ದಕ್ಷಿಣ ಕನ್ನಡ

The perfect addition.

Yes, selection is a challenge from time immemorial. Be it anything to select, everybody is puzzled with varying degrees, never the less. But, magically, exceptionally, sometimes the selection appears to be perfect by all angles. Here is one such example. Ashwin L. Shetty, an ex missile engineer by profession, was inducted into the world’s largest […]

The perfect addition. Read More »

ರಾಜಕೀಯ ಪ್ರವೇಶ ಮಾಡಿದ ಅಶ್ವಿನ್ ಎಲ್‍. ಶೆಟ್ಟಿ | ಜಿಲ್ಲಾ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ

ಮಂಗಳೂರು: ಸಹಕಾರಿ, ಧುರೀಣ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್. ಶೆಟ್ಟಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದು ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ, ಸಂತೋಷ ಕುಮಾರ್ ಬೊಳಿಯಾರು, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ

ರಾಜಕೀಯ ಪ್ರವೇಶ ಮಾಡಿದ ಅಶ್ವಿನ್ ಎಲ್‍. ಶೆಟ್ಟಿ | ಜಿಲ್ಲಾ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆ Read More »

ಸುಳ್ಯ ತಾಲೂಕು ಹೊಸ ಅಕ್ರಮ ಸಕ್ರಮ ಸಮಿತಿ ರಚನೆ | ಆದೇಶ ಹೊರಡಿಸಿದ ಸರಕಾರ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಪ್ರಮುಖರನ್ನೊಳಗೊಂಡು ಹಿಂದೆ ರಚಿಸಿದ್ದ ಸಮಿತಿಯನ್ನು ರದ್ದುಗೊಳಿಸಿ, ಇದೀಗ ಹೊಸದಾಗಿ ಸದಸ್ಯರ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯ ಸಮಿತಿಗೆ ಕಾಂಗ್ರೆಸ್ ಮುಖಂಡರಾದ  ಹೆಚ್. ಆದಂ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರು ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಹೊಸ ಸಮಿತಿ ರಚಿಸಿ ಆದೇಶಿಸಲಾಗಿದೆ.

ಸುಳ್ಯ ತಾಲೂಕು ಹೊಸ ಅಕ್ರಮ ಸಕ್ರಮ ಸಮಿತಿ ರಚನೆ | ಆದೇಶ ಹೊರಡಿಸಿದ ಸರಕಾರ Read More »

ಕುಮಾರಪರ್ವತದ ತುದಿಯ ಕುಮಾರನ ಪಾದಕ್ಕೆ ಪೂಜೆ

ಸುಬ್ರಹ್ಮಣ್ಯ: ಸುಮಾರು 4 ಸಾವಿರ ಅಡಿ ಎತ್ತರವಿರುವ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ಅವರು ಮಂಗಳವಾರ ಪೂಜೆ ನೆರವೇರಿಸಿದರು. ಈ ಸಂಧರ್ಭ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಅಧಿಕ

ಕುಮಾರಪರ್ವತದ ತುದಿಯ ಕುಮಾರನ ಪಾದಕ್ಕೆ ಪೂಜೆ Read More »

ಕುಕ್ಕೆ ದೇವಾಲಯದಲ್ಲಿ ಪರ್ಸ್, ಮೊಬೈಲ್ ಕಳ‍್ಳತನ! | ಸಿಸಿ ಕ್ಯಾಮರಾ ಸಹಾಯದಿಂದ ಮಹಿಳೆಯನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ

ಸುಬ್ರಹ್ಮಣ್ಯ: ಭಕ್ತರೊಬ್ಬರ ಪರ್ಸ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಮಹಿಳೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ದೂರದ ಊರಿನಿಂದ ಆಗಮಿಸಿದ ಭಕ್ತರೊಬ್ಬರ ಮೊಬೈಲ್ ಹಾಗೂ ಪರ್ಸ್ ಕಳೆದು ಹೋಗಿರುವ ಬಗ್ಗೆ ದೇವಸ್ಥಾನದ ಕಚೇರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುವಾಗ ಮಹಿಳೆಯೊಬ್ಬಳು ಪರ್ಸ್ ಕಳ್ಳತನ ಮಾಡುತ್ತಿರುವ ದೃಶ್ಯ ಕಂಡುಬಂದಿತ್ತು.

ಕುಕ್ಕೆ ದೇವಾಲಯದಲ್ಲಿ ಪರ್ಸ್, ಮೊಬೈಲ್ ಕಳ‍್ಳತನ! | ಸಿಸಿ ಕ್ಯಾಮರಾ ಸಹಾಯದಿಂದ ಮಹಿಳೆಯನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ Read More »

ಬೋರ್ವೆಲ್ ಲಾರಿಯಿಂದ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು!!

ಕಡಬ: ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿ ನಿಲ್ಲಿಸಿದ್ದ ಬೋರ್ವೆಲ್ ಲಾರಿಯಿಂದ ಕೊಳವೆ ಬಾವಿ ಕೊರೆಯುವ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು ಮಾಡಿರುವ ಘಟನೆ ನಡೆದಿದೆ. ರಾಜ್ಯ ಸರಕಾರದ ಜಲಜೀವನ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಟೆಂಡರ್ ಆಗಿದ್ದು, ಅದರಂತೆ ಬಿಳಿನೆಲೆ ಗ್ರಾ.ಪಂ.ಗೆ ಸಂಬಂಧಿಸಿದ ಕೊಳವೆ ಬಾವಿ ಕೊರೆಯುವ ಬೋರ್ವೆಲ್ ಆಗಮಿಸಿತ್ತು. ಐತ್ತೂರು ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಕೆಲಸಗಾರರು ಲಾರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗ್ಗೆದ್ದು ನೋಡಿದಾಗ ಕೊಳವೆ ಬಾವಿ

ಬೋರ್ವೆಲ್ ಲಾರಿಯಿಂದ ಕಬ್ಬಿಣದ ಡ್ರಿಲ್ಲಿಂಗ್ ಬಿಟ್ ಕಳವು!! Read More »

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ಯ ಮಾವುತರಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಅವರು ಭಾನುವಾರ ನಿವೃತ್ತರಾದರು. ಈ ಸಂದರ್ಭ ಯಶಸ್ವಿಯು ಶ್ರೀನಿವಾಸ ಅವರಿಗೆ ಹಾರ ಹಾಕಿ ಸೊಂಡಿಲನ್ನು ಅವರ ತಲೆಯ ಮೇಲಿರಿಸಿ ಗೌರವ ಸಲ್ಲಿಸಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಮಾವುತರಾಗಿ ಸುಮಾರು 15 ವರ್ಷ ಅವರು ಸೇವೆ ಸಲ್ಲಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಶ್ರೀನಿವಾಸ ಅವರನ್ನು ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ: ಮಾವುತನನ್ನು ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’ Read More »

ನೂತನ ಸಹಾಯಕ ಆಯುಕ್ತರಿಗೆ ಸುಳ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತ

ಸುಳ್ಯ: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಹಾಗೂ ದಂಡಾಧಿಕಾರಿಯಾಗಿರುವ ಜುಬಿನ್ ಮೊಹಪಾತ್ರ ಅವರು ಸುಳ್ಯಕ್ಕೆ ಭೇಟಿ ನೀಡಿದ ಸಂಧರ್ಭ ಗ್ರಾಮ ಪಂಚಾಯತ್ ಜಿಲ್ಲಾ ಒಕ್ಕೂಟದ ವತಿಯಿಂದ ಸ್ವಾಗತಿಸಲಾಯಿತು. ಗ್ರಾಮ ಪಂಚಾಯತ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಉಬರಡ್ಕ ಅವರು ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತಿಸಿದರು. ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿರುವ ಜುಬಿನ್ ಮೊಹಪಾತ್ರ ಅವರು 2021ರ ಬ್ಯಾಚಿನ ಐ.ಎ.ಎಸ್. ಅಧಿಕಾರಿ.

ನೂತನ ಸಹಾಯಕ ಆಯುಕ್ತರಿಗೆ ಸುಳ್ಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪರವಾಗಿ ಸ್ವಾಗತ Read More »

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ !

ಸುಳ್ಯ: ಸುಳ್ಯ ಕೆ.ವಿ.ಜಿ ಕ್ಯಾಂಪಸ್ ಬಳಿಯ ಬಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಕಣ್ಮರೆಯಾದ ವ್ಯಕ್ತಿ ಶವ ಪತ್ತೆಯಾಗಿದೆ. ಬಟ್ಟೆ ಒಗೆಯಲು ಹಾಗೂ ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬರು ಕಣ್ಮರೆಯಾಗಿದ್ದರು. ಆ ವ್ಯಕ್ತಿಯ ಪತ್ತೆಗಾಗಿ ಸುಳ್ಯ ಆರಕ್ಷಕ ಠಾಣೆ ಸಿಬ್ಬಂದಿಗಳು ಅಗ್ನಿಶಾಮಕ ದಳ ಹಾಗೂ ಪೈಚಾರಿನ ಮುಳುಗು ತಜ್ಞರ ತಂಡ ಶೋಧ ಮುಂದುವರಿಸಿದ್ದರು. ಇದೀಗ ಮೃತ ದೇಹವನ್ನು ನೀರಿನಿಂದ ಮೇಲೇತ್ತಲಾಗಿದೆ ಎಂದು ತಿಳಿದು ಬಂದಿದೆ.

ಪಯಸ್ವನಿ ನದಿಯಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ ! Read More »

ನವ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ !

ಸುಳ್ಯ: ನವ ವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ರಾಜೇಶ್ ಗುಂಡ್ಯ (29) ಆತ್ಮಹತ್ಯೆ ಮಾಡಿಕೊಂಡವರು. ರಾಜೇಶ್‍ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್‍ ನ ಸಕ್ರೀಯ ಸದಸ್ಯರಾಗಿದ್ದು ಡಿ.21 ರಂದು ಕಾಣಿಯೂರಿನ ಯುವತಿ ಜತೆ ವಿವಾಹವಾಗಿದ್ದರು. ಬಳಿಕ ಪತ್ನಿಯೊಂದಿಗೆ ಗುಂಡ್ಯ ಮನೆಯಲ್ಲಿದ್ದರು. ಮನೆಯವರು ಹೊರ ಹೋದ ಸಂದರ್ಭದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನವ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ ! Read More »

error: Content is protected !!
Scroll to Top