ದಕ್ಷಿಣ ಕನ್ನಡ

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು

ಬೆಳ್ತಂಗಡಿ: ಮೂರು ವರ್ಷ ಮಗುವೊಂದು ಮನೆಯಿಂದ ರಸ್ತೆಗೆ ಬಂದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಣಂದೂರಿನ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಹಾಗೂ ಉಷಾ ದಂಪತಿ ಪುತ್ರ ಕೌಶಿಕ್‍ ಮೃತಪಟ್ಟ ಮಗು. ರಸ್ತೆ ಬದಿಯಲ್ಲೇ ಮನೆಯಿದ್ದು, ಯಾರೂ ಇಲ್ಲದ ವೇಳೆ ಮಗು ರಸ್ತೆಗೆ ಓಡಿಬಂದಿದೆ. ಈ ಸಂದರ್ಭ ಬಂದ ಆಟೋ ರಿಕ್ಷಾ ಮಗುವಿಗೆ ಡಿಕ್ಕಿ ಹೊಡದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಬೆಳ್ತಂಗಡಿ […]

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು Read More »

ಐದು ಗೋಣಿ ಸುಲಿದ ಅಡಿಕೆ ಕಳವು : ಪ್ರಕರಣ ದಾಖಲು

ಬೆಳ್ಳಾರೆ: ಸುಲಿದು ದಾಸ್ತಾನಿಟ್ಟಿದ್ದ ಐದು ಗೋಣಿ ಅಡಿಕೆ ಕಳವಾದ ಘಟನೆ ಸುಳ್ಯ ತಾಲೂಕಿನ ಕುಳ್ಳಂಪಾಡಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳವು ನಡೆದಿದ್ದು, ಕುಳ್ಳಂಪಾಡಿ ನಿವಾಸಿ ಹಿರಿಯಣ್ಣ ಗೌಡರು ಮೂರು ದಿನಗಳ ಹಿಂದೆ ಕುಟುಂಬ ಸಮೇತ ತನ್ನ ಅಕ್ಕನ ಮನೆಗೆ ಹೋದವರು ಮನೆಗೆ ಬಂದು ನೋಡಿದಾಗ ಸುಲಿದಿಟ್ಟಿದ್ದ ಅಡಿಕೆ ಐದು ಗೋಣಿ ಅಡಿಕೆ ಕಳವಾಗಿರುವುದು ಬೆಳಕಿ ಬಂದಿದೆ. ಕಳವಾದ ಅಡಿಕೆ ಮೌಲ್ಯ ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಗೆ ದೂರು

ಐದು ಗೋಣಿ ಸುಲಿದ ಅಡಿಕೆ ಕಳವು : ಪ್ರಕರಣ ದಾಖಲು Read More »

ಅರುಣ್ ಕುಮಾರ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ | ಸ್ವಾಗತಿಸಿದ ಕಾರ್ಯಕರ್ತರು

ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಇಂದು ಸಂಜೆ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಅವರನ್ನು ಶಾಲು ಹಾಕಿ ಸ್ವಾಗತಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಮಂಗಳೂರಿಗೆ ಭೇಟಿ ನೀಡುವ ಸುದ್ದಿ ತಿಳಿಯುತ್ತಿದ್ದಂತೆ ಹಲವಾರು ಕಾರ್ಯಕರ್ತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ಮಂದಿ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ್ದಾರೆ ಎನ್ನಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ | ಸ್ವಾಗತಿಸಿದ ಕಾರ್ಯಕರ್ತರು Read More »

ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಎಣ್ಮೂರು ಶಾಲಾ ಮಕ್ಕಳಿಂದ ಶ್ರಮದಾನ

ನಿಂತಿಕಲ್ಲು: ಮಾ. 23 ರಂದು ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ನಡೆಯುವ ನೇಮೋತ್ಸವದ ಅಂಗವಾಗಿ ಸರಕಾರಿ ಪ್ರೌಢಶಾಲೆ ಎಣ್ಮೂರು ಶಾಲಾ ಸ್ಕೌಟ್-ಗೈಡ್ ಮಕ್ಕಳಿಂದ ಶ್ರಮದಾನ ನಡೆಯಿತು. ಎಣ್ಮೂರು ಶಾಲಾ ಸ್ಕೌಟ್-ಗೈಡ್ ನ 30 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗರಡಿಯ ಸುತ್ತ ಮುತ್ತಲ ಪ್ರದೇಶದಲ್ಲಿರುವ ಗಿಡ-ಗಂಟಿಗಳು, ಕಸ ಕಡ್ಡಿಗಳನ್ನು ತೆರವುಗೊಳಿಸಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರು, ಅಧ್ಯಾಪಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಎಣ್ಮೂರು ಶಾಲಾ ಮಕ್ಕಳಿಂದ ಶ್ರಮದಾನ Read More »

ಸ್ಕೂಟರ್ ಕಳವು : ಪ್ರಕರಣ ದಾಖಲು

ಬಂಟ್ವಾಳ: ಗ್ಯಾರೇಜ್ ಒಂದರ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮ್ಟಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ಸುರೇಶ್ ಎಂಬವರು ಆ್ಯಕ್ಸಿಸ್ ಸ್ಕೂಟರ್ ನಿಲ್ಲಿಸಿದ್ದರು. ಮರುದಿನ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸ್ಕೂಟರ್ ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಕಳವು : ಪ್ರಕರಣ ದಾಖಲು Read More »

ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರನ್ನು ಆಶೀರ್ವದಿಸಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಲೋಕಸಭೆ ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದರು. ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಕ್ಯಾ.ಬ್ರಿಜೇಶ್ ಚೌಟರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರನ್ನು ಆಶೀರ್ವದಿಸಿದ ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ !

ಉಪ್ಪಿನಂಗಡಿ: ಗೋಳಿತೊಟ್ಟು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಪಲ್ಟಿಯಾಗಿದ್ದು, ಕಾರು ಚಾಲಕ ಸಹಿತ ಮೂರು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ! Read More »

ದ್ವಿತೀಯ ಪಿಯುಸಿ ಪರೀಕ್ಷೆ ದ.ಕ. ಜಿಲ್ಲೆಯಿಂದ 220 ವಿದ್ಯಾರ್ಥಿಗಳು ಗೈರು | ರಾಜ್ಯದಲ್ಲಿ ಶೇ.96.88 ಹಾಜರಾತಿ

ಮಂಗಳೂರು: ಬುಧವಾರ ನಡೆದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ 220 ವಿದ್ಯಾರ್ಥಿಗಳು ಗೈರಾಗಿದ್ದು, ರಾಜ್ಯದಿಂದ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ದ.ಕ.ಜಿಲ್ಲೆಯಿಂದ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ 35,753 ವಿದ್ಯಾರ್ಥಿಗಳ ಪೈಕಿ 35,533 ಮಂದಿ ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ರಾಜ್ಯದಿಂದ ಪರೀಕ್ಷೆಗೆ 6,64,395 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 6,43,659 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 20,736 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಶೇ.96.88ರಷ್ಟು ಹಾಜರಾತಿ ದಾಖಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ದ.ಕ. ಜಿಲ್ಲೆಯಿಂದ 220 ವಿದ್ಯಾರ್ಥಿಗಳು ಗೈರು | ರಾಜ್ಯದಲ್ಲಿ ಶೇ.96.88 ಹಾಜರಾತಿ Read More »

ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಸೇನಾಧಿಕಾರಿ, ಯುವ ನಾಯಕ ಬ್ರಿಜೇಶ್‍ ಚೌಟ | ರಾಜ್ಯದಿಂದ ಇದೇ ಮೊದಲ ಬಾರಿಗೆ ಸೇನೆಯಲ್ಲಿ ದುಡಿದ ವ್ಯಕ್ತಿಗೆ ಸಂಸತ್ ಸ್ಪರ್ಧೆಗೆ ಟಿಕೇಟ್

ಮಂಗಳೂರು: ನಿವೃತ್ತ ಸೇನಾಧಿಕಾರಿ, ಮಂಗಳೂರಿನ ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಗೆ ಇಳಿದ ಯುವ ನಾಯಕನನ್ನು ಬಿಜೆಪಿ ಸಂಸತ್ತಿಗೆ ಆಯ್ದುಕೊಂಡಿದೆ. ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದು ಬಂದ ವ್ಯಕ್ತಿಯೊಬ್ಬರಿಗೆ ಸಂಸತ್ ಸ್ಪರ್ಧೆಯ ಟಿಕೆಟ್ ಕೊಡಲಾಗಿದೆ. ಮಂಗಳೂರಿನ ರಥಬೀದಿಯಲ್ಲಿ

ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ನಿವೃತ್ತ ಸೇನಾಧಿಕಾರಿ, ಯುವ ನಾಯಕ ಬ್ರಿಜೇಶ್‍ ಚೌಟ | ರಾಜ್ಯದಿಂದ ಇದೇ ಮೊದಲ ಬಾರಿಗೆ ಸೇನೆಯಲ್ಲಿ ದುಡಿದ ವ್ಯಕ್ತಿಗೆ ಸಂಸತ್ ಸ್ಪರ್ಧೆಗೆ ಟಿಕೇಟ್ Read More »

ಬೈಕ್ ಸವಾರನಿಗೆ ಎದುರಾದ ಕಾಡಾನೆ

ಬೆಳ್ತಂಗಡಿ: ಬೈಕ್ ಸವಾರರೊಬ್ಬರಿಗೆ ಕಾಡಾನೆ ಎದುರಾಗಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ. ಮುಂಡಾಜೆ-ದಿಡುಪೆ ರಸ್ತೆಯ ಕಡಿರುದ್ಯಾವರ ಗ್ರಾಮದ ಜೋಡು ನೆರಳು ಬೊಳ್ಳೂರು ಬೈಲು ಎಂಬಲ್ಲಿ ಇಲ್ಲಿನ ಕೃಷಿಕ ಜಾರ್ಜ್ ಕೆ.ಜೆ. ಎಂಬವರು ತನ್ನ ಮಕ್ಕಳನ್ನು ರಾತ್ರಿ 8 ಗಂಟೆ ಸುಮಾರಿಗೆ ಬೆದ್ರಬೆಟ್ಟು ಕಡೆಯಿಂದ ಟ್ಯೂಷನ್ ಮುಗಿಸಿ ಬೈಕ್ ನಲ್ಲಿ ಕರೆದುಕೊಂಡು ಬರುವ ವೇಳೆ ರಸ್ತೆ ಮಧ್ಯದಲ್ಲಿ ಕಾಡಾನೆ ಎದುರಾಗಿದೆ. ರಸ್ತೆಯ ತಿರುವಿನಲ್ಲಿ ಬೈಕ್ ಸವಾರನಿಗೆ ಸುಮಾರು 5 ಅಡಿ ಅಂತರದಲ್ಲಿ ಕಾಡಾನೆ ಕಂಡುಬಂದಿದ್ದು

ಬೈಕ್ ಸವಾರನಿಗೆ ಎದುರಾದ ಕಾಡಾನೆ Read More »

error: Content is protected !!
Scroll to Top