ದಕ್ಷಿಣ ಕನ್ನಡ

ನಾಳೆ (ಜೂ.11) : ಸವಣೂರು ಯುವಕ ಮಂಡಲ ಸಭಾಭವನದಲ್ಲಿ ಜನಸಂಪರ್ಕ ಸಭೆ

ಬೆಳ್ಳಾರೆ: ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಜನಸಂಪರ್ಕ ಸಭೆ ನಾಳೆ (ಜೂ.11) ಬೆಳಿಗ್ಗೆ ನಡೆಯಲಿದೆ. ಸವಣೂರು ಯುವಕ ಮಂಡಲ ಸಭಾಭವನದಲ್ಲಿ ಪುತ್ತೂರು ಉಪವಿಭಾಗದ DYSP ಯವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 11.30 ಕ್ಕೆ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. ಸವಣೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತೆ ಬೆಳ್ಳಾರೆ ಠಾಣಾ ಪೊಲೀಸ್‍ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜೂ.11) : ಸವಣೂರು ಯುವಕ ಮಂಡಲ ಸಭಾಭವನದಲ್ಲಿ ಜನಸಂಪರ್ಕ ಸಭೆ Read More »

ಅಡಿಕೆ ವ್ಯಾಪಾರಿಯಿಂದ ಕೋಟ್ಯಾಂತರ ರೂಪಾಯಿ ವಂಚನೆ | ಠಾಣೆ ಮೆಟ್ಟಿಲೇರಿದ ಕೃಷಿಕರು

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪಾರಾರಿಯಾಗಿದ್ದು ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಪೋಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಇಂದು ಸುಮಾರು 50 ಕ್ಕೂ ಅಧಿಕ ಕೃಷಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ವಂಚನೆಗೆ ಒಳಗಾದ ಕೃಷಿಕರು ಹಣ ನೀಡದೆ ವಂಚಿಸಿದ ವ್ಯಕ್ತಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಮೊತ್ತ ಪಾವತಿಯ ಹಿನ್ನಲೆಯಲ್ಲಿ ವ್ಯಾಪಾರಿಯ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವುದು

ಅಡಿಕೆ ವ್ಯಾಪಾರಿಯಿಂದ ಕೋಟ್ಯಾಂತರ ರೂಪಾಯಿ ವಂಚನೆ | ಠಾಣೆ ಮೆಟ್ಟಿಲೇರಿದ ಕೃಷಿಕರು Read More »

ಪೆಟ್ರೋಲ್‍ ಸುರಿದು ಕೊಲೆಗೆ ಯತ್ನ | ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು

ಕಡಬ: ತಮ್ಮನೇ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಣ್ಣ ಚಿಕಿತ್ಸೆ ಫಲಿಸದೆ ಸೋಮವಾರ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪದ ಕೋರಿಯರ್ ರೈಲು ಟ್ರ್ಯಾಕ್ ಸಮೀಪ ಜೂ.8 ರಂದು ಈ ಘಟನೆ ನಡೆದಿತ್ತು. ತಮ್ಮನ್ನೇ ತನ್ನ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದ್ದ. ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನುಮಪ್ಪ (42) ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಪೊಲೀಸರು

ಪೆಟ್ರೋಲ್‍ ಸುರಿದು ಕೊಲೆಗೆ ಯತ್ನ | ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು Read More »

ಹೊಸದಿಲ್ಲಿಯ ಫ್ರೆಂಡ್‌ಶಿಪ್ ಫೋರಂ ನೀಡುವ ಪ್ರತಿಷ್ಠಿತ ‘ಗ್ಲೋಬಲ್‌ ಅಚೀವರ್ಸ್’ ಪ್ರಶಸ್ತಿಗೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆ

ಹೊಸದಿಲ್ಲಿಯ ಫ್ರೆಂಡ್‌ಶಿಪ್ ಫೋರಂ ನೀಡುವ ಪ್ರತಿಷ್ಠಿತ ‘ಗ್ಲೋಬಲ್‌ ಅಚೀವರ್ಸ್’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್  ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ. ಸಹಕಾರ, ಬ್ಯಾಂಕಿಂಗ್‌ ಮತ್ತು ಸಮಾಜ ಸೇವೆಯಲ್ಲಿ ಅವರ ಅನುಪಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಡಾ. ರಾಜೇಂದ್ರ ಕುಮಾರ್ ಅವರು ಕಳೆದ 31 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಬ್ಯಾಂಕನ್ನು ರಾಷ್ಟ್ರೀಯ ಮಟ್ಟದ

ಹೊಸದಿಲ್ಲಿಯ ಫ್ರೆಂಡ್‌ಶಿಪ್ ಫೋರಂ ನೀಡುವ ಪ್ರತಿಷ್ಠಿತ ‘ಗ್ಲೋಬಲ್‌ ಅಚೀವರ್ಸ್’ ಪ್ರಶಸ್ತಿಗೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆ Read More »

ಮಂಗಳೂರಿನ ಕದ್ರಿ ದೇವಸ್ಥಾನದ ಕೊಳದ ಬಳಿ ಬುದ್ಧನ ವಿಗ್ರಹ, ಗುಹೆ ಪತ್ತೆ

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪವಿತ್ರ ಕೊಳದ ಬಳಿ ಬುದ್ಧನ ಅಪರೂಪದ ಶಿಲ್ಪ ಮತ್ತು ಗುಹೆ ಪತ್ತೆಯಾಗಿದೆ. ದೇವಸ್ಥಾನದ ಅಧಿಕಾರಿಗಳ ಅನುಮತಿಯೊಂದಿಗೆ ಇತ್ತೀಚೆಗೆ ನಡೆಸಿದ ಪರಿಶೋಧನೆಯಲ್ಲಿ ಈ ಆವಿಷ್ಕಾರ ಮಾಡಲಾಗಿದೆ.ಕೊಳದಲ್ಲಿ ಮುಳುಗಿದ್ದ ಸ್ಥಿತಿಯಲ್ಲಿ ದೊರೆತ ಈ ಶಿಲ್ಪವು, ಪದ್ಮಾಸನದಲ್ಲಿ (ಧ್ಯಾನ ಮುದ್ರೆ) ಕುಳಿತಿರುವ ಬುದ್ಧನನ್ನು ಚಿತ್ರಿಸುತ್ತದೆ. ವಿಗ್ರಹದ ಬಲಗೈ ಸಂಪೂರ್ಣವಾಗಿ ಮುರಿದಿದ್ದು, ಎಡಗೈ ಇಟ್ಟ ಕಾಲುಗಳ ನಡುವೆ ಇದೆ. ಭಾಗಶಃ ಕಾಣುವ ಉತ್ತರೀಯ (ಮೇಲು ಹೊದಿಕೆ) ಎಡ ಭುಜ ಮತ್ತು ಎದೆಗೆ ಆವರಿಸಿದೆ. ಶಿಲ್ಪದ ತಲೆ

ಮಂಗಳೂರಿನ ಕದ್ರಿ ದೇವಸ್ಥಾನದ ಕೊಳದ ಬಳಿ ಬುದ್ಧನ ವಿಗ್ರಹ, ಗುಹೆ ಪತ್ತೆ Read More »

ಮಂಗಳೂರು: ಟ್ಯಾಂಕರ್‌ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸಹಸವಾರ ಮೃತ್ಯು

ಮಂಗಳೂರು: ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸಹಸವಾರ ಟ್ಯಾಂಕರ್‌ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡಿರುವ ಘಟನೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಸುರತ್ಕಲ್ ಕಾನ ಜನತಾ ಕಾಲನಿ‌ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದ್ದು, ಮುಲ್ಕಿ ಕೊಲ್ನಾಡು ನಿವಾಸಿ ಮುಹಮ್ಮದ್ ಶರೀಫ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಶ್ರಫ್ ಮತ್ತು ಶರೀಫ್ ಮಂಗಳೂರು ಕಡೆಯಿಂದ ಸುರತ್ಕಲ್‌ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಹಾಸನದಿಂದ

ಮಂಗಳೂರು: ಟ್ಯಾಂಕರ್‌ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸಹಸವಾರ ಮೃತ್ಯು Read More »

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್‍ | ಪೊಲೀಸ್‍ ದೌರ್ಜನ್ಯದ ಕುರಿತು ಬಿಜೆಪಿಯಿಂದ ಮಾಹಿತಿ ಸಂಗ್ರಹ ಸಭೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿರುವುದು ಮತ್ತು ಗಡಿಪಾರು ನೋಟಿಸ್ ನೀಡಿರುವುದು ಹಾಗೂ ಪೊಲೀಸ್ ದೌರ್ಜನ್ಯದ ಕುರಿತು ಮಾಹಿತಿ ಸಂಗ್ರಹ ಸಭೆ ಇಂದು ನಡೆಯಿತು. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿ ಪಕ್ಷ ನಾಯಕರಾದ ಆರ್‍.ಅಶೋಕ್‍, ಚಲವಾದಿ ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ  ಸಹಿ ಸಂಗ್ರಹ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್‍ ಕುಂಪಲ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕರಾದ ಅರವಿಂದ ಬೆಲ್ಲದ, ಎನ್‍.ರವಿ ಕುಮಾರ್‍,

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್‍ | ಪೊಲೀಸ್‍ ದೌರ್ಜನ್ಯದ ಕುರಿತು ಬಿಜೆಪಿಯಿಂದ ಮಾಹಿತಿ ಸಂಗ್ರಹ ಸಭೆ Read More »

ಮೂರೂ ಕೊಲೆ ಪ್ರಕರಣಗಳ ಎನ್‌ಐಎ ತನಿಖೆ : ಮುಂಜುನಾಥ ಭಂಡಾರಿ ಆಗ್ರಹ

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಬೇಡ ಎಂದು ಹೇಳಿಕೆ ಮಂಗಳೂರು: ದ.ಕ. ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿದ್ದು, ಈ ಮೂರು ಕೊಲೆ ಪ್ರಕರಣಗಳ ಎನ್‌ಐಎ ತನಿಖೆಯಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಗ್ರಹಿಸಿದ್ದಾರೆ. ಬೆನ್ನುಬೆನ್ನಿಗೆ ನಡೆದ ಈ ಮೂರು ಕೊಲೆಗಳು ಇಡೀ ಕರಾವಳಿಯಲ್ಲಿ ಆತಂಕ ಮೂಡಿಸಿವೆ. ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಎನ್‌ಐಎ ತನಿಖೆಗೆ ವಹಿಸಿದರೆ ದುಷ್ಕೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ಮಂಜುನಾಥ್

ಮೂರೂ ಕೊಲೆ ಪ್ರಕರಣಗಳ ಎನ್‌ಐಎ ತನಿಖೆ : ಮುಂಜುನಾಥ ಭಂಡಾರಿ ಆಗ್ರಹ Read More »

ಸುಹಾಸ್‌ ಶೆಟ್ಟಿ ಹತ್ಯೆಯ ಎನ್‌ಐಎ ತನಿಖೆ : ಹಿಂದೂ ನಾಯಕರ ಸ್ವಾಗತ

ರಾಜ್ಯ ಸರ್ಕಾರದ ತನಿಖೆಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇರಲಿಲ್ಲ ಎಂದ ಕ್ಯಾ.ಬ್ರಿಜೇಶ್‌ ಚೌಟ ಮಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿರುವುದನ್ನು ಬಿಜೆಪಿ ಸಂಸದರು, ಶಾಸಕರು ಮತ್ತು ಮುಖಂಡರು ಸ್ವಾಗತಿಸಿ ಇದರಿಂದ ನೈಜ ಆರೋಪಿಗಳು ಸೆರೆಯಾಗಿ ನ್ಯಾಯ ಸಿಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಹಾಸ್ ಶೆಟ್ಟಿ ಅವರನ್ನು ಬಜಪೆಯಲ್ಲಿ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಮೇ

ಸುಹಾಸ್‌ ಶೆಟ್ಟಿ ಹತ್ಯೆಯ ಎನ್‌ಐಎ ತನಿಖೆ : ಹಿಂದೂ ನಾಯಕರ ಸ್ವಾಗತ Read More »

ಇಚ್ಚಂಪಾಡಿ ಸೇತುವೆ ಬಳಿ ಸ್ನಾನಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಕಡಬ: ತಾಲೂಕಿನ ಇಚ್ಚಂಪಾಡಿಯಲ್ಲಿ ಸೇತುವೆಯೊಂದ ಬಳಿ ನೀರಿನಲ್ಲಿ ಸ್ನಾನಕ್ಕೆ ಇಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಇಚ್ಚಂಪಾಡಿ ಗ್ರಾಮದ ಕೆಡೆಂಬೇಲು ಮನೆ ನಿವಾಸಿ ಜಯಾನಂದ ಶೆಟ್ಟಿ ಯವರ ಮಗ ಚೇತನ್ ಶೆಟ್ಟಿ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತನು ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ದಿನ ರಜೆಯ ಸಂದರ್ಭ ಮನೆಯಲ್ಲೇ ಇದ್ದನು. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ

ಇಚ್ಚಂಪಾಡಿ ಸೇತುವೆ ಬಳಿ ಸ್ನಾನಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು Read More »

error: Content is protected !!
Scroll to Top