ದಕ್ಷಿಣ ಕನ್ನಡ

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು

ಬಂಟ್ವಾಳ : ಬೈಕ್ – ಬೈಕ್ ಗಳ ನಡುವೆ ಅಪಘಾತ ಸಂಭವಿಸಿರುವ   ಘಟನೆ ಇಂದು ರಾತ್ರಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆಯಲ್ಲಿ ನಡೆದಿದೆ.           ಘಟನೆಯಿಂದ ಬೈಕ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃತಪಟ್ಟ ಬಾಲಕಿ. ಬೈಕ್ ಚಾಲಕ ಬಾಲಕಿಯ ತಂದೆ ಅಬ್ದುಲ್ ರಹಮಾನಿಗೆ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ […]

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು Read More »

ನೃತ್ಯ ಗುರು ಕಮಲಾಕ್ಷ ಆಚಾರ್ ನಿಧನ

ಬೆಳ್ತಂಗಡಿ: ನೃತ್ಯ ಗುರು ಕಮಲಾಕ್ಷ ಆಚಾರ್ ( 77)ಮಂಗಳೂರಿನಲ್ಲಿ ವಯೋ ಸಹಜ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. 2022 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ತಾಲೂಕಿನ ಪ್ರಥಮ ಭರತನಾಟ್ಯ ಗುರುವಾಗಿದ್ದರು. ಬೆಳ್ತಂಗಡಿಯಲ್ಲಿ ನೃತ್ಯ ನಿಕೇತನ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.1986 ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯ ಪರೀಕ್ಷಕರಾಗಿ ಸಲಹೆಗಾರರಾಗಿ

ನೃತ್ಯ ಗುರು ಕಮಲಾಕ್ಷ ಆಚಾರ್ ನಿಧನ Read More »

ಕಡಬದಲ್ಲಿ ಸಾರ್ಜನಿಕರಿಂದ ಸಹವಾಲು ಸ್ವೀಕರಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಕಡಬ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು  ಸೋಮವಾರ ಕಡಬ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಕಡಬ ತಾಲೂಕಿನ ವ್ಯಾಪ್ತಿಯಲ್ಲಿ  ವಿದ್ಯುತ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ  ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಯ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಬೇಡಿಕೆ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಸಂಸದರು ಸವಣೂರು, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಕಡಬದಲ್ಲಿ

ಕಡಬದಲ್ಲಿ ಸಾರ್ಜನಿಕರಿಂದ ಸಹವಾಲು ಸ್ವೀಕರಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ Read More »

ಅಕ್ರಮ ದನ ಸಾಗಾಟ ಲಾರಿಯನ್ನು ತಡೆ ಹಿಡಿದ ಪೊಲೀಸರು | ವಾಹನ ವಶಕ್ಕೆ

ಕಡಬ: ಅಕ್ರಮ ದನ ಸಾಗಾಟದ ಲಾರಿಯನ್ನು ಕಡಬ ಠಾಣಾ ಪೊಲೀಸರು ತಡೆಹಿಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಬಳಿ ನಡೆದಿದೆ. ಲಾರಿ ತಡೆಹಿಡಿದ ಸಂದರ್ಭ ಲಾರಿ ಚಾಲಕ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ಸ್ಥಳದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಪಿಕಪ್ ವಾಹನದಲ್ಲಿ ಸುಮಾರು ಎಂಟು ಜಾನುವಾರುಗಳಿದ್ದು, ಒಂದು ದನ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ

ಅಕ್ರಮ ದನ ಸಾಗಾಟ ಲಾರಿಯನ್ನು ತಡೆ ಹಿಡಿದ ಪೊಲೀಸರು | ವಾಹನ ವಶಕ್ಕೆ Read More »

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ

ಮಂಗಳೂರು : ದಕ್ಷಿಣ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಜ.10ರಿಂದ ಜ.12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಿತು. ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ‍ಂಸ್ಕೃತ  ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ 45ರ ವಯೋಮಾನದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, 400 ಮೀ ಹರ್ಡಲ್ಸ್ ಮತ್ತು ಹೈಜಂಪ್ ನಲ್ಲಿ 4ನೇ ಸ್ಥಾನ ಹಾಗೂ 110 ಮೀ ಹರ್ಡಲ್ಸ್ ನಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ ಮಾತ್ರವಲ್ಲದೇ

ಒಂದನೇ ದಕ್ಷಿಣ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಪರ್ಧೆಯಲ್ಲಿ ಶಿಕ್ಷಕ  ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರವರಿಗೆ 5ನೇ ಸ್ಥಾನ Read More »

ಜ.17 : ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ | ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 11 ಮಂದಿ ಸ್ಪರ್ಧಾ ಕಣದಲ್ಲಿ

ಎಣ್ಮೂರು: ಪ್ರತಿಷ್ಠಿತ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಜ.17 ರಂದು ಚುನಾವಣೆ ನಡೆಯಲಿದೆ. ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸಾಮಾನ್ಯ ಕ್ಷೇತ್ರದಿಂದ ರೂಪರಾಜ ರೈ, ರಾಜೇಂದ್ರ ಪ್ರಸಾದ್ ಶೆಟ್ಟಿ, ವಸಂತ ಹೆಚ್‍.ಕೆ.ಹೇಮಳ, ನಾಗೇಶ್‍ಆಳ್ವ ಕೆ., ಅನೂಪ್‍ ಬಿಳಿಮಲೆ, ನೇಮಿಶ ಕಡೀರ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ವಸಂತ ನಡುಬೈಲು, ಶಿವರಾಮ ಸಿ., ಪರಿಶಿಷ್ಟ ಜಾತಿಯಿಂದ ಮುತ್ತಪ್ಪ

ಜ.17 : ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ | ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 11 ಮಂದಿ ಸ್ಪರ್ಧಾ ಕಣದಲ್ಲಿ Read More »

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಲೋಕಾರ್ಪಣೆ | ಶತಮಾನೋತ್ಸವದ ಸವಿನೆನಪಿಗಾಗಿ ‘ಶತಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ | ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ | ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದೆ : ಕ್ಯಾ.ಬ್ರಿಜೇಶ್‍ ಚೌಟ | ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು | ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ : ಪ್ರವೀಣ್‍ ಕುಮಾರ್

ಕಾಣಿಯೂರು: ಸಹಕಾರ ಕ್ಷೇತ್ರ ನಮ್ಮೆಲ್ಲರ  ಏಳಿಗೆಗೆ ಮೂಲ ಸ್ಪೂರ್ತಿಯಾಗಿದ್ದು, ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು, ನಾವು ಮಾತ್ಸರ್ಯ, ದ್ವೇಷ ಎಲ್ಲವನ್ನು ಹೊರಗಿಟ್ಟು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು. ಅವರು ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಣಿಯೂರು ಇದರ ಶತಮಾನೋತ್ಸವದ ಸವಿನೆನೆಪಿಗಾಗಿ ನಿರ್ಮಾಣವಾದ ನೂತನ ಕಛೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಬಳಿಕ ಕಾಣಿಯೂರು ರಾಮತೀರ್ಥಮಠದ ಜಾತ್ರಾ ಮೈದಾನದಲ್ಲಿ ನಡೆದ

ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಲೋಕಾರ್ಪಣೆ | ಶತಮಾನೋತ್ಸವದ ಸವಿನೆನಪಿಗಾಗಿ ‘ಶತಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ | ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ | ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದೆ : ಕ್ಯಾ.ಬ್ರಿಜೇಶ್‍ ಚೌಟ | ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು | ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ : ಪ್ರವೀಣ್‍ ಕುಮಾರ್ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದಿಂದ ಶ್ರದ್ಧಾ ಕೇಂದ್ರಗಳ ಸ್ಚಚ್ಚತ್ತಾ ಕಾರ್ಯ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಕೆಲಿಂಜ ಗ್ರಾಮದಲ್ಲಿ ಪವಿತ್ರ ಕಾರ್ಯಕ್ರಮಕ್ಕೆ ಪೂರಕವಾಗಿ ಗ್ರಾಮದಲ್ಲಿರುವ ನೆಟ್ಲ ಶ್ರೀ ಸದಾಶಿವೇಶ್ವರ, ನರಹರಿ ಶ್ರೀ ಸದಾಶಿವೇಶ್ವರ ದೇವಸ್ಥಾನಗಳ ಆವರಣವನ್ನು ಶ್ರಮದಾನದ ಮೂಲಕ ಇಂದು ಸ್ವಚ್ಛತೆ ಮಾಡಲಾಯಿತು. ಶ್ರೀ ಕ್ಷೇತ್ರಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸುಮಾರು 7 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿದ್ದು, ಸುಮಾರು 230 ಸದಸ್ಯರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯದಲ್ಲಿ ದೇವಸ್ಥಾನದ ಟ್ರಸ್ಟಿಗಳು, ಜನ ಪ್ರತಿನಿಧಿಗಳು ,ಯೋಜನೆಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದಿಂದ ಶ್ರದ್ಧಾ ಕೇಂದ್ರಗಳ ಸ್ಚಚ್ಚತ್ತಾ ಕಾರ್ಯ Read More »

ಗೋವಿನ ಕೆಚ್ಚಲು ಕಡಿದ ರಕ್ತಭೀಜಾಸುರರು-ಸರ್ಕಾರದ ಗೋ ವಿರೋಧಿ ನಡೆಯ ವಿರುದ್ಧ ಇಂದು ಬೃಹತ್ ಪ್ರತಿಭಟನೆ

ಮಂಗಳೂರು: ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲು ಕಡಿದು ಕ್ರೌರ್ಯ ಮೆರೆದವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ರವಿಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮತ್ತು ಜಿಲ್ಲೆಯ ಶಾಸಕರುಗಳು ಭಾಗವಹಿಸಲಿದ್ದಾರೆ. ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತಾಂದರರ ವಿರುದ್ಧ ಪ್ರತಿಭಟಿಸುವಂತೆ ಪ್ರಕಟಣೆ ತಿಳಿಸಿದೆ.

ಗೋವಿನ ಕೆಚ್ಚಲು ಕಡಿದ ರಕ್ತಭೀಜಾಸುರರು-ಸರ್ಕಾರದ ಗೋ ವಿರೋಧಿ ನಡೆಯ ವಿರುದ್ಧ ಇಂದು ಬೃಹತ್ ಪ್ರತಿಭಟನೆ Read More »

ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆ ಮೃತ್ಯು

ಮಂಗಳೂರು: ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಮರವೂರು ಬಳಿಯ ಸೇತುವೆ ಬಳಿ ಭಾನುವಾರ ನಡೆದಿದೆ. ಕುಂಜತ್ತಬೈಲು ನಿವಾಸಿ ರೇವತಿ (60) ಮೃತಪಟ್ಟ ಮಹಿಳೆ. ಭಾನುವಾರ ಬೆಳಿಗ್ಗೆ 7.30 ರಿಂದ 8.30ರ ಸುಮಾರಿಗೆ ಅಂಗಡಿಗೆ ಹೋಗುತ್ತಿದ್ದ ರೇವತಿ ಅವರು ಮರವೂರು ಸೇತುವೆಯ ಬಳಿ ಏಕಾಏಕಿ ನದಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರು ಅವರ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಗಡಿಗೆ ಹೋಗಿದ್ದ ರೇವತಿಯನ್ನು ಕಾಣದಾದಾಗ ಮನೆಯವರು ಅವರನ್ನು ಹುಡುಕುತ್ತಾ ಬಂದಿದ್ದರು.

ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆ ಮೃತ್ಯು Read More »

error: Content is protected !!
Scroll to Top