ದಕ್ಷಿಣ ಕನ್ನಡ

ವ್ಯಕ್ತಿ ಆಸ್ಪತ್ರೆಗೆ ದಾಖಲು : ಗುರುತು ಪತ್ತೆಗೆ ಮನವಿ

ಸುಳ್ಯ : ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯೋರ್ವರು ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವ್ಯಕ್ತಿಯ ಪರಿಚಯಕ್ಕಾಗಿ ಆಸ್ಪತ್ರೆಯಿಂದ  ಪೋಲಿಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಪರಿಚಯ ಇದ್ದವರು ಇವರ ಗುರುತನ್ನು ತಿಳಿಸುವಂತೆ  ಮನವಿ ಮಾಡಿದ್ದಾರೆ.

ವ್ಯಕ್ತಿ ಆಸ್ಪತ್ರೆಗೆ ದಾಖಲು : ಗುರುತು ಪತ್ತೆಗೆ ಮನವಿ Read More »

ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಂಟ್ವಾಳ:  ಬಂಟ್ವಾಳ ಪಾಳು ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಮೊಡಂಕಾಪಿನ ಗಾಂದೋಡಿ ಬಳಿ ನಡೆದಿದೆ. ಸ್ಥಳೀಯರ ಮಾಹಿತಿ ಪ್ರಕಾರ ನಾಯಿಯು ಕಳೆದ ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದು, ಬಾವಿಯನ್ನು ಯಾರೂ ಉಪಯೋಗಿಸದ ಹಿನ್ನೆಲೆಯಲ್ಲಿ ನಾಯಿ ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದು ನಾಯಿ ಬಾವಿಯಲ್ಲಿರುವುದು ಗೊತ್ತಾಗಿದ್ದು, ಗಾಂದೋಡಿ ನಿವಾಸಿ ವಿಶ್ವನಾಥ ಶೆಟ್ಟಿ ಅವರು ಪೊಲೀಸ್ 100 ಸಂಖ್ಯೆಗೆ ಕರೆ ಮಾಡಿ  ಬಳಿಕ ಅವರು  ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.

ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ Read More »

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ

ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮಂಜೇಶ್ವರ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಕೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಆನಂತರ ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ. ಈತ ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ  ವರ್ತಿಸುತ್ತಿದ್ದ ಕಾರಣಕ್ಕೆ ನೌಫಾಲ್ ನನ್ನು ಚಿಕಿತ್ಸೆಗೆಂದು ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಮೇ

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ Read More »

ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆ

ಬೆಳ್ತಂಗಡಿ: 2024ರ ಮನುಶ್ರೀ ಕನ್ನಡ ಸಾಹಿತ್ಯ ಪರಿಷತ್ತಿನ  ಮನೋಹರಿ ಪಾರ್ಥಸಾರಥಿ ‘ಮನುಶ್ರೀ ’ ದತ್ತಿ ಪ್ರಶಸ್ತಿಗೆ  ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮನೋಹರಿ ಪಾರ್ಥಸಾರಥಿಯವರು ಈ ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ಸಾಹಿತ್ಯದಲ್ಲಿ  ಮಹತ್ವದ ಸೇವೆ ಸಲ್ಲಿಸಿದ ಬರಹಗಾರರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಬೆಳ್ತಂಗಡಿಯ ತೆಂಕಕಾರಂದೂರಿನವರಾದ ಪ.ರಾಮಕೃಷ್ಣ ಶಾಸ್ತ್ರಿಗಳು ಕನ್ನಡ ಸಾಹಿತ್ಯ ಕಂಡ ವಿಶಿಷ್ಟ ಲೇಖಕರು. ವೃತ್ತಿಯಲ್ಲಿ ಕೃಷಿಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಕರು. 1964ರಿಂದ ಹಿಡಿದು ಇಂದಿನವರೆಗೂ ದಣಿವರಿಯದೆ  ನಿರಂತರವಾಗಿ

ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಆಯ್ಕೆ Read More »

ಮೊಬೈಲ್ ರಿಚಾರ್ಚ್‍ ಗೆ ಬಂದ ಯುವತಿಯ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕ | ಪೊಲೀಸರಿಂದ ವಿಚಾರಣೆ | ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಸುಳ್ಯ: ಏರ್ ಟೆಲ್ ಶೋ ರೋಂ ಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ವಿರುದ್ಧ ಯುವತಿಯ ಮನೆಯವರು ಪೋಲಿಸರಿಗೆ ದೂರು ನೀಡಿದ ಘಟನೆ ಇಂದು ನಡೆದಿದೆ. ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ಮೊಬೈಲ್ ರಿಚಾರ್ಜ್ ಗೆ ಬಂದಾಗ ಯುವತಿಯನ್ನು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ಈ ಸಂದರ್ಭ ಯುವಕ ಯುವತಿಗೆ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿರುತ್ತಾನೆ. ಗಮನಿಸಿದ ಯುವತಿ ಆಕ್ಷೇಪಿಸಿ ಆತನ ಕೈಯಿಂದ ಮೊಬೈಲ್ ಕಸಿದುಕೊಂಡು ಫೋಟೋ ಕ್ಲಿಕ್ಕಿಸಿದ್ದನ್ನು

ಮೊಬೈಲ್ ರಿಚಾರ್ಚ್‍ ಗೆ ಬಂದ ಯುವತಿಯ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕ | ಪೊಲೀಸರಿಂದ ವಿಚಾರಣೆ | ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು Read More »

ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ l ಹಿಂದೂ ಹಿತರಕ್ಷಣೆ ಸಮಿತಿ ಸಂಚಾಲಕ ರತ್ನಾಕರ‌ ಅಮೀನ್ ಎಚ್ಚರಿಕೆ

ಕಾರ್ಕಳ : ಕರಾವಳಿಯು ಪರಶುರಾಮನ ಸೃಷ್ಟಿ, ಆದರೂ ಇಲ್ಲಿಯವರೆಗೆ ಕರಾವಳಿಯ ಯಾವುದೇ ಭಾಗದಲ್ಲೂ ಪರಶುರಾಮನ ಬಗೆಗಿನ ಇತಿಹಾಸವನ್ನು ಸಾರ್ವಜನಿಕರಿಗೆ ತೋರಿಸುವ ಯಾವುದೇ ಕಾರ್ಯಗಳು ಆಗಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾ‌ರ್ ಅವರ ವಿಶಿಷ್ಟ ಕಲ್ಪನೆಯೇ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್. ಪ್ರವಾಸೋದ್ಯಮ ದೃಷ್ಟಿಕೋನದಲ್ಲಿ ಅಭಿವೃದ್ಧಿಪಡಿಸಿದ ಥೀಮ್ ಪಾರ್ಕ್‌ಗೆ ಕಾಂಗ್ರೆಸ್ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿರುವುದನ್ನು ಹಿಂದೂ ಹಿತರಕ್ಷಣಾ ಸಮಿತಿ ಖಡಾಖಂಡಿತವಾಗಿ ಖಂಡಿಸುತ್ತದೆ ಎಂದು ಸಮಿತಿಯ ಸಂಚಾಲಕ ರತ್ನಾಕ‌ರ್ ಅಮೀನ್

ರಾಜಕಾರಣವನ್ನು ಪರಶುರಾಮನ ಮೇಲೆ ತೋರಿಸಬೇಡಿ l ಹಿಂದೂ ಹಿತರಕ್ಷಣೆ ಸಮಿತಿ ಸಂಚಾಲಕ ರತ್ನಾಕರ‌ ಅಮೀನ್ ಎಚ್ಚರಿಕೆ Read More »

ವಿದ್ಯುತ್ ತಂತಿಗೆ ತಗುಲಿ ನವಿಲು ಸಾವು

ವಿಟ್ಲ: ವಿದ್ಯುತ್‌ ತಂತಿಗೆ ಸಿಲುಕಿ ನವಿಲೊಂದು ಮೃತಪಟ್ಟ ಘಟನೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ. ನವಿಲು ಮೃತಪಟ್ಟ ಬಗ್ಗೆ ಅಲ್ಲಿನ ಆಟೋ ರಿಕ್ಷಾ ಚಾಲಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ನವಿಲನ್ನು ಸ್ಥಳದಿಂದ ಅನಂತಾಡಿ ಆರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಹಸ್ತಾಂತರ ಮಾಡಿದ್ದಾರೆ.

ವಿದ್ಯುತ್ ತಂತಿಗೆ ತಗುಲಿ ನವಿಲು ಸಾವು Read More »

ಕೆದಿಲ ಶೌರ್ಯ ಸದಸ್ಯರಿಂದ ಚೆಯರ್ ಹಸ್ತಾಂತರ

ಕೆದಿಲ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆದಿಲ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇವಾ ಕೇಂದ್ರಕ್ಕೆ ಚೆಯರ್ ಕೊಡುಗೆಯಾಗಿ ನೀಡಿದರು. ಸೇವಾ ಕೇಂದ್ರಕ್ಕೆ 16 ಚೆಯರ್ ಗಳನ್ನು ಹಸ್ತಾಂತರಿಸಲಾಯಿತು. ಘಟಕದ ಸದಸ್ಯರಾದ ಗಿರೀಶ, ಜಗದೀಶ, ಶೀನಪ್ಪ, ವೆಂಕಪ್ಪ, ಪುರಂದರ ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿ ಮಾಡಿ ಸಿಎಸ್‍ ಸಿ ಸೇವಾದಾರೆ ಶ್ರೇಯಾ, ಸೇವಾಪ್ರತಿನಿಧಿ ಜಯಂತಿ ಅವರಿಗೆ ಹಸ್ತಾಂತರಿಸಿದರು

ಕೆದಿಲ ಶೌರ್ಯ ಸದಸ್ಯರಿಂದ ಚೆಯರ್ ಹಸ್ತಾಂತರ Read More »

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಳೆ | ಅಗಲಿದ ಕಲಾವಿದರಿಗೆ ನುಡಿನಮನ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆಯ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ದ್ಯೂತ  ಪ್ರಕರಣ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ. ಸುರೇಶ್ ರಾವ್, ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಜಯರಾಮ ಬಲ್ಯ ( ಕೌರವ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಕರ್ಣ )ಸತೀಶ್ ಆಚಾರ್ಯ ಮಾಣಿ (ಶಕುನಿ) ಶ್ರೀಮತಿ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಳೆ | ಅಗಲಿದ ಕಲಾವಿದರಿಗೆ ನುಡಿನಮನ Read More »

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ದುರಂತ ಘಟನೆ ಭಾನುವಾರ ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾನ್ ಅವರ ಪುತ್ರಿ ಮರಿಯಂ ನಾಶಿಯಾ (14) ಮೃತ ಬಾಲಕಿಯರು. ಬಂಟ್ವಾಳ ತಾಲೂಕಿನ ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರೊಂದಿಗೆ ಸಂಜೆ ಮಕ್ಕಳು ಸ್ಥಳೀಯ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತರಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು

ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು Read More »

error: Content is protected !!
Scroll to Top