ಅಪರಾಧ

ಮುಡಾ ಸೈಟ್ ಹಂಚಿಕೆ ಪ್ರಕರಣ | ನಾಳೆ (ಆ.9) ಸಿ.ಎಂ.ಸಿದ್ಧರಾಮಯ್ಯ ಸಹಿತ ಇನ್ನಿತರರ ಮೇಲೆ ದಾಖಲಾದ ಪ್ರಕರಣದ ವಿಚಾರಣೆ

ಬೆಂಗಳೂರು: ಮುಡಾ ಸೈಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದ್ದು, ಆ.9 ನಾಳೆ ವಿಚಾರಣೆ ನಡೆಯಲಿದೆ. ಸ್ನೇಹಮಯಿ ಕೃಷ್ಣ ಎಂಬುವರು ನೀಡಿದ ದೂರಿನಂತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ, ನಿಂಗಾ (ಜವರ) ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿದೆ. ಅರ್ಜಿಯ ವಿಚಾರಣೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಲಿದ್ದಾರೆ. ದಾಖಲೆಗಳ ಪರಿಶೀಲನೆ ನಡೆದಿದ್ದು, ನಾಳೆಗೆ ವಾದ ಮಂಡನೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.

ಮುಡಾ ಸೈಟ್ ಹಂಚಿಕೆ ಪ್ರಕರಣ | ನಾಳೆ (ಆ.9) ಸಿ.ಎಂ.ಸಿದ್ಧರಾಮಯ್ಯ ಸಹಿತ ಇನ್ನಿತರರ ಮೇಲೆ ದಾಖಲಾದ ಪ್ರಕರಣದ ವಿಚಾರಣೆ Read More »

ಮಂಗಳೂರು ಹೋಂಸ್ಟೇ ದಾಳಿ ಪ್ರಕರಣ | ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಮಂಗಳೂರು: ದೇಶಾದ್ಯಂತ ಸುದ್ದಿಯಾಗಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದು, ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣ ನಡೆದು 12 ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷ ಮುಕ್ತರಾಗಿದ್ದಾರೆ ಎಂದು ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದ್ದಾರೆ. 2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ

ಮಂಗಳೂರು ಹೋಂಸ್ಟೇ ದಾಳಿ ಪ್ರಕರಣ | ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ Read More »

ಕೆರೆಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ

ಪುತ್ತೂರು: ಆಟೋ ಚಾಲಕರೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ  ಘಟನೆ ಮಂಗಳವಾರ ಮಧ್ಯಾಹ್ನ ಸಂಪ್ಯದಲ್ಲಿ ನಡೆದಿದೆ. ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಟೋ ಚಾಲಕ ಮಹಮ್ಮದ್ (48) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿಯಾಗಿರುವ ಮಹಮ್ಮದ್ ಕಳೆದ ಕೆಲ ಸಮಯಗಳಿಂದ ಸಂಪ್ಯದಲ್ಲಿ ವಾಸ್ತವ್ಯ ಹೊಂದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಕೆರೆಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ Read More »

ಮಂಗಳೂರು ಹೋಮ್‍ ಸ್ಟೇ ದಾಳಿ ಪ್ರಕರಣ | ಜಿಲ್ಲಾ ಸೆಷನ್ಸ್‍ ನ್ಯಾಯಾಲಯದಲ್ಲಿ ಇಂದು ವಿಚಾರಣೆ | ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ

ಮಂಗಳೂರು: ಮಂಗಳೂರಿನ ಹೋಂಸ್ಟೇ ಪ್ರಕರಣ ಕುರಿತು ವಿಚಾರಣೆ ಇಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ. 2012ರ ಜುಲೈ 28 ರಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ವಿಚಾರಣೆ ಇಂದು ನಡೆಯಲಿದೆ. ಯುವಕ ಯುವತಿಯರು ಹೋಂಸ್ಟೇ ಯಲ್ಲಿ ತಂಗಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ

ಮಂಗಳೂರು ಹೋಮ್‍ ಸ್ಟೇ ದಾಳಿ ಪ್ರಕರಣ | ಜಿಲ್ಲಾ ಸೆಷನ್ಸ್‍ ನ್ಯಾಯಾಲಯದಲ್ಲಿ ಇಂದು ವಿಚಾರಣೆ | ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ Read More »

ಯುವತಿಯ ಮಾನಭಂಗಕ್ಕೆ ಯತ್ನ : ಪುತ್ತೂರಿನ ನಾಲ್ವರ ಬಂಧನ

ಮಂಗಳೂರು: ಯುವತಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಪೊರಮ್‌ ಮಾಲ್‌ನಲ್ಲಿರುವ ಶೆರ್‌ಲಾಕ್ ಪಬ್‌ನಲ್ಲಿ ನಡೆದಿದೆ. ಮಾನಭಂಗಕ್ಕೆ ಯತ್ನಿಸಿದ ಪುತ್ತೂರು ನಿವಾಸಿಗಳಾದ ಮಹೇಶ್, ವಿನಯ್,ನಿತೇಶ್, ಪ್ರೀತೆಶ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 22 ವರ್ಷದ ಯುವತಿ ತನ್ನ ಸ್ನೇಹಿತೆಯೊಂದಿಗೆ ಮಂಗಳೂರು ನಗರದ ಪಾಂಡೇಶ್ವರ ಪೊರಮ್‌ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಶೆರ್‌ಲಾಕ್ ಪಬ್‌ಗೆ ವೀಕೆಂಡ್ ಪಾರ್ಟಿಗೆ ಬಂದಿದ್ದು, ರಾತ್ರಿ 10.30ರ ಸುಮಾರಿಗೆ ಆರೋಪಿಗಳು ದೂರುದಾರೆ ಯುವತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿ ಮಾನಭಂಗ ಮಾಡಲು ಯತ್ನಿಸಿದ್ದು, ಆಕೆಯ ಸ್ನೇಹಿತೆಗೂ ಅವಾಚ್ಯ ಶಬ್ದಗಳಿಂದ

ಯುವತಿಯ ಮಾನಭಂಗಕ್ಕೆ ಯತ್ನ : ಪುತ್ತೂರಿನ ನಾಲ್ವರ ಬಂಧನ Read More »

ಓದಲು ಹಠ ಹಿಡಿದ ಮಗ | ಗೋಣಿ ಚೀಲದಲ್ಲಿ ಕಟ್ಟಿ ಮಗನನ್ನು ಕೆರೆಗೆ ಎಸೆದ ತಂದೆ

ಹೈದ್ರಾಬಾದ್ : ಮಕ್ಕಳು ಮಾತು ಕೇಳಲ್ಲ, ಓದು ಅಂದ್ರೆ ರಚ್ಚೆ ಹಿಡಿತಾವೆ, ಹೋಮ್‌ವರ್ಕ್ ಮಾಡು ಅಂದ್ರೆ ನೆಪ ತಗಿತಾವೆ. ಅದಕ್ಕೆ ಅವರನ್ನು ರಮಿಸಿ, ಮುದ್ದು ಮಾಡಿ, ಕೊನೆಗೆ ಗದರಿಸಿಯಾದ್ರೂ ಓದಲು ಕೂರಿಸುವ ತಂದೆ ತಾಯಿ ನಮಗೆ ಕಾಣ ಸಿಗ್ತಾರೆ, ಆದ್ರೆ ಇದಕ್ಕೆ ಅಪವಾದ ಎಂಬಂತೆ ಘಟನೆಯೊಂದು ನಡೆದಿದೆ. ತೆಲಂಗಾಣದ ಮೆಹಬೂಬ್‌ ನಗರದಲ್ಲಿರುವ ಕೊಲ್ಲಾಪುರದಲ್ಲಿ ಒಬ್ಬ ತಂದೆ ತನ್ನ ಮಗ ಸರಿಯಾಗಿ ಓದುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ ಎಂದು ಗೋಣಿ ಚಿಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾನೆ. ಮೆಹಬೂಬ ನಗರದ

ಓದಲು ಹಠ ಹಿಡಿದ ಮಗ | ಗೋಣಿ ಚೀಲದಲ್ಲಿ ಕಟ್ಟಿ ಮಗನನ್ನು ಕೆರೆಗೆ ಎಸೆದ ತಂದೆ Read More »

ಬಿಡದಿ ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣಿಗೆ ಶರಣು

ಬೆಂಗಳೂರು: ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಇನ್‍ ಸ್ಪೆಕ್ಟರ್ ಆಗಿದ್ದ ತಿಮ್ಮೇಗೌಡ ಬಿಡದಿಯಲ್ಲಿರುವ ತಮ್ಮ ನಿವಾಸದ ಸಮೀಪ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಿಡದಿ ಪೊಲೀಸ್ ಇನ್‍ ಸ್ಪೆಕ್ಟರ್ ತಿಮ್ಮೇಗೌಡ ನೇಣಿಗೆ ಶರಣು Read More »

ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ

ಬಂಟ್ವಾಳ: ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ ಸಂಭವಿಸಿ ಚೂರಿ ಇರಿತದ ಮೂಲಕ ಕೊನೆಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ವೈಯಕ್ತಿಕ ವಿಚಾರವಾಗಿ ನಡೆದ ಹೊಡೆದಾಟ ಚೂರಿ ಇರಿತದ ಮೂಲಕ ಕೊನೆಗೊಂಡಿದೆ. ಘಟನೆಯಲ್ಲಿ ಇತ್ತಂಡಗಳ ಮೂವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೃಥ್ವಿರಾಜ್, ವಿನಿತ್ ಹಾಗೂ ಪುಷ್ಪರಾಜ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ Read More »

ವಾರಂಟ್ ಆರೋಪಿ ಬಂಧನ | ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ

ಪುತ್ತೂರು: ನ್ಯಾಯಾಲಯದಿಂದ ವಾರಂಟ್ ಆರೋಪಿಯೊಬ್ಬನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಪರ್ಪುಂಜ ಎಂಬಲ್ಲಿ ಬಂಧಿಸಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ಶಿಕ್ಷಾಧೀನ ಖೈದಿಯಾಗಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬಿಡುವಂತೆ ಆದೇಶಿಸಿದೆ. ಆರೋಪಿ ಒಳಮೊಗ್ರು ಗ್ರಾಮದ ಕಮಲಾಕ್ಷ ಎಂಬವರ ಪುತ್ರ ದಿನೇಶ್ ಪಿ. ಎಂಬಾತನಿಗೆ ಪ್ರಕರಣವೊಂದರಲ್ಲಿ ಪುತ್ತೂರು ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿತ್ತು. ಬಳಿಕ ಆರೋಪಿ ಈ ಕುರಿತು ಉಚ್ಛನ್ಯಾಯಾಲಯಕ್ಕೆ ಅಪೀಲು ಅರ್ಜಿ ಸಲ್ಲಿಸಿದ್ದ. ಉಚ್ಛನ್ಯಾಯಾಲಯ ವಿಚಾರಣೆ ನಡೆಸಿ ಈತನಿಗೆ

ವಾರಂಟ್ ಆರೋಪಿ ಬಂಧನ | ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ Read More »

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು : ಬೆಳ್ಳಾರೆಯ ನೆಟ್ಟಾರಿನ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಎನ್‍ ಐಎ ಇಬ್ಬರ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಿದೆ. ಪ್ರಕರಣ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಹಿನ್ನೆಲೆ ಮನ್ಸೂರ್ ಪಾಷಾ ಮತ್ತು ಹೆಚ್‌ವೈ ರಿಯಾಜ್ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಸಕಲೇಶಪುರದಲ್ಲಿ ಮುಸ್ತಫಾ ಪೈಚಾರ್‌ಗೆ ಮನ್ಸೂರ್, ರಿಯಾಜ್ ಆಶ್ರಯ ನೀಡಿದ್ದರು. ಮೇ 5ರಂದು ಸಕಲೇಶಪುರದಲ್ಲಿ ಮುಸ್ತಫಾ ನನ್ನು ಬಂಧಿಸಿದ್ದು, ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ರಿಯಾಜ್ ನನ್ನು ಜೂ.3ರಂದು ಮುಂಬೈ ಏ‌ರ್

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ Read More »

error: Content is protected !!
Scroll to Top