ದೇಶ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ ಭರ್ತಿ ಒಂದು ವರ್ಷ

ಹಿಂದು ಪಂಚಾಂಗ ಪ್ರಕಾರ ಜ.11ರಂದೇ ಅಯೋಧ್ಯೆಯಲ್ಲಿ ವಾರ್ಷಿಕೋತ್ಸವ ಆಚರಣೆ ಅಯೋಧ್ಯೆ : ಅಯೋಧ್ಯೆಯಲ್ಲಿ ಹೊಸ ಮಂದಿರ ನಿರ್ಮಾಣವಾಗಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರ್ತಿಯಾಯಿತು. 2024ರ ಪುಷ್ಯ ಮಾಸದ ಶುಕ್ಲ ಪಕ್ಷದ ಕೂರ್ಮ ದ್ವಾದಶಿ ದಿನದಂದು ಅಂದರೆ, 2024ರ ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯನ್ನು ಪೂರ್ಣಗೊಳಿಸಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್‌ ರಾಜ್‌ ಈ ಆಕರ್ಷಕ ಮೂರ್ತಿಯನ್ನು ಕೆತ್ತಿದ್ದಾರೆ. 2025ರಲ್ಲಿ ಅಯೋಧ್ಯೆ ರಾಮ ಪ್ರಾಣ […]

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ ಭರ್ತಿ ಒಂದು ವರ್ಷ Read More »

ಸೈಫ್‌ ಅಲಿ ಖಾನ್‌ ಪರಿವಾರದ 15 ಸಾವಿರ ಕೋ. ರೂ. ಆಸ್ತಿ ಸರಕಾರಕ್ಕೆ?

100ಕ್ಕೂ ಅಧಿಕ ಭವ್ಯ ಮಹಲುಗಳು, ಕಟ್ಟಡಗಳು ಕೇಂದ್ರದ ಪಾಲಾಗುವ ಸಾಧ್ಯತೆ ಮುಂಬಯಿ : ಕೆಲದಿನಗಳ ಹಿಂದಷ್ಟೇ ಮನೆಯಲ್ಲಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಈಗ ಚೇತರಿಸುತ್ತಿರುವ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರಿಗೆ ಈಗ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಮನೆತನದ ಬರೋಬ್ಬರಿ 15,000 ಕೋ. ರೂ. ಮೌಲ್ಯದ ಆಸ್ತಿ ಈಗ ಕೇಂದ್ರ ಸರಕಾರದ ಪಾಲಾಗುವ ಭೀತಿ ತಲೆದೋರಿದೆ. ಸೈಫ್‌ ಅಲಿ ಖಾನ್‌ ತಂದೆ ಮಾಜಿ ಕ್ರಿಕೆಟಿಗ ದಿವಂಗತ ಮನ್ಸೂರ್‌ ಅಲಿ ಖಾನ್‌ ಪಟೌಡಿ ಮಧ್ಯಪ್ರದೇಶದ ಭೋಪಾಳದ

ಸೈಫ್‌ ಅಲಿ ಖಾನ್‌ ಪರಿವಾರದ 15 ಸಾವಿರ ಕೋ. ರೂ. ಆಸ್ತಿ ಸರಕಾರಕ್ಕೆ? Read More »

ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಹತ್ಯೆ

1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್‌ ಮುಖಂಡನೂ ಬಲಿ ಭುವನೇಶ್ವರ: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ನಕ್ಸಲರು ಹತರಾಗಿದ್ದಾರೆ. ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಣೆ ನಡೆಸಲಾಗಿದ್ದು, ಇಬ್ಬರು ಮಹಿಳಾ ನಕ್ಸಲರನ್ನು ಕೂಡ ಹತ್ಯೆ ಮಾಡಲಾಗಿದೆ. ಓರ್ವ ಕೋಬ್ರಾ ಯೋಧ ಗಾಯಗೊಂಡಿದ್ದಾರೆ.ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಲ್ಲಾ

ಎನ್‌ಕೌಂಟರ್‌ನಲ್ಲಿ 12 ನಕ್ಸಲರ ಹತ್ಯೆ Read More »

ಭಾರಿ ಪ್ರಚಾರವೇ ಮೊನಾಲಿಸಾಗೆ ಮುಳುವಾಯಿತು

ಜನರ ಕಾಟ ತಡೆಯಲಾಗದೆ ಕುಂಭಮೇಳದಿಂದಲೇ ದೂರ ಹೋದ ಅದ್ಭುತ ಸುಂದರಿ ಪ್ರಯಾಗರಾಜ್: ರಾತ್ರಿ ಬೆಳಗಾಗುವುದರೊಳಗೆ ಸಿಗುವ ಜನಪ್ರಿಯತೆ ಹೇಗೆ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಮಹಾಕುಂಭಮೇಳದ ಈ ಮೊನಾಲಿಸಾ ಸಾಕ್ಷಿ. ಕಳೆದ 2-3 ದಿನಗಳಿಂದ ಈ ಹದಿಹರೆಯದ ಯುವತಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದಾಳೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿದಂತೆ ಯಾವ ಸೋಷಿಯಲ್‌ ಮೀಡಿಯಾ ತೆರೆದರೂ ಈ ಯುವತಿಯ ವೀಡಿಯೊಗಳು, ಮತ್ತು ಫೋಟೊಗಳು ಕಾಣಿಸಿಕೊಳ್ಳುತ್ತವೆ. ಯಾವ ದೊಟ್ಟ ನಟಿಗೂ ಸಿಗದ ಪ್ರಚಾರ ಎರಡು ದಿನದಲ್ಲಿ

ಭಾರಿ ಪ್ರಚಾರವೇ ಮೊನಾಲಿಸಾಗೆ ಮುಳುವಾಯಿತು Read More »

ನಟ ಸೈಫ್‌ ಹಲ್ಲೆ ಪ್ರಕರಣ : ಬಂಧಿಸಿದ ವ್ಯಕ್ತಿ ಆರೋಪಿಯಲ್ಲ

ಸಂಶಯದ ಮೇಲೆ ಬಂಧಿಸಿದ್ದ ವ್ಯಕ್ತಿ ಸ್ಥಳೀಯ ಕಾರ್ಪೆಂಟರ್‌ ; ನಿಜವಾದ ಆರೋಪಿ ಪಲಾಯನ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಕ್ರವಾರ ಬಂಧಿಸಿದ್ದ ವ್ಯಕ್ತಿ ನಿಜವಾದ ಆರೋಪಿಯಲ್ಲ. ವಿಚಾರಣೆ ಬಳಿಕ ತಾವು ಬೇಸ್ತುಬಿದ್ದ ಸಂಗತಿ ಪೊಲೀಸರಿಗೆ ತಿಳಿದುಬಂದಿದ್ದು, ಅವನನ್ನು ಬಿಟ್ಟು ಕಳಿಸಿದ್ದಾರೆ. ಆತ ಸ್ಥಳೀಯವಾಗಿ ಬಡಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಆತ ಸಿಸಿಟಿವಿಯಲ್ಲಿ ಕಂಡ ವ್ಯಕ್ತಿಯ ಚಹರೆ ಹೋಲುತ್ತಿದ್ದ ಕಾರಣ ಪೊಲೀಸರು

ನಟ ಸೈಫ್‌ ಹಲ್ಲೆ ಪ್ರಕರಣ : ಬಂಧಿಸಿದ ವ್ಯಕ್ತಿ ಆರೋಪಿಯಲ್ಲ Read More »

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ

ವಾಷಿಂಗ್ಟನ್‌ : ಭಾರತದ ಅಗ್ರಗಣ್ಯ ಉದ್ಯಮಿ ಗೌತಮ್‌ ಅದಾನಿಯವರ ನೇತೃತ್ವದ ಅದಾನಿ ಕಂಪನಿಗಳಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದ ಹಿಂಡನ್‌ಬರ್ಗ್‌ ಸಂಸ್ಥೆಗೆ ಬೀಗ ಬಿದ್ದಿದೆ. ಹಿಂಡನ್‌ಬರ್ಗ್‌ ರೀಸರ್ಚ್‌ ಕಂಪನಿಯನ್ನು ಮುಚ್ಚುತ್ತಿರುವುದಾಗಿ ಅದರ ಸಂಸ್ಥಾಪಕ ನೇಟ್‌ ಆಂಡರ್‌ಸನ್‌ ಹೇಳಿದ್ದಾರೆ. ನಾವು ಏನು ಸಾಧಿಸಬೇಕೆಂದಿದ್ದೆವೋ ಅದನ್ನು ಸಾಧಿಸಿದ್ದೇವೆ. ಈಗ ಕಂಪನಿಯನ್ನು ಮುಚ್ಚುವ ಸಮಯ ಬಂದಿದೆ. ಈ ಸಂಸ್ಥೆಯನ್ನು ನಡೆಸಿದ್ದು ಬದುಕಿ ಅದ್ಭುತ ಸಾಹಸವಾಗಿತ್ತು ಎಂದು ನೇಟ್‌ ಹೇಳಿದ್ದಾರೆ.2023ರಲ್ಲಿ ಅದಾನಿ ಕಂಪನಿಯ ವಿರುದ್ಧ ಹಿಂಡನ್‌ಬರ್ಗ್‌ ಬಿಡುಗಡೆ ಮಾಡಿದ್ದ ವರದಿ ಇಡೀ ಜಗತ್ತಿನಲ್ಲಿ ಕೋಲಾಹಲ

ಅದಾನಿ ಸಮೂಹವನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ Read More »

ಮನು ಭಾಕರ್‌ ಪದಕ ಹಿಂಪಡೆಯಲು ಒಲಿಂಪಿಕ್ಸ್‌ ಸಮಿತಿ ನಿರ್ಧಾರ

ಭಾರತಕ್ಕೆ ಕೀರ್ತಿ ತಂದ ಕ್ರೀಡಾಪಟುವಿನ ಪದಕ ಹಿಂಪಡೆಯಲು ಕಾರಣ ಏನು ಗೊತ್ತೆ? ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್-2024ರ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟು ಮನು ಭಾಕರ್‌ ಗೆದ್ದಿರುವ ಎರಡು ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ ಸಮಿತಿ ಹಿಂಪಡೆಯಲಿದೆ. ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ನಿರ್ಮಿಸಿದ್ದರು. ಭಾರತದ ಕೀರ್ತಿ ಪಾತಾಕೆ ಮುಗಿಲೆತ್ತರಕ್ಕೇರಲು ಕಾರಣವಾಗಿದ್ದ ಈ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಹಾಗೆಂದು ಮನು ಭಾಕರ್‌ ಅವರಿಂದ ಏನೂ ತಪ್ಪು ಆಗಿಲ್ಲ, ಪದಕಗಳ

ಮನು ಭಾಕರ್‌ ಪದಕ ಹಿಂಪಡೆಯಲು ಒಲಿಂಪಿಕ್ಸ್‌ ಸಮಿತಿ ನಿರ್ಧಾರ Read More »

ಖಲಿಸ್ಥಾನಿ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಅರವಿಂದ ಕೇಜ್ರಿವಾಲ್‌

ಹತ್ಯೆಗೆ ಸಂಚು ರೂಪಿಸಿರುವ ಕುರಿತು ಗುಪ್ತಚರ ಪಡೆ ಮಾಹಿತಿ ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಸಲು ಖಲಿಸ್ಥಾನಿ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ದಿಲ್ಲಿ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಪಡೆ ಎಚ್ಚರಿಕೆ ನೀಡಿದೆ.ಖಲಿಸ್ಥಾನಿ ಭಯೋತ್ಪಾದಕರು ದಿಲ್ಲಿ ಚುನಾವಣೆ ಹಾಳುಗೆಡವಲು ನಾಯಕರ ಮೇಲೆ

ಖಲಿಸ್ಥಾನಿ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಅರವಿಂದ ಕೇಜ್ರಿವಾಲ್‌ Read More »

ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿದ್ದ ರೈಲಿಗೆ ಕಲ್ಲು ತೂರಾಟ

ಮುಂಬಯಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಮಹಾರಾಷ್ಟ್ರದಲ್ಲಿ ಕಲ್ಲುತೂರಲಾಗಿದೆ. ತಪತಿ ಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಮಾಹಾರಾಷ್ಟ್ರದ ಜಲಗಾಂವ್‌ನಲ್ಲಿ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೈಲಿನಲ್ಲಿ ಗುಜರಾತ್‌ನಿಂದ ಕುಂಭಮೇಳಕ್ಕೆ ಭಕ್ತರು ಪ್ರಯಾಣಿಸುತ್ತಿದ್ದರು. ರೈಲು ಸೂರತ್‌ನಿಂದ ಛಾಪ್ರಾಕ್ಕೆ ಹೋಗುತ್ತಿದ್ದ ವೇಳೆ ಜಲಗಾಂವ್‌ನಲ್ಲಿ ಕಿಡಿಗೇಡಿಯೋರ್ವ ಕಲ್ಲುತೂರಿದ್ದಾನೆ. ರೈಲಿನ ಕಿಟಿಕಿ ಗಾಜು ಒಡೆದಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ. ಬಾಬಾ ಬನಾರಸ್‌ ಎಂಬ ಎಕ್ಸ್‌ ಪೇಜ್‌ನಲ್ಲಿ ಕಲ್ಲುತೂರಾಟ ಮಾಡಿದ ವೀಡಿಯೊ ಮತ್ತು ಫೋಟೊ

ಮಹಾಕುಂಭ ಮೇಳಕ್ಕೆ ಹೋಗುವ ಭಕ್ತರಿದ್ದ ರೈಲಿಗೆ ಕಲ್ಲು ತೂರಾಟ Read More »

ಮಹಾಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ : ನಾಗಸಾಧುಗಳಿಂದ ಮೊದಲ ಶಾಹಿ ಸ್ನಾನ

ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಶುರು ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಇಂದು ನಸುಕಿನ ಹೊತ್ತು ವಿದ್ಯುಕ್ತ ಚಾಲನೆ ದೊರೆತಿದೆ.ಇಂದಿನಿಂದ 44 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಸಂಭ್ರಮ ನಡೆಯಲಿದೆ. ಮಹಾಶಿವರಾತ್ರಿ ದಿನವಾದ ಫೆಬ್ರವರಿ 26ರಂದು ಕೊನೆಯ ಶಾಹಿ ಸ್ನಾನದೊಂದಿಗೆ ಮುಕ್ತಾಯವಾಗಲಿದೆ. ಮಹಾಕುಂಭಮೇಳಕ್ಕೆ ಇಂದು ಬೆಳಗ್ಗಿನಜಾವ ಮೊದಲ ಶಾಹಿ ಸ್ನಾನ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾಗಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದಾರೆ.

ಮಹಾಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ : ನಾಗಸಾಧುಗಳಿಂದ ಮೊದಲ ಶಾಹಿ ಸ್ನಾನ Read More »

error: Content is protected !!
Scroll to Top