ದಕ್ಷಿಣ ಕನ್ನಡ

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ

ಸಂಪಾಜೆ: ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ಸಂಪಾಜೆ ಮಸೀದಿ ಸಮೀಪ ಅರೆಕಲ್ಲು ರೋಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ಮಗುವಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಇದೇ ಜಾಗದಲ್ಲಿ ಮೂರು ಹಸುವಿಗೆ ವಾಹನವೊಂದು ಡಿಕ್ಕಿ ಹೊಡೆದು ಒಂದು ಹಸು ಮೃಪಟ್ಟಿತ್ತು. ಈ ಹಿಂದೆಯೂ ಕೂಡ ಹಲವು ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ Read More »

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು

ಸುಳ್ಯ : ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಹೋಟೆಲ್ ವೊಂದರಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲೇ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಶಬರಿಮಲೆಯ ಪಂದಳದಿಂದ ಬಂದು ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕೆಲಸ ನಿರತನಾಗಿದ್ದ ವಿಶ್ವನಾಥ ಎಂಬ ವ್ಯಕ್ತಿ ಸಾವಿಗೀಡಾಗಿರುವ ನತದೃಷ್ಟ. ಈತ ರಾತ್ರಿ ಹೋಟೆಲ್ ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡು ಇದ್ದ. ಆದರೆ ಊಟ ಮಾಡಿ ಮಲಗಿದವ ಬೆಳಗ್ಗಿನ ಸಮಯದಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ

ರಾತ್ರಿ ಮಲಗಿದಲ್ಲೇ ಹೋಟೆಲ್ ಕಾರ್ಮಿಕ ಸಾವು Read More »

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಉಪ್ಪಿನಂಗಡಿ: ಅಪ್ರಾಪ್ತ ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಕ್ಕಳ ಸಹಾಯವಾಣಿಯ ಮೂಲಕ ಸಲ್ಲಿಸಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ದೋರ್ಮೆ ಎಂಬಲ್ಲಿನ ಅಬ್ದುಲ್ಲಾ ಬಿಳಿಯೂರು (36 ) ಬಂಧಿತ ಆರೋಪಿ. ಎರಡು ಮಕ್ಕಳ ತಂದೆಯಾಗಿರುವ ಈತ 13 ವರ್ಷದ ಬಾಲಕನನ್ನು ಮನೆಯಲ್ಲಿ ಕೆಲಸವಿದೆ ಎಂದು ಹಾಗೂ ಸ್ಕೂಟಿ ಸವಾರಿ ಹೇಳಿ ಕೊಡುತ್ತೇನೆಂದು ಕರೆಯಿಸಿ ವಿವಿಧ ದಿನಗಳಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ

ಬಾಲಕನಿಗೆ ಅನ್ಯ ಕೋಮಿನ ವ್ಯಕ್ತಿಯಿಂದ ಲೈಂಗಿಕ ಕಿರುಕುಳ : ಆರೋಪಿ ಬಂಧನ Read More »

ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಪೈಕ ನಿವಾಸಿ ಕೃಷ್ಣ (55) ಹೊಡೆತದಿಂದ ಮೃತಪಟ್ಟವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಸೋಮವಾರ ಸಂಜೆ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಸ್ಸಿನಲ್ಲಿ ಬಂದಿದ್ದರು. ಕೊಕ್ಕಡದಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಪಶು ವೈದ್ಯಾಧಿಕಾರಿಯಾಗಿದ್ದ ಡಾ.ಕುಮಾರ್ ಎಂಬವರು  ಕೃಷ್ಣ ಅವರ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ

ಕುಡಿತದ ಅಮಲಿನಲ್ಲಿ ವ್ಯಕ್ತಿಗೆ ಹೊಡೆತ : ವ್ಯಕ್ತಿ ಸ್ಥಳದಲ್ಲೇ ಮೃತ್ಯು Read More »

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ 

ಮಂಗಳೂರು : ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ. ಕೃಷಿಕರಾಗಿರುವ  ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ  ನಿವಾಸಿ ಶ್ರೀನಿವಾಸ ಪೂಜಾರಿಯವರು   ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್  ವಿಮಾ ಕಂಪನಿಯ ಪಾಲಿಸಿ ಸಂಖ್ಯೆ OG-19-3125-6401-00000446 ಜೊತೆಗೆ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದು, ಈ ಪಾಲಿಸಿಯು ದಿನಾಂಕ 19.02.2019 ರಿಂದ ಪ್ರಾರಂಭವಾಗಿ,ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಪಾವತಿಸುವ ಮೂಲಕ ಮುಂದುವರಿಸಲಾಗಿತ್ತು. ಹೀಗಿರುವಾಗ,ಶ್ರೀನಿವಾಸ ಪೂಜಾರಿಯವರ ಕಾಲಿಗೆ ವಿದ್ಯುತ್

ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ  Read More »

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ.

ಉಪ್ಪಿನಂಗಡಿ: ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಉಮೇಶ ಶೆಣೈ, ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಶಿಕ್ಷಕ ಬಿ. ಸುಬ್ರಮಣ್ಯ ರಾವ್ ಪಾತಾಳ ಅಂಬಾಪ್ರಸಾದ್ ಮತ್ತು ಜಯಂತಿ ಪ್ರಸಾದ್ ಪಾತಾಳ ಸನ್ಮಾನಿಸಿದರು. ದಿವಾಕರ

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ. Read More »

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ಳಾರೆ: ಸುಳ್ಯದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಾರಿನಿಂದ ವರದಿಯಾಗಿದೆ. ನೆಟ್ಟಾರು ನಿವಾಸಿ ಚರಣ್ ಆತ್ಮಹತ್ಯೆ ಮಾಡಿಕೊಂಡವರು. ಚರಣ್ ಸುಳ್ಯದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು,  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ  ಪರಿಶೀಲನೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ನೆಟ್ಟಾರು ನಿವಾಸಿ ವಿದ್ಯಾರ್ಥಿ ಆತ್ಮಹತ್ಯೆ Read More »

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ

ಬೆಳ್ತಂಗಡಿ: ಒಂಟಿ ಸಲಗವೊಂದು  ರಸ್ತೆ ಮಧ್ಯೆ ಬಂದು ಬೊಲೇರೊ ವಾಹನಕ್ಕೆ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ನಡೆದಿದೆ. ಒಂಟಿ ಸಲಗವೊಂದು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ತಿರುಗಾಡುತ್ತಿತ್ತು, ನಿನ್ನೆ ಚಾರ್ಮಾಡಿ ಘಾಟ್ ಒಂದನೇ ತಿರುವಿನಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಬೊಲೇರೊ ವಾಹನಕ್ಕೆ ಒಂಟಿ ಸಲಗ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಚಿಕ್ಕಮಗಳೂರಿನಿಂದ ಮಂಗಳೂರು

ರಸ್ತೆಗೆ ಅಡ್ಡ ಬಂದ ಆನೆ: ಬೊಲೇರೊ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ Read More »

ಅನಾರೋಗ್ಯದಿಂದ ಯುವಕ ನಿಧನ

ಬಂಟ್ವಾಳ : ಯುವಕನೋರ್ವ ಅನಾರೋಗ್ಯದಿಂದ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಕುತ್ತಾರು ಎಂಬಲ್ಲಿ ನಡೆದಿದೆ. ಬಾಯಾರು ನಿವಾಸಿ ಮೌನೇಶ್ ಜೋಗಿ (24) ಮೃತಪಟ್ಟ ಯುವಕ. ನೇಮಕ್ಕೆ ಹೋಗಿ ಬಂದು ಕುತ್ತಾರು ಬಾಡಿಗೆ ಮನೆಯಲ್ಲಿ ಮಲಗಿದ್ದ ಮೌನೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅನಾರೋಗ್ಯದಿಂದ ಯುವಕ ನಿಧನ Read More »

ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ

ಮಂಗಳೂರು: ಚಿಪ್ಪು ಹೆಕ್ಕಲು ಹೋದ ಯುವಕರ ತಂಡದ ಓರ್ವ ನೀರು ಪಾಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್ (24) ನೀರು ಪಾಲಾದವರು. ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು, ಈ ಸಂದರ್ಭ ಯುವಕ ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ

ಚಿಪ್ಪು ಹೆಕ್ಕಲು ಹೋದ ಯುವಕ ಅಭಿಲಾಷ್ ನೀರು ಪಾಲು | ಮುಂದುವರಿದ ಶೋಧ ಕಾರ್ಯ Read More »

error: Content is protected !!
Scroll to Top