ದಕ್ಷಿಣ ಕನ್ನಡ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ | ಮೂರು ದಿನಗಳ ಕಾಲ ನಡೆಯಿತು ವಿವಿಧ ವೈದಿಕ ಕಾರ್ಯಕ್ರಮಗಳು

ಬೆಳ್ತಂಗಡಿ: ತಾಲೂಕಿನ ದೇವರಗುಡ್ಡೆ ಭಟ್ರಬೈಲು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶಿಲಾನ್ಯಾಸ, ಭೂಖನನಾದಿ ಸಪ್ತಶುದ್ಧಿ, ದ್ವಾದಶಮೂರ್ತಿ ಆರಾಧನೆ ಹಾಗೂ ಗೋಪೂಜೆ ಏ.19, 20 ಹಾಗೂ 22 ರಂದು ಮೂರು ದಿನಗಳ ಕಾಲ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಏ.19 ರಂದು ಸಂಜೆ 7 ಗಂಟೆಗೆ ಸುದರ್ಶನ ಹೋಮ ನಡೆಯಿತು. ಏ.20 ಶನಿವಾರ ಬೆಳಿಗ್ಗೆ 8 ರಿಂದ ಸಪ್ತಶುದ್ಧಿ, ಗಣಹೋಮ, ಗೋಪೂಜೆ, ದ್ವಾದಶಮೂರ್ತಿ ಆರಾಧನೆ, ಮಧ್ಯಾಹ್ನ 12.30 ಕ್ಕೆ […]

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ | ಮೂರು ದಿನಗಳ ಕಾಲ ನಡೆಯಿತು ವಿವಿಧ ವೈದಿಕ ಕಾರ್ಯಕ್ರಮಗಳು Read More »

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ

ಸುಳ್ಯ: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಬೈಲಿನಲ್ಲಿ ಇಂದು ಸಂಜೆ ಬೀಸಿದ ಭಾರಿ ಗಾಳಿಗೆ ಅಡಕೆ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ. ಇಂದು ಸಂಜೆ ಅಜ್ಜಾವರದ ಮೇನಾಲದ ವ್ಯಾಪ್ತಿಯಲ್ಲಿ ಮತ್ತು ಮೇದಿನಡ್ಕ, ಪಡ್ಡಂಬೈಲು ಭಾಗದಲ್ಲಿ ಮಾತ್ರ ಭಾರಿ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಕೂಡ ಹಾನಿಯಾಗಿದೆ. ಇಂದು ರಾತ್ರಿ ಅಜ್ಜಾವರ ವ್ಯಾಪ್ತಿಯಲ್ಲಿನ ಜನತೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. .

ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ Read More »

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು

ಮಂಗಳೂರು : ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪತ್ರದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು Read More »

“ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ | ಶಿವನ ಪ್ರೀತ್ಯರ್ಥ ಅತಿರುದ್ರ ಮಹಾಯಾಗ ಸೇವೆ ಕೈಗೊಳ್ಳಲು ಆನ್ಲೈನ್ ನೋಂದಣಿಗೂ ಅವಕಾಶ

ಕುಲ್ಕುಂದ: ಅದು ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿ. ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದ ‘’ಬಸವನಮೂಲ’’ ಎಂದೇ ಪ್ರಸಿದ್ಧಿಯಾಗಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಅತಿ ಪ್ರಿಯ ಎನ್ನಲಾದ ಸಾಮೂಹಿಕ ಅತಿರುದ್ರ ಮಹಾಯಾಗ ನಡೆಸಲು

“ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳದಲ್ಲಿ ಅಪರೂಪದ ಸಂಕಲ್ಪಕ್ಕೆ ಸಿದ್ಧತೆ | ಶಿವನ ಪ್ರೀತ್ಯರ್ಥ ಅತಿರುದ್ರ ಮಹಾಯಾಗ ಸೇವೆ ಕೈಗೊಳ್ಳಲು ಆನ್ಲೈನ್ ನೋಂದಣಿಗೂ ಅವಕಾಶ Read More »

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಮೃತ್ಯು

ಕಾರವಾರ: ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳಾದ ನಝೀರ್ ಅಹ್ಮದ್ (40),  ರೇಷಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಬೀದ್ ಅಹ್ಮದ್(12), ಅಲ್ಲೀಯಾ ಅಹ್ಮದ್ (10) ಹಾಗೂ ಮೋಹಿನ್ (6)  ಮೃತಪಟ್ಟ ಒಂದೇ ಕುಟುಂಬದವರು. ಮೃತರು ಪ್ರವಾಸಕ್ಕೆ ತೆರಳಿದ್ದಾಗ ಅಹ್ಮದ್ ಕುಟುಂಬ ಊಟ ಮಾಡಿ ಕಾಳಿ ನದಿ ದಡದಲ್ಲಿ ವಿಶ್ರಾಂತಿ

ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಮೃತ್ಯು Read More »

ವಿಳಂಬವಾಗಿ ಟಿಕೇಟ್ ನೀಡಿದ ವಿಚಾರ : ಪ್ರಯಾಣಿಕನ ಜತೆ ಅನುಚಿತವಾಗಿ ವರ್ತಿಸಿದ ಬಸ್ ಕಂಡಕ್ಟರ್

ಸುಬ್ರಹ್ಮಣ್ಯ: ಬಸ್ ಕಂಡಕ್ಟರ್ ಓರ್ವರು ವಿಳಂಬವಾಗಿ ಟಿಕೆಟ್ ನೀಡಿದ ಪರಿಣಾಮ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದು ಕಂಡಕ್ಟರ್ ಅನುಚಿತ ವರ್ತನೆ ತೋರಿದ ಘಟನೆ ಪಂಜದಿಂದ ವರದಿಯಾಗಿದೆ. ಪುತ್ತೂರು-ಕಾಣಿಯೂರು- ಸುಬ್ರಹ್ಮಣ್ಯ ಬಸ್ ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಬಾಳಿಲದ ಶೀನ ಎಂಬವರು ಸುಬ್ರಹ್ಮಣ್ಯಕ್ಕೆ ತೆರಳುವ ಸಲುವಾಗಿ ಪಂಜದಲ್ಲಿ ಮಂಬಾಗಿಲಿನಿಂದ ಬಸ್ ಏರಿದ್ದರು. ಬಸ್ ಹಿಂಬದಿ ಕುಳಿತ್ತಿದ್ದ ಕಂಡಕ್ಟರ್ ಹಲವು ಹೊತ್ತಾದರೂ ಬಾರದಿರುವುದನ್ನು ಗಮನಿಸಿ ಪ್ರಯಾಣಿಕ ಟಿಕೆಟ್ ನೀಡುವಂತೆ ಕರೆದು ತಿಳಿಸಿದ್ದರು. ಇದರಿಂದ ಕುಪಿತಗೊಂಡ

ವಿಳಂಬವಾಗಿ ಟಿಕೇಟ್ ನೀಡಿದ ವಿಚಾರ : ಪ್ರಯಾಣಿಕನ ಜತೆ ಅನುಚಿತವಾಗಿ ವರ್ತಿಸಿದ ಬಸ್ ಕಂಡಕ್ಟರ್ Read More »

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

ಬಂಟ್ವಾಳ : ನೇತ್ರಾವತಿ ನದಿಗೆ ಈಜಲು ಹೋದ ಬಾಲಕನೋರ್ವ ನೀರುಪಾಲಾದ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ಎಂಬಲ್ಲಿ ಶನಿವಾರ ಸಂಜೆ ವೇಳೆಗೆ ಸಂಭವಿಸಿದೆ. ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ನೀರುಪಾಲಾದ ಬಾಲಕ. ಕೆಮ್ಮನ್ ಪಳಿಕೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, 7 ನೇ ತರಗತಿ ತೇರ್ಗಡೆ ಹೊಂದಿದ್ದ ಸುಹೈಲ್‍ ತನ್ನ ಮನೆ ಸಮೀಪದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಸ್ನೇಹಿತರ ಜೊತೆಗೆ ಪಕ್ಕದ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದು ಆ ವೇಳೆ ಈ ಘಟನೆ ನಡೆದಿದೆ

ನದಿಗೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು Read More »

ಡಾ| ಆದಂ ಉಸ್ಮಾನ್ ನಿಧನ

ಬೆಳ್ತಂಗಡಿ : ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ| ಆದಂ ಉಸ್ಮಾನ್ (65) ಅಲ್ಪಕಾಲದ ಅಸೌಖ್ಯದಿಂದ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಪುತ್ತೂರು, ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು. ಮೃತದೇಹ ತಮ್ಮ ಮನೆಯಾದ ಕೆ.ಸಿ.ರೋಡ್ ಮಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಡಾ| ಆದಂ ಉಸ್ಮಾನ್ ನಿಧನ Read More »

ಮಾಜಿ ಮೇಯರ್ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯ‌ರ್, ಕಾಂಗ್ರೆಸ್‌ ನಾಯಕಿ ಕವಿತಾ ಸನಿಲ್ ಬಿಜೆಪಿ ಗೆ ಸೇರ್ಪಡೆಗೊಂಡರು. ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ವಿಜಯೇಂದ್ರ ಕವಿತಾ ಸನಿಲ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಕವಿತಾ ಸನಿಲ್, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

ಮಾಜಿ ಮೇಯರ್ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ Read More »

ಎರಡು ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಸುಳ್ಯ : ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡ ಘಟನೆ ಸುಳ್ಯ ಶ್ರೀರಾಮ್ ಪೇಟೆ ಬಳಿ ಇಂದು ನಡೆದಿದೆ. ಓಮ್ನಿ ಕಾರು ಹಾಗೂ ಸೆಲಾರಿಯೋ ಕಾರಿನ ನಡುವೆ ಶ್ರೀರಾಮ್ ಪೇಟೆ ಪೋಸ್ಟ್ ಆಫೀಸ್ ಕಚೇರಿಯ ಬಳಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಎರಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾರುಗಳ ಡಿಕ್ಕಿಯಿಂದ ಸುಳ್ಯ ಮುಖ್ಯ ಬೀದಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೆ ತಡೆ ಉಂಟಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಎರಡು ಕಾರುಗಳ ಮುಖಾಮುಖಿ ಡಿಕ್ಕಿ : ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ Read More »

error: Content is protected !!
Scroll to Top