ದಕ್ಷಿಣ ಕನ್ನಡ

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ

ಹೇಮಳ : ಇತ್ತೀಚೆಗೆ ನಿಧನರಾದ ಯಮುನಾ ರಾಮಣ್ಣ ಗೌಡ ಹೇಮಳ ಅವರ ವೈಕುಂಠ ಸಮಾರಾಧನೆ ಶುಕ್ರವಾರ (ಇಂದು) ಹೇಮಳದಲ್ಲಿರುವ ಮೃತರ ಮನೆಯಲ್ಲಿ ನಡೆಯಿತು. ಯಮುನಾ ರಾಮಣ್ಣ ಗೌಡ ಅವರು ಫೆ.19 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು, ಮಾ.1 ರಂದು ಅವರ ದೇಹಶುದ್ಧಿ ಕಾರ್ಯಕ್ರಮ ನಡೆದಿತ್ತು. ವೈಕುಂಠ ಸಮಾರಾಧಾನೆಗೆ ಬಾಲಕೃಷ್ಣ ಕೆ ಹೇಮಳ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಬಂಧುಗಳು, ಹಿತೈಷಿಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.  

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ Read More »

ಆಟೋ ರಿಕ್ಷಾದಲ್ಲಿ ಮಾದಕವಸ್ತು ಸಾಗಾಟ| ಆರೋಪಿ  ಅರೆಸ್ಟ್

ಮಂಗಳೂರು : ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಆಟೊರಿಕ್ಷಾದಲ್ಲಿ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕಸಬಾ ಬೆಂಗರೆಯ ಮುಹಮ್ಮದ್ ಅಬ್ದುಲ್ ಜಲೀಲ್ (32 ವ.) ಬಂಧಿತ ಆರೋಪಿ ಎನ್ನಲಾಗಿದೆ. ಆರೋಪಿಯಿಂದ 3,75,000 ಮೌಲ್ಯದ 75 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್, ಆಟೊ ರಿಕ್ಷಾ ಸಹಿತ ಒಟ್ಟು ಮೊತ್ತ 5 ಲಕ್ಷ ರೂ. ಗೂ ಅಧಿಕ ಬೆಲೆಬಾಳುವ  ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಟೋ ರಿಕ್ಷಾದಲ್ಲಿ ಮಾದಕವಸ್ತು ಸಾಗಾಟ| ಆರೋಪಿ  ಅರೆಸ್ಟ್ Read More »

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಕಾರು ಪಲ್ಟಿ

ಮಂಗಳೂರು : ವೇಗವಾಗಿ ಚಲಿಸುತ್ತಿದ್ದ ಬಲೆನೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ ಮೇಲೆ ಏರಿ ಪಲ್ಟಿಯಾದ ಘಟನೆ ಮಂಗಳೂರು ಬೆಂದೂರ್ ವೆಲ್ ನ ಬಲ್ಮಠ ಬಳಿ ತಡ ರಾತ್ರಿ ಸಂಭವಿಸಿದೆ. ರಾತ್ರಿ ವೇಳೆ ಖಾಲಿ ಇರುವ ರಸ್ತೆಯಲ್ಲಿ ಅಪಘಾತವಾಗಿದ್ದರಿಂದ,  ಕಾರು ಡಿವೈಡರ್ ಮೇಲೆ ಏರಿ ವಿರುದ್ಧ ದಿಕ್ಕಿನ ರಸ್ತೆಗೆ ಬಿದ್ದರೂ  ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರ  ಮಾಹಿತಿ  ತಿಳಿಯಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಕಾರು ಪಲ್ಟಿ Read More »

ಮುಳಿಯ ಜ್ಯುವೆಲ್ಲರ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ

ಬೆಳ್ತಂಗಡಿ : ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ವ್ಯವಹಾರದಲ್ಲಿ ಆತಿಥ್ಯವನ್ನು ಸದಾ ಗ್ರಾಹಕರಿಗೆ ನೀಡುತ್ತಿದ್ದು ಇದರಿಂದ ಸಂಸ್ಥೆ ಜನಮನಸದಲ್ಲಿ ನೆಳ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಮುಂಡಾಜೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಹೇಳಿದರು. ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಮಾ.೩ರಂದು ನಡೆದ ಡೈಮಂಡ್ ಪೆಸ್ಟ್ ಚಾಲನೆ ನೀಡಿ ಮಾತನಾಡಿದರು. ಜೆಸಿಐ ಭಾರತದ ವಲಯ ೧೫ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ, ೮೦ ದಶಕದಿಂದ ಜನರೊಂದಿಗೆ ಅವಿನಾಭವ ಸಂಬಂಧವನ್ನು ಉಳಿಸಿಕೊಂಡು

ಮುಳಿಯ ಜ್ಯುವೆಲ್ಲರ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ Read More »

ನಂದಿನಿ ಸ್ಟಾಲ್‍ಗೆ ಡಿಕ್ಕಿ ಹೊಡೆದು ಕಂಟೈನರ್ ಪಲ್ಟಿ

ಸುಳ್ಯ : ನಂದಿನಿ ಸ್ಟಾಲ್‍ ಗೆ ಡಿಕ್ಕಿ ಹೊಡೆದು ಕಂಟೈನರ್‍ ಪಲ್ಟಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಮುಖ್ಯ ರಸ್ತೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಎದುರು ಬ್ಯಾಂಕ್ ಆಫ್ ಬರೋಡಾದ ಪಕ್ಕದಲ್ಲಿರುವ ನಂದಿನಿ ಸ್ಟಾಲ್ ಗೆ ಕಂಟೈನರ್ ಡಿಕ್ಕಿ ಹೊಡೆದು ಕಟ್ಟಡದ ಒಂದು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ಇಂದು ಮುಂಜಾನೆ 5.30ರ ಹೊತ್ತಿಗೆ ನಡೆದಿದೆ. ಮಂಡ್ಯದಿಂದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನ ಪುಟ್ ಪಾತ್ ಗೆ

ನಂದಿನಿ ಸ್ಟಾಲ್‍ಗೆ ಡಿಕ್ಕಿ ಹೊಡೆದು ಕಂಟೈನರ್ ಪಲ್ಟಿ Read More »

ಮನೆಯಲ್ಲಿದ್ದ ಬೈಕ್‍ ಕಳವು

ನಾರಾವಿ : ಕುತ್ತೂರು ಗ್ರಾಮದ ಸಮೃದ್ಧಿ ಮನೆ ನಿವಾಸಿ ಟಿ. ಎಸ್. ಸಲೀಂ ಎಂಬವರ ಬೈಕ್ ನ್ನು ಅವರ ಮನೆಯಿಂದ ಕದ್ದೊಯ್ದ ಘಟನೆ ನಡೆದಿದೆ. ಘಡನಾನುಸಾರವಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ.4ರ ಬೆಳಗಿನ ಜಾವ 3ರಿಂದ 3.30ಗಂಟೆ ಮಧ್ಯೆ ಬೈಕ್ ಕಳ್ಳತನವಾಗಿದ್ದು, ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡುವ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಳವಾದ ಬೈಕ್ ನ ಮೊತ್ತ ಸುಮಾರು  ರು. 60ಸಾವಿರ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯಲ್ಲಿದ್ದ ಬೈಕ್‍ ಕಳವು Read More »

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ ಸಹಕಾರ ಭಾರತಿಗೆ ಅಭೂತಪೂರ್ವ ಗೆಲುವು | ಪುತ್ತೂರು ಬಿಜೆಪಿ ವತಿಯಿಂದ ಅಭಿನಂದನೆ

ಕೊಳ್ತಿಗೆ : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಸಹಕಾರಿ ಭಾರತೀಯ ಎಲ್ಲಾ ನೂತನ ನಿರ್ದೇಶಕರುಗಳಿಗೆ ಭಾರತೀಯ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಕೊಳ್ತಿಗೆ ಸಹಕಾರಿ ಸಂಘದಲ್ಲಿ ಈ ಹಿಂದೆ ಕಾಂಗ್ರೆಸ್ ಬೆಂಬಲಿತರು ಆಡಳಿತ ನಡೆಸುತ್ತಿದ್ದರು. ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನ

ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ ಸಹಕಾರ ಭಾರತಿಗೆ ಅಭೂತಪೂರ್ವ ಗೆಲುವು | ಪುತ್ತೂರು ಬಿಜೆಪಿ ವತಿಯಿಂದ ಅಭಿನಂದನೆ Read More »

ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಆಜೀಜ್ ನಿಧನ

ತೊಕ್ಕೊಟ್ಟು : ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ.ಸಿ. ಅಬ್ದುಲ್ ಆಜೀಜ್ (42) ಹೃದಯಾಘಾತದಿಂದ ಬುಧವಾರ ಸಂಜೆ ನಿಧಾನರಾದರು.   ಮುಂಬಯಿಗೆ ತೆರಳಿದ್ದ ಅವರು ರೈಲಿನಲ್ಲಿ ವಾಪಾಸಾಗುತ್ತಿದ್ದಾಗ ಕುಮಟಾ ಬಳಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು. ಕುತ್ತಾರು ಮದನಿ ನಗರದ ನಿವಾಸಿಯಾಗಿದ್ದ ಅಬ್ದುಲ್ ಆಜೀಜ್ ರಸ್ತೆ ನಿರ್ಮಾಣ ಗುತ್ತಿಗೆ ಸಂಸ್ಥೆ ಆರ್ ಕೆ ಸಿ ಕನ್ಸ್ಟ್ರಕ್ಷನ್ ಸಂಸ್ಥೆಯ ಮಾಲಕರ ಪುತ್ರರಾಗಿದ್ದ ಅವರು ಉದ್ಯಮಿಯಾಗಿ ಯುವಕರಿಗೆ  ಹೊಸ ಹೊಸ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಿದ್ದರು. ತನ್ನ ಮಾಲೀಕತ್ವದಲ್ಲಿದ್ದ ನಾಟೇಕಲ್ ಸಮೀಪದ

ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಆಜೀಜ್ ನಿಧನ Read More »

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ ಓ ಎನ್. ಪದ್ಮನಾಭ ಮಾಣಿಂಜ ನಿಧನ 

ಬೆಳ್ತಂಗಡಿ: ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯ ತಲೆ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು. ಮಾಜಿ ಶಾಸಕ ಕೆ.ವಸಂತ ಬಂಗೇರರೊಂದಿಗೆ ಉತ್ತಮ ಸಂಬಂಧ ಹೊಂದಿದ ಅವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು.ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಪದ್ಮನಾಭ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ ಓ ಎನ್. ಪದ್ಮನಾಭ ಮಾಣಿಂಜ ನಿಧನ  Read More »

ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ: ಪ್ರಕರಣ ದಾಖಲು

ಕಡಬ,ಮಾ.5: ಕಡಬ ಠಾಣಾ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿಂದ ಲಾರಿಯಲ್ಲಿ  ಮಣ್ಣು ಸಾಗಿಸಿ ದೇವಸ್ಥಾನದ ಬಳಿ  ಹಾಕಿ ರಸ್ತೆಯಲ್ಲಿ  ಹೋಗುವಾಗ ನ್ಯೂಸ್ ರಿಪೋರ್ಟರ್ ಎಂದು ಹೇಳಿಕೊಂಡು  ಗಣೇಶ್ ಇಡಾಳ ಎಂಬಾತ ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ  ಕಡಬ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ   ಚಿದ್ಗಲ್ ನಿವಾಸಿ ಪ್ರವೀಣ್ ಕುಮಾರ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.  ಪ್ರವೀಣ್ ಕುಮಾರ್ ಲಾರಿ ಚಾಲಕನಾಗಿ ದುಡಿಯುತ್ತಿದ್ದು, ಮಂಗಳವಾರ ರಾತ್ರಿ ಕಡಬದ  ಅಡ್ಡಗದ್ದೆ

ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ: ಪ್ರಕರಣ ದಾಖಲು Read More »

error: Content is protected !!
Scroll to Top