ದೇಶ

ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಸ್ಪೀಕರ್‌ ಯು.ಟಿ.ಖಾದರ್‌

ಮಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ. ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡರಲ್ಲದೆ, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಸವಿದರು. ಉತ್ತರಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ಶುಕ್ರವಾರ ಕುಂಭಮೇಳದಲ್ಲಿ ಪಾಲ್ಗೊಂಡ ಖಾದರ್, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅಲಹಾಬಾದ್‌ನಲ್ಲಿ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ ದರ್ಗಾ ಶರೀಫ್‌ಗೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ […]

ಮಹಾಕುಂಭಮೇಳದಲ್ಲಿ ಪಾಲ್ಗೊಂಡ ಸ್ಪೀಕರ್‌ ಯು.ಟಿ.ಖಾದರ್‌ Read More »

ಗಣರಾಜ್ಯೋತ್ಸವ : ಕಣ್ಮನ ತಣಿಸಿದ ಪಥ ಸಂಚಲನ; ರೋಮಾಂಚಕ ಸೇನೆಯ ಸಾಹಸ ಪ್ರದರ್ಶನ

ಆಕರ್ಷಣೆಯ ಕೇಂದ್ರವಾದ ಕರ್ನಾಟಕದ ಲಕ್ಕುಂಡಿ ಬ್ರಹ್ಮ ಜಿನಾಲಯ ದೇವಾಲಯದ ಟ್ಯಾಬ್ಲೊ ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಜರುಗಿದ್ದು, ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು. ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳು ಪೂರ್ತಿಯಾದ ನಿಮಿತ್ತ ಈ ಬಾರಿ ʻಸುವರ್ಣ ಭಾರತ, ಪರಂಪರೆ ಮತ್ತು ಅಭಿವೃದ್ಧಿʼ ಥೀಮ್‌ನಲ್ಲಿ ಗಣರಾಜೋತ್ಸವ ಆಚರಣೆ ಮಾಡಲಾಯಿತು. ಸೇನಾ ಪರೇಡ್‌ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿಲ್‌ ಯುದ್ಧ ವೀರರು ಹಾಗೂ ಓರ್ವ ಅಶೋಕ ಚಕ್ರ ಪುರಸ್ಕೃತರು

ಗಣರಾಜ್ಯೋತ್ಸವ : ಕಣ್ಮನ ತಣಿಸಿದ ಪಥ ಸಂಚಲನ; ರೋಮಾಂಚಕ ಸೇನೆಯ ಸಾಹಸ ಪ್ರದರ್ಶನ Read More »

ಸೈಫ್‌ ಹಲ್ಲೆ ಪ್ರಕರಣ : ಆರೋಪಿಯ ಗುರುತು ದೃಢಪಡಿಸಲು ವೈಜ್ಞಾನಿಕ ಪರೀಕ್ಷೆ

ಎಲ್ಲ ತಂದೆಯಂದಿರೂ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ, ತಂದೆಯ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಮುಂಬಯಿ: ನಟ ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು ತನ್ನ ಮಗನಲ್ಲ ಎಂದಿರುವ ಆರೋಪಿ ಮೊಹಮ್ಮದ್‌ ಶೆರಿಫುಲ್ಲ ಷೆಹಜಾದ್‌ನ ತಂದೆಯ ಹೇಳಿಕೆಯನ್ನು ಮುಂಬಯಿ ಪೊಲೀಸರು ಅಲ್ಲಗಳೆದಿದ್ದಾರೆ. ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರನಾಗಿದ್ದು, ಸೈಫ್‌ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚು ಮಾದರಿಗಳು ಅವನ ಬೆರಳಚ್ಚಿಗೆ ಹೋಲಿಕೆಯಾಗುತ್ತಿವೆ. ಎಲ್ಲ ತಂದೆಯಂದಿರೂ ತಮ್ಮ ಮಗ ಅಪರಾಧಿಯಲ್ಲ ಎಂದೇ ವಾದಿಸುತ್ತಾರೆ. ಹೀಗಾಗಿ ಆರೋಪಿಯ ತಂದೆಯ ಮಾತಿಗೆ

ಸೈಫ್‌ ಹಲ್ಲೆ ಪ್ರಕರಣ : ಆರೋಪಿಯ ಗುರುತು ದೃಢಪಡಿಸಲು ವೈಜ್ಞಾನಿಕ ಪರೀಕ್ಷೆ Read More »

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ : ಪ್ರಧಾನಿ ಮೋದಿ ಶುಭಾಶಯ

ಹೊಸದಿಲ್ಲಿ: ದೇಶಾದ್ಯಂತ 76ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ದೇಶದ ಎಲ್ಲ ಜನತೆಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ. ಇಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಮ್ಮ ಸಂವಿಧಾನವನ್ನು ರಚಿಸಿದ ಮತ್ತು ನಮ್ಮ ಪ್ರಜಾಪ್ರಭುತ್ವ, ಘನತೆ ಮತ್ತು ಏಕತೆಯಲ್ಲಿ ಬೇರೂರಿದೆ ಎಂದು ಖಚಿತಪಡಿಸಿದ ಎಲ್ಲ ಜನತೆಗೂ ತಲೆಬಾಗಿ ನಮಸ್ಕರಿಸುತ್ತೇನೆ. ಈ ಗಣರಾಜ್ಯೋತ್ಸವ ನಮ್ಮ ಸಂವಿಧಾನದ ಆದರ್ಶಗಳನ್ನು ಸಂರಕ್ಷಿಸುವ, ಬಲಿಷ್ಠ ಮತ್ತು ಸಮೃದ್ಧ

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ : ಪ್ರಧಾನಿ ಮೋದಿ ಶುಭಾಶಯ Read More »

ಅನಂತ್‌ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ : ಕನ್ನಡಿಗರಿಗೆ ಪುಳಕ

ನೀವೇ ನನ್ನ ಸ್ಫೂರ್ತಿ ಎಂದು ಅಭಿನಂದಿಸಿದ ರಿಷಬ್‌ ಶೆಟ್ಟಿ ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಐದು ದಶಕಗಳಿಂದ ತೊಡಗಿಸಿಕೊಂಡಿರುವ ಅನಂತ್‌ ನಾಗ್‌ ಅತ್ಯಂತ ಪ್ರತಿಭಾವಂತ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಕನ್ನಡವಲ್ಲದೆ ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮುಂಬಯಿಯ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್‌ ನಾಗ್‌ ಸಹಜ ಅಭಿನಯಕ್ಕೆ ಖ್ಯಾತರಾದವರು. ಅವರ ಪ್ರತಿಭೆ ಮತ್ತು ಸಾಧನೆಗೆ

ಅನಂತ್‌ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ : ಕನ್ನಡಿಗರಿಗೆ ಪುಳಕ Read More »

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ

ಪ್ರಯಾಗ್‌ರಾಜ್‌ : ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳು ಇದ್ದಕ್ಕಿದ್ದಂತೆ ಬೆಂಕಿಹತ್ತಿಕೊಡು ಉರಿದು ಕರಕಲಾಗಿವೆ. ಕಳೆದ ಭಾನುವಾರಷ್ಟೇ ಸಿಲಿಂಡರ್‌ ಸ್ಫೋಟಿಸಿದ ಪರಿಣಾಮ ಬೆಂಕಿಹತ್ತಿಕೊಂಡು ಸುಮಾರು 20 ಟೆಂಟ್‌ಗಳು ಸುಟ್ಟುಹೋಗಿದ್ದವು. ಮಹಾಕುಂಭಮೇಳದ ಸೆಕ್ಟರ್‌ 2ರ ಬಳಿ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿಹತ್ತಿಕೊಡಿದ್ದು, ಕೂಡಲೇ ಅಗ್ನಿಶಾಮಕ ಪಡೆ ಉಳಿದ ಕಾರುಗಳು ಮತ್ತಿತರ ವಾಹನಗಳನ್ನು ದೂರ ಸಾಗಿಸಿದ ಪರಿಣಾಮ ಹೆಚ್ಚಿನ ಅನಾಹುತವಾಗಿಲ್ಲ. ಆದರೆ ಬೆಂಕಿಹತ್ತಿಕೊಂಡ ಎರಡು ಕಾರುಗಳು ಪೂರ್ತಿಯಾಗಿ ಸುಟ್ಟುಹೋಗಿವೆ. ಘಟನೆಯಲ್ಲಿ

ಮಹಾಕುಂಭಮೇಳದಲ್ಲಿ ಮತ್ತೆ ಅಗ್ನಿ ಅವಘಡ : ಎರಡು ಕಾರುಗಳು ಭಸ್ಮ Read More »

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ

ಇಡೀ ಬಂಧನ ಪ್ರಕ್ರಿಯೆ ಮುಂಬಯಿ ಪೊಲೀಸರ ಕಟ್ಟುಕತೆ ಎಂದ ಆರೋಪಿಯ ತಂದೆ ಮುಂಬಯಿ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಾಗಿರುವ ದಾಳಿಯ ಬಗ್ಗೆಯೇ ಹಲವು ಅನುಮಾನಗಳು ಸೃಷ್ಟಿಯಾಗಿರುವ ಬೆನ್ನಿಗೆ ಪೊಲೀಸರು ಬಂಧಿಸಿರುವುದು ನಕಲಿ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವಶದಲ್ಲಿರುವ ಆರೋಪಿ ಮೊಹಮ್ಮದ್ ಶರೀಫುಲ್‌ ಇಸ್ಲಾಂನ ತಂದೆ ಶರೀಫುಲ್ ಫಕೀರ್, ತನ್ನ ಮಗನನ್ನು ವಿನಾಕಾರಣ ಬಂಧಿಸಲಾಗಿದೆ. ಆತ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯಲ್ಲ. ಇದು ವ್ಯವಸ್ಥಿತಿ ಷಡ್ಯಂತ್ರ ಎಂದು ಹೇಳಿದ್ದಾರೆ. ಮುಂಬಯಿ ಪೊಲೀಸರು

ಸೈಫ್‌ ಅಲಿ ಖಾನ್‌ ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ನಕಲಿ Read More »

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು?

ಹಲವಾರು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ-ಹೆಂಡತಿ ಹೊಸದಿಲ್ಲಿ: ಭಾರತದ ಮಾಜಿ ಡ್ಯಾಶಿಂಗ್‌ ಓಪನರ್‌ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸೆಹವಾಗ್‌ ಅಭಿಮಾನಿಗಳನ್ನು ವಿಚಲಿತಗೊಳಿಸಿದೆ. ಸೆಹವಾಗ್‌ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನ ಮುಕ್ತಾಯ ಹಂತದಲ್ಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಸೆಹ್ವಾಗ್ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಸೆಹ್ವಾಗ್‌ ಮತ್ತು ಆರತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಹಲವಾರು

ಸೆಹವಾಗ್‌ ದಾಂಪತ್ಯದಲ್ಲಿ ಬಿರುಕು? Read More »

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ

ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾದ ಸೋಂಕು ಮಂಗಳೂರು: ದುಬೈಯಿಂದ ಬಂದಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ 40 ವರ್ಷದ ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ಮಾಡಿ ಮಂಕಿಪಾಕ್ಸ್ (MPox) ಪ್ರಕರಣ ದೃಢಪಡಿಸಿದೆ. ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಜನವರಿ 17ರಂದು ಊರಿಗೆ ಆಗಮಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ದದ್ದುಗಳ ಲಕ್ಷಣಗಳು ಕಂಡುಬಂದವು ಮತ್ತು ಜ್ವರ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯಲ್ಲಿ

ಕಾರ್ಕಳ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆ : ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ Read More »

ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ದುರಂತ : ಸಾವಿನ ಸಂಖ್ಯೆ 11ಕ್ಕೇರಿಕೆ

ಬೆಂಕಿ ಹತ್ತಿಕೊಂಡ ವದಂತಿ ನಂಬಿ ಹಳಿಗೆ ಹಾರಿದವರ ಮೇಲೆ ಹರಿದ ಇನ್ನೊಂದು ರೈಲು ಮುಂಬಯಿ: ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ರೈಲ್ವೆ ವಿಭಾಗೀಯ ಆಯುಕ್ತ ಪ್ರವೀಣ್ ಗೆದಮ್ ತಿಳಿಸಿದ್ದಾರೆ.ಮಹಾರಾಷ್ಟ್ರದ ಜಲಗಾಂವ್ ದಾಟುತ್ತಿದ್ದ ಪುಷ್ಪಕ್‌ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಪ್ರಯಾಣಿಕರು ರೈಲಿನ ಚೈನ್‌ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಪ್ರಯಾಣಿಕರು ಇಳಿದು ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಈ

ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ದುರಂತ : ಸಾವಿನ ಸಂಖ್ಯೆ 11ಕ್ಕೇರಿಕೆ Read More »

error: Content is protected !!
Scroll to Top