ಪುತ್ತೂರಿನಲ್ಲಿ ಮೇಳೈಸಿದ “ತುಳುನಾಡ ಬಂಟೆರೆ ಪರ್ಬ-2023” | ಅನಾವರಣಗೊಂಡ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು
ಪುತ್ತೂರು:.ಯುವ ಬಂಟರು ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಬೇಕು. ಇದಕ್ಕೆ ಪುತ್ತೂರು ಯುವ ಬಂಟರ ನೇತೃತ್ವದಲ್ಲಿ ಜರಗಿದ ಅದ್ದೂರಿ ಕಾರ್ಯಕ್ರಮ ಬಂಟೆರೆ ಪರ್ಬ ಮಾದರಿಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಭಾನುವಾರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ‘ತುಳುನಾಡ ಬಂಟೆರೆ ಪರ್ಬ-2023 ‘ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಂಟರ ಪರವಾಗಿ ಯಾವುದೇ ಸರಕಾರ ಈತನಕ ಬೆಂಬಲ ನೀಡಿಲ್ಲ.ರಾಜ್ಯದ ಈಗಿನ ಸರಕಾರ […]