ದಕ್ಷಿಣ ಕನ್ನಡ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ  ಕಲ್ಲಡ್ಕ ವಲಯದ ಮಾಮೇಶ್ವರ  ಜ್ಞಾನವಿಕಾಸದ  ವಾರ್ಷಿಕೋತ್ಸವ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ  ಕಲ್ಲಡ್ಕ  ವಲಯದ ಮಮೇಶ್ವರ ಕಾರ್ಯಕ್ಷೇತ್ರದ  ನಂದ ದೀಪಾ ಜ್ಞಾನವಿಕಾಸ ಕೇಂದ್ರದಲ್ಲಿ   ವಾರ್ಷಿಕೋತ್ಸವ  ಕಾರ್ಯಕ್ರಮ ನಡೆಯಿತು. ಕೇಂದ್ರದ  ಸದಸ್ಯೆ ಲಕ್ಷ್ಮಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು.  ಕೇಂದ್ರದ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತಾಲೂಕಿನ ನಿಕಟಪೂರ್ವ ಯೋಜನಾಧಿಕಾರಿಯಾದ ರಮೇಶ್  ಇವರು ಜ್ಞಾನವಿಕಾಸ ಹಾಗೂ ವಾತ್ಸಲ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಸದಸ್ಯರಿಗೆ ಆಟೋಟ ನಡೆಸಿದ್ದು, ಬಳಿಕ ಬಹುಮಾನ ವಿತರಣೆ  ಮಾಡಲಾಯಿತು. […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ  ಕಲ್ಲಡ್ಕ ವಲಯದ ಮಾಮೇಶ್ವರ  ಜ್ಞಾನವಿಕಾಸದ  ವಾರ್ಷಿಕೋತ್ಸವ Read More »

ಗ್ರಾಮ  ದೈವ  ಶ್ರೀ  ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ 

ಕುದ್ಮಾರು : ಗ್ರಾಮ ದೈವ  ಶ್ರೀ  ಶಿರಾಡಿ  ರಾಜನ್ ದೈವ ಹಾಗೂ ಸಪರಿವಾರ  ದೈವಗಳ  ನೇಮೋತ್ಸವವು  ಮಾ.  9 ಭಾನುವಾರದಂದು  ಕುದ್ಮಾರು  ಗ್ರಾಮದ  ಅನ್ಯಾಡಿಯಲ್ಲಿ  ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಿತು. ನೇಮೋತ್ಸವದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯಲಾಯಿತು.. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡಲಾಯಿತು. ರಾತ್ರಿ 9 ಗಂಟೆಗೆ

ಗ್ರಾಮ  ದೈವ  ಶ್ರೀ  ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ  Read More »

ನೆಲ್ಲಿದಡಿ ಗುತ್ತು ವಿವಾದ : ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ

ಶತಮಾನಗಳಿಂದ ನಡೆಯುತ್ತಿರುವ ದೈವಾರಾಧನೆಗೆ ಅಡ್ಡಿಯಾಗದಂತೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌)ನಿಂದ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ತೊಡಕುಂಟಾಗಿರುವ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯಕ್ಕೆ ಅಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚಿಸಿದ್ದಾರೆ. ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ. ಲಿಖಿತವಾಗಿ ಅನುಮತಿ ಪಡೆಯದಿದ್ದರೆ ಅವಕಾಶ ಇಲ್ಲ ಎಂದಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರ ಸಿಗುವವರೆಗೂ ಯಥಾಸ್ಥಿತಿ ಕಾಪಾಡಲು ಸೂಚಿಸಲಾಗಿದೆ ಎಂದು

ನೆಲ್ಲಿದಡಿ ಗುತ್ತು ವಿವಾದ : ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ Read More »

ಬಾಳ್ತಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಳ್ತಿಲ ಗ್ರಾಮ ಪಂಚಾಯಿತಿ ಹಾಗೂ ಎಚ್‍ ಡಿಎಫ್‍ ಸಿ ಬ್ಯಾಂಕ್‍ ನೇತೃತ್ವ

ಬಾಳ್ತಿಲ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಳ್ತಿಲ ಗ್ರಾಮ ಪಂಚಾಯಿತಿ ಹಾಗೂ ಎಚ್‍ ಡಿಎಫ್‍ ಸಿ ಬ್ಯಾಂಕ್‍ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಬಾಳ್ತಿಲ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮದ ಅಂಗವಾಗಿ ಎಚ್ ಡಿ ಎಫ್ ಸಿ ಬ್ಯಾಂಕಿನ ವತಿಯಿಂದ ದಾಸಕೋಡಿ ಅಂಗನವಾಡಿ ಸ್ತ್ರೀ ಶಕ್ತಿ ಮಹಿಳೆಯರಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಅತ್ಯುತ್ತಮ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಪ್ರಶಸ್ತಿ

ಬಾಳ್ತಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಳ್ತಿಲ ಗ್ರಾಮ ಪಂಚಾಯಿತಿ ಹಾಗೂ ಎಚ್‍ ಡಿಎಫ್‍ ಸಿ ಬ್ಯಾಂಕ್‍ ನೇತೃತ್ವ Read More »

ನಾಪತ್ತೆಯಾದ ದಿಗಂತ್‍ ಪತ್ತೆ

ಬಂಟ್ವಾಳ : ಸುಮಾರು  13 ದಿನಗಳ ಕಾಲ  ನಾಪತ್ತೆಯಾಗಿದ್ದ ದಿಗಂತ್ ಪತ್ತೆಯಾಗಿದ್ದು, ಪೊಲೀಸರು ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ. ಫೆ. 25ರಂದು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ದಿಗಂತ್ ಹಿಂದಿರುಗಿ ಬಂದಿರಲಿಲ್ಲ. ರೈಲ್ವೇ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳ ಜೊತೆ ಗೊಂದಲಕ್ಕೆ ಕಾರಣವಾಗಿತ್ತು. ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆದು ಪೊಲೀಸರು ತನಿಖೆ ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಆತ ಕರಾವಳಿ ಭಾಗದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ

ನಾಪತ್ತೆಯಾದ ದಿಗಂತ್‍ ಪತ್ತೆ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಆಟದಿಂದ ಪಾಠ  ಎಂಬ ವಿಸ್ತರಣಾ ಕಾರ್ಯಕ್ರಮ

ಎನೆಕಲ್ಲು : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನೆಕಲ್ಲು ಇಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮ ಮಾ.8 (ಇಂದು) ರಂದು ನಡೆಯಿತು. ಸಮಾಜಶಾಸ್ತ್ರ ವಿಭಾಗದ  ತೃತೀಯ ಪದವಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಂಡು ಆ ಮೂಲಕ ಪಾಠವನ್ನು ಕಲಿಸಿದರು.  ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಯ ಪರಿಪಾಲನೆ, ಕೌಶಲ್ಯವನ್ನು ಹೆಚ್ಚಿಸುವ ಆಟಗಳನ್ನು ಆಡಿಸಿದರು.   ಕಾರ್ಯಕ್ರಮದಲ್ಲಿ ಸರಕಾರಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಆಟದಿಂದ ಪಾಠ  ಎಂಬ ವಿಸ್ತರಣಾ ಕಾರ್ಯಕ್ರಮ Read More »

ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  ಟ್ಯೂಷನ್ ಕ್ಲಾಸ್ ಸಮಾರೋಪ  ಕಾರ್ಯಕ್ರಮ

ಕೇಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ  ಕೇಪು ವಲಯದ ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  3 ತಿಂಗಳ ಟ್ಯೂಷನ್ ಕ್ಲಾಸ್  ಆಯೋಜಿಸಿದ್ದು  ಇದರ  ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೇಪು ಒಕ್ಕೂಟ ಅಧ್ಯಕ್ಷ   ವೆಂಕಪ್ಪರವರು ವಹಿಸಿದ್ದರು.  ಶಾಲೆಯ ಮುಖ್ಯೋಪಾಧ್ಯಾಯಿಣಿ  ಮಾಲತಿ ಯೋಜನೆಯ ಮುಖಾಂತರ ನಡೆಯುವ ಕಾರ್ಯಕ್ರಮಗಳ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದರು.   ಪೂರ್ವ ತಯಾರಿ  ಪರೀಕ್ಷೆಯಲ್ಲಿ ಉತ್ತಮ  ಫಲಿತಾಂಶ ಇದ್ದು  ಇನ್ನು ಮುಂದೆಯು ಇಂತಹ

ಕೇಪು ಕಾರ್ಯಕ್ಷೇತ್ರದ  ಕಲ್ಲಂಗಳ ಶಾಲೆಯಲ್ಲಿ  ಟ್ಯೂಷನ್ ಕ್ಲಾಸ್ ಸಮಾರೋಪ  ಕಾರ್ಯಕ್ರಮ Read More »

ಸ್ಕೂಟರ್ ಗೆ ಕಾರು ಡಿಕ್ಕಿ | ಶಿಕ್ಷಕಿಯ ದುರ್ಮರಣ

ಮೂಡಬಿದ್ರೆ : ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಾಲಕಿ  ಶಿಕ್ಷಕಿ ಸಾವನಪ್ಪಿದ ಘಟನೆ ಮೂಡುಬಿದ್ರಿ ರಾಜ್ಯ ಹೆದ್ದಾರಿಯ ಶಿರ್ತಾಡಿ ಸೇತುವೆ ಬಳಿ ಘಟನೆ ನಡೆದಿದೆ.   ಮೃತರನ್ನು ಮೂಡುಬಿದ್ರಿ ನಾಗರಕಟ್ಟೆಯ ನಿವಾಸಿಯಾಗಿದ್ದು, ಶಿರ್ತಾಡಿ ಹೋಲಿ ಏಂಜಲ್ಸ್ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಸುಜಯ  ಭಂಡಾರಿ (35) ಎನ್ನಲಾಗಿದೆ. ಶುಕ್ರವಾರ ಸಂಜೆ ವೇಳೆಗೆ ತನ್ನ ಕರ್ತವ್ಯ ಮುಗಿಸಿ ಮೂಡಬಿದ್ರೆ ನಾಗರಕಟ್ಟೆಯಲ್ಲಿರುವ ಮನೆಗೆ ಆಕ್ಟಿವದಲ್ಲಿ ಹೋಗುತ್ತಿದ್ದರು. ಶಿರ್ತಾಡಿ ಸೇತುವೆ ಬಳಿ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಾರು

ಸ್ಕೂಟರ್ ಗೆ ಕಾರು ಡಿಕ್ಕಿ | ಶಿಕ್ಷಕಿಯ ದುರ್ಮರಣ Read More »

ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ : ನಳಿನ್ ಕುಮಾರ್ ಕಟೀಲ್‍

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನಂತೆ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಮಂಡಿಸಿದ್ದಾರೆ. ರಾಜ್ಯದ  ಎಲ್ಲ  ಜನರ ಹಿತ ಕಾಯಬೇಕಾದ ಮುಖ್ಯಮಂತ್ರಿ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟ್ಯಾಂತರ ರೂ. ಘೋಷಿಸಿದ್ದಾರೆ ಎಂದು ಮಾಜಿ ಸಂಸದ ನಳಿನ್‍ ಕುಮಾರ್ ಕಟೀಲ್‍ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಸಾಲದ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು ಆತಂಕಕಾರಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿೃಸಲಾಗಿದೆ. ಅಡಕೆ ಬೆಳೆಗಾರರ ಸಮಸ್ಯೆಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ

ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ : ನಳಿನ್ ಕುಮಾರ್ ಕಟೀಲ್‍ Read More »

ಉಪ್ಪಿನಂಗಡಿ ವಳಾಲಿನಲ್ಲಿ ಅಕ್ರಮ ಮರಳು ಸಾಗಾಟ |  ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ಮರಳು ಸಾಗುಸುತ್ತಿರುವ ಖದಿಮರು

ಉಪ್ಪಿನಂಗಡಿ : ಉಪ್ಪಿನಂಗಡಿಯ ವಳಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ನದಿಯಿಂದ ಮರಳು ತೆಗೆಯುತ್ತಿದ್ದಾರೆ  ಎಂದು ತಿಳಿದು ಬಂದಿದೆ. ಹಿಟಾಚಿಯ ಮುಖೇನ ನದಿಯಿಂದ ಮರಳು ತೆಗೆಯುತ್ತಿದ್ದು, ಅಲ್ಲಿಯ ಸಾರ್ವಜನಿಕರು ಪ್ರಶ್ನೆಸಿದಾಗ ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಮರಳು ತೆಗೆಯುತ್ತಿರುವುದಾಗಿ ತಿಳಿಸಿದ್ದಾರೆ.   ಲೋಕೋಪಯೋಗಿ ಇಲಾಖೆ ಅಂತಹ ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಹಾಗೂ ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದಿದೆ. ಪ್ರತಿನಿತ್ಯ ಇಲ್ಲಿ ಲೋಡುಗಟ್ಟಲೆ ಮರಳು ತೆಗೆದು ಸಾಗಾಟ ಮಾಡಲಾಗುತ್ತಿದ್ದು ಸರ್ಕಾರದ ಬೊಕ್ಕನಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.   ಪೊಲೀಸ್

ಉಪ್ಪಿನಂಗಡಿ ವಳಾಲಿನಲ್ಲಿ ಅಕ್ರಮ ಮರಳು ಸಾಗಾಟ |  ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ ಮರಳು ಸಾಗುಸುತ್ತಿರುವ ಖದಿಮರು Read More »

error: Content is protected !!
Scroll to Top