ದಕ್ಷಿಣ ಕನ್ನಡ

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ

ಪೊಲೀಸರಿಂದ ಸರ್ಪಗಾವಲು; ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಮುಸ್ಲಿಮರ ಬೃಹತ್‌ ಪ್ರತಿಭಟನೆ ನಡೆಯಲಿದೆ. ಕರ್ನಾಟಕದಲ್ಲೇ ಅತಿದೊಡ್ಡ ಪ್ರತಿಭಟನೆಗೆ ಉಲೇಮಾ ಸಮನ್ವಯ ಸಮಿತಿ ಕರೆ ನೀಡಿದೆ. ನಗರದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಝಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಇಸ್ಲಾಂ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಉಲೇಮಾಗಳು ಭಾಗವಹಿಸಲಿದ್ದಾರೆ. ದಕ್ಷಿಣ […]

ಮಂಗಳೂರಿನಲ್ಲಿಂದು ರಾಜ್ಯದಲ್ಲೇ ಬೃಹತ್‌ ವಕ್ಫ್‌ ಪ್ರತಿಭಟನೆ Read More »

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ

ಸಹಾಯ ಕೇಳಿದವಳ ಮೇಲೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ ರಿಕ್ಷಾ ಚಾಲಕ ಮತ್ತವನ ಸ್ನೇಹಿತರು ಉಳ್ಳಾಲ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶ್ಚಿಮ ಬಂಗಾಳದ ಯುವತಿಯೊಬ್ಬಳ ಮೇಲೆ ರಿಕ್ಷಾ ಚಾಲಕ ಹಾಗೂ ಅವನ ಇಬ್ಬರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ಬುಧವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣೆ ಸಮೀಪ ಈ ಘಟನೆ ನಡೆದಿದ್ದು, ಮಧ್ಯಾರಾತ್ರಿ 1.30 ಸುಮಾರಿಗೆ 112ಕ್ಕೆ ಕರೆ ಮಾಡಿ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಕಮಿಷನರ್‌ ತಿಳಿಸಿದ ಮಹತ್ವದ ಮಾಹಿತಿ Read More »

ಏ.24ರಂದು ಕು.ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ರಿಂದ  ಭರತನಾಟ್ಯ ರಂಗ ಪ್ರವೇಶವು

ಪೆರ್ನಾಜೆ: ಸುಮ್ಮನೆ ಕುಳಿತವರು ಹೆಜ್ಜೆ ಗುರುತನ್ನು ಮೂಡಿಸಲಾರರು ಹೆಜ್ಜೆ ಗುರುತು  ಮೂಡಿಸಬೇಕೆಂದರೆ ಎದ್ದು ನಡೆಯಲೇಬೇಕು ಕಲಾತ್ಮಕ ಅರ್ಥಪೂರ್ಣವಾದ ಹೆಜ್ಜೆ ಗೆಜ್ಜೆಯ ಸದ್ದಿಗೆ ಅದ್ಭುತ ಭರತನಾಟ್ಯದ ರಂಗಪ್ರವೇಶವು ಏ 24ರಂದು ನಾಟ್ಯ ಸಿಂಚನ ಲಕ್ಷ್ಮಿ ಕೊಡಂದೂರ್ ರವರು ವಿಟ್ಲ ಗಾರ್ಡನ್ ಆಡಿಟೋರಿಯಂ ನಲ್ಲಿ  ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಲಿದ್ದಾರೆ.  ಕಿರು ಪರಿಚಯ:- ಕರ್ನಾಟಕ ರಾಜ್ಯ ಡಾ .ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ವಿಶ್ವವಿದ್ಯಾನಿಲಯ ಮೈಸೂರ್ ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿದ್ವತ್ ಪರೀಕ್ಷೆಯ ಅಂತಿಮ

ಏ.24ರಂದು ಕು.ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ರಿಂದ  ಭರತನಾಟ್ಯ ರಂಗ ಪ್ರವೇಶವು Read More »

ಶುಕ್ರವಾರ ಅಡ್ಯಾರಿನಲ್ಲಿ ವಕ್ಫ್‌ ಕಾಯ್ದೆ ವಿರುದ್ಧ ಬೃಹತ್‌ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗ ಬಳಸಲು ಸೂಚನೆ ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಏಪ್ರಿಲ್ 18ರಂದು ಅಡ್ಯಾರ್‌ ಕಣ್ಣೂರಿನಲ್ಲಿ ಮುಸ್ಲಿಮರ ಬೃಹತ್‌ ಪ್ರತಿಭಟನೆ ನಡೆಯಲಿದೆ. ಕನಿಷ್ಠ 50 ಸಾವಿರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಹೇಳಿದ್ದು, ಈ ಹಿನ್ನೆಲೆಯಲ್ಲಿ, ಶುಕ್ರವಾರ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸಂಚಾರ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರತಿಭಟನೆಯಿಂದಾಗಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡೀಲ್-ಕಣ್ಣೂರು-ಅಡ್ಯಾರ್-ಸಹ್ಯಾದ್ರಿ-ಅರ್ಕುಳ ಮಾರ್ಗಗಳಲ್ಲಿ ತೀವ್ರ ವಾಹನ

ಶುಕ್ರವಾರ ಅಡ್ಯಾರಿನಲ್ಲಿ ವಕ್ಫ್‌ ಕಾಯ್ದೆ ವಿರುದ್ಧ ಬೃಹತ್‌ ಪ್ರತಿಭಟನೆ Read More »

ಬಿಜೆಪಿ ಸಕ್ರಿಯ ಕಾರ್ಯಕರ್ತ ರಮೇಶ್ ನಿಧನ

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಮೃತರನ್ನು ರಮೇಶ್(45) ಎನ್ನಲಾಗಿದೆ. ರಮೇಶ್ ರವರು ಉತ್ತಮ ಕ್ರೀಡಾ ಸಂಘಟಕ ಹಾಗೂ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಹಿಂದೂ ಹಿತರಕ್ಷಣಾ ಸಮಿತಿಯ ಸಂಘಟಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಸಾಲೆತ್ತೂರಿನಲ್ಲಿ ಆಚರಿಸಲು ಶ್ರಮ ವಹಿಸಿದ್ದರು. ಮೃತರು ಪತ್ನಿ, ಪುತ್ರಿ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಸಕ್ರಿಯ ಕಾರ್ಯಕರ್ತ ರಮೇಶ್ ನಿಧನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಪೆರ್ನೆ ಶೌರ್ಯ ಘಟಕದಿಂದ ಕಡೇಶಿವಾಲಯ ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಕಡೇಶಿವಾಲಯ, ಮತ್ತು  ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ, ಕಡೇಶಿವಾಲಯ ಚಿಂತಾಮಣಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ. ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಡೇಶಿವಾಲಯ ಜಾತ್ರೋತ್ಸವದ ಸಂದರ್ಭದ  ಪ್ರಯುಕ್ತ ಏ.13 ಭಾನುವಾರದಂದು  ಸ್ವಚ್ಛತಾ ಕಾರ್ಯಕ್ರಮ ಸೇವೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ  ದೇವಸ್ಥಾನದ  ಆಡಳಿತ  ಸಮಿತಿಯವರು, ವಲಯ ಮೇಲ್ವಿಚಾರಕರು, ಸಂಯೋಜಕರು, ಸೇವಾಪ್ರತಿನಿಧಿ, ಒಕ್ಕೂಟದ ಅಧ್ಯಕ್ಷರು  ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಪೆರ್ನೆ ಶೌರ್ಯ ಘಟಕದಿಂದ ಕಡೇಶಿವಾಲಯ ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ Read More »

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಆ್ಯಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ

ಮಂಗಳೂರು ವಿಶ್ವವಿದ್ಯಾಲಯದ ಉದ್ಯಮಾಡಳಿತ ವಿಭಾಗವು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದರು. ಏಕ ವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ  ಮಯೂರಿ ಎಂ ಜಿ   ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಆ್ಯಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ Read More »

ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ

ಶ್ರೀ ದುರ್ಗಾಂಬಾ ಕಲಾ ಸಂಗಮ  ಶರವೂರು ವತಿಯಿಂದ ಶನಿವಾರದಂದು  ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ ನಡೆಯಿತು  ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ದಿವಾಕರ ಆಚಾರ್ಯ ಹಳೆನೇರೆಂಕಿ(ದೇವೇಂದ್ರ), ಗುರುಪ್ರಸಾದ್ ಆಲಂಕಾರು(ಬೃಹಸ್ಪತಿ), ದಿವಾಕರ ಆಚಾರ್ಯ ಹಳೆನೇರೆಂಕಿ(ತಮಾಸುರ), ಜಯರಾಂ ಗೌಡ ಬಲ್ಯ(ಖ್ಯಾತಿ 1), ದಿವಾಕರ ಆಚಾರ್ಯ ಹಳೆನೇರೆಂಕಿ(ಖ್ಯಾತಿ 2), ರಾಘವೇಂದ್ರ ಭಟ್ ತೋಟಂತಿಲ(ವಿಷ್ಣು), ರಾಮ್ ಪ್ರಸಾದ್ ಆಲಂಕಾರು(ಭೃಗು), ಹರಿಶ್ಚಂದ್ರ ಗೌಡ ಕೋಡ್ಲ ಭಾಗವಹಿಸಿದ್ದರು. ಮಹಾಬಲ ರೈ ನಗ್ರಿ

ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ Read More »

ಡಿವೈಡರ್ ಗೆ ಡಿಕ್ಕಿಹೊಡೆದ  ಬಸ್‍ | 13ಮಂದಿಗೆ ಗಂಭೀರ ಗಾಯ

ನೆಲ್ಯಾಡಿ: ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹೆಚ್ ಪಿ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು 10 ಮಂದಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ. ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್ ಟಿಸಿ ಬಸ್ಸು ಇದಾಗಿದ್ದು, ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ಗೆ ಡಿಕ್ಕಿಯಾಗಿದೆ

ಡಿವೈಡರ್ ಗೆ ಡಿಕ್ಕಿಹೊಡೆದ  ಬಸ್‍ | 13ಮಂದಿಗೆ ಗಂಭೀರ ಗಾಯ Read More »

ಪೂರ್ವದ್ವೇಷದಿಂದ ಆಟೋಚಾಲಕನ ಹತ್ಯೆ : ಆರೋಪಿ ಸೆರೆ

ಆರು ತಿಂಗಳ ಹಿಂದೆ ಆದ ಜಗಳದ ಸೇಡು ತೀರಿಸಿಕೊಳ್ಳಲು ಕೊಲೆ ಮಂಗಳೂರು: ಮೂಲ್ಕಿಯ ಆಟೋರಿಕ್ಷಾ ಚಾಲಕ ಮುಹಮ್ಮದ್ ಶರೀಫ್ (52) ಕೊಲೆಗೆ ಪೂರ್ವ ದ್ವೇಷವೇ ಕಾರಣ ಎಂಬ ವಿಚಾರ ಆರೋಪಿಯ ವಿಚಾರಣೆಯಿಂದ ತಿಳಿದುಬಂದಿದೆ. ಮಂಗಳೂರಿನಲ್ಲಿ ರಿಕ್ಷಾ ಬಾಡಿಗೆ ಮಾಡುತ್ತಿದ್ದ ಮೂಲ್ಕಿಯ ಮುಹಮ್ಮದ್‌ ಶರೀಫ್‌ ಅವರನ್ನು ಕೇರಳ ಗಡಿಯ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿಗೆ ಕೊಂಡೊಯ್ದು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿದ್ದ ಆರೋಪಿ ಅಭಿಷೇಕ್‌ ಶೆಟ್ಟಿ ಎಂಬಾತನನ್ನು ಮಂಗಳೂರು ಪೊಲೀಸರು ನಿನ್ನೆ ಬಂಧಿಸಿದ್ದಾರೆ.ಆರೋಪಿ ಅಭಿಷೇಕ್ ಶೆಟ್ಟಿ

ಪೂರ್ವದ್ವೇಷದಿಂದ ಆಟೋಚಾಲಕನ ಹತ್ಯೆ : ಆರೋಪಿ ಸೆರೆ Read More »

error: Content is protected !!
Scroll to Top