ದಕ್ಷಿಣ ಕನ್ನಡ

ಸಿಹಿತಿಂಡಿಯಲ್ಲಿ ಕೈದಿಗೆ ಡ್ರಗ್ಸ್‌ ಕೊಡಲು ಯತ್ನಿಸಿದ ಮಹಿಳೆ ವಶ

ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮುಹಮ್ಮದ್ ಅಸ್ಕರ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.10ರಂದು ಮಧ್ಯಾಹ್ನ ಸಂದರ್ಶಕಿಯಾಗಿ ರಮ್ಸೂನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್‌ಗೆ ನೀಡಲು ಬೇಕರಿ ತಿಂಡಿಗಳನ್ನು ಕೊಂಡೊಯ್ದಿದ್ದಳು. ಇದನ್ನು ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿವೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಟ್ಟಿದ್ದಾನೆ. ಅದನ್ನು ತಂದು […]

ಸಿಹಿತಿಂಡಿಯಲ್ಲಿ ಕೈದಿಗೆ ಡ್ರಗ್ಸ್‌ ಕೊಡಲು ಯತ್ನಿಸಿದ ಮಹಿಳೆ ವಶ Read More »

ಸುಳ್ಯ: 13 ವರ್ಷದ ಬಾಲಕಿ ಗರ್ಭಿಣಿ ಎಂದು ವರದಿ ಕೊಟ್ಟು ಎಡವಟ್ಟು ಮಾಡಿಕೊಂಡ ವೈದ್ಯ

ಗಂಭೀರ ಲೋಪ ಮಾಡಿದ ಡಾಕ್ಟರ್‌ ಕೂಡಲೇ ವರ್ಗಾವಣೆ, ತನಿಖೆಗೆ ಆದೇಶ ಸುಳ್ಯ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಆಘಾತಕಾರಿ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದೂರಿನ ಬೆನ್ನಲ್ಲೇ ಈ ವೈದ್ಯಾಧಿಕಾರಿಯನ್ನು ಇಲ್ಲಿಂದ ವರ್ಗಾಯಿಸಲಾಗಿದ್ದು, ಇಡೀ ಘಟನೆಯ ತನಿಖೆಗೆ ಆದೇಶಿಸಲಾಗಿದೆ. ವೈದ್ಯಾಧಿಕಾರಿ ಎಡವಟ್ಟು ಮಾಡಿದ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ

ಸುಳ್ಯ: 13 ವರ್ಷದ ಬಾಲಕಿ ಗರ್ಭಿಣಿ ಎಂದು ವರದಿ ಕೊಟ್ಟು ಎಡವಟ್ಟು ಮಾಡಿಕೊಂಡ ವೈದ್ಯ Read More »

ಮಂಗಳೂರು: ಲಂಚ ಸ್ವೀಕರಿಸಿದ ಐವರು ಪೊಲೀಸರು ಅಮಾನತು

ಅಪಘಾತವಾದ ಕಾರನ್ನು ಬಿಡುಗಡೆ ಮಾಡಲು 50 ಸಾವಿರ ಲಂಚ ಕೇಳಿದ್ದ ಪೊಲೀಸರು ಮಂಗಳೂರು: ವಾಹನ ಪರವಾನಗಿ ಮರಳಿ ನೀಡಲು 50 ಸಾವಿರ ರೂ. ಲಂಚದ ಬೇಡಿಕೆಯಿರಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಲಂಚದ ಬೇಡಿಕೆಯಿರಿಸಿದ ಪ್ರಕರಣದಲ್ಲಿ ತಸ್ಲೀಂ ಹಾಗೂ ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.ತಸ್ಲೀಂ ಮತ್ತು ವಿನೋದ್ ಲಂಚ ಬೇಡಿಕೆ ಬಗ್ಗೆ ಮಾಹಿತಿ ಗೊತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ

ಮಂಗಳೂರು: ಲಂಚ ಸ್ವೀಕರಿಸಿದ ಐವರು ಪೊಲೀಸರು ಅಮಾನತು Read More »

ಜಾಹೀರಾತು ಬ್ಯಾನರ್ ಗೆ ಬೆಂಕಿ | ಆರೋಪಿ ಬಂಧನ

ಗುರುವಾಯನಕೆರೆ: ದಿನಸಿ ಅಂಗಡಿಯೊಂದರ ಎದುರಿನಲ್ಲಿರಿಸಿದ ಜಾಹೀರಾತು ಬ್ಯಾನರ್ ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಸಾಲವನ್ನು ಹಿಂತಿರುಗಿಸಲು ತಿಳಿಸಿದ ಎಂಬ ಕಾರಣಕ್ಕಾಗಿ ಅಂಗಡಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ದಿನಸಿ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫಲಕದ ಬ್ಯಾನರ್ ಗೆ ಜು. 10 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ವ್ಯಕ್ತಿಯೊರ್ವ ಬೆಂಕಿ ಹಚ್ಚಿ ಓಡಿಹೋಗಿದ್ದ. ಅಂಗಡಿಯವರು ಬೆಳಗ್ಗೆ

ಜಾಹೀರಾತು ಬ್ಯಾನರ್ ಗೆ ಬೆಂಕಿ | ಆರೋಪಿ ಬಂಧನ Read More »

ಸವಣೂರು-65 ಬೂತ್ ಸಮಿತಿಯಿಂದ ಗುರು ಪೂರ್ಣಿಮೆ | ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅನಿತಾ ಲಕ್ಷ್ಮಣ ಗೌಡರಿಗೆ ಗುರುವಂದನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಸವಣೂರು- 65 ಬೂತ್ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಗುರುಪೂರ್ಣಿಮೆ ನಡೆಯಿತು. ಸವಣೂರು ಬೇರಿಕೆ ನಿವಾಸಿ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ಪ್ರೌಢಶಾಲೆಗಳಲ್ಲಿ ದೈಹಿಕಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಕೃಷಿ ಕಾರ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅನಿತಾ ಲಕ್ಷ್ಮಣ ಗೌಡರಿಗೆ ಗುರುವಂದನೆ  ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ದ ಕ

ಸವಣೂರು-65 ಬೂತ್ ಸಮಿತಿಯಿಂದ ಗುರು ಪೂರ್ಣಿಮೆ | ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅನಿತಾ ಲಕ್ಷ್ಮಣ ಗೌಡರಿಗೆ ಗುರುವಂದನೆ Read More »

ಸುಳ್ಯ : ಗ್ರಾಪಂನ ಘನ ತ್ಯಾಜ್ಯ ಘಟಕ ಬೆಂಕಿಗಾಹುತಿ

ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಘಟಕ ಹೊತ್ತಿ ಉರಿದಿದೆ. ಬುಧವಾರ ಸಂಜೆ ಘಟನೆ ನಡೆದಿದೆ. ಘಟಕದಲ್ಲಿ ತ್ಯಾಜ್ಯ ಪೂರ್ತಿಯಾಗಿ ಬೇರ್ಪಡಿಸಿ ತುಂಬಿಡಲಾಗಿತ್ತು. ಬೆಂಕಿ ತಗುಲಿ ಈ ತ್ಯಾಜ್ಯ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ವಸ್ತುಗಳಿಗೆ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ ಉರಿದಿದೆ. ಘನತ್ಯಾಜ್ಯ ವಿಲೇವಾರಿ ಮಾಡುವ ನಾಲ್ಕು

ಸುಳ್ಯ : ಗ್ರಾಪಂನ ಘನ ತ್ಯಾಜ್ಯ ಘಟಕ ಬೆಂಕಿಗಾಹುತಿ Read More »

ಕಡಿದು ಬಿದ್ದ ವಿದ್ಯುತ್‌ ತಂತಿ ತುಳಿದು ವ್ಯಕ್ತಿ ಸಾವು

ಸುಳ್ಯ: ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಯರ್ ತುಳಿದು ವಿದ್ಯುತ್ ಆಘಾತದಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತಪಟ್ಟವರನ್ನು ಕಲ್ಲಪಣೆಯ ದಿವಾಕರ ಆಚಾರ್ಯ (45) ಎಂದು ಗುರುತಿಸಲಾಗಿದೆ. ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರನ್ನು ನೋಡದೆ ತುಳಿದಿದ್ದರು. ವಿದ್ಯುತ್‌ ಆಘಾತಕ್ಕೆ ಒಳಗಾದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಪೋಸ್ಟ್‌ಮಾರ್ಟಮ್ ನಡೆಸಿ ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ.

ಕಡಿದು ಬಿದ್ದ ವಿದ್ಯುತ್‌ ತಂತಿ ತುಳಿದು ವ್ಯಕ್ತಿ ಸಾವು Read More »

ಶಾಲಾ ಬಾಲಕನಿಗೆ ಬೆದರಿಕೆ : ಯುವಕನ ಬಂಧನ

ಬಸ್‌ ನಿಲ್ದಾಣದಲ್ಲಿ ಸಹಪಾಠಿಯ ಜೊತೆ ಮಾತನಾಡುತ್ತಿದ್ದ ಬಾಲಕನಿಗೆ ಬೆದರಿಕೆ ವಿಟ್ಲ : ಖಾಸಗಿ ಬಸ್ ನಿಲ್ದಾಣದ ಸಮೀಪ ಶಾಲಾ ಸಹಪಾಠಿಯೊಂದಿಗೆ ಮಾತನಾಡುತ್ತಿದ್ದ ಬಾಲಕನಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಾಲಕ ತನ್ನ ಸಹಪಾಠಿಯ ಜೊತೆಗೆ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಬಾಲಕನಿಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಮಂಜೇಶ್ವರ ಎಣ್ಮಕಜೆ ನಿವಾಸಿ ಪದ್ಮರಾಜ್ ಬಂಧಿಸಲ್ಪಟ್ಟಿರುವ ಯುವಕ. ಬಾಲಕ ತನ್ನ ಶಾಲಾ ಸಹಪಾಠಿಯೊಂದಿಗೆ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದು, ಈ ಸಂದರ್ಭ

ಶಾಲಾ ಬಾಲಕನಿಗೆ ಬೆದರಿಕೆ : ಯುವಕನ ಬಂಧನ Read More »

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತುಂಬೆ ಗ್ರಾಮದ ಪರ್ಲಕ್ಕೆಯ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ತೇಜಸ್ ಮೊಡಂಕಾಪುವಿನ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಆತನಿಗೆ ಪರೀಕ್ಷೆ ಇದ್ದು, ಸಂಜೆ ವೇಳೆ ಕ್ಲಾಸಿನಿಂದ ಮನೆಗೆ ಬಂದಿದ್ದಾನೆ. ತಂದೆ ತಾಯಿ ಇಬ್ಬರು ನೌಕಯಲ್ಲಿದ್ದು, ಅವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ. ತೇಜಸ್‌ ಎಂದಿನಂತೆ ಸಂಜೆ ಮನೆಗೆ ಬಂದು ನೇಣು ಹಾಕಿಕೊಂಡಿದ್ದ. ತಂದೆ

ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಬಾಲಕಿಯನ್ನು ಅಪಹರಿಸಿದ ದಂಪತಿ ಸಹಿತ ಮೂವರ ಸೆರೆ

ಮಂಗಳೂರು: ಉಳ್ಳಾಲದಿಂದ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಲು ಪ್ರಮುಖ ಆರೋಪಿಗೆ ದಂಪತಿ ನೆರವಾಗಿದ್ದರು ಎನ್ನಲಾಗಿದೆ. 16ರ ಹರೆಯದ ಮಗಳು ಮನೆಯಿಂದ ಹೊರ ಹೋದವಳು ನಂತರ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಶಹಬಾಝ್ (27) ಹಾಗೂ ಆತನಿಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್

ಬಾಲಕಿಯನ್ನು ಅಪಹರಿಸಿದ ದಂಪತಿ ಸಹಿತ ಮೂವರ ಸೆರೆ Read More »

error: Content is protected !!
Scroll to Top