ದಕ್ಷಿಣ ಕನ್ನಡ

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ

ಕಳೆಂಜ: ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡಿರುವ ಘಟನೆ ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ನಡೆದಿದೆ. ಕಳೆಂಜ ಗ್ರಾಮದ ಗೋಶಾಲೆ ಮಾರ್ಗ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದರಿಂದ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದಾಗ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ತಳ್ಳಿ ಹಾಕಿದೆ. ಈ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ […]

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ Read More »

ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ⁠ಉತ್ತಮ ವೇತನ | ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ

ಮಂಗಳೂರು: ಆಧುನಿಕ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯತಿಕಾರ್ಪ್ ಇಂಡಿಯಾ ಪ್ರೈ.ಲಿ. ಕಂಪನಿಯು ಕರ್ನಾಟಕದಾದ್ಯಂತ ಪದವೀಧರರಿಗೆ ಉದ್ಯೋಗ ಅವಕಾಶವನ್ನು ಘೋಷಿಸಿದೆ. ಕಂಪನಿಯು ತನ್ನ ಹೊಸ ಎಐ ಸಾಕ್ಷರತಾ ಅಭಿಯಾನವನ್ನು ಮುನ್ನಡೆಸಲು ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಿಗೂ ಪ್ರಾದೇಶಿಕ ಪ್ರತಿನಿಧಿಗಳನ್ನು ನೇಮಿಸುತ್ತಿದ್ದು, ಆಕರ್ಷಕ ವೇತನ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಹುದ್ದೆ ಹೆಸರು – ಎಐ ರೀಜನಲ್ ರೆಪ್ರೆಸೆಂಟೇಟಿವ್, ವೇತನ ಶ್ರೇಣಿಯು ತಿಂಗಳಿಗೆ ರೂ. 25,000 ದಿಂದ ರೂ.30,000ದವರೆಗೆ ಇರುತ್ತದೆ. ಸಂಸ್ಥೆಯು ಅಭಿವೃದ್ಧಿ ಪಡಿಸಿದ ಎಐ

ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ⁠ಉತ್ತಮ ವೇತನ | ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ Read More »

ಕಾರು-ಬೈಕ್‍ ಭೀಕರ ಅಪಘಾತ : ಬೈಕ್‍ ಸವಾರ ಗಂಭೀರ

ಸುಳ್ಯ: ಕಾರು ಮತ್ತು ಬೈಕ್‍ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್‍ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ವೆರ್ಪೆಯಲ್ಲಿ ನಡೆದಿದೆ. ಬೈಕ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆ ತೆರಳುತ್ತಿತ್ತು. ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ‌. ಗಾಯಾಳು ಬೈಕ್ ಸವಾರನನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕಾರು-ಬೈಕ್‍ ಭೀಕರ ಅಪಘಾತ : ಬೈಕ್‍ ಸವಾರ ಗಂಭೀರ Read More »

ದ.ಕ. ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆ | ಆಡಳಿತ ಮಂಡಳಿಗೆ 17 ನಿರ್ದೇಶಕರು ಹಾಗೂ ಸಲಹಾ ಸಮಿತಿಗೆ 19 ಸದಸ್ಯರ ಆಯ್ಕೆ

ಪುತ್ತೂರು : ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ನೂತನ ಆಡಳಿತ ಮಂಡಳಿಗೆ 17 ಮಂದಿ ನಿರ್ದೇಶಕರು ಹಾಗೂ ಸಲಹಾ ಸಮಿತಿಗೆ 19 ಮಂದಿ ಸದಸ್ಯರನ್ನು ಇಂದು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರ ವಿವರ : ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಪೈಕೆರೆ ಮನೋಹರ ಪಿ., ಉಪಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ, ಕಾರ್ಯದರ್ಶಿಯಾಗಿ ಕಪಿಲ್ ದುಗ್ಗಳ, ಖಜಾಂಚಿಯಾಗಿ ಪುರುಷೋತ್ತಮ ಮುಂಗ್ಲಿಮನೆ, ನಿರ್ದೇಶಕರುಗಳಾಗಿ ಅಂಬೆಕಲ್ಲು ಪ್ರವೀಣ್‍ ಕುಂಟ್ಯಾನ, ಎಂ.ಪಿ.ಉಮೇಶ್‍, ನವೀನ್‍, ಪುದಿಯನೆರವಿನ

ದ.ಕ. ಮತ್ತು ಕೊಡಗು ಗೌಡ ಸಮಾಜ ಅಭಿವೃದ್ಧಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆ | ಆಡಳಿತ ಮಂಡಳಿಗೆ 17 ನಿರ್ದೇಶಕರು ಹಾಗೂ ಸಲಹಾ ಸಮಿತಿಗೆ 19 ಸದಸ್ಯರ ಆಯ್ಕೆ Read More »

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಲಂಕಾರು ಶಾಖೆ ಎರಡನೇ ವರ್ಷಕ್ಕೆ ಪಾದಾರ್ಪಣೆ | ಆಲಂಕಾರು ಶಾಖೆಯಲ್ಲಿ ಗಣಹೋಮ ಮತ್ತು ಲಕ್ಷ್ಮೀ ಪೂಜೆ

ಆಲಂಕಾರು: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಲಂಕಾರು  ಶಾಖೆ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿತು.   ಈ ಹಿನ್ನಲೆಯಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ  ಆಲಂಕಾರು ಶಾಖೆಯು ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ  ಮೋಹನ್ ರಾವ್ ಸುಳ್ಳಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ., ಆಂತರಿಕ ಲೆಕ್ಕಪರಿಶೋಧಕ ಗುಮ್ಮಣ್ಣ ಗೌಡ ಹೆಚ್., ನ್ಯಾಯವಾದಿ ಶಿವಪ್ರಸಾದ್ ಪುತ್ತಿಲ,

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಲಂಕಾರು ಶಾಖೆ ಎರಡನೇ ವರ್ಷಕ್ಕೆ ಪಾದಾರ್ಪಣೆ | ಆಲಂಕಾರು ಶಾಖೆಯಲ್ಲಿ ಗಣಹೋಮ ಮತ್ತು ಲಕ್ಷ್ಮೀ ಪೂಜೆ Read More »

ಚಾರ್ಮಾಡಿಯ ಗುಡ್ಡ ಪ್ರದೇಶದಲ್ಲಿ ಬೆಂಕಿ ಅನಾಹುತ | ನೂರಾರು ಎಕರೆ ಅರಣ್ಯ ನಾಶ

ಚಾರ್ಮಾಡಿ ಘಾಟ್ : ಚಾರ್ಮಾಡಿಯ ಗುಡ್ಡದ ತುದಿಯಲ್ಲಿ ಕಾಡ್ಲಿಚ್ಚು ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ. ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದು ಬಂದಿಲ್ಲ ಪ್ರಾಣಿ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿದೆ ಎಂಬುವುದಾಗಿ ಶಂಕೆ ವ್ಯಕ್ತವಾಗಿದೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ದ.ಕ. ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಹತ್ತಿರವಿದ್ದು ಅಲ್ಲಿಗೂ ಬೆಂಕಿ ವ್ಯಾಪಿಸುವ ಭೀತಿ ಇದೆ. ಚಾರ್ಮಾಡಿ ಘಾಟಿಯಲ್ಲಿ ಹೆಚ್ಚಾಗಿ

ಚಾರ್ಮಾಡಿಯ ಗುಡ್ಡ ಪ್ರದೇಶದಲ್ಲಿ ಬೆಂಕಿ ಅನಾಹುತ | ನೂರಾರು ಎಕರೆ ಅರಣ್ಯ ನಾಶ Read More »

ಬಾವಿಗೆ ಹಾರಿ ಯುವಕ  ಆತ್ಮಹತ್ಯೆ

ಕಾರ್ಕಳ : ಕಾರ್ಕಳದ ಕಸಬಾ ಗ್ರಾಮದಲ್ಲಿ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಸಬಾ ಗ್ರಾಮದ ಮೀನಗುಂಡಿ ಕಂಪೌಂಡ್‌ನ ಕೆ. ವೆಂಕಟೇಶ ಹೆಗ್ಡೆ (22) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೃತ ಕೆ. ವೆಂಕಟೇಶ ಹೆಗ್ಡೆ ಮಂಗಳೂರು ಸೈಂಟ್ ಜೋಸೆಫ್ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸ ಮುಂದುವರೆಸಲು ಕಷ್ಟವಾಗುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದನು ಎನ್ನಲಾಗಿದೆ. ಸುಮಾರು 10 ದಿನಗಳಿಂದ ಮೌನವಾಗಿದ್ದ ಈತ ಇದೇ ಕಾರಣದಿಂದ ಮನನೊಂದು ಮನೆಯ ಹಿಂಬದಿಯ

ಬಾವಿಗೆ ಹಾರಿ ಯುವಕ  ಆತ್ಮಹತ್ಯೆ Read More »

ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಪತಿ

ಸುಳ್ಯ:  ಪತಿಯು ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಘಟನೆ ಜ.I7ರ ತಡ ರಾತ್ರಿ ಸುಳ್ಯ ತಾಲೂಕಿನ ದೊಡ್ಡ ತೋಟ ಸಮೀಪದ ನೆಲ್ಲೂರು ಕೆಮ್ರಾಜಿ ಗ್ರಾಮದ ಕೊಡಿಮಜಲು ಎಂಬಲ್ಲಿ ನಡೆದಿದೆ. ನೆಲ್ಲೂರು ಕೆಮ್ರಾಜಿ ಗ್ರಾಮದ ಕೋಡಿಮಜಲು ರಾಮಚಂದ್ರ ಕೊಲೆ ಆರೋಪಿ. ಆತನ ಪತ್ನಿ ವಿನೋದ ಹತ್ಯೆಯಾದವರು. ರಾಮಚಂದ್ರ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಕೌಟುಂಬಿಕ ಕಲಹವೇ ಕೃತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು

ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಪತಿ Read More »

ಎಣ್ಮೂರು: ಪ್ರತಿಷ್ಠಿತ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರ ಭಾರತಿ ತೆಕ್ಕೆಗೆ | ಸಹಕಾರ ಭಾರತಿಯ 11 ಅಭ್ಯರ್ಥಿಗಳೂ ಆಯ್ಕೆ

ಎಣ್ಮೂರು: ಮುರುಳ್ಯ-ಎಣ್ಮೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಡಳಿತ ಸಹಕಾರ ಭಾರತಿ ತೆಕ್ಕೆಗೆ ಬಿದ್ದಿದೆ. ಸಾಮಾನ್ಯ ಕ್ಷೇತ್ರದಿಂದ ರೂಪರಾಜ ರೈ, ರಾಜೇಂದ್ರ ಪ್ರಸಾದ್ ಶೆಟ್ಟಿ, ವಸಂತ ಹೆಚ್‍.ಕೆ.ಹೇಮಳ, ನಾಗೇಶ್‍ಆಳ್ವ ಕೆ., ಅನೂಪ್‍ ಬಿಳಿಮಲೆ, ನೇಮಿಶ ಕಡೀರ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ವಸಂತ ನಡುಬೈಲು, ಶಿವರಾಮ ಸಿ., ಪರಿಶಿಷ್ಟ ಜಾತಿಯಿಂದ ಮುತ್ತಪ್ಪ ಎಸ್‍., ಮಹಿಳಾ ಮೀಸಲಾತಿಯಿಂದ

ಎಣ್ಮೂರು: ಪ್ರತಿಷ್ಠಿತ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರ ಭಾರತಿ ತೆಕ್ಕೆಗೆ | ಸಹಕಾರ ಭಾರತಿಯ 11 ಅಭ್ಯರ್ಥಿಗಳೂ ಆಯ್ಕೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ| ಓರ್ವ ಗಂಭೀರ ಗಾಯ

ಕಿನ್ನಿಗೋಳಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಮುಂಡೂರು- ಜಾರಿಗೆ ಕಟ್ಟೆ ಚರ್ಚ್ ಬಳಿ ನಡೆದಿದೆ. ಕಾರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಕಟೀಲು ಪಾದಯಾತ್ರೆ ನಡೆಸುತ್ತಿರುವ ಭಕ್ತರು ಕೂಡಲೇ ಸಮಾಜಸೇವಕ ಕೆದಿಂಜೆ ಸುಪ್ರಿತ್ ಶೆಟ್ಟಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಳುಗಳನ್ನು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ| ಓರ್ವ ಗಂಭೀರ ಗಾಯ Read More »

error: Content is protected !!
Scroll to Top