ದಕ್ಷಿಣ ಕನ್ನಡ

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ

ಪುತ್ತೂರು ಕೃಷ್ಣ ನಗರ ಸ್ಕಂದ ನಿವಾಸದಲ್ಲಿ ಧಾರ್ಮಿಕ ಸಮಾರಂಭದ  ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ಪುತ್ತೂರು ಸೈಂಟ್ ಫಿಲೋಮಿನಾ ಪದವಿಪೂರ್ವ  ಕಾಲೇಜಿನ ನೀತಿ ಮತ್ತು ಸಮಾಜ ಕಲ್ಯಾಣ ಸಂಸ್ಥೆ.ರಿ  ಬೆಂಗಳೂರು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಯಕ್ಷಗಾನ ಕಲಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರುತಿ ವಿಸ್ಮಿತ್ ಬಲ್ನಾಡು ಇವರನ್ನು ಕಾರ್ಯಕ್ರಮದ ಆಯೋಜಕರಾದ ಗುಡ್ಡಪ್ಪ ಬಲ್ಯ, ಕುಸುಮ ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಕು. ನೇಹಾ ಅಭಿನಂದಿಸಿದರು. […]

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ Read More »

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ

ಬೆಳ್ತಂಗಡಿ :-  ವಾಗೀಶ್_ ವಿ_ 68* ಅಫೀಷಿಯಲ್  ಪ್ರೊಡಕ್ಷನ್ ನಲ್ಲಿ , ನಿರಂಜನ್ ಗೌಡ ಗುರುವಾಯನಕೆರೆ  ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ- ಸಾಹಿತ್ಯದಲ್ಲಿ, ಹಾಗೂ ಭರತ್ ಕುಲಾಲ್ ಅರಸಿನಮಕ್ಕಿ  ಛಾಯಾಗ್ರಹಣ,  ಸುಮಂತ್ ಬೆಳ್ತಂಗಡಿ ನೃತ್ಯ ಸಂಯೋಜನೆ, ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣದಲ್ಲಿ, ತಯಾರಾಗುತ್ತಿರುವ  ಸಸ್ಪೆನ್ಸ್‍ ಲವ್ ಸ್ಟೋರಿಯ ಮುಹೂರ್ತ ಸಮಾರಂಭವು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಎಪ್ರಿಲ್.20 ಅದಿತ್ಯವಾರ ನಡೆಯಿತು. ಈ ಚಿತ್ರದಲ್ಲಿ ರಂಗಿನ ಮನಸ್ಸು ,  ವಿಷ್ಣು ಕಲಾವಿದರು ಮದ್ದಡ್ಕ ಹಾಗೂ ಗಯಾಪದ ಕಲಾವಿದರು ಉಬರ್ ಮತ್ತು

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ Read More »

ಗೇರುಕಟ್ಟೆ ಕ್ಷೀರಸಂಗಮ ಸಭಾಭವನದಲ್ಲಿ ಭಾರತ ಮಾತಾ ಪೂಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಕಳಿಯ ಶಾಖೆಯ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗಿದ 15 ದಿನಗಳ ಮಕ್ಕಳ  ವಸಂತ ಚೈತನ್ಯ ಶಿಬಿರದ ಸಮಾರೋಪವು ಭಾರತ ಮಾತಾ ಪೂಜನದೊಂದಿಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ತನ್ಮಯಕೃಷ್ಣ ವಹಿಸಿದ್ದರು. ಮುಖ್ಯ ಮಾತುಗಾರರಾಗಿದ್ದ ಯೋಗ ಬಂಧು ತುಕರಾಮ ಶಿಬಿರದಲ್ಲಿ ಪಡೆದ ಅನುಭವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಆದ್ಯವಿ, ಸನ್ನಿಧಿ, ಅರ್ಜುನ ಮತ್ತು ಪೋಷಕರಾದ ಮಾಜಿಯೋಧ ವಿಕ್ರಮ,

ಗೇರುಕಟ್ಟೆ ಕ್ಷೀರಸಂಗಮ ಸಭಾಭವನದಲ್ಲಿ ಭಾರತ ಮಾತಾ ಪೂಜನ ಮತ್ತು ಮಕ್ಕಳ ಚೈತನ್ಯ ಶಿಬಿರದ ಸಮಾರೋಪ Read More »

ಒಕ್ಕಲಿಗರ ಯಾನೆ ಗೌಡರ ಸೇವಾ ಮಂಗಳೂರು ಯುವ ಘಟಕದಿಂದ ಪ್ರೀಮಿಯರ್ ಲೀಗ್‍ ಪುರುಷರ ಕ್ರಿಕೆಟ್‍ ಪಂದ್ಯಾಟ, ಮಹಿಳೆಯರ ತ್ರೋಬಾಲ್‍ ಪಂದ್ಯಾಟ | ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ

ಮಂಗಳೂರು: ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಮಂಗಳೂರು ಯುವ ಘಟಕದ ವತಿಯಿಂದ ಒಕ್ಕಲಿಗರ ಪ್ರೀಮಿಯರ್ ಲೀಗ್‍ ಹೊನಲು ಬೆಳಕಿನ ಟೆನ್ನಿಸ್‍ ಬಾಲ್‍ ಓವರ್ ಆರ್ಮ್‍ ಪುರುಷರ ಕ್ರಿಕೆಟ್‍ ಪಂದ್ಯಾಟ ಹಾಗೂ ಮಹಿಳೆಯರ ತ್ರೋಬಾಲ್‍ ಪಂದ್ಯಾಟಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು. ಶ್ರೀ ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಸುಳ್ಯ ಅಕಾಡೆಮಿ ಆಫ್‍ ಲಿಬರಲ್‍ ಎಜುಕೇಶನ್‍ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕುರುಂಜಿ ದೀಪ ಬೆಳಗಿಸಿ

ಒಕ್ಕಲಿಗರ ಯಾನೆ ಗೌಡರ ಸೇವಾ ಮಂಗಳೂರು ಯುವ ಘಟಕದಿಂದ ಪ್ರೀಮಿಯರ್ ಲೀಗ್‍ ಪುರುಷರ ಕ್ರಿಕೆಟ್‍ ಪಂದ್ಯಾಟ, ಮಹಿಳೆಯರ ತ್ರೋಬಾಲ್‍ ಪಂದ್ಯಾಟ | ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಸಾನಿಧ್ಯ Read More »

ಅಂಗಡಿ ಶಟರ್ ಮುರಿದು ಕಳ್ಳತನ : ಆರೋಪಿ ಬಂಧನ

ಬಂಟ್ವಾಳ: ಅಂಗಡಿಯ ಶಟರ್ ಮುರಿದು ಒಳನುಗ್ಗಿ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಪರಂಗಿಪೇಟೆಯಲ್ಲಿರುವ ವಿಶ್ವಾಸ ಸಿಟಿ ಸೆಂಟರ್ ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ ದಿನಾಂಕ ಏ. 11ರಂದು ರಾತ್ರಿ ಕಳ್ಳರು ಅಂಗಡಿಯ ಶಟರ್ ಗೆ ಅಳವಡಿಸಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದನ್ನು ಕಳವುಗೈದ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 42/2025

ಅಂಗಡಿ ಶಟರ್ ಮುರಿದು ಕಳ್ಳತನ : ಆರೋಪಿ ಬಂಧನ Read More »

ಮಂಗಳೂರು ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕಳ್ಳ ಸಾಗಾಟದ ಚಿನ್ನದ ಲಾಭ ಹಂಚಿಕೊಳ್ಳುವ ತಕರಾರಿನ ಹಿನ್ನೆಲೆಯಲ್ಲಿ ಮಾಡಿದ್ದ ಹತ್ಯೆ ಮಂಗಳೂರು: ವಿದೇಶದಿಂದ ಕಳ್ಳ ಮಾರ್ಗದಲ್ಲಿ ತಂದ ಚಿನ್ನದ ಲಾಭವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಉಂಟಾದ ತಕರಾರಿನ ನಗರದ ಅತ್ತಾವರದಲ್ಲಿ 2014ರಲ್ಲಿ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳ ಕಾಸರಗೋಡಿನ ಚೆರ್ಕಳ ಎಂಬಲ್ಲಿನ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಇರ್ಷಾದ್ (24) ಹಾಗೂ ಸಫ್ವಾನ್ (24)

ಮಂಗಳೂರು ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ Read More »

ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ : ಪೊಲೀಸ್‌ ಕಮಿಷನರ್‌ ಸ್ಪಷ್ಟನೆ

ವಕ್ಫ್‌ ಕಾನೂನು ವಿರುದ್ಧ ನಡೆದ ಪ್ರತಿಭಟನೆ ವೇಳೆ ವೈರಲ್‌ ಆದ ವೀಡಿಯೊ ಮಂಗಳೂರು: ವಕ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ವಾಹನದಲ್ಲೇ ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಡಲಾಗಿತ್ತು ಎಂಬ ವೀಡಿಯೊ ವೈರಲ್‌ ಆಗಿತ್ತು. ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆಕಾರರನ್ನು ಎಸಿಪಿ ವಾಹನದಲ್ಲೇ ಕರೆದೊಯ್ದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆರೋಪಿಸಲಾಗಿತ್ತು. ಆದರೆ ಇದು ಪ್ರತಿಭಟನೆಕಾರರಿಗೆ ಡ್ರಾಪ್‌ ಕೊಟ್ಟದ್ದಲ್ಲ, ಗಾಯಗೊಂಡ ಓರ್ವ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೀಡಿಯೊ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಕಾರ್ಯಕ್ರಮ

ಪ್ರತಿಭಟನೆಕಾರರನ್ನು ಸಾಗಿಸಿಲ್ಲ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ ವೀಡಿಯೊ : ಪೊಲೀಸ್‌ ಕಮಿಷನರ್‌ ಸ್ಪಷ್ಟನೆ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಘಟಕದ ವತಿಯಿಂದ ಏ.17 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು.  ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಅತಿಥಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವಾತಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು Read More »

ಮುರಿದು ಬಿದ್ದ ಬಪ್ಪನಾಡು ದೇವಿಯ ಬ್ರಹ್ಮರಥ

ವಾರ್ಷಿಕ ಜಾತ್ರೆ ವೇಳೆ ಸಂಭವಿಸಿದ ದುರ್ಘಟನೆ ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ವೇಳೆ ರಥ ಮುರಿದು ಬಿದ್ದ ದುರ್ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ವರ್ಷಾವಧಿ ಜಾತ್ರೆಯ ವೇಳೆ ಬ್ರಹ್ಮರಥೋತ್ಸವ ನಡೆಯುತ್ತಿರುವಾಗ ರಥದ ಮೇಲ್ಭಾಗ ಮುರಿದು ಬಿದ್ದಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಭಕ್ತರು ಇದ್ದರು. ಅರ್ಚಕರು ರಥದಲ್ಲೇ ಇದ್ದರು. ಆದರೆ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.

ಮುರಿದು ಬಿದ್ದ ಬಪ್ಪನಾಡು ದೇವಿಯ ಬ್ರಹ್ಮರಥ Read More »

error: Content is protected !!
Scroll to Top