನ ಸಡಿಲಿಕೆಯು ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ 1760 ಹುದ್ದೆಗಳು Read More »

ಅಮೆಝಾನ್‌ನಿಂದ ೨೦,೦೦೦ ಉದ್ಯೋಗಿಗಳ ವಜಾ?

ಹೊಸದಿಲ್ಲಿ: ಕೊರೋನಾ ಬಳಿಕ ಕಂಪೆನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕುತ್ತಿರುವುದು ತಿಳಿದಿರುವ ಸಂಗತಿ. ಇದೇ ಸಾಲಿಗೆ ಇದೀಗ ಅಮೆಝಾನ್ ಕೂಡ ಸೇರುತ್ತಿದೆ. ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ ೨೦ ಸಾವಿರ ಉದ್ಯೋಗಿಗಳನ್ನು ಅಮೆಝಾನ್ ವಜಾಗೊಳಿಸುವ ಸಾಧ್ಯತೆಯ ಬಗ್ಗೆ ಕಂಪ್ಯೂಟರ್ ವರ್ಲ್ಡ್ ವರದಿ ಮಾಡಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದರಿAದ ವೆಚ್ಚ ಕಡಿತದ ಭಾಗವಾಗಿ ಅಮೆಝಾನ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ೧.೬ ದಶಲಕ್ಷ ಉದ್ಯೋಗಿಗಳ ಹೊಂದಿರುವ ದೈತ್ಯ ತಂತ್ರಜ್ಞಾನ ಕಂಪನಿ ಅಮೆಝಾನ್,

ಅಮೆಝಾನ್‌ನಿಂದ ೨೦,೦೦೦ ಉದ್ಯೋಗಿಗಳ ವಜಾ? Read More »

ಸರ್ವೋಚ್ಚ ನ್ಯಾಯಾಲಯದ ಮೊಬೈಲ್ ಆ್ಯಪ್ ೨.೦ ಆವೃತ್ತಿಗೆ ಚಾಲನೆ

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ತನ್ನ ಮೊಬೈಲ್ ಆ್ಯಪ್‌ನ ಆ್ಯಂಡ್ರಾಯ್ಡ್ ಆವೃತ್ತಿ ೨.೦ಕ್ಕೆ ಬುಧವಾರ ಚಾಲನೆ ನೀಡಿದ್ದು, ವಿವಿಧ ಸಚಿವಾಲಯಗಳ ಕಾನೂನು ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ನೈಜ ಸಮಯದಲ್ಲಿ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಬಹುದು. ದಿನದ ಕಲಾಪಗಳ ಆರಂಭಕ್ಕೆ ಮುನ್ನ ಇದನ್ನು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಆ್ಯಪ್‌ನ ಆ್ಯಂಡ್ರಾಯ್ಡಾ ಆವೃತ್ತಿ ೨.೦ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಐಒಎಸ್ ಆವೃತ್ತಿಯು ಇನ್ನೊಂದು ವಾರದಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳ

ಸರ್ವೋಚ್ಚ ನ್ಯಾಯಾಲಯದ ಮೊಬೈಲ್ ಆ್ಯಪ್ ೨.೦ ಆವೃತ್ತಿಗೆ ಚಾಲನೆ Read More »

error: Content is protected !!
Scroll to Top