ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಮಾ. 18 (ನಾಳೆ) ರಂದು 10:30 ಕ್ಕೆ ಹಾಗೂ  ಸಂಜೆ  7:15ರ ಸಮಯಕ್ಕೆ  ಚಿತ್ರ ಪ್ರದರ್ಶನಗೊಳ್ಳಲಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ Read More »

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು

ಸುಳ್ಯ : ಅಂಗಳದಲ್ಲಿ ನಿಂತಿದ್ದ ಕಾರು ಹಿಂದಕ್ಕೆ ಚಲಿಸಿದಾಗ ವ್ಯಕ್ತಿಯೋರ್ವರು ಮೇಲೇ ಹರಿದುಹೋಗಿರುವ ಪರಿಣಾಮ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ರೇಂಜರ್ ಜೋಸೆಫ್ (74) ಎಂದು ಪತ್ತೆಹಚ್ಚಲಾಗಿದೆ. ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ಜೋಸೇಫ್ ಅವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಅರಣ್ಯ ಇಲಾಖೆಯಲ್ಲಿ

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು Read More »

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ

ಉಪ್ಪಿನಂಗಡಿ  : ಉಪ್ಪಿನಂಗಡಿ  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 69ನೇ ಕಾರ್ಯಕ್ರಮವಾಗಿ ಗಾಂಧಾರಿ ವಿವಾಹ  ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಪ್ರಕಾಶ ಅಭ್ಯಂಕರ ಬೆಳ್ತಂಗಡಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ  ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಅರ್ಜುನ ಅಭ್ಯಂಕರ ಬೆಳ್ತಂಗಡಿ,  ಅರ್ಥಧಾರಿಗಳಾಗಿ ಸತೀಶ ಶಿರ್ಲಾಲು (ದ್ವಾಪರ), ರವೀಂದ್ರದರ್ಬೆ ( ಕಲಿ)

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ Read More »

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ,  ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದಂಪತಿ  ಭಾನುವಾರ ಸಂಜೆ ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಸಮ್ಮುಖದಲ್ಲಿ ದಂಪತಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ Read More »

ರೈಲು ಡಿಕ್ಕಿ ಹೊಡೆದು ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ವಿಶ್ವನಾಥ ಮೃತಪಟ್ಟವರು. ವಿಶ್ವನಾಥರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮೊಬೈಲ್ ನೋಡುತ್ತಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ರೈಲು ಡಿಕ್ಕಿ ಹೊಡೆದು ಮೃತ್ಯು Read More »

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ (ಮಾ.೧೬) ಕಿನ್ನಿಗೋಳಿ ಸಮೀಪದ ಉಳವಾಡಿಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ ಹಲವು ಬಾರಿ ಚಿರತೆ ಕಂಡು ಬಂದಿದ್ದು, ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ ಎನ್ನಲಾಗಿದೆ. ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿದೆ ಎಂದು ತಿಳಿದು ಬಂದಿದೆ.

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ Read More »

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಬೆ  ಬೈಠಕ್ ಮುಂಡ್ಕಿನ ಜೆಡ್ಡು   ಆರ್. ಕೆ .ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ ನಡೆಯಿತು. ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ  ಅಧ್ಯಕ್ಷತೆಯಲ್ಲಿ  ಜರಗಿತು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನ ಕಾರ್ಯದರ್ಶಿ ಉಮೇಶ ಎಮ್ .ಸರಸ್ವತಿ ವಂದನೆಯ ಮೂಲಕ ದೀಪ ಬೆಳಗಿಸಿ ಬೈಠಕ್ ಗೆ ಚಾಲನೆ ನೀಡಿದರು.  ಆರಂಭದಲ್ಲಿ ಸಂಯೋಜಿತ ಶಿಕ್ಷಣ ಸಂಸ್ಥೆಗಳ ವಾರ್ಷಿಕ

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ Read More »

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ

ಮಂಗಳೂರು: ನಗರದ ಸಮೀಪ ಹಳೆಯ ದ್ವೇಷಕ್ಕೆ ಸಂಬಂಧಿಸಿ ಬಿಜೈ ಕಾಪಿಕಾಡ್ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ Read More »

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕುದ್ಮಾರು : ಶ್ರೀ ಬ್ರಹ್ಮಬೈದೆರುಗಳ ಗರಡಿ , ಕೆಲಂಬೀರಿ ಕುದ್ಮಾರುವಿನಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಶ್ರೀ ಕೊಡಮಣಿತ್ತಾಯ ನೇಮೋತ್ಸವ ನಡೆಯಿತು. ಬಳಿಕ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ  ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ 6 ಗಂಟೆಗೆ ಪಂಚಲಿಂಗೇಶ್ವರ ಕುಣಿತ ಭಜನಾ ಮಕ್ಕಳ ತಂಡ, ಕುದ್ಮಾರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 7ರಿಂದ ಗರಡಿಯಲ್ಲಿ ಗಂಧಪ್ರಸಾದ ವಿತರಣೆ, ರಾತ್ರಿ 8:30 ಅನ್ನಸಂತರ್ಪಣೆ,  ಇಂದು ರಾತ್ರಿ 9 ಗಂಟೆಗೆ ಶ್ರೀ ಬ್ರಹ್ಮಬೇದೆರುಗಳ

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ Read More »

ಅನಾರೋಗ್ಯದಿಂದ ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ನಿಧನ

ನಂದಾವರ : ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ (81) ಹಲವು ವರ್ಷಗಳಿಂದ ಅನಾರೋಗ್ಯ ಬಳಲುತಿದ್ದು, ಇಂದು (ಮಾ.15) ಶನಿವಾರ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ವಿದ್ವಾಂಸ ಡಾ.ವಾಮನ ನಂದಾವರರವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಮಾಡಿದ್ದು, ನಂತರ ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್, ಕರ್ನಾಟಕ ವಿವಿಯಿಂದ ಎಂ.ಎ.ಕನ್ನಡ ಪದವಿ ಗಳಿಸಿದ್ದರು.

ಅನಾರೋಗ್ಯದಿಂದ ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ನಿಧನ Read More »

error: Content is protected !!
Scroll to Top