ದಕ್ಷಿಣ ಕನ್ನಡ

ಸಿಟಿ ಬಸ್‍ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಆತ್ಮಹತ್ಯೆ ಮಾಡಿಕೊಂಡವರು. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಜಗದೀಶ್‍ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕ್, ಪರ್ಸ್ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪರ್ಸ್‌ನಲ್ಲಿ ಚಿನ್ನ ಅಡವಿಟ್ಟ […]

ಸಿಟಿ ಬಸ್‍ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ Read More »

ಹೆಂಡತಿ-ಮಗಳಿಗೆ ಹಲ್ಲೆ | ಆಸ್ಪತ್ರೆಗೆ ದಾಖಲು !

ಶಿಶಿಲ: ಹೆಂಡತಿ ಮಕ್ಕಳಿಗೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದ ಕುರಿತು ಶಿಶಿಲದಿಂದ ವರದಿಯಾಗಿದೆ. ಶಿಶಿಲ ಕೋಟಬಾಗಿಲು ನಿವಾಸಿ ಸುರೇಶ್‍ ಎಂಬವರು ತನ್ನ ಹೆಂಡತಿ ಮುಖದ ಭಾಗಕ್ಕೆ ಕಚ್ಚಿದ್ದು, ಕಣ್ಣಿಗೆ ಕೋಲಿನಿಂದ ಹೊಡೆದು ಕಣ್ಣನ್ನು ಸಂಪೂರ್ಣ ಹಾನಿಗೊಳ್ಳಿಸಿದ್ದಾರೆ. ಅಲ್ಲದೆ ಮಗಳಿಗೆ ತಲೆ ಭಾಗಕ್ಕೆ ಹೊಡೆದಿದ್ದು, ಹೆಂಡತಿ-ಮಗಳು ಇಬ್ಬರೂ ಪ್ರಾಣ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ತಕ್ಷಣ ಸ್ಥಳೀಯರು ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಗೆ ತೆರಳಿ

ಹೆಂಡತಿ-ಮಗಳಿಗೆ ಹಲ್ಲೆ | ಆಸ್ಪತ್ರೆಗೆ ದಾಖಲು ! Read More »

ಡಿ.26: ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಚಪ್ಪರ ಮುಹೂರ್ತ ನೆರವೇರಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಕಡಬ: ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ ಡಿ.18 ಸೋಮವಾರ ಸಂಜೆ ಕಡಬ ಹೊಸಮಠದಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ಸುರೇಶ್ ಬೈಲು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಒಕ್ಕಲಿಗ ಸ್ಪಂದನಾ ಸಮುದಾಯ  ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ

ಡಿ.26: ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಚಪ್ಪರ ಮುಹೂರ್ತ ನೆರವೇರಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ Read More »

ಖೋಟಾ ನೋಟು ಚಲಾವಣೆಗೆ ಯತ್ನ | ಆರೋಪಿ ಬಂಧನ

ಮಂಗಳೂರು : ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ಬಳಿ ಬಂಧಿಸಿದ್ದಾರೆ. ಮಂಜೇಶ್ವರದ ಆಬುಪಡ್ಡು ನಿವಾಸಿ ಪ್ರಶ್ಚಿತ್ (25) ಬಂಧಿತ ಆರೋಪಿ. ಆರೋಪಿ 500 ರೂ., 200 ರೂ., 100 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂ. ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 500 ರೂ. ಮುಖಬೆಲೆಯ 3 ನೋಟುಗಳು, 200

ಖೋಟಾ ನೋಟು ಚಲಾವಣೆಗೆ ಯತ್ನ | ಆರೋಪಿ ಬಂಧನ Read More »

ನಾಳೆ (ಡಿ.18)  : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನಕ್ಕೆ ಶಿಲಾನ್ಯಾಸ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಹಾಗೂ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ ಡಿ.18 ಸೋಮವಾರ ಸಂಜೆ 5.30 ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕಡಬ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘ ನಿ. ದ ಉದ್ಘಾಟನಾ ಸಮಾರಂಭ, ಚಪ್ಪರಮುಹೂರ್ತ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ನಾಳೆ (ಡಿ.18)  : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನಕ್ಕೆ ಶಿಲಾನ್ಯಾಸ Read More »

ಬಿಳಿಯೂರು ಕಿಂಡಿ ಅಣೆಕಟ್ಟು ರೈತರ ಪಾಲಿಗೆ ಸಂತಸ ತಂದಿದೆ | ಗಂಗಾಪೂಜೆಯಲ್ಲಿ ಬಾಗೀನ ಅರ್ಪಿಸಿ ಸಂಜೀವ ಮಠಂದೂರು

ಬಂಟ್ವಾಳ:  ತಾಲೂಕಿನ ಪೆರ್ನೆ. ಬಿಳಿಯೂರು ಗ್ರಾಮದ ಕಡಪು ಎಂಬಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ನಿರ್ಮಾಣವಾದ 51 ಕೋಟಿ ವೆಚ್ಚದ ಸಂಪರ್ಕ ರಸ್ತೆ ಮತ್ತು ಕಿಂಡಿ ಅಣೆಕಟ್ಟಿನಲ್ಲಿ ನದಿಗೆ ಬಾಗಿನ ಅರ್ಪಿಸುವ ಗಂಗಾ ಪೂಜೆ ಡಿ.17 ಭಾನುವಾರ ಬೆಳಿಗ್ಗೆ ನಡೆಯಿತು. ಗೋಪಾಲಕೃಷ್ಣ ಭಟ್ ಅವರು ಪೂಜೆ ನೆರವೇರಿಸಿದರು. ಬಾಗಿನ ಅರ್ಪಿಸಿ ಮಾತನಾಡಿದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ. 51 ಕೋಟಿ

ಬಿಳಿಯೂರು ಕಿಂಡಿ ಅಣೆಕಟ್ಟು ರೈತರ ಪಾಲಿಗೆ ಸಂತಸ ತಂದಿದೆ | ಗಂಗಾಪೂಜೆಯಲ್ಲಿ ಬಾಗೀನ ಅರ್ಪಿಸಿ ಸಂಜೀವ ಮಠಂದೂರು Read More »

ಕಾರು ಡಿಕ್ಕಿಯಾಗಿ ವಿಕಲಚೇತನರೊಬ್ಬರು ಮೃತ್ಯು !

ಕಡಬ: ರಸ್ತೆ ದಾಟುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಡಬದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ ಮೃತರ ವಿಕಲಚೇತನರಾಗಿದ್ದಾರೆ. ಶುಕ್ರವಾರ ಸಾಯಂಕಾಲ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಾರು ಡಿಕ್ಕಿಯಾಗಿ ವಿಕಲಚೇತನರೊಬ್ಬರು ಮೃತ್ಯು ! Read More »

ಕಾರು-ಸ್ಕೂಟರ್ ಡಿಕ್ಕಿ | ವಿದ್ಯಾರ್ಥಿ ಮೃತ್ಯು

ಕಡಬ: ಕಾರು ಮತ್ತು ಸ್ಕೂಟ‌ರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಕಡಬ ತಾಲೂಕಿನ ಕಳಾರದಲ್ಲಿ ನಡೆದಿದೆ. ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಎಂಬವರ ಪುತ್ರ ಸರಸ್ವತಿ ಶಾಲಾ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ. ಮೃತ ಬಾಲಕನ ತಂದೆ ಹಾಗೂ ತಂಗಿ ಗಂಭೀರ ಗಾಯಗೊಂಡಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ತಮ್ಮ ನಿವಾಸದಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದ್ದು, ಸರಸ್ವತಿ ಶಾಲೆಯಲ್ಲಿ ನಡೆದಿದ್ದ ಕ್ರೀಡೋತ್ಸವ

ಕಾರು-ಸ್ಕೂಟರ್ ಡಿಕ್ಕಿ | ವಿದ್ಯಾರ್ಥಿ ಮೃತ್ಯು Read More »

ವಾಹನ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡು ಚಾಲಕ ಮೃತ್ಯು !

ಸುಳ್ಯ: ಪಿಕಪ್ ವಾಹನ ಚಾಲನೆ ಸಂದರ್ಭ ಚಾಲಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ಸುಳ್ಯ ಪೈಚಾರಿನಲ್ಲಿ ನಡೆದಿದೆ. ಗದಗ ತಾಲೂಕು ಹೊಸೂರು ಗ್ರಾಮದ ಹುಸೇನಸಾಬ ಹೆಬಸುರ (45) ಮೃತಪಟ್ಟವರು. ಬೆಳ್ತಂಗಡಿಯಲ್ಲಿ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಮಡಿಕೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಅಳವಡಿಸಲಾಗಿದ್ದ ಶಾಮಿಯಾನವನ್ನು ತರಲೆಂದು ಮಡಿಕೇರಿಗೆ ಗುರುವಾರ ರಾತ್ರಿ ಹೊರಟ್ಟಿದ್ದರು. ವಾಹನ ಸುಳ್ಯದ ಪೈಚಾರು ಸಮೀಪ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಬಳಿಯಲ್ಲಿ ಕುಳಿತಿದ್ದ ವ್ಯಕ್ತಿಗೆ

ವಾಹನ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡು ಚಾಲಕ ಮೃತ್ಯು ! Read More »

ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಶೋಧ | ಮಾಹಿತಿ ಇದ್ದಲ್ಲಿ ತಿಳಿಸುವಂತೆ ಎನ್‍ಐಎ ಮನವಿ

ಸುಳ್ಯ: ಬೆಳ್ಳಾರೆ ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಎನ್‍ಐಎ ಮನವಿ ಮಾಡಿದೆ. ಆರೋಪಿಗಳಾದ ಎಂ.ಡಿ.ಮುಸ್ತಫ, ಮಸೂದ್ ಅಗ್ನಾಡಿ, ಮಸೂದ್ ಕೆ.ಎ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಆರ್. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್ ಲಿಸ್ಟ್ ಪಟ್ಟಿಯಲ್ಲಿದ್ದಾರೆ. ಆರೋಪಿಗಳು ಕಂಡು ಬಂದಲ್ಲಿ, ಇರುವಿಕೆ ಕುರಿತು ಮಾಹಿತಿ ಇದ್ದಲ್ಲಿ ವಾಟ್ಸಾಪ್ ಸಂಖ್ಯೆ 9497715294 ಸಂಪರ್ಕಿಸುವಂತೆ ಸಾರ್ವಜನಿಕರನ್ನು ಎನ್ಐಎ ವಿನಂತಿಸಿದೆ. ಮಾಹಿತಿ ನೀಡಿದವರಿಗೆ ಸೂಕ್ತ

ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಶೋಧ | ಮಾಹಿತಿ ಇದ್ದಲ್ಲಿ ತಿಳಿಸುವಂತೆ ಎನ್‍ಐಎ ಮನವಿ Read More »

error: Content is protected !!
Scroll to Top