ದಕ್ಷಿಣ ಕನ್ನಡ

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ

ಕಡಬ: ತಾಲೂಕಿನ ಕಾಣಿಯೂರು ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ ಆಯ್ದ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’, ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಆಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ  ಅ.31 ಗುರುವಾರ ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ಸದಸ್ಯ ದಿನೇಶ್‍ ಮಾಳ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಲಬ್‍ ಕಳೆದ 11 ವರ್ಷಗಳಿಂದ […]

ನಾಳೆ (ಅ.31) : ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ನಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’ | ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ Read More »

ಡಿ.6-7 : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ | ಸಮಾಲೋಚನಾ ಸಭೆ

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಡಿ.6,7 ರಂದು ನಡೆಯಲಿರುವ ಷಷ್ಠಿ ಮಹೋತ್ಸವದ ಸಮಾಲೋಚನಾ ಸಭೆ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ವಹಿಸಿ ಮಾತನಾಡಿ, ದೇವಳದಲ್ಲಿ ಷಷ್ಠಿ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಊರ ಪರವೂರ ಭಕ್ತರ ಸಹಕಾರದಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಿದ್ದು, ಡಿ. 6ರ ಪಂಚಮಿ ದಿವಸ ಸುಬ್ರಹ್ಮಣ್ಯ ಶ್ರೀ ಅವರಿಂದ ಆಶೀರ್ವಚನ ನಡೆಯಲಿದೆ. ಡಿ. 7ರಂದು ಷಷ್ಠಿ

ಡಿ.6-7 : ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ | ಸಮಾಲೋಚನಾ ಸಭೆ Read More »

ಸವಣೂರು ಪರಿಸರದ ಬೇಡಿಕೆಯಾದ 63 ಕೆ.ವಿ. ವಿದ್ಯುತ್ ಪರಿವರ್ತಕಕ್ಕೆ ಚಾಲನೆ

ಸವಣೂರು: ಗ್ರಾಮದ ಬೇರಿಕೆ ಎಂಬಲ್ಲಿ ಅಲ್ಲಿನ ಪರಿಸರದ ಬಹುದಿನಗಳ ಬೇಡಿಕೆಯಾದ 63 K.V.(ಕೆ. ವಿ ) ವಿದ್ಯುತ್ ಪರಿವರ್ತಕವನ್ನು ಸವಣೂರು ಮೆಸ್ಕಾಂನ ಜೆ. ಇ. ರಾಜೇಶ್ ಅರವರ ಮುತುವರ್ಜಿಯಲ್ಲಿ  ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವೆಂಕಪ್ಪ ಶೆಟ್ಟಿ ಸವಣೂರು ಗುತ್ತು, ಸವಣೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತ್ ಶೆಟ್ಟಿ ಸಿಬಂದಿ ಪ್ರಮೋದ್ ರೈ, ಪಂಚಾಯತ್ ಸದಸ್ಯೆ ಇಂದಿರಾ ಬೇರಿಕೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಮಾಜಿ ಸದಸ್ಯೆ ಗಾಯತ್ರಿ ಬರಮೇಲು ಸವಣೂರು ಸಿ. ಎ ಬ್ಯಾಂಕ್ ಉಪಾಧ್ಯಕ್ಷ

ಸವಣೂರು ಪರಿಸರದ ಬೇಡಿಕೆಯಾದ 63 ಕೆ.ವಿ. ವಿದ್ಯುತ್ ಪರಿವರ್ತಕಕ್ಕೆ ಚಾಲನೆ Read More »

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ಸವಣೂರು: ಶಕ್ತಿ ಕೇಂದ್ರ ಬೂತ್ 65 ರಲ್ಲಿ ಭಾನುವಾರ ನರೇಂದ್ರ ಮೋದಿ ಯವರ ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಣೆ ಮಾಡಲಾಯಿತು. ಉಮೇಶ್ ಆಚಾರ್ಯ ಅಟ್ಟೊಳೆ ಅವರ ಮನೆಯಲ್ಲಿ ಮನ್‍ ಕೀ ಬಾತ್ ವೀಕ್ಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕೋಡಿ ಬೈಲು, ಬೂತ್ ಸಂಖ್ಯೆ 65 ರ ಅಧ್ಯಕ್ಷ ತೀರ್ಥರಾಮ ಕೆಡಂಜಿ, ಕಾರ್ಯದರ್ಶಿ ಸತೀಶ್ ಬಲ್ಯಾಯ, ಪಂಚಾಯತ್ ಸದಸ್ಯರಾದ

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ Read More »

ಕೊಕ್ಕಡ ದೇವಸ್ಥಾನದ ಸ್ಥಿರಾಸ್ತಿ ಬೇನಾಮಿ ಟ್ರಸ್ಟ್ ಗೆ ಹಸ್ತಾಂತರ |ತೀವ್ರ ಆಕ್ರೋಶಕ್ಕೊಳಗಾದ ಭಕ್ತಾದಿಗಳು | ಕೊಕ್ಕಡ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ರಚನೆ | ಅನಿರ್ದಿಷ್ಠಾವಧಿ ಧರಣಿಗೆ ನಿರ್ಧಾರ

ಬೆಳ್ತಂಗಡಿ : ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತಾದಿಗಳಿಂದ, ದಾನಿಗಳಿಂದ, ಹಿತೈಷಿಗಳಿಂದ ಸಂಗ್ರಹಿಸಲ್ಪಟ್ಟ ಹಣದಲ್ಲಿ ಖರೀದಿಸಲಾಗಿದ್ದ ಸ್ಥಿರಾಸ್ತಿಗಳನ್ನು ಮಹಾಗಣಪತಿ ಸೇವಾ ಟ್ರಸ್ಟ್ ಎಂಬ ಬೇನಾಮಿ ಟ್ರಸ್ಟ್ ಗೆ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಹೆಸರಿಗೆ ಅಕ್ರಮವಾಗಿ ವರ್ಗಾವಣೆಗೊಳಿಸಿದ ವಿವಾದ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿದೆ. ಕೊಕ್ಕಡ ಸೌತಡ್ಕ ದೇವಳದ ಭಕ್ತಾದಿಗಳು ಇದೀಗ ಪಕ್ಷ

ಕೊಕ್ಕಡ ದೇವಸ್ಥಾನದ ಸ್ಥಿರಾಸ್ತಿ ಬೇನಾಮಿ ಟ್ರಸ್ಟ್ ಗೆ ಹಸ್ತಾಂತರ |ತೀವ್ರ ಆಕ್ರೋಶಕ್ಕೊಳಗಾದ ಭಕ್ತಾದಿಗಳು | ಕೊಕ್ಕಡ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ರಚನೆ | ಅನಿರ್ದಿಷ್ಠಾವಧಿ ಧರಣಿಗೆ ನಿರ್ಧಾರ Read More »

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ

ಬಂಟ್ವಾಳ: ಕಲ್ಲಡ್ಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆಮಾತಾಗಿರುವ ಪ್ರಸಿದ್ಧ ಹೊಟೇಲ್ ಗೆ ಕಳ್ಳನೋರ್ವ ನುಗ್ಗಿದ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲ್ಲಡ್ಕದಲ್ಲಿರುವ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಕಳ್ಳನೋರ್ವ ನುಗ್ಗಿದ್ದು, ಹೊಟೇಲ್‍ ನಲ್ಲಿ ಇರಿಸಿದ್ದ ದೇವರ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ‌ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ Read More »

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ       

ಸವಣೂರು: ಪಟ್ಟೆ ವಿದ್ಯಾಸ೦ಸ್ಥೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಮೂವರು  ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ 7ನೇ ತರಗತಿಯ ಮಿಲನ್ ಜಿ. 100 ಮೀ. ಮತ್ತು 200 ಮೀ. ಓಟದಲ್ಲಿ ಪ್ರಥಮ ಸ್ಥಾನ, ಗು೦ಡೆಸೆತದಲ್ಲಿ ತೃತೀಯ, 8ನೇ ತರಗತಿಯ ಹೃತೇಶ್ ಬಿ.ಎಸ್. 200 ಮೀ ಓಟದಲ್ಲಿ ದ್ವಿತೀಯ, ಮತ್ತು 100 ಮೀ. ಓಟದಲ್ಲಿ ತೃತೀಯ,  10ನೇ ತರಗತಿಯ ಮಹಮ್ಮದ್ ಶಮ್ಮಾಸ್ 400 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ತಾಲೂಕು

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ        Read More »

ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಡೊಂಬಯ್ಯ ನಲಿಕೆ ಆಯ್ಕೆ

ಸವಣೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಅವರು ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್‍.ಬಾಜಾಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ದ..ಕ ದಿಂದ ಡೊಂಬಯ್ಯ ನಲಿಕೆ ಅವರನ್ನು ಸೇರಿಸಿ ರಾಜ್ಯದ 20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಕಾರ್ಯಕ್ರಮ ಅಧಿಕಾರಿ ಆಗಿದ್ದ ದಿ.ಟಿ.ಕೆ. ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು ಪುರಸ್ಕಾರದ ಜತೆಗೆ ರಾಜ್ಯಮಟ್ಟದ ಗೌರವ

ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಡೊಂಬಯ್ಯ ನಲಿಕೆ ಆಯ್ಕೆ Read More »

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಂಗಳೂರು ನೇತೃತ್ವದಲ್ಲಿ ಕುಳಾಯಿ ಚಿತ್ರಾಪುರ ಮನೆ ಸಹಯೋಗದೊಂದಿಗೆ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೋಟದ ಬೆಳಕಿ’ ಎಂಬ ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ ಅ.26 ಹಾಗೂ 27 ರಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿದೆ ಎಂದು ಯಾಗ ಸಮಿತಿ ಉಪಾಧ್ಯಕ್ಷ, ನ್ಯಾಯವಾದಿ ಎನ್‍.ಕೆ.ಜಗನ್ಜಿವಾಸ ರಾವ್ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.26 ರಂದು

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ Read More »

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ

ಸುರತ್ಕಲ್ : ನನ್ನ ಜೊತೆ ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದು ಸುರತ್ಕಲ್ ಇಡ್ಯಾ ನಿವಾಸಿಯೋರ್ವ ವಾಟ್ಸಪ್ ಮೂಲಕ ಸಂದೇಶ ರವಾನಿಸಿದ್ದು, ಯುವತಿಯ ಕುಟುಂಬ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮನೆ ಸಮೀಪ ವಾಸಿಸುವ ಯುವತಿ ಸಹೋದರನ  ವಾಟ್ಸಪ್ ಮೆಸೇಜ್ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್ ನೂರ್ಜಹಾನ್ ಮೆಸೇಜ್ ಮಾಡಿದಾತ ಎಂದು ತಿಳಿದು ಬಂದಿದೆ. ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕಿರುಕುಳ ನೀಡಿದ ವಿಚಾರಕ್ಕೆ

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ Read More »

error: Content is protected !!
Scroll to Top