ದಕ್ಷಿಣ ಕನ್ನಡ

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ | 1.51 ಕೋಟಿ ರೂ. ಲಾಭ: ಶೇ. 20 ಡಿವಿಡೆಂಡ್ ಘೋಷಣೆ

ಸುಳ್ಯ: ಗೌಡರ ಯುವ ಸೇವಾಸಂಘ ಸುಳ್ಯ ಪ್ರವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ.ಆ. ಸೊಸೈಟಿಯ ವಾರ್ಷಿಕ ಮಹಾಸಭೆ ಸೆ.16ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ಇಲ್ಲಿ ನಡೆಯಿತು. ಸಂಘವು 2022-23ನೇ ಆರ್ಥಿಕ ವರ್ಷದಲ್ಲಿ 1.51 ಕೋಟಿ ಲಾಭ ಗಳಿಸಿದ್ದು, ಶೇ. 20 ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಘೋಷಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಯ , ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ | 1.51 ಕೋಟಿ ರೂ. ಲಾಭ: ಶೇ. 20 ಡಿವಿಡೆಂಡ್ ಘೋಷಣೆ Read More »

ಬೈಕ್ ಕಳ್ಳನ ಬಂಧನದಿಂದ ಬಯಲಾಯ್ತು ಮತ್ತೊಂದು ಕೃತ್ಯ!

ಸುಳ್ಯ: ಬೈಕ್ ಕಳ್ಳತನ ಪ್ರಕರಣಕ್ಜೆ ಸಂಬಂಧಪಟ್ಟು ಆರೋಪಿ ಕೊಡಗು ಸೋಮವಾರಪೇಟೆಯ ಬಸವನಹಳ್ಳಿಯ ಸುಬ್ರಮಣಿ (26) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸೆ 16ರಂದು ದಾಖಲಾಗಿದ್ದ ಮೋಟರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಕುಂಜ ಎಂಬಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆಇದಲ್ಲದೆ ಆರೋಪಿ

ಬೈಕ್ ಕಳ್ಳನ ಬಂಧನದಿಂದ ಬಯಲಾಯ್ತು ಮತ್ತೊಂದು ಕೃತ್ಯ! Read More »

ಪುರಾತನ ಕದ್ರಿ ದೇವಳವೇ ಉಗ್ರರ ಟಾರ್ಗೆಟ್??!! NIA ಮಾಹಿತಿ

ಮಂಗಳೂರು: ಮಂಗಳೂರು ನಗರದ ನಾಗುರಿಯ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಗುರಿ ನಗರದ ಅತ್ಯಂತ ಪುರಾತನ ಶ್ರೀ ಕದ್ರಿ ದೇಗುಲವೇ ಆಗಿತ್ತು ಎನ್ನುವುದು ಎನ್‌ಐಎ ತನಿಖೆಯಿಂದ ಬಯಲಾಗಿದೆ. 2022 ನವೆಂಬರ್ 19ರಂದು ನಗರದ ನಾಗುರಿಯ ಗರೋಡಿ ಬಳಿ ಸಂಚಾರದಲ್ಲಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಪಡೀಲ್ ನಲ್ಲಿ ರಿಕ್ಷಾ ಹತ್ತಿದ್ದ ಶಂಕಿತ ಉಗ್ರ ಶಾರೀಕ್‌ ಬಳಿಯಿದ್ದ ಕುಕ್ಕರ್ ಬಾಂಬ್ ನಾಗುರಿ ಬಳಿ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಇದರಿಂದ ಶಾರೀಕ್ ಹಾಗೂ ರಿಕ್ಷಾ ಚಾಲಕ

ಪುರಾತನ ಕದ್ರಿ ದೇವಳವೇ ಉಗ್ರರ ಟಾರ್ಗೆಟ್??!! NIA ಮಾಹಿತಿ Read More »

ಕೊನೆಗೂ ಬಾರಲೇ ಇಲ್ಲ ಮನೆಯವರು, ಪರಿಚಯಸ್ಥರು!! | 13 ದಿನಗಳ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರು!

ಸುಳ್ಯ: ಮೃತಪಟ್ಟ ಹೋಟೆಲ್ ಕಾರ್ಮಿಕನ ಮೃತದೇಹವನ್ನು ಕೊಂಡೊಯ್ಯಲು ಮನೆಯವರು ಬಾರದ ಹಿನ್ನೆಲೆಯಲ್ಲಿ ಪೊಲೀಸರೇ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಉತ್ತರ ಭಾರತ ಮೂಲದ ಲೂಲು ಮೃತಪಟ್ಟಿದ್ದರು. ಸುಳ್ಯದ ರಥಬೀದಿಯ ಸ್ವಾಮಿ ಪ್ರಸಾದ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಇವರ ಮೃತದೇಹವನ್ನು ಕೊಂಡೊಯ್ಯಲು ಮನೆಯವರು ಬಾರದ ಹಿನ್ನೆಲೆಯಲ್ಲಿ ಕೆವಿಜಿ ಆಸ್ಪತ್ರೆಯ ಶಿಥಿಲೀಕರಣ ಘಟಕದಲ್ಲಿ ಮೃತದೇಹವನ್ನು ಇರಿಸಲಾಗಿತ್ತು. ವ್ಯಕ್ತಿಯ ಸಂಬಂಧಿಕರು ಯಾರಾದರೂ ಇದ್ದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ

ಕೊನೆಗೂ ಬಾರಲೇ ಇಲ್ಲ ಮನೆಯವರು, ಪರಿಚಯಸ್ಥರು!! | 13 ದಿನಗಳ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರು! Read More »

ಚಾರ್ಮಾಡಿ ಘಾಟ್ ಪ್ರಪಾತಕ್ಕೆ ಉರುಳಿದ ಲಾರಿ!

ಬೆಳ್ತಂಗಡಿ : ದಟ್ಟ ಮಂಜು ಆವರಿಸಿದ ಪರಿಣಾಮ ಚಾರ್ಮಾಡಿ ಘಾಟಿಯಯಲ್ಲಿ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನೂರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಘಟನೆ ನಡೆದಿದೆ. ಸೋಮನಕಾಡು ನೀರಿನ ಫಾಲ್ಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಲಾರಿ ಉರುಳಿ ಪ್ರಪಾತದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ಮರದಲ್ಲೇ ಸಿಲುಕಿಕೊಂಡಿರುವುದರಿಂದ ಚಾಲಕ, ನಿರ್ವಾಹಕ ಪ್ರಾಣಾಪಾಯದಿಂದ ಪಾರಾದಂತಾಗಿದೆ.

ಚಾರ್ಮಾಡಿ ಘಾಟ್ ಪ್ರಪಾತಕ್ಕೆ ಉರುಳಿದ ಲಾರಿ! Read More »

ಪಿ.ಎಂ. ವಿಶ್ವಕರ್ಮ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆಯೇ ಮೋದಿ? | ಪಿಎಂ, ಕೇಂದ್ರ ಸಚಿವರು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಸದ, ಶಾಸಕರು, ಅಧಿಕಾರಿಗಳ ಸಿದ್ಧತೆ!

ಮಂಗಳೂರು : ಪಿಎಂ ವಿಶ್ವಕರ್ಮ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದು, ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಪಿಎಂ ವಿಶ್ವಕರ್ಮ ಯೋಜನೆಗೆ ಮಂಗಳೂರಿನ ಟಿ.ಎಂ.ಎ. ಪೈ.ಇಂಟರ್ ನ್ಯಾಷನಲ್ ಹಾಲ್ ನಲ್ಲಿ  ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆನ್‍ ಲೈನ್‍ ನಲ್ಲಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನಾ ಹಾಗೂ ಹೈನುಗಾರಿಕಾ ಸಚಿವ

ಪಿ.ಎಂ. ವಿಶ್ವಕರ್ಮ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆಯೇ ಮೋದಿ? | ಪಿಎಂ, ಕೇಂದ್ರ ಸಚಿವರು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಸದ, ಶಾಸಕರು, ಅಧಿಕಾರಿಗಳ ಸಿದ್ಧತೆ! Read More »

ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ | ಹೆಚ್ಚಿನ ಅನಾಹುತ ತಪ್ಪಿಸಿದ ಸ್ಥಳೀಯರು

ಸುಬ್ರಹ್ಮಣ್ಯ: ನಿಲ್ಲಿಸಿದ್ದ ಕಾರಿನಲ್ಲಿ ಹಠಾತ್ತನೆ ಬೆಂಕಿ ಹತ್ತಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲಾ ಬಳಿ ನಡೆದಿದೆ. ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಯಾತ್ರಾರ್ಥಿ ಕುಟುಂಬವೊಂದು ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲಾ ಬಳಿ ಕಾರು ನಿಲ್ಲಿಸಿ ದೇವರ ದರ್ಶನಕ್ಕೆ ತೆರಳಿತ್ತು. ಈ ಸಂದರ್ಭ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸುಬ್ರಹ್ಮಣ್ಯದ ಗಣೇಶ್ ಭಟ್‍ ಹಾಗೂ ಮತ್ತಿತರರು ಈ ಕಾರಿನ ಹಿಂದೆ ಸಾಲು ಸಾಲಾಗಿ ನಿಂತಿದ್ದ ಕಾರಿಗೆ ಬೆಂಕಿ ತಗಲದಂತೆ ಹೆಚ್ಚಿನ

ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ | ಹೆಚ್ಚಿನ ಅನಾಹುತ ತಪ್ಪಿಸಿದ ಸ್ಥಳೀಯರು Read More »

ಕಾಡಾನೆಗಳ ದಾಳಿಗೆ ಅಪಾರ ಕೃಷಿ ನಾಶ

ಬೆಳ್ತಂಗಡಿ: ಚಾರ್ಮಾಡಿಯ ಮುಗುಳಿದಡ್ಕ ಸೇಸಪ್ಪ ಗೌಡ ಎಂಬವರ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿ ಅಡಿಕೆ ಹಾಗೂ ತೆಂಗಿನ ಮರಕ್ಕೆ ಹಾನಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ದಿನಗಳ ಹಿಂದೆ ತೋಟಕ್ಕೆ ದಾಳಿ ಮಾಡಿದೆ. ಕಾಡಾನೆಗಳು ಪರಿಸರದ ಅಲ್ಲಲ್ಲಿ ದಾಳಿ ನಡೆಸುತ್ತಿದ್ದು, ಒಂದೇ ಹಿಂಡಿನಿoದ ದಾಳಿ ನಡೆಯುತ್ತಿದೆಯೇ, ಅಥವಾ ಇನ್ನಷ್ಟು ಕಾಡಾನೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಕಾಡಾನೆಗಳ ದಾಳಿಗೆ ಅಪಾರ ಕೃಷಿ ನಾಶ Read More »

ದ.ಕ. ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯ ಪ್ರಮುಖರು | ಮುಂದಿನ ಚುನಾವಣೆ ಕಾರ್ಯಚಟುವಟಿಕೆ ಹಿನ್ನೆಲೆಯಲ್ಲಿ ಸಭೆ

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ರಾಜ್ಯದ ತಂಡ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಪ್ರಮುಖರ ಸಮ್ಮುಖದಲ್ಲಿ ಸಭೆ ನಡೆಸಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ. ಜಿಲ್ಲಾ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಸುನಿಲ್ ಕುಮಾರ್, ವಿಭಾಗ ಪ್ರಭಾರಿ

ದ.ಕ. ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯ ಪ್ರಮುಖರು | ಮುಂದಿನ ಚುನಾವಣೆ ಕಾರ್ಯಚಟುವಟಿಕೆ ಹಿನ್ನೆಲೆಯಲ್ಲಿ ಸಭೆ Read More »

ಮುರಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಸುಳ್ಯ: ಮುರುಳ್ಯ ಅಲೆಕ್ಕಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 38ನೇ ವಾರ್ಷಿಕ ಸಾಮಾನ್ಯ ಸಭೆ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಶೋಕ್ ಕುಮಾರ್ ರೈ, ನಿತ್ಯಾನಂದ ಮುಂಡೋಡಿ, ಸತೀಶ್ ರಾವ್, ಹರೀಶ್, ಡಿ.ಟಿ. ಜನಾರ್ದನ, ಬಾಲಕೃಷ್ಣ ಗೌಡ ಹಾಗೂ ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮುರಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ Read More »

error: Content is protected !!
Scroll to Top