ದಕ್ಷಿಣ ಕನ್ನಡ

ವರ್ಕ್‌ ಫ್ರಂ ಹೋಂ ಆಮಿಷವೊಡ್ಡಿ 20.62 ಲಕ್ಷ ರೂ. ವಂಚನೆ

ಇನ್‌ಸ್ಟಾಗ್ರಾಂ ಲಿಂಕ್‌ ಕಳುಹಿಸಿ ಮೋಸ ಮಂಗಳೂರು: ವರ್ಕ್‌ ಫ್ರಂ ಹೋಮ್‌ ಪಾರ್ಟ್ ಟೈಂ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬಹುದು ಎಂದು ನಂಬಿಸಿ 20 ಲಕ್ಷಕ್ಕೂ ಹೆಚ್ಚು ಹಣ ಮೋಸ ಮಾಡಿದ ಪ್ರಕರಣ ಮಂಗಳೂರಿನಲ್ಲಿ ಸಂಭವಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿ 20,62,713 ರೂ. ಕಳೆದುಕೊಂಡ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 6ರಂದು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಬಂದ ಸಂದೇಶವನ್ನು ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ತೆರೆದುಕೊಂಡಿದೆ. ಬಳಿಕ ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ […]

ವರ್ಕ್‌ ಫ್ರಂ ಹೋಂ ಆಮಿಷವೊಡ್ಡಿ 20.62 ಲಕ್ಷ ರೂ. ವಂಚನೆ Read More »

ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಉದ್ಯಮಿ ಸೆರೆ

ಕಾರಿನಲ್ಲಿ ಶಾಲೆಗೆ ಕರೆದೊಯ್ದು ವಿಶ್ವಾಸ ಗಳಿಸಿ ಕಿರುಕುಳ ಮಂಗಳೂರು : ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 68 ವರ್ಷದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್​ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪ ಈ ಘಟನೆ ನಡೆದಿದೆ. ಸಂತ್ರಸ್ತೆ ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಮುಲ್ಕಿ ಠಾಣಾ ಪೊಲೀಸರು ಪೋಕ್ಸೊ ಕೇಸ್ ದಾಖಲಿಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿಂದ ಉದ್ಯಮಿ ಬಾಲಕಿಯನ್ನು ತನ್ನ ಫಾರ್ಚುನರ್‌ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ.

ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಉದ್ಯಮಿ ಸೆರೆ Read More »

ಧರ್ಮಸ್ಥಳದ ವಿಡಿಯೋ ಮಾಡಿದ ಸಮೀರ್‌ ವಿರುದ್ಧ ಕೇಸ್‌ ದಾಖಲು

ಕೃತಕ ಬುದ್ಧಿಮತ್ತೆ ಮೂಲಕ ಕಾಲ್ಪನಿಕ ವಿಡಿಯೋ ಮಾಡಿದ ಯೂಟ್ಯೂಬರ್‌ ಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧ ಇನ್ನೊಂದು ಸುತ್ತಿನ ಅಪಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಹಲವಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಜಟಾಪಟಿ ಶುರುವಾಗಿದೆ. ಈ ವ್ಯಕ್ತಿ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ ಬಳಿಕ ಈ ದೂರಿನ ಬಗ್ಗೆ ಕಾಲ್ಪನಿಕವಾಗಿ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವಿಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಯುಟ್ಯೂಬರ್ ಸಮೀರ್

ಧರ್ಮಸ್ಥಳದ ವಿಡಿಯೋ ಮಾಡಿದ ಸಮೀರ್‌ ವಿರುದ್ಧ ಕೇಸ್‌ ದಾಖಲು Read More »

ಗ್ಯಾಸ್ ಸೋರಿಕೆಯಿಂದ ಬೆಂಕಿ ಆವರಿಸಿ ಅಡುಗೆ ಮನೆಗೆ ಹಾನಿ

ಬೆಳ್ತಂಗಡಿ: ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಅಡುಗೆ ಮನೆ ಸಂಪೂರ್ಣ ಹೊತ್ತಿದ ಘಟನೆ ಧರ್ಮಸ್ಥಳ ಗ್ರಾಮದ ಗ್ರಾ.ಪಂ ಮಾಜಿ ಅಧ್ಯಕ್ಷೆ ಗೀತಾ ದಾಮೋದರ ಆಚಾರ್ಯ ಅವರ ಮನೆಯಲ್ಲಿ ಇಂದು ಮುಂಜಾನೆ ನಡೆದಿದೆ, ಭಾನುವಾರ ಬೆಳಗ್ಗೆ ಉಪಹಾರ ತಯಾರಿಸಲು ಗ್ಯಾಸ್ ಉರಿಸಿದಾಗ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ಪೂಜಾ ಕಾರ್ಯಕ್ರಮ ಇದ್ದ ಕಾರಣ ತುಂಬಾ ಜನರಿದ್ದರು. ಮನೆಯವರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

ಗ್ಯಾಸ್ ಸೋರಿಕೆಯಿಂದ ಬೆಂಕಿ ಆವರಿಸಿ ಅಡುಗೆ ಮನೆಗೆ ಹಾನಿ Read More »

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದಿಂದ ವೃಕ್ಷರೋಪಣ

ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಬಜರಂಗದಳ ಸೇವಾ ಸಪ್ತಾಹ ಪ್ರಯುಕ್ತ ವೃಕ್ಷರೋಪಣ ಕಾರ್ಯಕ್ರಮ ಕಡಬದ ಹಳೇ ಸ್ಟೇಷನ್ ಅಮೃತ ಸರೋವರದ ಬಳಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಗಿಡ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ  ಧರ್ಮ ಪ್ರಸಾರ ಪ್ರಮುಖ್ ವಿಶಾಖ್ ಸಶಿಹಿತ್ಲು, ಜಿಲ್ಲಾ ಬಜರಂಗದಳ ಸಹ ಸಂಯೋಜಕ ಸಂತೋಷ್ ಕುಮಾರ್ ಪೆರಿಯಡ್ಕ, ಬಜರಂಗದಳ ಜಿಲ್ಲಾ ಸಹ ಸುರಕ್ಷಾ ಪ್ರಮುಖ್ ತಿಲಕ್ ನಂದುಗುರಿ, ಕಡಬ ಪ್ರಖಂಡ ಬಜರಂಗದಳ ಸಂಯೋಜಕ ಅಶ್ವಿತ್ ಕಂಡಿಗ,ಸಹ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದಿಂದ ವೃಕ್ಷರೋಪಣ Read More »

ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಶಿಕ್ಷಕಿ, ವಿವಾಹಿತ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ ಬೆಳ್ತಂಗಡಿ ತಾಲೂಕಿನ ಕೊಯೂರು ಗ್ರಾಮದ ದರ್ಖಾಸ್ ನಿವಾಸಿ ದೇವಪ್ಪ ಬಂಗೇರ ಎಂಬವರ ಪುತ್ರಿ ರಮ್ಯ (32) ಮನೆಯ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ವರ್ಷದ ಹಿಂದೆ ಕೊಯೂರು ಗ್ರಾಮದ ಪಾದಡ್ಕ ನಿವಾಸಿ ಲತೀಶ್ ನೊಂದಿಗೆ ಈಕೆಯ ವಿವಾಹವಾಗಿತ್ತು. ರಮ್ಯ ಬೆಳ್ತಂಗಡಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮ್ಯಗೆ ಆರೋಗ್ಯ ಸಮಸ್ಯೆಗಳಿತ್ತು ಎಂದು ತಿಳಿದುಬಂದಿದೆ. ರಮ್ಯ

ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ Read More »

ದ.ಕ.ಜಿಲ್ಲೆಯಲ್ಲಿ  ಮರಳು ಸಮಸ್ಯೆ | ಸರಿಪಡಿಸುವಂತೆ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯ ಬಗ್ಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಗಣಿಗಾರಿಕೆ ಬಗೆಗಿನ ಸಭೆಯಲ್ಲಿ ದ.ಕ.ಜಿಲ್ಲಾ ಮರಳು ವ್ಯಾ ಪಾರಸ್ಥರ ಸಂಘದ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಚಿವರು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘ ಮನವಿ ಕುರಿತು ಚರ್ಚಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ದ.ಕ.ಜಿಲ್ಲೆಯಲ್ಲಿ  ಮರಳು ಸಮಸ್ಯೆ | ಸರಿಪಡಿಸುವಂತೆ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ Read More »

ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಮುಂದುವರಿಯಬೇಕು :ಪಡುವೆಟ್ನಾಯ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರೀಯ ಸಮಿತಿಯ ಸಭೆಯು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಜರಗಿತು. ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರನ್ನು ಗೌರವದಿಂದ ಕಾಣುವ ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಹಿರಿಯರ ಮಾರ್ಗದರ್ಶನದಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗಳು ಸಾಧ್ಯವಿದೆ ಎಂದು ಅವರು ತಿಳಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ಹೊರ ಜಿಲ್ಲೆಗಳಲ್ಲಿಯೂ

ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿ ಮುಂದುವರಿಯಬೇಕು :ಪಡುವೆಟ್ನಾಯ Read More »

ಬೆಳಾಲು ಯುವತಿಯ ಶವ ಕೆರೆಯಲ್ಲಿ ಪತ್ತೆ

ಬೆಳಾಲು: ಗ್ರಾಮದ ಕುಕ್ಕೊಟ್ಟು ನಿವಾಸಿ ಯುವತಿಯ ಶವ ಅನುಮಾನಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ಕುಕ್ಕೊಟ್ಟು ನಾಗೇಶ್ ಎಂಬವರ ಮಗಳು ವೀಣಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ವೀಣಾರವರ ಶರೀರ ಕೆರೆಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ವೀಣಾ ಮೇ 10 ರಂದು ನಾಪತ್ತೆಯಾಗಿದ್ದಾರೆಂಬ ದೂರಿನ ಹಿನ್ನಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು. ಆ ನಂತರ ಆಕೆ ಪತ್ತೆಯಾಗಿದ್ದರು. ಜೂ.11ರಂದು ಆಕೆಯ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬೆಳಾಲು ಯುವತಿಯ ಶವ ಕೆರೆಯಲ್ಲಿ ಪತ್ತೆ Read More »

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದಿಂದ ಏಮಾಜೆ ಶಾಲೆಯಲ್ಲಿ ಪರಿಸರ  ಜಾಗೃತಿ ದಿನ ಆಚರಣೆ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ವತಿಯಿಂದ ನೆಟ್ಲಮುಡ್ನೂರು ಗ್ರಾಮದ ಏಮಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಶ್ರೀಕ್ಷೇತ್ರದ ವತಿಯಿಂದ  ನಡೆಸುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ  ಉಪಾಧ್ಯಕ್ಷ  ಹರೀಶ್  ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದಿಂದ ಏಮಾಜೆ ಶಾಲೆಯಲ್ಲಿ ಪರಿಸರ  ಜಾಗೃತಿ ದಿನ ಆಚರಣೆ Read More »

error: Content is protected !!
Scroll to Top